Hot Posts

10/recent/ticker-posts

ಉಗ್ರ ನರಸಿಂಹ


ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ.. 



ಹಿರಣ್ಯ ಕಶಿಪು ತನ್ನ ಮಗನಿಗೆ ಅಂಟಿಕೊಂಡಿದ್ದ ನಾರಾಯಣನ ಹುಚ್ಚನ್ನು ಬಿಡಿಸಲು, ಆನೆಯ ಕಾಲಲ್ಲಿ ತುಳಿಸಿದ. ಬೆಟ್ಟದಿಂದ ಕೆಳಗೆಸೆದ. ಹೆತ್ತ ತಾಯಿ ಧರ್ಮಕಾಂತೆಯಿಂದ ವಿಷಪ್ರಾಶನವನ್ನೂ ಮಾಡಿಸಿದ. ಆದರೆ ಪ್ರಹ್ಲಾದ ಶ್ರೀಮನ್ನಾರಾಯಣ ಎಲ್ಲೆಲ್ಲೂ ಇರುವನೆಂದ.



ಕೋಪಗೊಂಡ ಹಿರಣ್ಯಕಶಿಪು, ಈ ಅರಮನೆಯ ಕಂಬದಲ್ಲಿ ಇರುವನೇ ನಿನ್ನ ನಾರಾಯಣ ಎಂದ. ದೃಢ ಭಕ್ತಿಯಲ್ಲಿ ಪ್ರಹ್ಲಾದನು ಶ್ರೀಮನ್ನಾರಾಯಣನ ಜಪಿಸಿದಾಗ, ಕಂಬದಿಂದೊಡೆದು ಹೊರಬಂದ ಉಗ್ರನರಸಿಂಹ..



 ತನ್ನ ಪರಮ ಭಕ್ತನಾದ ಪ್ರಹ್ಲಾದನಿಗೆ ದರ್ಶನ ನೀಡಿ ಹಿರಣ್ಯಕಶಿಪು ಪಡೆದ ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ (ಸೂರ್ಯಾಸ್ತವಾಗುವ) ಹೊತ್ತು ಮುಳುಗುವ ಹೊತ್ತಿನಲ್ಲಿ , ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಸ್ಥಳದಲ್ಲಿ ಅಂದರೆ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ, ಮನುಷ್ಯನಾಗಲೀ ಅಲ್ಲದ ರೂಪದಲ್ಲಿ ಅಂದರೆ ಅರ್ಧ ಸಿಂಹ ಹಾಗೂ ಅರ್ಧ ನರ ಒಟ್ಟಾರೆಯಾಗಿ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಂಡ.

Отправить комментарий

0 Комментарии