Hot Posts

10/recent/ticker-posts

ವಾಂಖೆಡೆ ಸ್ಟೇಡಿಯಂನಲ್ಲಿ ದೇವರು ಆಡಿದ ಕೊನೆಯ ಮಾತುಗಳು..!




 

ಭಾರತ ಮತ್ತು
ವೆಸ್ಟ್‌ ಇಂಡೀಸ್‌ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ಖುಷಿ ಒಂದೆಡೆಯಾದ್ರೆ
, ಇದೇ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ತಮ್ಮ ಕ್ರಿಕೆಟ್‌
ಬದುಕಿಗೆ ವಿದಾಯ ಹೇಳಿರುವ ದುಃಖ ಇನ್ನೊಂದೆಡೆ. ಗೆಲುವಿನ ಖುಷಿಯಲ್ಲಿಯೇ ತಮ್ಮ ಮನದಾಳದ
ಭಾವುಕತೆಯನ್ನು ಹೊರ ಹಾಕಿದ ಕ್ರಕೆಟ್‌ ದೇವರು ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದರ ಮೂಲಕ ತಮ್ಮ
ಕ್ರಿಕೆಟ್‌ ಬದುಕಿಗೆ ಅಂತಿಮ ವಿದಾಯವನ್ನು ಹೇಳಿದ್ರು..










ಸಚಿನ್ ಅವರು ಆಡಿದ
ಕೊನೆಯ ಮಾತುಗಳೇನು
? ಇಲ್ಲಿದೆ ಓದಿ...








೧. ತಂದೆ ತಾಯಿಗಳಿಗೆ
ಧನ್ಯವಾದಗಳು
:
ಎಲ್ಲರಿಗೂ ನನ್ನ ನಮಸ್ಕಾರಗಳು.. ನನ್ನ ಕ್ರಿಕೆಟ್‌ ಬದುಕಿನ ಈ ಸಾಧನೆಗೆ
ಮೊದಲನೆಯದಾಗಿ ನಾನು ನನ್ನ ತಂದೆ ತಾಯಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.





೨. ತಾಯಿ ಋಣ ತೀರಿಸಲಾಗದು
:
ನನ್ನ ತಾಯಿಯ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ನನಗೆ ಹುಷಾರಿಲ್ಲದಿದ್ದಾಗ
ನನ್ನನ್ನು ಕಾಪಾಡಿ ಆರೈಕೆ ಮಾಡಿದ್ದಾರೆ. ನಾನು ದೊಡ್ಡವನಾಗಿದ್ದರೂ ಮಗುವಿನಂತೆ ನೋಡಿಕೊಂಡರು.





೩. ತಂದೆಯೇ ನನಗೆ
ಪ್ರೇರಣೆ :
ನನ್ನ ಬದುಕಿನ ಉದ್ದಕ್ಕೂ ನನ್ನ ತಂದೆಯೇ ಪ್ರೇರಣೆಯಾಗಿದ್ದರು. ಆದ್ರೆ ಸದಾ ಅವರ
ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ ಎಂದು ತಂದೆಯನ್ನು ನೆನೆದು ಭಾಬವುಕರಾದ್ರು ಕ್ರಿಕೆಟ್‌
ದೇವರು.





೪. ಮಕ್ಕಳ ಬಗ್ಗೆ
ಮಾತು :
ನನ್ನ ಎರಡೂ ಮಕ್ಕಳು ನನ್ನ ವಜ್ರಗಳು. ಬಹಳಷ್ಟು ಅಮೂಲ್ಯ ಕ್ಷಣಗಳನ್ನು ನಾನು ನನ್ನ
ಮಕ್ಕಳೊಂದಿಗೆ ಕಳೆಯಲು ಸಾಧ್ಯವಾಗಿಲ್ಲ. ಆದ್ರೆ ಇನ್ನು ಮುಂದೆ ನನ್ನ ಸಂಪೂಣ್ ಸಮಯವನ್ನು ನನ್ನ
ಮಕ್ಕಳೊಂದಿಗೆ ಕಳೆಯುತ್ತೇನೆ ಎಂದು ಹೇಳುವ ಮೂಲಕ ಸಚಿನ್ ಅಪ್ಪನಾಗಿ ಮುಂದಿನ ಬದುಕನ್ನು
ರೂಪಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ.







೫. ಸಹೋದರಿ ಕೊಟ್ಟ
ಗಿಫ್ಟ್‌ :
ನನಗೆ ಮೊಟ್ಟ ಮೊದಲನೆಯ ಬಾರಿಗೆ ಬ್ಯಾಟ್‌ ಗಿಫ್ಟ್‌ ಕೊಟ್ಟಿದ್ದು ನನ್ನ ಸಹೋದರಿ..
ನನ್ನ ಬದುಕಿನ ಉದ್ದಕ್ಕೂ ನನ್ನನ್ನು ಪ್ರೇರೇಪಿಸಿ
, ನನ್ನ ಯಶಸ್ಸಿಗೆ ಕಾರಣರಾದ್ರು.





೬. ನನ್ನ ಬದುಕಿಗಾಗಿ
ಜೀವ ಸವೆಸಿದ ಅಂಜಲಿ :
1991 ರಲ್ಲಿ ಮದುವೆಯಾದ
ನಂತರ ನನ್ನ ಬದುಕಿಗಾಗಿ ತನ್ನ ಬದುಕನ್ನು ತ್ಯಾಗ ಮಾಡಿದ ಅಂಜಲಿಗೆ ನನ್ನ ವಿಶೇಷ ಧನ್ಯವಾದಗಳು.
ನನ್ನ ಬದುಕಿನ ಕಷ್ಟ ಸುಖಗಳಲ್ಲಿ ಜೊತೆಗಿದ್ದು
, ಎಲ್ಲವನನ್ನು
ಹಂಚಿಕೊಂಡಿದ್ದಾರೆ. ನನ್ನ ಕ್ರಿಕೆಟ್‌ ಬದುಕಿಗಾಗಿ ತಮ್ಮ ವೈದ್ಯಕೀಯ ಸೇವೆಯನ್ನೇ ಬಿಟ್ಟು ನನಗಾಗಿ
ಬದುಕು ಮುಡಿಪಿಟ್ಟಿದ್ದಾರೆ. ನಿಜಕ್ಕೂ ನಾನು ಅಂಜಲಿಗೆ ಆಭಾರಿಯಾಗಿದ್ದೇನೆ.





೬. ಗುರುಗಳಿಗೆ ದೇವರ
ನಮನ :
ವಾಂಖೆಡೆ ಸ್ಟೇಡಿಯಂನಲ್ಲಿ ಮಾತನಾಡಿದ ಕ್ರಿಕೆಟ್‌ ದೇವರು ತಮ್ಮ ವೃತ್ತಿ ಬದುಕಿನ ಎಲ್ಲಾ
ಕೋಚ್‌ಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದರೆ. ಆರಂಭದಿಂದ ಅಂತ್ಯದವರೆಗೆ ಟ್ರೈನ್‌ ಮಾಡಿದ ಎಲ್ಲಾ
ಕೋಚ್‌ಗಳಿಗೂ ಹೃತ್ಪೂವ್ಕ ಧನ್ಯವಾದಗಳು.. ಎಲ್ಲರಿಗಿಂತ ಗುರು ರಮಾಕಾಂತ್‌ಗೆ ವಿಶೆಷ
ಧನ್ಯವಾದಗಳನ್ನು ಹೇಳಿದ್ದಾರೆ ಸ
ಚಿನ್ನ’.





 


೭. ಭಾರತಕ್ಕಾಗಿ
ಆಡಿದ್ದು ನನ್ನ ಬದುಕಿನ ಹೆಮ್ಮೆ :
24 ವರ್ಷಗಳ ಕಾಲ
ಭಾರತಕ್ಕಾಗಿ ಆಡಿದ್ದು ನಿಜಕ್ಕೂ ನನಗೆ ಹೆಮ್ಮೆ ನೀಡಿದೆ. ಭಾರತದ ಕ್ರಿಕೆಟ್‌ ತಂಡದ
ಭಾಗವಾಗಿದ್ದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ದೇವರು ನುಡಿದರು.





೮. ಮುಂದಿನ ಪೀಳಿಗೆಗೆ
ಆಲ್‌ ದಿ ಬೆಸ್ಟ್‌ :
ಮುಂದಿನ ಪೀಳಿಗೆಗೆ ಆದ್ಯತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಎಲ್ಲಾ
ಯುವ ಕ್ರಿಕೆಟ್‌ ಆಟಗಾರರಿಗೆ ಆಲ್‌ ದಿ ಬೆಸ್ಟ್ ಎಂದು ಶುಭ ಹಾರೈಸಿದರು ಸಚಿನ್‌





೯. ಅಣ್ಣನಿಂದ ನನ್ನ
ಭವಿಷ್ಯ ಬದಲಾಯಿತು :
ಸಹೋದರ ನಿತಿನ್‌ ನನ್ನನ್ನು ಹುರಿದುಂಬಿಸಿದ್ರು.. ಸಹೋದರಿ ಸವಿತ
ಪ್ರೇರಣೆಯನ್ನು ನಾನು ಮರೆಯಲಾರೆ.. ಅಣ್ಣ ಅಜಿತ್‌
, ನನಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನನ್ನ
ಕುಟುಂಬದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲು ಇಷ್ಟ ಪಡುತ್ತೇನೆ.





೧೦. ಬಾಲ್ಯ
ಸ್ನೇಹಿತರನ್ನು ನೆನಪು ಮಾಡಿಕೊಂಡ ಸಚಿನ್ :
ಬಾಲ್ಯದ ಬಗ್ಗೆ ನೆನಪು ಮಾಡಿಕೊಂಡ ಸಚಿನ್ ತಮ್ಮ
ಬಾಲ್ಯ ಸ್ನೇಹಿತರನ್ನು ಕೂಡ ತಮ್ಮ ಅಂತಿಮ ಮಾತುಗಳಲ್ಲಿ ಸೇರಿಸಿಕೊಂಡರು. ಬಾಲ್ಯದ ಗೆಳೆಯರಿಗೂ ಈ
ಸಮಯದಲ್ಲಿ ಧನ್ಯವಾದಗಳನ್ನು ಸಮರ್ಪಿಸಿದ್ದು ಸಚಿನ್ ಹಿರಿಮೆಗೆ ಹಿಡಿದ ಕನ್ನಡಿಯಾಗಿದೆ.





೧೧. ಧೋನಿಗೆ
ಥ್ಯಾಂಕ್ಸ್ :
ಸಚಿನ್‌ ಅವರ
200 ನೇ ಪಂದ್ಯದಲ್ಲಿ
ಕ್ಯಾಪ್ ಅನ್ನು ಕೊಡುಗೆಯಾಗಿ ನೀಡಿದ ಧೋನಿಗೆ ಸಚಿನ್ ತೆಂಡೂಲ್ಕರ್‌ ಅವರು ಧನ್ಯವಾದಗಳನ್ನು
ಸಮರ್ಪಿಸಿದ್ದರು.





೧೨. : ಭಾರತದ ಗೋಡೆ ಮತ್ತು  ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್ ಅವರನ್ನು ನೆನದ ಸಚಿರಾಹುಲ್ ದ್ರಾವಿಡ್‌, ಲಕ್ಷ್ಮಣ್
ಮತ್ತು ಸೌರವ್‌ ಗಂಗೂಲಿ ಜೊತೆಗಿನ ಕ್ಷಣಗಳ ಮೆಲುಕು
ನ್ ತೆಂಡೂಲ್ಕರ್‌
ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡು ಭಾವುಕರದ್ರು. ರಾಹುಲ್ ಮತ್ತು ಸೌರವ್‌
ಗಂಗೂಲಿಯವರು ಇಲ್ಲಿಗೆ ಆಗಮಿಸಿದ್ದಕ್ಕೆ ಮತ್ತು ಅವರೊಂದಿಗೆ ಆಡಿದ ಕ್ಷಣಗಳನ್ನು ನೆನೆದು
ದನ್ಯವಾದಗಳನ್ನು ಸಮಪಿಸಿದ್ದರು.





೧೩. ಮ್ಯಾನೇಜರ್‌ಗೆ
ವಿಶೇಷ ಥ್ಯಾಂಕ್ಸ್ :
ಸಚಿನ್ ತೆಂಡೂಲ್ಕರ್‌ ಅವರು ತಮ್ಮ ಮ್ಯಾನೇಜರ್‌ ಅವರಿಗೆ ವಿಶೇಷ ಥ್ಯಾಂಕ್ಸ್
ಅರ್ಪಿಸಿದರು. ನನ್ನ ಬದುಕಿಗಾಗಿ ನಮ್ಮ ಮ್ಯಾನೇಜರ್‌ ತಮ್ಮ ಹೆಂಡತಿ ಮಕ್ಕಳು ಮತ್ತು ಕುಟುಂಬದಿಂದ
ದೂರ ಬಂದಿದ್ದಾರೆ. ನನ್ನ ಕೆಲಸಕ್ಕಾಗಿ ಸದಾ ನನ್ನೊಂದಿಗೆ ಅವರು ಇರುತ್ತಿದ್ದರು. ನನಗಾಗಿ
ಇಷ್ಟೋಂದು ತ್ಯಾಗ ಮಾಡಿದ ನಮ್ಮ ಮ್ಯಾನೇಜರ್‌ ಅವರಿಗೆ ಮತ್ತು ಅವರ ಕುಟುಂಬದವರಿಗೆ ನನ್ನ ವಿಶೇಷ
ಧನ್ಯವಾದಗಳನ್ನು ಹೇಳುತ್ತಿದ್ದೇನೆ ಎಂದು ಹೇಳುವುದರ ಮೂಲಕ ಸಚಿನ್‌ ತಮ್ಮ ದೊಡ್ಡತನವನ್ನು
ಮೆರೆದರು.





೧೩. ಅಭಿಮಾನಿಗಳ ಕೂಗೇ
ನನ್ನ ಉಸಿರು :
ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳಾದ ನಿಮಗೆ ವಿಶೇಷ ಧನ್ಯವಾದಗಳು ಎಂದು ಹೇಳುವ
ಮೂಲಕ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳನ್ನು ಸಮಪಿಸಿದ್ರು. ನಿಮ್ಮ ಪ್ರೋತ್ಸಾಹವನ್ನು ನಾನು
ಎಂದಿಗೂ ಮರೆಯಲಾಗುವುದಿಲ್ಲ. ನೀವು ಕೂಗುವ ಸಚಿನ್‌ ಸಚಿನ್‌ ಎಂಬ ಕೂಗು ನನ್ನ ಕೊನೆಯ ಉಸಿರು
ಇರುವವರೆಗೂ ನನ್ನ ಕಿವಿಯಲ್ಲಿ ಗುನುಗುಟ್ಟುತ್ತಿರುತ್ತದೆ. ಇಷ್ಟೋಂದು ಪ್ರೀತಿ ವಿಶ್ವಾಸವನ್ನು
ಇಟ್ಟುಕೊಂಡಿರುವ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.





೧೪. ಮಾಧ್ಯಮಗಳಿಗೆ
ಥ್ಯಾಂಕ್ಸ್ :
ನನ್ನ ಬದುಕಿನ ಎಲ್ಲಾ ಕ್ಷಣಗಳನ್ನು ಕ್ಲಿಕ್ ಮಾಡಿದ ಎಲ್ಲಾ ಫೋಟೋಗ್ರಾಫರ್‌ಗಳಿಗೆ
ಮತ್ತು ನನ್ನ ಸಾಧನೆಗಳನ್ನು ಮತ್ತು ನನ್ನ ಕೆಲಸಗಳನ್ನು ಅಭಿಮಾನಿಗಳಿಗೆ ಬಿತ್ತರಿಸಿದ ಎಲ್ಲಾ
ಮಾಧ್ಯಮದವರಿಗೆ ವಿಶೇಷ ಥ್ಯಾಂಕ್ಸ್ ಹೇಳುತ್ತಿದ್ದೇನೆ. ನನ್ನ ಬದುಕಿನ ಕ್ಷಣಗಳನ್ನು ನಾನು ಮತ್ತೆ
ಮೆಲುಕು ಹಾಕಲು ನಿಮ್ಮಿಂದ ಸಾಧ್ಯವಾಯ್ತು ಎಂದು ಮಾಧ್ಯಮದವರಿಗೆ ಧನ್ಯವಾಗಳನ್ನು ಸಮರ್ಪಿಸಿದ್ರು
ಸಚಿನ್‌





೧೫. ಪಿಚ್‌ಗೆ ಕೊನೆಯ
ಬಾರಿ ನಮಿಸಿ ಹೊರನಡೆದ ದೇವರು :
ಕೊನೆಯಬಾರಿ ಪಿಚ್‌ಗೆ ನಮಿಸಿದ ಸಚಿನ್ ಸ್ಟೇಡಿಯಂನಿಂದ ಹೊರ
ನಡೆದರು. ಅಂತಿಮ ಭಾಷಣದಲ್ಲಿ ಎಲ್ಲರನ್ನೂ ನೆನೆದ ಸಚಿನ್ ಹೆಚ್ಚು ಭಾವುಕರಾಗಿಬಿಟ್ಟಿದ್ದರು.
"ನಾನು ಹೆಚ್ಚು ಮಾತನಾಡಿದಂತೆ
, ಹೆಚ್ಚು
ಭಾವುಕನಾಗುತ್ತೇನೆ. ಅದಕ್ಕೆ ನಾನು ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ" ಎಂದು
ಹೇಳುತ್ತಲೇ ಕಣ್ಣೀರಿಟ್ಟ ಸಚಿನ್ ತೆಂಡೂಲ್ಕರ್‌ ಮೈಕ್‌ ಬಿಟ್ಟು ಮುಂದೆ ಬಂದರು.


 


ನಂತರ ಸಚಿನ್‌
ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ನಾಯಕ ಧೋನಿ ಮತ್ತು ಟೀಂ ಇಂಡಿಯಾ ಆಟಗಾರರು ಸ್ಟೇಡಿಯಂ  ಸುತ್ತಲೂ ಅವರನ್ನು ಹೊತ್ತು ತಿರುಗಾಡುತ್ತಿದ್ದರೆ
,
ಅಭಿಮಾನಿಗಳು ಸಚಿನ್ ಸಚಿನ್ ಎಂದು ಕೂಗುತ್ತ
ಭಾವುಕರಾದ್ರು. ಅಭಿಮಾನಿಗಳ ಕೂಗನ್ನು ಕೇಳಿದ ಕ್ರಿಕೆಟ್‌ ದೇವರ ಕಣ್ಣಲ್ಲಿ ಕಂಬನಿಧಾರೆ ಹರಿಯಲು
ಶುರು ಮಾಡಿತ್ತು.


Отправить комментарий

0 Комментарии