Hot Posts

10/recent/ticker-posts

ಬ್ರಿಟೀಷರನ್ನು ಕಾಡಿದ ಭಗತ್‌ ಸಿಂಗ್‌ ಎಂಬ ಸ್ವಾಭಿಮಾನಿ ಹುಲಿ












ಭಾರತ ಸೇರಿದಂತೆ ವಿದೇಶದಲ್ಲಿರುವ
ಭಾರತೀಯರೆಲ್ಲರೂ ಕೂಡ ಸ್ವಾತಂತ್ರ‍್ಯದ ಸಂಭ್ರಮವನ್ನು ಆನಂದಿಸುತ್ತಾರೆ.  ಯಾಕೆಂದ್ರೆ ಭಾರತೀಯರು ಬ್ರಿಟೀಷರಿಂದ
ಬಂಧಮುಕ್ತಗೊಂಡು ಆಗಸ್ಟ್‌ 15 ಕ್ಕೆ
67 ವರ್ಷಗಳಾಗಿವೆ.





ಆದರೆ ಆ ಎಲ್ಲಾ ಸಂಭ್ರಮದ ಹಿಂದೆ ಕೋಟಿ ಕೋಟಿ
ಲೀಟರುಗಳಷ್ಟು ನೆತ್ತರು ಹರಿದಿದೆ. ರುಂಡಗಳು ಚೆಂಡುಗಳಂತೆ ಉರುಳಿವೆ. ಕಡಲಿನ ಕಣ್ಣೀರು ಉಕ್ಕಿ
ಹರಿದಿದೆ. ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಮಹಿಳೆಯರು ಕುಂಕುಮ ಭಾಗ್ಯವನ್ನೇ
ಕಳೆದುಕೊಂಡುಬಿಟ್ಟಿದ್ದಾರೆ.





ಈ ರಕ್ತ ಸಿಕ್ತ ಸ್ವಾತಂತ್ರ‍್ಯದ ಹಿಂದೆ ಅನೇಕ
ಕಣ್ಣೀರಿನ ಕಥೆಗಳಿವೆ. ನೋವಿನ ಅಲೆಗಳಿವೆ. ದುಗುಡದ ದನಿಗಳಿವೆ.  ಕೇವಲ
23 ವರ್ಷದ ಭಗತ್
ಸಿಂಗ್ ಗೆ ಅಂದಿನ ದೇಶದ ಪರಿಸ್ಥಿತಿಗಳು ಅರ್ಥವಾಗಿಬಿಟ್ಟಿತ್ತು. ಅಹಿಂಸಾವಾದಿಯಾದ ಮಹಾತ್ಮಾ
ಗಾಂಧಿಯವರಂತೆ ಶಾಂತಿ ಮಂತ್ರದ ಜಪ ಮಾಡಿದರೆ ಸ್ವಾತಂತ್ರ್ಯಾ ಸಿಗದು ಎಂದು ಭಾವಿಸಿ ಕ್ರಾಂತಿಕಾರಿ
ಹೆಜ್ಜೆ ಇಟ್ಟರು. ಅತಿ ಚಿಕ್ಕ ವಯಸ್ಸಿನಲ್ಲೇ ಅತಿದೊಡ್ಡ ಕ್ರಾಂತಿಕಾರಿಯಾಗಿ
ಬೆಳೆದುಬಿಟ್ಟಿದ್ರು.. ಅವರ ಆ ರೋಷಾವೇಷದ ಹಿಂದೆ ಒಂದು ಇತಿಹಾಸವಿದೆ. ಸೇಡಿನ ಜ್ವಾಲೆಯಿದೆ.
ನೋವಿನ ಕೂಪವಿದೆ.





ಅದು 1919 ಏಪ್ರಿಲ್ 13 ನೇ ತಾರೀಕು.. ಸಂಜೆ ಸುಮಾರು 6 ಗಂಟೆಯ ಸಮಯ..  ಪಂಜಾಬ್ನ ಜಲಿಯನ್
ವಾಲಾಬಾಗ್ ನಲ್ಲಿ
20.000 ರೈತರು ಹೋರಾಟ ನಡೆಸುತ್ತಿದ್ದರು.. ಹೋರಾಟ
ನಿರತ ರೈತರ ಮೇಲೆ ಬ್ರಿಟೀಷರು  ಯಾವುದೇ
ಮುನ್ಸೂಚನೆ ಇಲ್ಲದೇ ನಿರ್ದಯವಾಗಿ ಗುಂಡು ಹಾರಿಸಿದ್ರು.. ಕೇವಲ
6 ನಿಮಿಷಗಳಲ್ಲಿ ಸುಮಾರು 3000 ಕ್ಕೂ ಹೆಚ್ಚಿನ
ಜನರು ಕ್ಷಣಮಾತ್ರದಲ್ಲಿ ಪ್ರಾಣ ಕಳೆದುಕೊಂಡರು.. ಪುಟ್ಟ ಹುಡುಗನಾಗಿದ್ದ ಭಗತ್ ಸಿಂಗ್ ಆ ಘನ ಘೋರ
ಹತ್ಯಾಕಾಂಡಕ್ಕೆ ಮೂಕ ಸಾಕ್ಷಿಯಾಗಿದ್ರು..





ಮಾರನೆಯ ದಿನ ಶಾಲೆಗೆ ಹೋಗು ಅಂತ ಊಟದ
ಬುತ್ತಿಯನ್ನು ನೀಡಿ ಕಳಿಸಿದ್ರೆ ಭಗತ್ ಸಿಂಗ್ ನೇರವಾಗಿ ಹತ್ಯಾಕಾಂಡದ ಕರಾಳ ಪ್ರದೇಶಕ್ಕೆ ಬಂದು
,
ಆ ನೆಲದಲ್ಲಿ ಬಿದ್ದ ರಕ್ತಸಿಕ್ತ ಮಣ್ಣನ್ನು ನೋಡಿ
ಕೆಂಡಾಮಂಡಲವಾದ್ರು. ತನ್ನ ಊಟವನ್ನು ನೆಲದಲ್ಲಿ ಚೆಲ್ಲಿ ಆ ರಕ್ತಸಿಕ್ತ ಮಣ್ಣನ್ನು ಆ ಊಟದ
ಡಬ್ಬದಲ್ಲಿ ಹಾಕಿಕೊಂಡು ಮನೆಗೆ ಬಂದು ದೇವರ ಮುಂದಿಟ್ಟು
ನನ್ನ ದೇಶದ ಜನರ ರಕ್ತವನ್ನು ಹರಿಸಿದವರ ಜೀವ ತೆಗೆಯುವವರೆಗೂ  ನನಗೆ ಸಮಾಧಾನವಿಲ್ಲಎಂದು ಪ್ರತಿಜ್ಞೆ ಮಾಡಿದ್ರು.. ಆಗಲೇ ಕ್ರಾಂತಿಕಾರಿ ಭಾವನೆಗಳು ಭಗತ್ ಸಿಂಗ್
ರಲ್ಲಿ ಬೇರೂರಿಬಿಟ್ಟವು.





ರಾಜಗುರುರವರ ಜೊತೆಗೂಡಿ ಕ್ರಾಂತಿಕಾರಕ
ಚಟುವಟಿಕೆಗಳಿಂದ ಬ್ರಿಟೀಷ್ ಸೈನಿಕರ ರುಂಡಗಳನ್ನು ಚೆಂಡಾಡಿ
, ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು.. ಆದರೆ ಅದೊಂದು ದಿನ ಭಗತ್ ಸಿಂಗ್
ಅವರನ್ನು ಬ್ರಿಟೀಷರು ಹೊಂಚುಹಾಕಿ ಸಂಚು ರೂಪಿಸಿ ಸೆರೆಹಿಡಿದುಬಿಟ್ಟರು. ಪರಿಣಾಮವಾಗಿ
1931 ರ ಮಾರ್ಚ 23 ನೇ ತಾರೀಕಿನಂದು ಭಗತ್ ಸಿಂಗ್ ರವರನ್ನು
ನೇಣಿಗೆ ಹಾಕಲು ತೀರ್ಮಾನಿಸಿಬಿಟ್ಟರು ಬ್ರಿಟೀಷರು. 





ಕೊನೆಯದಾಗಿ ನೇಣುಗಂಬಕ್ಕೆ ಏರಿಸುವಾಗ ಭಗತ್
ಸಿಂಗ್‌ರನ್ನು ನೋಡಿದ ಬ್ರಿಟೀಷ್ ಅಧಿಕಾರಿಯೊಬ್ಬ
ನೀನು ಈ ಜನರಿಗಾಗಿ
ಕಷ್ಟ ಪಟ್ಟೆ.. ಆದರೆ ಇಂದು ನಿನ್ನನ್ನು ನೇಣುಹಾಕುತ್ತಿದ್ದರೂ ಸುತ್ತಲೂ ನೋಡುತ್ತ ಇರುವರೇ ಹೊರತು
ಯಾರೂ ನಿನ್ನನ್ನು ರಕ್ಷಿಸುತ್ತಿಲ್ಲ.. ಇಂಥವರಿಗಾಗಿ ನೀನು ಹೋರಾಟ ಮಾಡ್ತಿದ್ದೀಯಲ್ಲ.. ನೀನು
ಸತ್ತರೆ ಮತ್ಯಾರೂ ಹೋರಾಟಗಾರರು ಹುಟ್ಟುವುದಿಲ್ಲ
ಅಂತ ಹೇಳಿದಾಗ
ಭಗತ್ ಸಿಂಗ್ ಏನ್ ಹೇಳಿದ್ರು ಗೊತ್ತಾ..
?? “ನಾನು ಸತ್ತರೆ
ನನ್ನಂಥ ನೂರಾರು ಭಗತ್ ಸಿಂಗ್ ರು ನನ್ನ ತಾಯ್ನೆಲದಲ್ಲಿ ಹುಟ್ಟುತ್ತಾರೆ.. ಅಂಥ ಶಕ್ತಿ ಭಾರತ
ಮಾತೆಗೆ ಇದೆ
ಎಂದು ಹೇಳುತ್ತಾ ಮಹತ್ವದ ಆಶಾವಾದವದೊಂದಿಗೆ,
ನಗು ನಗುತ್ತಲೇ ನೇಣುಗಂಬಕ್ಕೆ ತಲೆ ನೀಡಿದರು.. ಅಂದು
ಭಾರತದ ಆಶಾಕಿರಣ ಕಣ್ಮರೆಯಾಗಿಹೋಯ್ತು.


Отправить комментарий

0 Комментарии