Hot Posts

10/recent/ticker-posts

ಅಯ್ಯಪ್ಪ ಸ್ವಾಮಿ


ಶಿವನು ಮೋಹಿನಿ ಅವತಾರದಲ್ಲಿದ್ದ ವಿಷ್ಣುವನ್ನು ಮೋಹಿಸಿದಾಗ ಜನಿಸಿದ ಮಗುವೇ ಅಯ್ಯಪ್ಪ ಸ್ವಾಮಿ.

ಕಾಡಿನಲ್ಲಿ ಬಿಟ್ಟು ಹೋಗಿದ್ದ ಆ ಮಗು ಪಾಂಡ್ಯವಂಶದ ರಾಜನಿಗೆ ಸಿಗುತ್ತೆ. ಕೊರಳಲ್ಲಿ ಮಣಿ ಇದ್ದುದರಿಂದ ಆ ಮಗುವಿಗೆ "ಮಣಿಕಂಠ"ನೆಂದು ನಾಮಕರಣ ಮಾಡುತ್ತಾರೆ. 

ಚಾಮುಂಡೇಶ್ವರಿಯಿಂದ ಸಂಹಾರಕ್ಕೊಳಗಾದ ಮಹಿಷಾಸುರನ ತಂಗಿ "ಮಹಿಶಿ" ಬ್ರಹ್ಮ ನೀಡಿದ ವರದಿಂದ “ದೇವತೆಗಳನ್ನು ಕಾಡಲು” ಪ್ರಾರಂಭಿಸುತ್ತಾಳೆ



ದೇವತೆಗಳು ಬಂದು ಮಣಿಕಂಠನ ಮೊರೆ ಹೋದಾಗ ಮಣಿಕಂಠನು “ಮಹಿಶಿ”ಯನ್ನು ಸಂಹರಿಸಿ ದೇವತೆಗಳನ್ನು ರಕ್ಷಿಸುತ್ತಾನೆ. ಮಹಿಷಿಯ ಸತ್ತನಂತರ ಅದರ ದೇಹದಿಂದ ಶಾಪಗ್ರಸ್ಥವಾಗಿದ್ದ ಓರ್ವ ಗಂಧರ್ವ ಕನ್ಯೆಯು ಹೊರಬರುತ್ತಾಳೆ. ಆ ಗಂಧರ್ವ ಕನ್ಯೆ ಮಣಿಕಂಠನ ಶೌರ್ಯ ಮತ್ತು ರೂಪಕ್ಕೆ ಮರುಳಾಗಿ ತನ್ನನ್ನು ವರಿಸುವಂತೆ ಅವನಲ್ಲಿ ಬೇಡಿಕೊಳ್ಳುತ್ತಾಳೆ. ಆದರೆ ಮಣಿಕಂಠ ಒಪ್ಪದಿದ್ದಾಗ ಅಳೋಕೆ ಶುರು ಮಾಡುತ್ತಾಳೆ. ಅವಳ ಅಳುವಿನಿಂದ ಹುಟ್ಟಿದ ಆ ಕಣ್ಣೀರೆ ಮುಂದೆ "ಅಳುದಾ" ನದಿಯಾಗಿ ಮಾರ್ಪಟ್ಟಿದೆ. 



ಇವಳ ಅಳುವಿಗೆ ಕರಗಿದ ಮಣಿಕಂಠ ಮುಂದೆ ತಾನು ಅಯ್ಯಪ್ಪ ಸ್ವಾಮಿಯಾದ ಮೇಲೆ ಯಾವ ವರ್ಷ ಕನ್ಯೆಸ್ವಾಮಿ ಶಬರಿಮಲೆಗೆ ಬರುವುದಿಲ್ಲವೋ ಆ ವರ್ಷ ಅವಳನ್ನು ಮದುವೆಯಾಗುವುದಾಗಿ ವರಕೊಟ್ಟು ಅವಳನ್ನು ಸಮಾಧಾನಪಡಿಸುತ್ತಾನೆ. 



(ಅಂದರೆ ಪ್ರತಿ ವರ್ಷವೂ ಹೊಸ ಹೊಸ ಭಕ್ತರು ಶಬರಿಮಲೆಗೆ ಬರುತ್ತಿರುತ್ತಾರೆ.. ಯಾವ ವರ್ಷ ಹೊಸ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುವುದಿಲ್ಲವೋ ಆ ವರ್ಷ ಮದುವೆಯಾಗುವುದಾಗಿ ಅಯ್ಯಪ್ಪ ಸ್ವಾಮಿ ಹೇಳುತ್ತಾನೆ)



 ಆ ಗಂಧರ್ವ ಕನ್ಯೆಯೇ ಇಂದು ಶಬರಿಮಲೆಯಲ್ಲಿ "ಮಾಲಿಕಾಪುರಮ್ಮ" ಎಂಬುದಾಗಿ ಪೂಜೆಗೊಳ್ಳುತ್ತಿದ್ದಾಳೆ.


Отправить комментарий

0 Комментарии