Hot Posts

10/recent/ticker-posts

ಭಾರತದ ಯಾವ ದೇವಾಲಯದಲ್ಲಿ ಎಷ್ಟು ಚಿನ್ನ ಇದೆ ಗೊತ್ತಾ?




ನವದೆಹಲಿ : ಜಗತ್ತಿನ ದೇವರುಗಳಿಗಿಂತ ಭಾರತೀಯ
ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ
ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ
ಗೊತ್ತಿಲ್ಲ.. ಒಟ್ಟು ಸುಮಾರು
54 ಬಿಲಿಯನ್‌ ರೂಪಾಯಿಗಳಷ್ಟು ಮೌಲ್ಯವುಳ್ಳ
ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ
ಸಂಗತಿ.








ಭಕ್ತರು ತಮ್ಮ ಭಕ್ತಿಗೆ ತಕ್ಕಂತೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಹೀಗೆ
ಸಲ್ಲಿಸಿದ ಕಾಣಿಕೆಗಳಲ್ಲಿ ಭಾಗಶಃ ಚಿನ್ನದ ಕಾಣಿಕೆಯೇ ಹೆಚ್ಚಗಿದೆ ಎಂದು ಅಂದಾಜಿಸಲಾಗಿದೆ.
ತಿರುಪತಿಯ ತಮ್ಮಪ್ಪನ ದೇವಾಲಯ
, ಜಮ್ಮು ಕಾಶ್ಮೀರದ ವೈಷ್ಣೋ ದೇವತೆಯ ದೇವಾಲಯ,
ಅನಂತ ಪದ್ಮನಾಭ ಸ್ವಾಮಿ ದೇವಾಲಯ, ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶೇಖರಣೆಗೊಂಡಿರುವ ಒಟ್ಟು ಚಿನ್ನದ ಮೌಲ್ಯ,
ಬರೋಬ್ಬರಿ 50 ಬಿಲಿಯನ್‌ ರೂಪಾಯಿಗಳು.





೫. ವೈಷ್ಣೋ ದೇವಿ ದೇವಾಲಯ





ಅತಿ ಶ್ರೀಮಂತ ದೇವಾಲಯಗಳಲ್ಲಿ 5 ನೇ ಸ್ಥಾನದಲ್ಲಿ ಇರುವ ದೇವಾಲಯ ಜಮ್ಮು ಕಾಶ್ಮೀರದ ವೈಷ್ಣೋ ದೇವಯಿ ದೇವಾಲಯ.
ಇಲ್ಲಿಗೆ ನವರಾತ್ರಿ ಸಮಯದಲ್ಲಿ ಕನಿಷ್ಟ ಸುಮಾರು
80 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವೈಷ್ಣೋ ದೇವಿಯ
ಸನ್ನಿಧಿಯಲ್ಲಿರುವ  ಒಟ್ಟು ಚಿನ್ನ ಎಂದರೆ
20,000 ಟನ್‌ ಎಂದು ಅಂದಾಜಿಸಲಾಗಿದೆ.





೧. ಅನಂತ ಪದ್ಮನಾಭ ಸ್ವಾಮಿ ದೇವಾಲಯ





ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯವು
ಭಾರತದ ಅತಿ ಶ್ರೀಮಂತ ದೇವಾಲಯ ಎಂಬುದಾಗಿ ಗುರ್ತಿಸಿಕೊಂಡಿದೆ. ಈ ದೇವಾಲಯದಲ್ಲಿನ ಒಟ್ಟು ಚಿನ್ನದ
ಮೌಲ್ಯ
1 ಲಕ್ಷ ಕೋಟಿ ರೂಪಾಯಿಗಳು..








೨. ತಿರುಪತಿ ತಿಮ್ಮಪ್ಪನ ದೇವಾಲಯ





ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ದೇವರು
ಎಂದರೆ
, ಪ್ರತಿ ತಿಂಗಳು 80 ರಿಂದ 100 ಕಿಲೋ ಚಿನ್ನವನ್ನು ಭಕ್ತರು ತಿಮ್ಮಪ್ಪನಿಗೆ
ಕಾಣಿಕೆಯಾಗಿ ನೀಡ್ತಾರಂತೆ. ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಸುಮರು
70,000 ಕೋಟಿ ಮವಲ್ಯದ ಚಿನ್ನ ಅಡಗಿ ಕುಳಿತಿದೆ.





ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿರುವ
ಚಿನ್ನವನ್ನು ಕೆಲವು ಬ್ಯಾಂಕಿನಲ್ಲಿ ಇಡಲಾಗಿದೆ. ಇದರ ಬಡ್ಡಿಯೇ ಸುಮಾರು ಕೋಟಿಗಟ್ಟಲೇ ಬರುತ್ತದೆ
ಎಂದು ಎಂದು ಮೂಲಗಳು ಅಂದಾಜಿಸಿವೆ.





ಇಂಡಿಯನ್‌ ಓವರ್‌ಸಿಸ್‌‌ ಬ್ಯಾಂಕಿನಲ್ಲಿ 1353 ಕಿಲೋ, ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌
ಇಂಡಿಯಾದಲ್ಲಿ
2275 ಕಿಲೋ ಚಿನ್ನವನ್ನು ಠೇವಣಿ ಮಾಡಿ ಇಡಲಾಗಿದೆ.








೩. ಗುರುವಾಯೂರಿನಲ್ಲಿರುವ ಶ್ರೀ ಕೃಷ್ಣನ
ದೇವಾಲಯ.





ಕೇರಳಾದಲ್ಲಿ ಇರುವ ಖ್ಯಾತ ಹಿಂದೂ ದೇವಾಲಯ
ಗುರುವಾಯೂರು ದೇವಾಲಯ. ಶ್ರೀಕೃಷ್ಣನ ಆವಾಸ ಸ್ಥಾನವಾಗಿರುವ ಗುರುವಾಯೂರು ದೇವಾಲಯದ ಒಟ್ಟು ಆದಾಯ
50 ಕೋಟಿಗಳು.







ಭಕ್ತರಿಂದ ಕೆಜಿಗಟ್ಟಲೇ ಚಿನ್ನ ಉಡುಗೊರೆಯಾಗಿ
ಶ್ರೀಕೃಷ್ಣನ ಪಾದಕ್ಕೆ ಬಂದು ಬೀಳುತ್ತದೆ. ಈ ದೇವಾಲಯದಲ್ಲಿ ಸುಮಾರು
600 ಕಿಲೋಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 500 ಕಿಲೋ ಚಿನ್ನವನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ಮುಂಬೈ ಶಾಖೆಯಲ್ಲಿ ಠೇವಣಿ ಮಾಡಿ
ಇಡಲಾಗಿದೆ. ಇನ್ನುಳಿದ ಚಿನ್ನ ದೇವಾಲಯದ ವಶದಲ್ಲಿ ಇದೆ ಎಂದು ಹೇಳಲಾಗುತ್ತದೆ.





೪. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ





ಕೇರಳದ ಮತ್ತೊಂದು ಶ್ರೀಮಂತ ದೇವಾಲಯ ಎಂದರೆ
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ. ಶಬರಿಮಲೆ ಸ್ವಾಮಿಯ ಒಟ್ಟು ಆರ್ಥಿಕ ವರಮಾನ ಎಷ್ಟು ಗೊತ್ತೇ
?
ಬರೋಬ್ಬರಿ 105 ಕೋಟಿಗಳು. ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 15 ಕಿಲೋಗಳಷ್ಟು ಚಿನ್ನ ಇದೆ ಎಂದು ಹೇಳಲಾಗುತ್ತದೆ.





೫. ಸಿದ್ದಿ ವಿನಾಯಕ ದೇವಾಲಯ ಮುಂಬೈ.





ಮುಂಬೈನ ಖ್ಯಾತ ದೇವಾಲಯ ಶ್ರೀ ಸಿದ್ದಿ
ವಿನಾಯಕ ದೆವಾಲಯ. ಗಣೇಶ ಹಬ್ಬವನ್ನು ಇಲ್ಲಿನ ಜನರು ಭಕ್ತಿಯಿಂದ
, ವಿಜೃಂಭಣೆಯಿಂದ ಅಚರಿಸುತ್ತಾರೆ. ಈ ದೇವಾಲಯದಲ್ಲಿ ಒಟ್ಟಾರೆಯಾಗಿ 150 ಕಿಲೋ ಚಿನ್ನ ಇದ್ದು, ಅದರಲ್ಲಿ ಕೇವಲ 10 ಕಿಲೋ ಚಿನ್ನವನ್ನು 10 ನಲ್ಲಿ ಇಡಲಾಗಿದೆ. ಇನ್ನುಳಿದ 140 ಕಿಲೋ ಚಿನ್ನವು ದೇವಸ್ಥಾನದ ಖಜಾನೆಯಲ್ಲಿ ಭದ್ರವಾಗಿದೆ ಅಂತ ಹೇಳಲಾಗುತ್ತಿದೆ.


Отправить комментарий

0 Комментарии