Hot Posts

10/recent/ticker-posts

ಅವಳು ನನ್ನನ್ನು ಯಾಕೋ ಕಾಡುತ್ತಿದ್ದಾಳೆ




ಇಂದು ಅವಳೇಕೋ ನನ್ನನ್ನು ಕಾಡುತ್ತಿದ್ದಾಳೆ.. ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ.. ಎಂದೂ
ಇಲ್ಲದ ಅವಳ ನೆನಪು ಇಂದೇಕೆ ಇಷ್ಟೋಂದು ಕಾಡುತ್ತಿದೆ..? ಅವಳು ಯಾರು ಅಂತ ನನಗೆ ಗೊತ್ತಿಲ್ಲ..
ಅವಳ ಹೆಸರೂ ನನಗೆ ಗೊತ್ತಿಲ್ಲ.. ಅವಳು ರೂಪವಂತೆಯೂ ಅಲ್ಲ.. ಅವಳು ಓದಿಲ್ಲ.. ಆದರೂ ಅವಳು
ನೆನಪಾಗುತ್ತಿದ್ದಾಳೆ.. ಯಾಕೆ..? ಯಾಕೆ..? ನಾನು ಅವಳನ್ನು ನೋಡಿದ್ದು ನೆನ್ನೆ ಮಾತ್ರ.. ಅದೂ ಓಟ್
ಹಾಕಲು ಹೋದಾಗ..! ಒಮ್ಮೆ ನೋಡಿದ ಆಕೆ ಬೇಡ ಬೇಡ ಎಂದರೂ ಪದೇ ಪದೇ ಈವತ್ತು ನೆನಪಾಗುತ್ತಿದ್ದಾಳೆ...
ಬಲವಂತವಾಗಿ ಅವಳನ್ನು ಮರೆಯಲು ಮಾಡುತ್ತಿರುವ ನನ್ನ ಪ್ರಯತ್ನ ವಿಫಲವಾಗುತ್ತಿದೆ.,. ಬಲವಂತವಾಗಿ
ಮರೆಯೋದು ಆತ್ಮದ್ರೋಹ. ಇಲ್ಲ.. ಇಲ್ಲ.. ಇಂಥ ಆತ್ಮದ್ರೋಹಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ..
ಅವಳನ್ನು ಬಲವಂತವಾಗಿ ಮರೆಯೋದು ನನಗೆ ನಾನೇ ಮಾಡಿಕೊಳ್ಳುವ ದ್ರೋಹ..








ಒಂದೇ ನೋಟದಲ್ಲಿ ಕಂಡ ಅವಳು ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ..
ಬೇಡವೆಂದರೂ ಕದ ತಟ್ಟಿ ಅಂಧಕಾರದ ಹೃದಯದೊಳಗೆ ಪದಗಳನು ಹಾಡುತ್ತಾ ಕುಳಿತಿದ್ದಾಳೆ.. ಇಲ್ಲ.. ನಾನು
ಅವಳನ್ನು ಹೆಚ್ಚು ಮಾತಾಡಿಸಿಲ್ಲ. ಕೇವಲ ಒಂದೆರಡು ಮಾತು ಮಾತ್ರ.. ಆದರೆ ಆಡಿದ ಆ ಎರಡು
ಮಾತುಗಳಲ್ಲಿಯೇ ಆಕೆಯ ಔದಾರ್ಯ ನನ್ನ ಅರಿವಿಗೆ ಬಂತು.. ಆಕೆಯ ಕಾಳಜಿ ನನಗೆ ಇಷ್ಟವಾಯಿತು. ಓಟ್
ಹಾಕಿ ಹೊರಬಂದಾಗ ಆಕೆ ನಡೆಯಲಾಗಲಿಲ್ಲ.. ಅದೇನೋ ನಿಶಕ್ತಿ ಆಕೆಯನ್ನು ಕಾಡಿತ್ತು. ಪೋಲೀಸ್ ಆಕೆಯ
ಕೈ ಹಿಡಿದ.. ಪಕ್ಕದಲ್ಲೇ ನಿಂತಿದ್ದ ನಾನು ಅದನ್ನು ನೋಡಿ ಸುಮ್ಮನಿರೋದಾದ್ರೂ ಹೇಗೆ..? ನಾನು ಅವಳ
ಕೈ ಹಿಡಿದೆ.. ನಿಧಾನವಾಗಿ ಅವಳನ್ನು ಕರೆದುಕೊಂಡು ಹೋಗಿ ಹತ್ತಿರದಲ್ಲೇ ಇದ್ದ ಕುರ್ಚಿಯ ಮೇಲೆ
ಕೂರಿಸಿದೆ.. ದಣಿದ ಆ
ಚೇತನಕ್ಕೆ ಒಂದಿಷ್ಟು ನೀರು ಕೊಟ್ಟೆ... ಕುಡಿದಳು... ದಣಿವಾರಿಸಿಕೊಂಡಳು.. 





          ಅವಳನ್ನು ನೋಡಿ ಮಾತಾಡಿಸಬೇಕೆನಿಸಿತು..
ಪದ ಕಟ್ಟಿ ಮಾತಿಗಿಳಿದೆ..
ಈ ಬಿಸಿಲಲ್ಲಿ ಬಂದು ಓಟ್ ಹಾಕೋದು ಯಾಕ್ ಬೇಕಿತ್ತು..? ಬಿಸಿಲು ಕಡಿಮೆ ಆದಮೇಲೆ
ಬರಬಹುದಿತ್ತಲ್ವಾ..? 





ಅದಕ್ಕೆ ಅವಳೆಂದಳು ನನ್ನ ಒಂದು ಓಟ್ ನಿಂದ ಏನಾದ್ರೂ ಬದಲಾವಣೆ ಆಗಬಹುದೇನೋ ಅನ್ನೋ ಆಶಾವಾದದಿಂದ ಬಂದಿದ್ದೇನೆ ಅಂದಳು.





ಬಿಸಿಲನ್ನೂ ಲೆಕ್ಕಿಸದೇ,, ದೇಹದಲ್ಲಿ ನಿಶಕ್ತಿ ಇದ್ದರೂ ಎದೆಗುಂದದೇ ಸಮಾಜದ ಬದಲಾವಣೆಗೆ
ಬಂದಿರುವ ಆ
ನವಚೇತನ ಉಲ್ಲಾಸ ಕಂಡು ನಿಜಕ್ಕೂ ಖುಷಿ ಆಯ್ತು.. ನಂತರ ನಾನು ಒಳಗೆ ಹೋಗಿ ಓಟ್ ಹಾಕಿ ಬಂದೆ.. ಅವಳು
ಕಾಣಲಿಲ್ಲ.. ಸುತ್ತಲೂ ಕಣ್ಣಾಡಿಸಿದೆ.. ಅವಳ ಸುಳಿವೇ ಇರಲಿಲ್ಲ.. ಅವಳ ಬಗ್ಗೆ ಯಾರನ್ನು
ಕೇಳೋದು..? ಅವಳ ಹೆಸರೇ ನನಗೆ ಗೊತ್ತಿಲ್ಲ.. ಇನ್ನು ಏನಂತ ವಿಚಾರಿಸಲಿ..? ಹೋಗ್ಲಿ ಬಿಡಿ ಏನು
ಮಾಡೋದಕ್ಕೆ ಆಗುತ್ತೆ ಅಂತ.. ಸುಮ್ಮನಾದೆ.. ಅಲ್ಲಿಂದ ಮನೆಗೆ ಬಂದೆ.. ಹಾಗೋ ಹೀಗೋ ಹರಟುತ್ತಾ
ಒಂದಿಷ್ಟು ಟಿವಿ ನೋಡುತ್ತಾ ಸುಖ ನಿದ್ರೆಗೆ ಜಾರಿದೆ.. ಅವಳನ್ನು ಮರೆತೇ ಬಿಟ್ಟೆ..





ಬೆಳಿಗ್ಗೆ ಎದ್ದೆ.. ಮಾಮೂಲಿ ದಿನಗಳಂತೆ ಕೆಲಸಕ್ಕೆ ತಯಾರಾಗಿ ಬಂದೆ..
ಅವಳು ನೆನಪೇ ಆಗಲಿಲ್ಲ.. ಕೆಲಸ ಮಾಡುತ್ತಾ, ಮಾಡುತ್ತಾ, ನೆನ್ನೆ ಓಟ್ ಹಾಕಿದ್ದರ ಬಗ್ಗೆ ಮಾತುಗಳು
ನಡೀತಾ ಇತ್ತು.. ಒಬ್ಬ ಗೆಳೆಯ ಓಟನ್ನು ಹಾಕೇ ಇರಲಿಲ್ಲ.. ಅವನಿಗೆ ರಾಜಕೀಯದ ಅಸಹ್ಯತೆ ಬಗ್ಗೆ
ವಾಕರಿಕೆ ಬರುವಷ್ಟು ಜಿಗುಪ್ಸೆ ಇತ್ತು.. ನನಗೂ ಆ ಜಿಗುಪ್ಸೆ ಇದೆ.. ಹಾಗಂತ ಓಟ್ ಹಾಕದೇ ಇದ್ರೆ ಎಲ್ಲಾ
ಸರಿ ಹೋಗುತ್ತಾ..?? ಅವನ ಈ ಮನೋಭಾವ ಕಂಡು ನನಗೆ ಒಂದಿಷ್ಟು ಬೇಸರವೂ ಆಯ್ತು. ವಿದ್ಯಾವಂತನಾದವನೇ
ಓಟ್ ಹಾಕಿಲ್ಲ ಅಂದ್ರೆ ಇನ್ನು ಅವಿದ್ಯಾವಂತರ ಪಾಡೇನು..? ಛೆ ಎಂದು ಬೇಸರಗೊಂಡೆ..





ಆಗ ನೆನ್ನೆ ನಡೆದ ಘಟನೆಗಳು ನನ್ನ ಅರಿವಿಗೆ ಬಂದವು..  ಅವಳು ಮತ್ತೆ ನೆನಪಾದಳು..  ಅವಳ ಆ ಮುಖ ನೆನಪಾಯಿತು.. ಅವಳ ಮಾತು ಕಿವಿಯೊಳಗೆ
ಝೇಂಕರಿಸತೊಡಗಿದವು. ಆಕೆಯ ಕಾಳಜಿ ಬಗ್ಗೆ ನನ್ನ ಮನಸ್ಸು ಧನ್ಯತೆ ತೋರುತ್ತಿತ್ತು. ಮಟ ಮಟ
ಮಧ್ಯಾಹ್ನವಾಗಿದ್ದರೂ ಆಕೆ ಆ ಬಿಸಿಲಲ್ಲೇ ನಡೆದು ಬಂದು ಓಟ್ ಹಾಕಿದ್ದಾಳೆ.. ಅದೂ ಬರಿಗಾಲಲ್ಲಿ
ನಡೆದುಕೊಂಡು.. ಹಳದಿ ಬಣ್ಣದ ಸೀರೆಯಲ್ಲಿ ಬಂದ ಆ ನಾರಿಗೆ ಇರುವ ಆಸೆ ಏನು ಗೊತ್ತಾ
ನನ್ನ ಒಂದು ಓಟ್
ನಿಂದಾದರೂ ಏನಾದರೂ ಬದಲಾಗಬಹುದೇನೋ ಅನ್ನೋ ಸಣ್ಣ ಆಸೆ
.. ದೇಹದಲ್ಲಿ ನಿಶಕ್ತಿ
ಇದ್ದರೂ, ಈ ಸಣ್ಣ ಆಸೆಗಾಗಿ ಮಟ ಮಟ ಮಧ್ಯಾಹ್ನದಲ್ಲಿ, ಬಿಸಿಲಿನಲ್ಲಿ, ಆಕೆ ಬಂದು ಓಟ್
ಮಾಡಿದ್ದಾಳೆ.. ಆಕೆಯ ವಯಸ್ಸು ಎಷ್ಟು ಗೊತ್ತಾ..??
80 ರ ಆಸುಪಾಸು... 





ಯಸ್.. ಆಕೆ ಹಣ್ಣು ಹಣ್ಣು ಮುದುಕಿ.. ದೇಹದಲ್ಲಿ ಶಕ್ತಿ ಇಲ್ಲ.. ಆದರೂ
ಬಿಸಿಲಲ್ಲಿ ಬಂದು ತನ್ನ ಹಕ್ಕು ಚಲಾಯಿಸಿದ್ದಾಳೆ.. ಒಳ್ಳೆಯ ಅಭ್ಯರ್ಥಿಗಾಗಿ ತನ್ನ ಮತ
ಚಲಾಯಿಸಿದ್ದಾಳೆ.. ಅಷ್ಟೋಂದು ವಯಸ್ಸಾಗಿದ್ದರೂ ಆಕೆಯಲ್ಲಿ ಉತ್ಸಾಹ ಕಡಿಮೆಯಾಗಿಲ್ಲ.. ಎಂಥ ಭ್ರಷ್ಟರು
ಬಂದರೂ ತನ್ನ ಛಲ ಬಿಟ್ಟಿಲ್ಲ.. ಇಂದಾದರೂ ಒಬ್ಬ ಒಳ್ಳೇ ಅಭ್ಯರ್ಥಿ ಬರಬಹುದೇನೋ.. ನನ್ನ ಒಂದು
ಮತದಿಂದ ಏನಾದರೂ ಬದಲಾಗಬಹುದೇನಓ ಅನ್ನೋ ಆಶಾವಾದದಿಂದ ಬಂದಿದ್ದಾಳೆ.. ಮುಂದಿನ ಬದುಕಿನ ಕನಸು
ಹೊತ್ತು ಬಂದು ಮತ ಚಲಾಯಿಸಿದ್ದಾಳೆ..








         


 ವಿದ್ಯಾವಂತ ಸ್ನೇಹಿತನ ಈ
ನಿರುತ್ಸಾಹ ನೋಡಿದಾಕ್ಷಣ ನನಗೆ ಆಕೆ ನೆನಪಾಗಿದ್ದಳು.  ದೇಶದ ಬಗ್ಗೆ ಅವರಿಗಿರುವ ಕಾಳಜಿ ಯುವಕರಿಗೇಕಿಲ್ಲ..? ಭ್ರಷ್ಟರು,
ಪಾಪಿಷ್ಟರು ಅಂತ ಬೈದಾಡಿಕೊಳ್ಳುವ ಜನರು ಮತದಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ
ಮಾಡಬಹುದಿತ್ತಲ್ಲವೇ..? ಈ ಹಣ್ಣು ಹಣ್ಣು ಮುದುಕಿಗೆ ಇರುವ ಉತ್ಸಾಹ ವಿದ್ಯಾವಂತರೆಂದು
ಹೇಳಿಕೊಳ್ಳುವ ಜನರಿಗೆ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ...





ನೋವಾಗಿದ್ರೆ ಕ್ಷಮಿಸಿ... ಇನ್ಮುಂದೆಯಾದ್ರೂ ನಿಮ್ಮ ಹಕ್ಕು ಚಲಾಯಿಸಿ..


Отправить комментарий

0 Комментарии