ರೀ ಸಿಎಂ ಸಾಹೇಬ್ರೇ.. ಥೂ.. ನಿಮಗೆ ನಾಚಿಕೆಯಾಗಲ್ವಾ..? ಗೃಹ ಮಂತ್ರಿಗಳೇ.. ನಿಮ್ಮ ಮಕ್ಕಳಿಗೆ ಹೀಗೆ ಆಗಿದ್ರೆ ಸುಮ್ಮನಿರ್ತಿದ್ರೇನ್ರಿ..? ಅಮ್ಮಾ ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀಯವರೇ.. ನಿಮ್ಮ ಹೆಣ್ಮಕ್ಕಳ ಮೇಲೆ ಇಂಥಾ ಕ್ರೌರ್ಯ ಆಗಿದ್ರೆ ಹೀಗೇ ಸುಮ್ಮನಿರ್ತಿದ್ರೇನ್ರಿ..? ಥೂ ನಾಚಿಕೆಯಾಗ್ಬೇಕು.. ಹೀಗಂತ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಟಾಪ್ ಟು ಬಾಟಮ್ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಭಟನಾ ನಿರತ ಪೋಷಕರು.. ವಿಬ್ಗಯಾರ್ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಇಂದು ಸಾವಿರಾರು ಪೋಷಕರು ಪ್ರತಿಭಟನೆ ನಡೆಸಿದ್ರು. ವಿವಿಧ ಸಂಘಟನೆಗಳು ಇಂದು ಹೆಚ್ಎಎಲ್ ಮೈದಾನದ ಬಳಿ ಜಮಾಯಿಸಿ ನಿದ್ದೆ ರಾಮಯ್ಯನ ಸರ್ಕಾರಕ್ಕೆ ಛೀ ಥೂ ಅಂತ ತರಾಟೆಗೆ ತೆಗೆದುಕೊಂಡ್ರು..
ಇವರ ಆಕ್ರೋಕ್ಕೆ ಕಾರಣ ಇದೆ. ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ನಡೆದ್ರೂ ಕೂಡ ಇದುವರೆಗೂ ಯಾವೊಬ್ಬರ ವಿರುದ್ಧ ಕೂಡ ಕ್ರಮ ಕೈಗೊಂಡಿಲ್ಲ. ಇನ್ನು ಇಷ್ಟೋಂದು ಪ್ರಮಾಣದಲ್ಲಿ ಜನ ಸೇರಿ ಪ್ರತಿಭಟನೆ ಮಾಡಿದ್ರೂ ಕೂಡ ಸಿಎಂ ಆಗಲೀ, ಗೃಹ ಸಚಿವರಾಗ್ಲೀ ಪೋಷಕರನ್ನು ಭೇಟಿ ಮಾಡಿಲ್ಲ. ಬದಲಿಗೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಸ್ಥಳಕ್ಕೆ ಭೇಟಿ ನೀಡಿದ್ರು. ಕಾಮುಕರ ವಿರುದ್ಧ ಕ್ರಮ ಜರುಗಿಸಲಾಗುವುದು, ನಮ್ಮ ಮೇಲೆ ನಂಬಿಕೆ ಇಡಿ ಅಂತ ಪೋಷಕರ ಮನವೊಲಿಸೋ ಪ್ರಯತ್ನ ಮಾಡಿದ್ರು
ಪೋಷಕರನ್ನು ಭೇಟಿ ಮಾಡಿದ ಕಮಿಷನರ್ ಸಾಹೇಬ್ರು, ಪೋಷಕರ ಜೊತೆ ಮಾತಾಡ್ಲಿಲ್ಲ. ಪೋಷಕರ ಅಹವಾಲನ್ನು ಆಲಿಸಲೇ ಇಲ್ಲ.. ಸೀದಾ ಬಂದ ಸಾಹೇಬ್ರು, ತಮ್ಮ ಮಾತುಗಳನ್ನು ಪಟ ಪಟ ಅಂತ ಹೇಳಿ, ದೂಸ್ರಾ ಮಾತಾಡದೇ ಹೊರಟು ಹೋದ್ರು. ಇದು ಪ್ರತಿಭಟನಾ ನಿರತ ಪೋಷಕರನ್ನು ಕೆರಳಿಸಿತು.
ರಾಜ್ಯವೇ ಹೊತ್ತಿ ಉರೀತಿದ್ರೂ ಮೇಲೇಳದ ‘ನಿದ್ರಾ’ಮಯ್ಯ
ಇನ್ನು ರಾಜ್ಯವೇ ಹೊತ್ತಿ ಉರೀತಿದ್ರೂ ಕೂಡ ನಮ್ಮ ಘನವೆತ್ತ ಸರ್ಕಾರ ಇನ್ನು ಕೂಡ ಸೈಲೆಂಟಾಗೇ ಇದೆ. ಸಿಎಂ ಸಾಹೇಬರಾಗ್ಲೀ, ಗೃಹ ಸಚಿವ ಜಾರ್ಜ ಆಗ್ಲಿ, ಮಹಿಳಾ ಮತ್ತು ಮಕ್ಕಳ ಸಚಿವೆ ಉಮಾಶ್ರೀಯಾಗಲೀ ಇದುವರೆಗೂ ಕೂಡ ಪ್ರತಿಭಟನಾ ಸ್ಥಳಕ್ಕೆ ಧಾವಿಸಿಲ್ಲ. ಕಮಿಷನರ್ ಸಾಹೇಬ್ರು ಆರೋಪಿಯನ್ನು ಅರೆಸ್ಟ್ ಮಾಡಿ, ಜನರ ಮುಂದೆ ಬರಬೇಕಿತ್ತು. ಅದರ ಬದಲಿಗೆ, ಕ್ರಮ ಕೈಗೊಳ್ತೀವಿ ಅಂತ ಹೇಳಿ ಹೋದ್ರು ಅಷ್ಟೇ.. ಆದ್ರೆ ಮೂರು ದಿನಗಳಾದ್ರೂ ಒಬ್ಬ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳೋಕೆ ಆಗ್ಲಿಲ್ಲ ಅಂದ್ರೆ, ಇನ್ಯಾತಕ್ಕೆ ಬೇಕ್ರಿ ಪೋಲೀಸರು, ಯಾಕ್ರೀ ಬೇಕು ಈ ಸರ್ಕಾರ ಅಂತ ಪೋಷಕರು ರೊಚ್ಚಿಗೆದ್ದಿದ್ದಾರೆ.
ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ, ಪ್ರತಿಭಟನೆಯ ಕಾವು ಇನ್ನಷ್ಟು ಜೋರಾಗಲಿದೆ.
ಮಂತ್ರಿಗಳೇ.. ನಿಮ್ಮ ಮಕ್ಕಳಿಗೆ ಹೀಗೆ ಆಗಿದ್ರೆ ಸುಮ್ಮನಿರ್ತಿದ್ರೇನ್ರಿ..? ಅಮ್ಮಾ ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀಯವರೇ.. ನಿಮ್ಮ ಹೆಣ್ಮಕ್ಕಳ ಮೇಲೆ ಇಂಥಾ ಕ್ರೌರ್ಯ ಆಗಿದ್ರೆ ಹೀಗೇ ಸುಮ್ಮನಿರ್ತಿದ್ರೇನ್ರಿ..? ಥೂ ನಾಚಿಕೆಯಾಗ್ಬೇಕು.. ಹೀಗಂತ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಟಾಪ್ ಟು ಬಾಟಮ್ ತರಾಟೆಗೆ ತೆಗೆದುಕೊಂಡಿದ್ದು, ಪ್ರತಿಭಟನಾ ನಿರತ ಪೋಷಕರು.. ವಿಬ್ಗಯಾರ್ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಇಂದು ಸಾವಿರಾರು ಪೋಷಕರು ಪ್ರತಿಭಟನೆ ನಡೆಸಿದ್ರು. ವಿವಿಧ ಸಂಘಟನೆಗಳು ಇಂದು ಹೆಚ್ಎಎಲ್ ಮೈದಾನದ ಬಳಿ ಜಮಾಯಿಸಿ ನಿದ್ದೆ ರಾಮಯ್ಯನ ಸರ್ಕಾರಕ್ಕೆ ಛೀ ಥೂ ಅಂತ ತರಾಟೆಗೆ ತೆಗೆದುಕೊಂಡ್ರು..
0 Комментарии