Hot Posts

10/recent/ticker-posts

ದುರ್ಗಾ ದೇವಿ


ಪಾರ್ವತಿ ದೇವಿಯ ರೌದ್ರಾವತರದಲ್ಲಿ ಮಾತೆ ದುರ್ಗಾದೇವಿಯ ಅವತಾರವೂ ಒಂದಾಗಿದೆ.. 

 ಮಹಿಷಾಸುರ ಎಂಬ ರಾಕ್ಷಸ ದೇವತೆಗಳಿಗೆ ಉಪಟಳ ನೀಡುತ್ತಿದ್ದನು. ಆಗ ನೊಂದ ದೆವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು. ಆಗ ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. 



ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.. ಈ ದೇವಿಯೇ ದುರ್ಗಾದೇವಿ.. ಈ ದುರ್ಗಾ ಮಾತೆಯನ್ನು ಚಮುಂಡಿ, ಚಂಡಿ ಎಂಬುದಾಗಿಯೂ ಕರೆಯಲಾಗುತ್ತದೆ. ದುರ್ಗೆಯಾಗಿ ಅವತರಿಸಿದ ಮಾತೆ ಪಾರ್ವತಿಯು ಮಹಿಶಾಸುರನನ್ನು ಕೊಂದು ದೇವತೆಗಳನ್ನು ರಕ್ಷಿಸಿದಳು.

 

Отправить комментарий

0 Комментарии