ದೆಹಲಿ : ಅಯ್ಯಯ್ಯೋ.. ನಿಮಗಿದು ಗೊತ್ತಾ?
ಬಾಲೀವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರು ತುಟಿಗೆ
ಲಿಪ್‌ಸ್ಟಿಕ್ ಹಚ್ಚಿಕೊಂಡು, ಹುಡುಗಿಯರ ಗಾಗ್ರಾ ಉಟ್ಟುಕೊಂಡು ದೆಹಲಿಯಲ್ಲಿ
ಸುತ್ತಾಡಿದ್ದರಂತೆ.
ಅಯ್ಯಯ್ಯೋ.. ನಟ ಅಮೀರ್ ಖಾನ್‌ಗೆ ಏನಾಗಿದೆ?
ಅವರು ಯಾಕೆ ಹೀಗಾಡ್ತಿದ್ದಾರೆ? ಹೆಣ್ಣಿನ ಉಡುಪು ಧರಿಸುವ ಚಟ ಅಮೀರ್ ಖಾನ್‌ಗೆ ಯಾಕೆ ಬಂತು? ಎಂದು ಶಾಕ್ ಆಗಬೇಡಿ.
ಧೂಮ್ 3 ಚಿತ್ರದ ನಂತರ ಅಮೀರ್ ಖಾನ್ ಮತ್ತೆ ಫುಲ್ ಬಿಸಿಯಾಗಿದ್ದಾರೆ. ರಾಜ್ ಕುಮಾರ್
ಹಿರಾನಿಯವರ ಪಿಕೆ ಸಿನೆಮಾದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರದಲ್ಲಿ ನಟಿ ತನ್ನ ಲಿಪ್‌ಸ್ಟಿಕ್,
ಗಾಗ್ರಾ ಮತ್ತು ಹೆಲ್ಮೆಟ್ ಅನ್ನು ಯಾವುದೋ ಸನ್ನಿವೇಷದಲ್ಲಿ
ಬಿಟ್ಟು ಹೋಗಿರುತ್ತಾರೆ. ಅದನ್ನು ನಟ ಅಮೀರ್ ಖಾನ್ ಅವರು ತೆಗೆದುಕೊಳ್ಳುತ್ತಾರೆ. ನಾಯಕ
ನಟಿಯನ್ನು ಹುಡುಕುವ ಸನ್ನಿವೇಶವೊಂದರಲ್ಲಿ ಅಮೀರ್ ಖಾನ್ ನಾಯಕಿಯ ಲಿಪ್‌ಸ್ಟಿಕ್ ಹಚ್ಚಿಕೊಂಡು,
ಆಕೆಯ ಗಾಗ್ರಾ ತೊಟ್ಟುಕೊಂಡು ಆಕೆಗಾಗಿ ದೆಹಲಿ ತುಂಬ
ಹುಡುಕುತ್ತಿರುತ್ತಾರೆ.
ಅಮೀರ್ ಖಾನ್ ಅಭಿನಯದ ಈ PK ಚಿತ್ರದಲ್ಲಿ ತೆಲುಗಿನ ಖ್ಯಾತ
ನಟಿ ಕನ್ನಡದ ಬಾಲೆ ಅನುಷ್ಕ ಶರ್ಮಾ ಅಭಿನಯಿಸುತ್ತಿದ್ದಾರೆ.

0 Комментарии