Hot Posts

10/recent/ticker-posts

ದೆವ್ವ ಕೆಮ್ಮಿದಾಗ..!




    ನಾನು ಲತಾ.... ನಮ್ ತಾತಾಗೆ ಕೆಮ್ಮು ಇತ್ತು...... ಸಾಯೋ ಟೈಮಲ್ಲೂ ಕೂಡ ಕೆಮ್ಮು
ಅವರನ್ನು ಕಾಡ್ತಾ ಇತ್ತು........... ಉಸಿರಾಡೋಕು ಕಷ್ಟ ಪಡ್ತಾ ಇದ್ರು.......... ಆದ್ರೆ
ಅವರು ತೀರ್ ಹೋದ್ಮೇಲೂ ಕೂಡ ಅವರ ರೂಮಿಂದ ಅದೇ ಥರದ ಕೆಮ್ಮೋ ಸೌಂಡ್ ನ  ನಾನು ತುಂಬಾ ಸಲ ಕೇಳಿದ್ದೀನಿ..... ನಮ್ಮನೇಲಿ ರಾತ್ರಿ
ಹತ್ ಗಂಟೆ ಆದ್ರೆ ಸಾಕು.. ಎಲ್ರೂ ಮಲಗಿಬಿಡ್ತಾರೆ... ಆದ್ರೆ ಹನ್ನೊಂದ್ ಗಂಟೆಗೆ ಸರಿಯಾಗಿ
ತಾತನ ರೂಮಿನಿಂದ ಕೆಮ್ಮೋ ಶಬ್ಧ ಕೇಳಿಸುತ್ತೆ.......


 

 ಅದು ನಮ್ಮನೇಲಿ ಯಾರಿಗೆ
ಕೇಳಿಸ್ತಿತ್ತೋ.. ಬಿಡ್ತಿತ್ತೋ ಗೊತ್ತಿಲ್ಲ... ಆದ್ರೆ ನನಗೆ ಮಾತ್ರ ಪಕ್ಕಾ ಕೇಳಿಸ್ತಾ
ಇತ್ತು...... ಅವರು ಕೆಮ್ಮೋದು ಕೇಳಿ ನನಗೆ ಎಚ್ಚರ ಆಗ್ತಾ ಇತ್ತು...... ಲತಾ... ಒಂದ್
ಲೋಟ ನೀರ್ ತಗೋಂಡ್ ಬಾರಮ್ಮ ಅಂತ ತಾತ ನನಗೆ ಹೇಳ್ತಿದ್ರು... ಆ ಟೈಮಲ್ಲಿ ನಂಗೆ ಏನೂ
ಗೊತ್ತಾಗ್ತಿರಲಿಲ್ಲ... ನಾನು ಮಾಮೂಲಿಯಾಗಿ ನೀರ್ ತಗೊಂಡ್ ಬರ್ತಾ ಇದ್ದೆ....... ಆದ್ರೆ
ರೂಮ್ ಹತ್ರ ಬಂದ್ ತಕ್ಷಣ “ಒಳಗೆ ಬರ್ಬೇಡಮ್ಮ... ಅಲ್ಲೇ ಬಾಗ್ಲಲ್ಲಿ ಇಟ್ ಹೋಗು.. ನಾನು
ಕುಡೀತೀನಿ ಅಂತ ಹೇಳ್ತಿದ್ರು ತಾತಾ....... ನಾನ್ ಹೋದ್ಮೇಲೆ ಅವ್ರು ನೀರ್ ಕುಡೀತಾ ಇದ್ರು.....
ಬೆಳಿಗ್ಗೆ ಎದ್ದು ನೋಡಿದ್ರೆ ತಾತನ ರೂಮಿನ ಬಾಗಿಲಲ್ಲಿ ನಾನು ಇಟ್ಟ ನೀರಿನ ಲೋಟ ಹಾಗೇ ಇರ್ತಾ
ಇತ್ತು........  ಆದ್ರೆ ಅದ್ರಲ್ಲಿರೋ ನೀರು
ಮಾತ್ರ ಖಾಲಿಯಾಗಿರ್ತಾ ಇತ್ತು......




 ನಮ್ಮ ತಾತನ ಪುಣ್ಯ ತಿಥಿ ದಿನ, ಅವರಿಗೆ ಇಷ್ಟ ಅಂತ
ಅಮ್ಮ ಪಾಯಸ ಮಾಡ್ತಿದ್ರು.. ನಾನು ಅಡಿಗೆ ಮನೇಲಿ ತರಕಾರಿ ಕಟ್ ಮಾಡ್ತಾ ಇದ್ದೆ... ಅಮ್ಮ ಹಾಲು
ತರ್ತೀನಿ ನೋಡ್ಕೋ ಅಂತ ಅಂಗಡಿಗೆ ಹೋದ್ರು........ ನಾನು ತಲೆ ತಗ್ಗಿಸಿಕೊಂಡು ತರಕಾರಿ ಕಟ್ ಮಾಡ್ತಾ
ಇದ್ದೆ.. ಇದ್ದಕ್ಕಿದ್ದಂಗೆ ಆ ಪಾಯಸದ ಮೇಲೆ ಮುಚ್ಚಿದ್ದ ಮುಚ್ಚಳ ಕೆಳಗೆ
ಬಿತ್ತು........ ಪಾಯಸದ ಪಾತ್ರೆ ಕೂಡ ಚೆಲ್ಲಿಬಿಟ್ತು.. ಸ್ವಲ್ಪ ಬಿಸಿ ಪಾಯಸ ನನ್
ಮೇಲೂ ಬಿತ್ತು... ನಾನು ಅದನ್ನು ಒರೆಸಿಕೊಳ್ತಾ ಇದ್ದೆ...




 ಆದ್ರೆ ಕೆಳಗೆ ಬಿದ್ದಿದ್ದ ಪಾಯಸ
ಸ್ವಲ್ಪ ಸ್ವಲ್ಪ ಖಾಲಿ ಆಗ್ತಾ ಇತ್ತು.. ಅದನ್ನು ಯಾರೋ ನೆಕ್ತಾ ಇರೋ ಹಾಗೆ ಕಾಣಿಸ್ತು...
ಯಾಕಂದ್ರೆ ಅಲ್ಲಿ ನಾಲಿಗೆಯಿಂದ ನೆಕ್ಕಿರೋ ಥರ ಎಂಜಲು ಇತ್ತು... ನಾನು ವಿಚಲಿತಳಾಗಿ
ಅದನ್ನೇ ನೋಡ್ತಾ ಇದ್ದೆ... ಪಾಯಸ ಪೂರ್ತಿ ಖಾಲಿಯಾದಮೇಲೆ “ಲತಾ.. ನೀರ್ ತಗೊಂಡ್ ಬಾರಮ್ಮ
ಅಂತ ಧ್ವನಿ ಕೇಳಿಸಿತು.. ಅದು ತಾತನ ಧ್ವನಿ......!!




ಪಾಯಸ ತಿನ್ನೋವರೆಗೂ ಕೆಮ್ಮೂ ಕೂಡ
ಬರಲಿಲ್ಲ.. ಆದ್ರೆ ಪಾಯಸ ತಿಂದ್ ಮೇಲೆ ಕೆಮ್ಮೋಕೆ ಶುರುಮಾಡಿದ್ರು.. ನಾನು ಹೊರಗೆ ಓಡ್ಹೋಗಿ
ನಡೆದದ್ದನ್ನೇಲ್ಲಾ ಅಮ್ಮನಿಗೆ ಹೇಳಿದೆ.. ಅಮ್ಮ ಒಳಗೆ ಬಂದು ನೋಡಿದ್ರೆ ಅಲ್ಲಿ ಯಾರೂ
ಇರಲಿಲ್ಲ... ಆದ್ರೆ ಪಾಯಸ ಮಾತ್ರ ಖಾಲಿ ಆಗಿತ್ತು.. ಪಾಯಸದ ಪಾತ್ರೆಯನ್ನು ಬೆಕ್ಕು ನೆಕ್ತಾ
ಇತ್ತು....... ಅದು ಬೆಕ್ಕು.. ನೀನ್ ಭಯ ಪಟ್ಕೋಬೇಡ ಅಂತ ಅಮ್ಮ ನಂಗ್ ಹೇಳಿದ್ರು..... ಆದ್ರೆ
ಅದು ನಿಜ್ವಾಗ್ಲೂ ಬೆಕ್ಕಾಗಿರಲಿಲ್ಲ ಅನ್ನೋದು ನನಗೆ ಮಾತ್ರಾ ಗೊತ್ತಿತ್ತು..



Отправить комментарий

0 Комментарии