Hot Posts

10/recent/ticker-posts

ಟಿಪ್ಪುಗೆ ಅವನೊಬ್ಬ ಸಹಾಯ ಮಾಡಿದ್ರೆ ಬ್ರಿಟೀಷರನ್ನು ಅಂದೇ ಬಗ್ಗು ಬಡಿಯಬಹುದಿತ್ತು













ಬ್ರಿಟೀಷರನ್ನು ಹೊಡೆದೋಡಿಸಬೇಕು ಎಂಬ ದೃಢ
ಸಂಕಲ್ಪ ಮಾಡಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್
ನೆಪೋಲಿಯನ್ ಬೋನಾಪಾರ್ಟೆಯ ಸಹಾಯ ಯಾಚಿಸಿ ಫ್ರಾನ್ಸಿಗೆ ಹೋಗಿದ್ದರು..
ವಿಪರ್ಯಾಸ ಅಂದ್ರೆ ಆ ಸಮಯದಲ್ಲಿ ಫ್ರಾನ್ಸಿನ ಸೈನ್ಯ ಆತಂಕದಲ್ಲಿದ್ದ ಕಾರಣ ನೆಪೋಲಿಯನ್
ಬರುವೆನೆಂದು ಮಾತುಕೊಟ್ಟು ನಂತರ ನಿರಾಕರಿಸಿದ್ರು..





 ಇದು ನಡೆದದ್ದು ಹದಿನೆಂಟನೆಯ ಶತಮಾನದಲ್ಲಿ.. ಬಹುಶಃ
ಅಂದು ನೆಪೋಲಿಯನ್ ಬೋನಾಪಾರ್ಟೆ ಟಿಪ್ಪುವಿಗೆ ಸಹಾಯ ಹಸ್ತ ಚಾಚಿದ್ರೆ ಪ್ರಥಮ ಸ್ವಾತಂತ್ರ್ಯ
ಸಂಗ್ರಾಮ ನಡೆಯುವುದಕ್ಕೆ ಮೊದಲೇ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತಿತ್ತು ಎಂಬುದು ಗಮನಾರ್ಹ
ಸಂಗತಿಯಾಗಿದೆ.





ಹಲಗಲಿಯ ಬೇಡರು, ಗೌರಿ ಬಿದನೂರಿನ ವಿದುರಾಶ್ವತ ದುರಂತ, ಅಂಕೋಲ ಸತ್ಯಾಗ್ರಹ, ಶಿವಪುರ ಧ್ವಜ ಸತ್ಯಾಗ್ರಹ, ಕಾನೂನುಭಂಗ ಚಳುವಳಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ,
ಹೀಗೆ ಲೆಕ್ಕವಿಲ್ಲದಷ್ಟು ಹೋರಾಟಗಳ ಫಲವಾಗಿ ಸಾವಿರಾರು
ಧೀರ ಹೋರಾಟಗಾರರ ರಕ್ತದ ಹರಿವಿನಿಂದಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಆದರೆ ಇಂದು ನಾವು ಯಾರೂ
ಆ ಮಹಾನ್ ವ್ಯಕ್ತಿಗಳನ್ನು ನೆನೆಯುತ್ತಿಲ್ಲ ಎಂಬುದು ದುರಂತವೇ ಸರಿ.. 





ಹಲಗಲಿಯ ಬೇಡರ ಹೋರಾಟದ ಸಮಯದಲ್ಲಿ 14 ವರ್ಷದ ಬಾಲಕ ಸಾವಿನ ಅಂಚಿನಲ್ಲಿದ್ದಾಗ ಪೋಲೀಸರು ನಿನ್ನ ಕೊನೆಯ ಆಸೆ ಏನು..??
ನಿನಗೆ ಎನು ಬೇಕು ಅಂತ ಕೇಳಿದಾಗ ನನಗೆ ಸ್ವಾತಂತ್ರ್ಯ ಬೇಕುಎಂದು ಹೇಳಿ
ಕೊನೆಯುಸಿರೆಳೆದ್ದು ನಿಜಕ್ಕೂ ದಯನೀಯ ವಿಷಯವಾಗಿದೆ.. ಪುಟ್ಟ ಮಕ್ಕಳಲ್ಲಿಯೂ ಸ್ವಾತಂತ್ರಯದ
ಕಿಚ್ಚು ಹೊತ್ತಿಸಿದ್ದು ಅಂದಿನ ಕಾಲದ ಹೋರಾಟದ ತೀವ್ರತೆಯ ಬಗ್ಗೆ ತಿಳಿಸುತ್ತದೆ.


Отправить комментарий

0 Комментарии