Hot Posts

10/recent/ticker-posts

ಧೈರ್ಯ ಲಕ್ಷ್ಮಿ - ವೀರ ಲಕ್ಷ್ಮಿ


ಧೈರ್ಯ ಲಕ್ಷ್ಮಿ.. ಲಕ್ಷ್ಮಿಯ ಹಲವು ಹೆಸರುಗಳಲ್ಲಿ ಧೈರ್ಯ ಲಕ್ಷ್ಮಿಯೂ ಒಂದಾಗಿದೆ.. ವಿಷ್ಣುವಿನ ಪತ್ನಿಯಾದ ಲಕ್ಷ್ಮಿಯು ಧೈರ್ಯವನ್ನು ನೀಡಿ ಸಾಹಸೀ ಕಾರ್ಯಗಳಲ್ಲಿ ಜಯಗೊಳ್ಳುವಂತೆ ಆಶೀರ್ವದಿಸುತ್ತಾಳೆ.. ಅನುಗ್ರಹಿಸುತ್ತಾಳೆ.

 “ಧೈರ್ಯಂ ಸರ್ವರ್ತ ಸಾಧನಂ” ಎಂಬ ಮಾತಿದೆ.. ಹಾಗೇಯೇ ಧೈರ್ಯವಿದ್ದ ವ್ಯಕ್ತಿ ಮಾತ್ರವೇ ಸಾಧನೆ ಮಾಡುತ್ತಾನೆ.. ಹೀಗಾಗಿ ಎಲ್ಲಾ ಸಾಹಸ ಕೆಲಸಗಳು ಯಶಸ್ವಿಯಾಗಬೇಕಾದರೆ ಧೈರ್ಯ ಲಕ್ಷ್ಮಿಯ ಕೃಪೆ ಮೊದಲು ಬೇಕಾಗುತ್ತದೆ.. ಧೈರ್ಯ ಲಕ್ಷ್ಮಿಯ ಅನುಗ್ರವಿದ್ದರೆ ಅರ್ಧ ಜಯ ಸಿಕ್ಕಂತೆ.. ವಿಜಯ ಲಕ್ಷ್ಮಿಯ ಅನುಗ್ರಹವಿದ್ದರೆ ಜಯ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದೆ. ಹೀಗಾಗಿ ಸಕಲಕ್ಕೂ ಲಕ್ಷ್ಮಿಯ ಕೃಪಾ ಕಠಾಕ್ಷ ಬಹು ಮುಖ್ಯವಾಗಿದೆ



ವೀರ ಲಕ್ಷ್ಮಿ.. ಲಕ್ಷ್ಮಿಯ ಹಲವು ಹೆಸರುಗಳಲ್ಲಿ ವೀರ ಲಕ್ಷ್ಮಿಯೂ ಒಂದಾಗಿದೆ.. ಸಾಹಸ ಲಕ್ಷ್ಮಿ ಎಂದೂ ಕರೆಯಬಹುದಾದ ಮಾತೆ ಲಕ್ಷ್ಮಿ ದೇವಿಯು ವೈಕುಂಠಾಧಿಪತಿಯಾದ ಪ್ರಭು ವಿಷ್ಣುವಿನ ಪತ್ನಿ.. ವೀರ ಲಕ್ಷ್ಮಿಯು ಎಲ್ಲಾ ಕಾರ್ಯಗಳಲ್ಲೂ ವೀರರಂತೆ ಹೋರಾಡುವ ಸಾಹಸೀ ಮನೋಭಾವವನ್ನು ತುಂಬುವ ಶಕ್ತಿಯನ್ನು ಹೊಂದಿದ್ದಾಳೆ. ಈ ಮೂಲಕ ಸಾಹಸೀ ಕಾರ್ಯಗಳಲ್ಲಿ ಜಯಗೊಳ್ಳುವಂತೆ ಆಶೀರ್ವದಿಸುತ್ತಾಳೆ.. ಅನುಗ್ರಹಿಸುತ್ತಾಳೆ. ವೀರತ್ವವನ್ನು ಅನುಗ್ರಹಿಸುವ ಮತ್ತು ಸವಾಲನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ವೀರ ಲಕ್ಷ್ಮಿ ನೀಡುತ್ತಾಳೆ.. 

Отправить комментарий

0 Комментарии