Hot Posts

10/recent/ticker-posts

ಸಾವಿನ ನಂತರವೂ ಬ್ರಿಟೀಷರನ್ನು ಕಾಡಿದ ನೇತಾಜಿ ಸುಭಾಷ್‌ಸಂದ್ರಬೋಸ್‌.













ಕ್ರಾಂತಿಕಾರಿ ಯೋಧನಾಗಿ ಬ್ರಿಟೀಷರ ಪಾಲಿಗೆ
ಜ್ವಾಲೆಯಾಗಿ ಸುಟ್ಟಿದ್ದು ನೇತಾಜಿ ಸುಭಾಷ್ ಚಂದ್ರಬೋಸ್. ದೇಶದ ಬಗ್ಗೆ ಅಪಾರ ಅಭಿಮಾನವನ್ನು
ಬೆಳೆಸಿಕೊಂಡಿದ್ದ ಧೀಮಂತರು.. ಪದವಿ ಓದುವ ಸಮಯದಲ್ಲಿ 
ಪ್ರಾಧ್ಯಾಪಕರೊಬ್ಬರು ದೇಶದ ಬಗ್ಗೆ ಕೇವಲವಾಗಿ ಮಾತನಾಡಿದಾಗ ಸಿಡಿದೆದ್ದು ಅವರ
ಮಾತುಗಳನ್ನು ವಿರೋಧಿಸಿದ ಸಿಂಹದ ಮರಿ..  
 





ಪ್ರತಿಭಾನ್ವಿತರಾಗಿದ್ದ ಸುಭಾಷ್ ಚಂದ್ರಬೋಸ್ ಗೆ ಬ್ರಿಟೀಷರ ಅವಧಿಯಲ್ಲೇ IAS ಪದವಿ ದೊರೆತಾಗ ಬ್ರಿಟೀಷರ ಕೆಳಗೆ ನಾನು ಕೆಲಸ ಮಾಡುವುದಿಲ್ಲ
ಎಂದು ಹೇಳಿ ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್





ಒಂದೊಮ್ಮೆ ವಿಶ್ವದ ಅಧ್ಯಕ್ಷರೆಲ್ಲರೂ
ಸಾಲಾಗಿನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸುಭಾಷ್ ಚಂದ್ರ ಬೋಸರು ಅವರೊಂದಿಗೆ
ನಿಲ್ಲಲಿಲ್ಲವಂತೆ.. ಆಗ  ಅಧ್ಯಕ್ಷರೊಬ್ಬರು
ಅವರನ್ನು ಕರೆದು ಕೇಳಿದರಂತೆ
ಬನ್ನಿ.. ಈ ಸಾಲಿನಲ್ಲಿ ನಮ್ಮೊಂದಿಗೆ
ನಿಂತುಕೊಂಡು ಫೋಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ ಅಂತ ಹೇಳಿದ್ರಂತೆ.. ಆಗ ಸುಭಾಷ್
ಚಂದ್ರಬೋಸ್ ಏನ್ ಹೇಳಿದ್ರು ಗೊತ್ತಾ..
?? “ನಿಮ್ಮೊಂದಿಗೆ
ಫೋಟೋ ತೆಗೆಸಿಕೊಳ್ಳಲು ನನಗೆ ಅಭ್ಯಂತರವಿಲ್ಲ.. ಆದರೆ ನನ್ನೊಂದಿಗೆ ಸರಿಸಮನಾಗಿ ನಿಲ್ಲುವ ಅರ್ಹತೆ
ನಿಮ್ಮಲ್ಲಿ ಯಾರಿಗೂ ಇಲ್ಲ
ಎಂದು ಹೇಳಿದ್ರಂತೆ.. ಬ್ರಿಟೀಷರ ಅಧಿನದಿಂದ
ಭಾರತವನ್ನು ಮುಕ್ತಗೊಳಿಸಬೇಕು ಎಂದು ಅವಿರತವಾಗಿ ಶ್ರಮಿಸಿ
, ರಕ್ತ ಹರಿಸಿದ ದಿಟ್ಟ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್.





ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ
ಪಾಕಿಸ್ತಾನದ ಮೊಹಮದ್ ಅಲಿ ಜಿನ್ನ ಹೇಳಿದ ಮಾತು ಸುಭಾಷ್ ಚಂದ್ರ ಬೋಸರ ಕಿಚ್ಚಿನ ಹೋರಾಟದ ಬಗ್ಗೆ
ತಿಳಿಸುತ್ತದೆ.. ಜಿನ್ನ ಹೇಳ್ತಾರೆ
ನಾನು ಗಾಂಧೀಜಿಯವರೊಂದಿಗೆ ಮಾತುಕತೆ
ನಡೆಸಿದ್ದಕ್ಕಾಗಿ ನನಗೆ ಪಾಕಿಸ್ತಾನ ಸಿಕ್ಕಿತು.. ಆದ್ರೆ ಗಾಂಧೀಜಿಯವರ ಬದಲು ನಾನೇನಾದ್ರೂ
ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ರೆ ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ

ಅಂತ.. ಈ ಮಾತು ಸುಭಾಷ್ ಚಂದ್ರಬೋಸರ ದೇಶಪ್ರೇಮಕ್ಕೆ
ಹಿಡಿದ ಕೈಗನ್ನಡಿಯಾಗಿದೆ..





ಸ್ವಾಭಿಮಾನಿಯಾದ ಸುಭಾಷ್ ಚಂದ್ರಬೋಸರು ಭಾರತದ
ಸ್ವಾತಂತ್ರ್ಯಕ್ಕಾಗಿ ವಿದೇಶಗಳ ಬೆಂಬಲವನ್ನು ಪಡೆದು ದಿಟ್ಟ ಸೈನ್ಯವನ್ನು ಸಜ್ಜುಗೊಳಿಸಿದ್ರು.
ಸಾಯುವವರೆಗೂ ಅವಿರತವಾಗಿ ಶ್ರಮಿಸಿದ್ರು.. ಕೊನೆಯ ಉಸಿರಿರುವರೆಗೂ ಬ್ರಿಟೀಷರಿಗೆ ತಲೆ ಬಾಗದೇ ತಲೆ
ಎತ್ತಿ ಮೆರೆದ ಭಾರತದ ಕುಡಿ ಸುಭಾಷ್ ಚಂದ್ರಬೋಸ್..





ಬ್ರಿಟೀಷರೊಂದಿಗೆ ಕದನಕ್ಕಿಳಿಯಲು ಸೇನೆಯನ್ನು
ಸಜ್ಜುಗೊಳಿಸುತ್ತಿದ್ದ ಸುಭಾಷರು ದಿನಾಂಕ
18 ಆಗಸ್ಟ್ 1945 ರಂದು ವಿಮಾನ ಪ್ರಯಾಣ 
ಮಾಡುತ್ತಿರುವಾಗ ಅಕಸ್ಮಿಕವಾಗಿ ಸಂಭವಿಸಿದ ವಿಮಾನ ಸ್ಪೋಟದಿಂದಾಗಿ ಅವರು ವಿಧಿವಶರಾದರೆಂದು
ಹೇಳಲಾಗುತ್ತದೆ.. ಆದರೆ ಇದು ಎಷ್ಟು ಸತ್ಯವೋ
, ಎಷ್ಟು ಸುಳ್ಳೋ
ಯಾರಿಗು ತಿಳಿದಿಲ್ಲ.. ಕಡೆಗೂ ಸುಭಾಷ್ ಚಂದ್ರ ಬೋಸರ ಸಾವು ವಿಶ್ವಕ್ಕೆ ಒಂದು ನಿಗೂಢ ವಿಷಯವಾಗಿಯೇ
ಉಳಿಯಿತು.. 





ಸುಭಾಷ್ ಚಂದ್ರಬೋಸ್ ಹುತಾತ್ಮರಾಗಿದ್ದಾರೆ ಎಂದು ಹೇಳಿದರೆ ಬ್ರಿಟೀಷರು ಅದನ್ನು
ನಂಬಲೇ ಇಲ್ಲ.. ಯಾಕಂದ್ರೆ ಸುಭಾಷ್ ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ..
ಕ್ರಾಂತಿಯ ಕಿಡಿ ಎಂದು ಬ್ರಿಟೀಷ್ ಅಧಿಕಾರಿಯೊಬ್ಬರು ಹೇಳಿದ್ದರಂತೆ..


ಸುಭಾಷ್ ಹುತಾತ್ಮರಾಗಿದ್ದರೂ ಬ್ರೀಟೀಷರು
ಮಾತ್ರ
ಸುಭಾಷ್ ತಮ್ಮ ಮೇಲೆ ಧಾಳಿ ಮಾಡಬಹುದು ಎಂಬ ಆತಂಕದಲ್ಲೇ
ಬಹಳಷ್ಟು ದಿನ ಕಾಲ ಕಳೆದಿದ್ದರು
ಎಂಬ ಸಂಗತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.


Отправить комментарий

0 Комментарии