Hot Posts

10/recent/ticker-posts

ಲಕ್ಷ್ಮಿ


ಮಹಾಲಕ್ಷ್ಮಿ



ಹಿಂದೂ ಧರ್ಮದ ದೇವತೆಗಳಲ್ಲಿ ಲಕ್ಷ್ಮಿಯೋ ಒಬ್ಬರು.. ವೈಕುಂಠದ ಅಧಿಪತಿಯಾದ  ಶ್ರೀವಿಷ್ಣುವಿನ ಪತ್ನಿ ಲಕ್ಷ್ಮಿದೇವಿ.


ಭೂಲೋಕದಲ್ಲಿ ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಹೀಗಾಗಿ ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಲಕ್ಷ್ಮಿ ಎಂದರೆ ಕೇವಲ ಧನದ ಸಂಕೇತವಲ್ಲ.. ಧನ, ದಾನ್ಯ, ಸಂತಾನ, ಸಿರಿವಂತಿಕೆ, ಸಂತೋಷ ಎಲ್ಲವನ್ನೂ ಕೂಡ ಲಕ್ಷ್ಮಿದೇವಿ ಕರುಣಿಸುತ್ತಾಳೆ. ಹೀಗಾಗಿ ಧನ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ, ಧಾನ್ಯ ಲಕ್ಷ್ಮಿ ಎಂದು ವಿವಿಧ ಬಗೆಯಲ್ಲಿ ಕರೆಯಲಾಗುತ್ತದೆ..




 ಪ್ರತಿವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಲಕ್ಷ್ಮಿ ದೇವಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಕೂಡ ಲಕ್ಷ್ಮಿ ಪೂಜೆ ಆಚರಿಸಲಾಗುತ್ತದೆ.

Отправить комментарий

0 Комментарии