ನಿಮ್ಮ ಮನೇಲಿರೋ ಇಂಟರ್ನೆಟ್
ಸ್ಲೋ ಇದ್ಯಾ..? ಮೊಬೈಲ್ನಲ್ಲಿರೋ ನೆಟ್ಟು ಬೇಗ ಕನೆಕ್ಟ್ ಆಗ್ತಿಲ್ವಾ..? ಹಾಗಿದ್ರೆ, ಆಕಾಶದಲ್ಲಿ
ಬಲೂನ್ ಹಾರಾಡ್ತಾ ಇದ್ಯಾ ಅಂತ ನೋಡಿ..
ಬಲೂನ್ ಹಾರಾಡ್ತಿದ್ರೆ, ಇಂಟರ್ನೆಟ್ ಸ್ಪೀಡಾಗಿ ವರ್ಕ್
ಆಗುತ್ತೆ ಅಂತ ಅರ್ಥ.. ಅರೆ.. ಏನಿದು ಕನ್ಫ್ಯೂಷನ್ ಅಂದ್ರಾ..? ಈ ಸ್ಟೋರಿ ನೋಡಿ.. ನಿಮ್ಗೆ ಗೊತ್ತಾಗುತ್ತೆ..
ಹೆಚ್ಚಾಗ್ತಿದೆ ಇಂಟರ್ನೆಟ್ ಬಳಕೆದಾರರ
ಸಂಖ್ಯೆ
ಸಿಗ್ತಾ ಇಲ್ಲ ಇಂಟರ್ನೆಟ್ ಸಿಗ್ನಲ್ಗಳು..!
ಇಂಟರ್ನೆಟ್ ಬಳಕೆದಾರರ ಸಂಖ್ಯೆ
ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಅನೇಕ ದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯದ ಕೊರತೆ ಇದೆ.
ಉತ್ತರ ಅಮೇರಿಕಾದಲ್ಲಿ ಶೇ 21ಮಂದಿ ಇಂಟರ್ನೆಟ್ನಿಂದ ವಂಚಿತರಾಗಿದ್ದಾರೆ. ಇನ್ನು ಯೂರೋಪ್ನಲ್ಲಿ ಶೇ 25 ರಷ್ಟು ಮಂದಿಗೆ ಇಂಟರ್ನೆಟ್
ಸೌಲಬ್ಯ ಇಲ್ಲ.. ಇನ್ನು ಕಾಮನ್ ವೆಲ್ತ್ ದೇಶಗಳಲ್ಲಿ ಶೇ 48 ರಷ್ಟು ಮಂದಿಗೆ ಇಂಟರ್ನೆಟ್ ಸಿಗ್ನಲ್ಗಳ
ಪೂರೈಕೆಯಾಗ್ತಿಲ್ಲ.. ಇನ್ನು
ಆಫ್ರಿಕಾದಲ್ಲೂ ಶೇ 57 ರಷ್ಟು ಮಂದೊಗೆ ಇಂಟರ್ನೆಟದ್ ಕೊರತೆ ಇದೆ. ಏಷಿಯಾ ಮತ್ತು ಫೆಸಿಫಿಕ್ ಖಂಡಗಳಲ್ಲಿ
ಶೆ 68 ರಷ್ಟು ಮಂದಿಗೆ ಇಂಟರ್ನೆಟ್ ಪೂರೈಕೆ ಆಗ್ತಾ ಇಲ್ಲ.. ಹೀಗಾಗಿ ಜಗತ್ತಿನ ಬಹುತೇಕ ಜನರು ಇಂಟರ್ನೆಟ್
ಸೌಲಭ್ಯದಿಂದ ವಂಚಿತರಾಗಿದ್ದಾರೆ. ಯಾಕಂದ್ರೆ ಅವರಿಗೆಲ್ಲಾ ಇಂಟರ್ನೆಟ್ ಸೌಲಭ್ಯ ಒದಗಿಸಲು ಸಾಧ್ಯವಾಗ್ತಾ
ಇಲ್ಲ.. ಹೀಗಾಗಿ ಎಲ್ಲರಿಗೂ ಇಂಟರ್ನೆಟ್ ಸಿಗುವಂತಾಗ್ಲಿ ಅಂತ ಗೂಗಲ್ ವಿನೂತನ ಪ್ರಾಜೆಕ್ಟ್ ಅನ್ನ
ಕೈಗೆತ್ತಿಕೊಂಡಿದ್ದು, ಬಲೂನ್ ಅವರ್ಗಳನ್ನು ನಿರ್ಮಾಣ ಮಾಡೋಕೆ ಮುಂದಾಗಿದೆ.
ಫ್ಲೋ....
ಗೂಗಲ್ನಿಂದ ವಿನೂತನ ಬಲೂನ್ ಟವರ್ಸ್
ಆವಿಷ್ಕಾರ
ಆಕಾಶದಲ್ಲಿ ಹಾರಾಡಲಿವೆ ಬಲೂನ್ ಟವರ್ಗಳು
ಬಲೂನುಗಳು ಹಾರಾಡಿದ್ರೆ ಸಿಗುತ್ತೆ ಇಂಟರ್ನೆಟ್
ಸಿಗ್ನಲ್
ವಾ3: ಇನ್ಮುಂದೆ ಜಗತ್ತಿನಾದ್ಯಂತ ಬಲೂನ್ಟವರ್ಗಳ ಅಬ್ಬರ ಜೋರಾಗಲಿವೆ. ಬಲೂನ್ ಟವರ್ಗಳ ಮೂಲಕ, ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು
ಗೂಗಲ್ ಪ್ಲಾನ್ ಮಾಡ್ತಿದೆ. ಅಷ್ಟೆ ಅಲ್ಲ, ಇಂಟರ್ನೆಟ್ ಟವರ್ಗಳನ್ನು ಸ್ಥಾಪನೆ ಮಾಡೋಕೆ ಆಗದೇ
ಇರುವ ಜಾಗಗಳಲ್ಲಿ, ಈ ಬಲೂನ್ ಅವರ್ಗಳನ್ನು ಹಾರಿಬಿಟ್ರೆ ಸಾಕು, ಸುತ್ತಮುತ್ತಲಿರೋ 40 ಕಿಮಿ ವ್ಯಾಪ್ತಿಯಲ್ಲಿ
ಇಂಟರ್ನೆಟ್ ಕನೆಕ್ಷನ್ ಸಿಗಲಿದೆ.
ಫ್ಲೋ...
ವಾ2: ಇನ್ನು ಈ ಬಲೂನ್ ಟವರ್ಗಳು
ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೋಡೋಣ ಬನ್ನಿ..
(ಗೂಗಲ್ ಪ್ರಾಜೆಕ್ಟ್ ಲೂನ್ ವಿಶ್ಯುಯಲ್
ಫ್ಲೋ..) (0.26 onwards)
ವಾ3: ಈ ಬಲೂನ್ ಟವರ್ಗಳನ್ನು ಗೂಗಲ್
ಸಂಸ್ಥೆ ಆವಿಷ್ಕರಿಸಿದ್ದು, ಇದಕ್ಕೆ ಲೂನ್ ಪ್ರಾಜೆಕ್ಟ್ ಅಂತ ಹೆಸರಿಡಲಾಗಿದೆ. ಬಲೂನಿನಲ್ಲಿ ಹೀಲಿಯಂ
ಗಾಳಿಯನ್ನು ತುಂಬಲಾಗುತ್ತೆ. ಈ ಬಲೂನ್ ಟವರ್ ಸುಮಾರು 10 ಕೆಜಿಯಷ್ಟು ತೂಕ ಇದ್ದು, 12 ಮೀಟರ್ಗಳಷ್ಟು
ಎತ್ತರವಿರುತ್ತೆ.. ಇನ್ನು 15 ಮೀಟರ್ ಅಗಲವಿರೋ ಈ ಬಲೂನಿಗೆ ಹೀಲಿಯಂ ತುಂಬೋದ್ರಿಂದ, ಅದು ಗಾಳಿಯಲ್ಲಿ
ಹಾರುತ್ತಾ ಆಕಾಶದತ್ತ ಹಾರ್ತಾ ಹೋಗುತ್ತೆ.
ಫ್ಲೋ...
(ಗೂಗಲ್ ಪ್ರಾಜೆಕ್ಟ್ ಲೂನ್ ವಿಶ್ಯುಯಲ್
ಫ್ಲೋ..)
ವಾ4: ಇನ್ನು ಈ ಬಲೂನ್ ಟವರ್ನ ಕೆಳಭಾಗದಲ್ಲಿ,
ಸೋಲಾರ್ ಸಿಸ್ಟಮ್ ಅಳವಡಿಸಲಾಗಿರುತ್ತೆ.. ಅದರಿಂದ ಮೇಲ್ಭಾಗದಲ್ಲಿರೋ ಆಂಟೆನಾಗೆ ಅದು ವಿದ್ಯುತ್ಶಕ್ತಿಯನ್ನು
ಪೂರೈಸುತ್ತೆ.. ಈ ಬಲೂನ್ ಟವರ್ಗಳು, ಗಾಳಿಯಲ್ಲಿ ತೇಲುತ್ತಾ, ಭೂಮಿಯಿಂದ 20 ಕಿಮಿ ಎತ್ತರಕ್ಕೆ
ಹೋಗುತ್ತೆ.. ಅಲ್ಲಿಂದ ಇಂಟರ್ನೆಟ್ ಸಿಗ್ನಲ್ಗಳನ್ನು ಕ್ಯಾಚ್ ಮಾಡಿ, ಸುಮಾರು 40 ಕಿಮೀ ವ್ಯಾಪ್ತಿವರೆಗೆ
ಇಂಟರ್ನೆಟ್ ಸಿಗ್ನಲ್ಗಳನ್ನು ಪ್ರಸಾರ ಮಾಡುತ್ತೆ.. ಮನೆಗಳ ಮೇಲೆ, ಆಂಟೇನಾಗಳನ್ನು ಅಳವಡಿಸೋದರ
ಮೂಲಕ, ಇಂಟರ್ನೆಟ್ ಸಿಗ್ನಲ್ಗಳನ್ನುಪಡೀಬಹುದು..
ಫ್ಲೋ...
ವಾ5: ಇನ್ನು ಈ ಬಲೂನ್ ಟವರ್ಗಳನ್ನುಒಮ್ಮೆ ಗಗನಕ್ಕೆ ಹಾರಿಬಿಟ್ರೆ, 100 ದಿನಗಳವರೆಗೆ ಇದು ಕೆಲಸ ಮಾಡುತ್ತೆ. ಬಲೂನು ಗಾಳಿಯ ವೇಗಕ್ಕೆ
ತಕ್ಕಂತೆ, ಅತ್ತಿಂದಿತ್ತ, ಇತ್ತಿಂದತ್ತ ಚಲಿಸೋದ್ರಿಂದ, ಸುತ್ತಮುತ್ತಲೂ ಹೆಚ್ಚಿನ ಸಿಗ್ನಲ್ಗಳನ್ನು
ಇದು ಕವರ್ ಮಾಡುತ್ತೆ. ಹೀಗಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿದ್ರೂ, ಇಂಟರ್ನೆಟ್ ಸಿಗ್ನಲ್ಗಳನ್ನು
ಸುಲಭವಾಗಿ ಮತ್ತು ವೇಗವಾಗಿ ಆನಂದಿಸಬಹುದು..
ವಾ6: ಗೂಗಲ್ನ ಈ ವಿನೂತನ ಲೂನ್ ಪ್ರಾಜೆಕ್ಟ್ನಿಂದ,
ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳು, ತಗ್ಗು ದಿಣ್ಣೆಯ ಪ್ರದೇಶಗಳು ಸೇರಿದಂತೆ, ಜಗತ್ತಿನ ಎಲ್ಲಾ ಕಡೆಗೂ
ಇಂಟರ್ನೆಟ್ ಸಿಗ್ನಲ್ಗಳು ತಲುಪಲಿವೆ. ಆ ಮೂಲಕ ಎಲ್ಲರಿಗೂ ಇಂಟರ್ನೆಟ್ ಸೇವೆಯನ್ನು ಒದಗಿಸೋದು
ಗೂಗಲ್ನ ಉದ್ದೇಶವಾಗಿದೆ. ಈ ಲೂನ್ ಪ್ರಾಜೆಕ್ಟ್ನ ನೀಲ ನಕ್ಷೆ ಈಗಾಗಲೇ ಸಿದ್ಧವಾಗಿದ್ದು, ಮುಂದಿನ
ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ.
GOOGLE BALLON


















Комментарии
Отправить комментарий