ಹೆಣ್ಣು ಸಮಾಜದ ಕಣ್ಣು.. ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ, ಗಂಡಿನ ಬದುಕನ್ನ ಸಾರ್ಥಕಗೊಳಿಸ್ತಾಳೆ. ಆದ್ರೆ ಆಕೆಯ ಮನಸ್ಸಿನ ಮೇಲೆ ಅತ್ಯಾಚಾರದಂತ ಹ್ಯೇಯ ಕೃತ್ಯ ನಡೆದ್ರೆ, ಆಕೆ ಮಾನಸಿಕವಾಗಿ ಬದಲಾಗಿ ಬಿಡ್ತಾಳೆ.. ಆಕೆಯ ಮಾನಸಿಕ ಸ್ಥಿತಿ ಯಾವ ರೀತಿ ಬದಲಾಗುತ್ತೆ..? ಸಮಾಜವನ್ನು ಅತ್ಯಾಚಾರಕ್ಕೊಳಗಾದ ಹೆಣ್ಣು ನೋಡೋದು ಹೇಗೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ.. ಈ ಮಾತು ನಿಜಕ್ಕೂ ಅರ್ಥಪೂರ್ಣವಾದದ್ದು. ಆದ್ರೆ ಇದನ್ನು ಅರ್ಥಮಾಡಿಕೊಳ್ಳದ ಕೆಲವು ಕಿರಾತಕರು ಹೆಣ್ಣಿನ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸ್ತಿದ್ದಾರೆ. ಅತ್ಯಾಚಾರಗಳಿಂದ ಆಕೆ ತತ್ತರಿಸಿಹೋಗಿದ್ದಾಳೆ. ಸಮಾಜವನ್ನು ಪ್ರೀತಿಯಿಂದ ನೋಡಿಕೊಂಡು ಬೆಳೆದ ಹೆಣ್ಣು, ತನ್ನ ಮೇಲೆ ಇಂಥಾ ಕ್ರೂರ ಮತ್ತು ಮೃಗೀಯ ಕೃತ್ಯ ನಡೆದಾಗ, ಆಕೆ ಮಾನಸಿಕವಾಗಿ ಬದಲಾಗಿಬಿಡ್ತಾಳೆ.. ಬದುಕುವ ದಿಕ್ಕನ್ನೂ ಬದಲಾಯಿಸಿಕೊಳ್ತಾಳೆ.
ಹೆಣ್ಣು ಚಿಕ್ಕ ವಯಸ್ಸಿನಿಂದಲೂ ಅಣ್ಣ ತಮ್ಮಂದಿರ ಜೊತೆ, ಚಿಕ್ಕಪ್ಪ ದೊಡ್ಡಪ್ಪನವರ ಪ್ರೀತಿ, ಆರೈಕೆಯಲ್ಲಿ ಬೆಳೀತಾಳೆ.. ಹದಿ ಹರೆಯದ ವಯಸ್ಸಿಗೆ ಬರೋವರೆಗೂ, ಆಕೆ ಈ ಜಗತ್ತನ್ನು ಅತ್ಯಂತ ಪ್ರೀತಿಯಿಂದ ಕಾಣ್ತಾಳೆ.. ಅಣ್ಣ ತಮ್ಮ ಅಂದ್ರೆ, ಆಕೆಗೆ ಎಲ್ಲಿಲ್ಲದ ವಾತ್ಸಲ್ಯ.. ತಂದೆ ಅಂದ್ರೆ ತಾಯಿಗಿಂತಲೂ ಹೆಚ್ಚು ಇಷ್ಟ.. ಆಕೆಯ ಮನಸ್ಸಿನಲ್ಲಿ ಬೇರೆ ಯಾವ ಆಲೋಚನೆಗಳೂ ಇರೋದಿಲ್ಲ.. ಇಂಥಾ ಟೈಮಲ್ಲಿ ಕಿರಾತಕನೊಬ್ಬ ತನ್ನ ಅಲ್ಪಸುಖಕ್ಕಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ರೆ, ಆಕೆಯ ಮಾನಸಿಕ ಸ್ಥಿತಿಯೇ ಬದಲಾಗಿಬಿಡುತ್ತೆ..
ನಂಬಿಕೆಗೆ ಬೀಳುತ್ತೆ ಕೊಡಲಿಪೆಟ್ಟು..!
ಅಪ್ಪ-ಅಣ್ಣಂದಿರ ಮೇಲೆಯೇ ಉಕ್ಕುತ್ತೆ ದ್ವೇಷ..!
ಅಲ್ಲಿವರೆಗೂ ಪುರುಷರು ಅಂದ್ರೆ, ಗೌರವ, ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯದಿಂ ದ ನೋಡ್ತಾ ಇದ್ದ ಆಕೆ, ಅತ್ಯಾಚಾರದ ನಂತರ ಗಂಡಸರೆಲ್ಲಾ ಕಾಮುಕರು ಅನ್ನೋ ಹಾಗೇನೇ ನೋಡ್ತಾಳೆ..
ಆಕೆಯನ್ನು ಯಾರಾದ್ರೂ ಮಾತಾಡಿಸೋಕೆ ಪ್ರಯತ್ನಿಸಿದ್ರೂ ಕೂಡ, ಅವನು ತನ್ನನ್ನು ಕಾಮದ ದೃಷ್ಟಿಯಿಂದಾನೇ ನೋಡ್ತಿದ್ದಾನೆ ಅಂತ ಅನ್ನಿಸಿಬಿಡುತ್ತೆ.. ಅವರಿವರು ಯಾಕೆ..? ಸ್ವಂತ ಅಣ್ಣ ತಮ್ಮ ಆಕೆಯನ್ನು ಮಾತಾಡಿಸೋದಕ್ಕೆ ಹೋದ್ರೂ, ಅವರ ಮೇಲೂ ಕೂಡ ನಂಬಿಕೆ ಬರೋದಿಲ್ಲ.. ತಂದೆ ಮಗಳನ್ನು ಕರೆದು, ಆಕೆಯ ತಲೆ ಮೇಲೆ ಕೈ ಇಟ್ಟು ಊಟ ಆಯ್ತಾ ಮಗಳೇ ಅಂತ ಕೇಳಿದ್ರೂ, ಅದು ಕಾಮುಕನೊಬ್ಬನ ಸ್ಪರ್ಷದಂತೇನೇ ಕಾಣಿಸುತ್ತೆ..
ಪುರುಷರನ್ನು ದ್ವೇಷಿಸ್ತಾ, ಸಮಾಜದಿಂದ ದೂರವಾಗ್ತಾಳೆ
ಕತ್ತಲೆಯಲ್ಲಿ ಒಂಟಿಯಾಗಿ ಕೂತ್ಕೊಂಡು ಕಣ್ಣೀರು ಹಾಕ್ತಾಳೆ
ತನ್ನ ಮೇಲೆ ಕಾಮುಕನೊಬ್ಬ ಅಟ್ಟಹಾಸಗೈದಿದ್ರಿಂದ ಹೆಣ್ಣು ಅಕ್ಷರಶಃ ನಲುಗಿ ಹೋಗ್ತಾಳೆ. ಇದ್ರಿಂದಾಗಿ ಆಕೆ ಸಮಾಜದೊಂದಿಗಿನ ಬಾಂಧವ್ಯವನ್ನು ಕಳೆದುಕೊಳ್ಳೋಕೆ ಬಯಸ್ತಾಳೆ. ಒಂಟಿಯಾಗಿ, ಒಂದು ಕೋಣೆಯಲ್ಲಿ ಇರೋದಕ್ಕೆ ಬಯಸ್ತಾಳೆ.. ಕತ್ತಲೆ ಕೋಣೆಯಲ್ಲಿ, ಕೂತ್ಕೊಂಡು ಕಣ್ಣೀರು ಹಾಕ್ತಾಳೆ.. ಈ ಕತ್ತಲೆ ಕೋಣೆಯ ಕಣ್ಣೀರೇ ಆಕೆಯ ಬದುಕಿನ ಭಾಗವಾಗಿ ಬಿಡುತ್ತೆ..
ಆತ್ಮಹತ್ಯೆಯತ್ತ ಮನದ ತುಡಿತ
ಇನ್ನು ತನ್ನ ಮೇಲೆ ನಡೆದ ಅತ್ಯಾಚಾರದಿಂದಾಗಿ ಮನನೊಂದು, ಆಕೆ ಆತ್ಮಹತ್ಯೆಯ ನಿರ್ಧಾರ ಮಾಡ್ತಾಳೆ.. ಒಂಟಿಯಾಗಿ ಇರೋ ಟೈಮಲ್ಲಿ, ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡ್ಕೊಳ್ಳೋಕೆ ಪ್ರಯತ್ನ ಪಡ್ತಾರೆ. ಕೆಲವೊಮ್ಮೆ, ತಮ್ಮ ಕೈಗಳನ್ನು ತಾವೇ ಕೂಯ್ದುಕೊಳ್ತಾರೆ.. ಹಣೆಯನ್ನು ಗೋಡೆಗೆ ಚಚ್ಚಿಕೊಳ್ತಾರೆ. ದೇಹದ ರೂಪವನ್ನು ವಿಕೃತಗೊಳಿಸಿಕೊಳ್ಳೋಕೆ ಪ್ರಯತ್ನಿಸ್ತಾರೆ. ಪದೇ ಪದೇ ಆತ್ಮಹತ್ಯೆಗೆ ಮನಸದ್ಸು ತುಡೀತಾನೇ ಇರುತ್ತೆ..
ಮದ್ಯವ್ಯಸನ ಮತ್ತು ಮಾದಕ ವ್ಯಸನಕ್ಕೆ ಶರಣಾಗ್ತಾಳೆ
ತನ್ನ ಮೇಲೆ ಆದ ಅತ್ಯಾಚಾರ ಮತ್ತು ದೌರ್ಜನ್ಯ ಹಾಗೂ ಸಮಾಜ ಆಕೆಯನ್ನು ನೋಡಿ ಆಡೋ ಮಾತುಗಳಿಂದ ಆಕೆ ಜರ್ಝರಿತಳಾಗ್ತಾಳೆ. ಹೀಗಾಗಿ ಅದೆಲ್ಲವನ್ನೂ ಮರೆಯೋದಕ್ಕೆ ಅಂತ ಆಕೆ ಮದ್ಯವ್ಯಸನದ ಚಟಕ್ಕೆ ಬೀಳ್ತಾಳೆ. ನಂತರ ಮಾದಕ ವಸ್ತುಗಳಿಗೂ ತನ್ನನ್ನು ತೆರೆದುಕೊಳ್ತಾಳೆ. ಇಂಚಿಂಚಾಗಿ ಡ್ರಗ್ಗಿಸ್ಟ್ ಆಗಿಬಿಡ್ತಾಳೆ. ಆ ಮೂಲಕ ತನ್ನ ಬದುಕನ್ನ ತಾನೇ ಅಂತ್ಯಗೊಳಸಿಕೊಳ್ತಾಳೆ.
ಮದುವೆಯಾಗೋದಕ್ಕೆ ಬಯಸೋದಿಲ್ಲ..!
ವೈವಾಹಿಕ ಜೀವನಕ್ಕೆ ಒಗ್ಗಿಕೊಳ್ಳೋದಿಲ್ಲ..!
ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮತ್ತೆ ತನ್ನ ಬದುಕಿನಲ್ಲಿ ಕನಸುಗಳನ್ನ ಕಾಣೋದನ್ನೇ ನಿಲ್ಲಿಸಿಬಿಡ್ತಾಳೆ. ತನ್ನ ಮೇಲಿನ ಕೀಳರಿಮೆಯಿಂದ ಮದುವೆಯ ಬಯಕೆಯನ್ನೇ ತ್ಯಜಿಸಿಬಿಡ್ತಾಳೆ. ಅಕಸ್ಮಾತ್ ಮನೆಯವರು ಹಿರಿಯರು ಬಲವಂತವಾಗಿ ಮದುವೆ ಮಾಡಿದ್ರೂ ಕೂಡ, ಆಕೆ ವೈವಾಹಿಕ ಜೀವನಕ್ಕೆ ಒಗ್ಗಿಕೊಳ್ಳೋದಿಲ್ಲ.. ತಾನು ತನ್ನ ಗಂಡನಿಗೆ ಮೋಸ ಮಾಡ್ತಿದ್ದೇನೆ ಅನ್ನೋ ಭಾವನೆ ಆಕೆಗೆ ಮೂಡುತ್ತೆ. ಹೀಗಾಗಿ ಮದುವೆಯ ನಂತರವೂ ಗಂಡನಿಂದ ದೂರ ಉಳಿಯೋಕೆ ಇಷ್ಟಪಡ್ತಾಳೆ.
ಮಾನಸಿಕ ರೋಗಿಯಾಗೋ ಸಾಧ್ಯತೆ ಹೆಚ್ಚು..!
ಇನ್ನು ತನ್ನ ಬದುಕನ್ನು ದುಸ್ಥಿತಿಗೆ ತಂದ ಅತ್ಯಾಚಾರದ ಕ್ಷಣವನ್ನು, ಆಕೆ ಪದೇ ಪದೇ ನೆನೆಸಿಕೊಳ್ತಾಳೆ. ಬದುಕಿನ ಘೋರ ಘಟನೆ, ಸಮಾಜದ ನಿಂದನೆಯ ಮಾತುಗಳು, ಕುಟುಂಬ ಮತ್ತು ಆಪ್ತರು ಆಕೆಯನ್ನು ನೋಡುವ ರೀತಿಯ ಬಗ್ಗೆ ಸದಾ ಚಿಂತೆ ಮಾಡ್ತಾಳೆ. ಇದ್ರಿಂದ ಆಕೆ ಮಾನಸಿಕ ರೋಗಿಯಾಗೋ ಸಾಧ್ಯತೆ ಇರುತ್ತೆ. ಅರುಣಾ ಶಾನಭಾಗ್ ಈ ಕ್ರೂರ ಘಟನೆಗೆ ಸಾಕ್ಷಿ.. ಈಕೆಯ ಮನಸ್ಸಿಗಾದ ಗಾಯ 37 ವರ್ಷಗಳಿಂದ ವಾಸಿಯಾಗೇ ಇಲ್ಲ..!
RAPE WOMEN MENTALITY:
ಅತ್ಯಾಚಾರದ ಬಲೆಯಲ್ಲಿ ನಲುಗಿದ ನಾರಿ (ಹೆಡ್)
=======================================-
ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಾನಸಿಕವಾಗಿ ಕುಗ್ಗುತ್ತಾಳೆ
ಯಾವಾಗಲೂ ಒಂಟಿಯಾಗಿ ಇರಲು ಬಯಸುತ್ತಾಳೆ
ದ್ವೇಷದ ಮನೋಭಾವನೆ ಆಕೆಯ ಮನಸ್ಸಿನಲ್ಲಿ ಹೆಚ್ಚುತ್ತದೆ
ಗಂಡ, ಅಣ್ಣ, ತಂದೆ ಎಲ್ಲರನ್ನೂ ಕಾಮುಕರು ಎಂದು ದ್ವೇಷಿಸ್ತಾರೆ
ಕೋಪ ಹೆಚ್ಚಾಗಿರುತ್ತೆ; ಸಣ್ಣ ವಿಷಯಕ್ಕೂ ಜಗಳ ಮಾಡ್ತಾರೆ
ಸದಾ ಅಂತರ್ಮುಖಿಯಾಗಿ, ಮೌನಿಯಾಗಿರಲು ಬಯಸುತ್ತಾರೆ
ತಮ್ಮನ್ನು ತಾವೇ ದ್ವೇಷಿಸುತ್ತಾರೆ; ಆತ್ಮಹತ್ಯೆಗೆ ಯತ್ನಿಸುತ್ತಾರೆ
ಕೆಟ್ಟವರನ್ನು ತನ್ನ ಕೈನಿಂದಲೇ ಕೊಲ್ಲಬೇಕು ಎಂಬ ಮನಸ್ಥಿತಿ ಹೊಂದುತ್ತಾರೆ
ಮದ್ಯ ಸೇವನೆಯ ಚಟಕ್ಕೆ ಬಲಿಯಾಗಿ, ಮಾದಕ ವ್ಯಸನಿಗಳಾಗ್ತಾರೆ
ಮದುವೆಯಾಗಲು ಇಷ್ಟಪಡುವುದಿಲ್ಲ
ಮದುವೆಯಾದರೆ, ವೈವಾಹಿಕ ಜೀವನಕ್ಕೆ ಒಗ್ಗಿಕೊಳ್ಳೋದಿಲ್ಲ
ಮದುವೆಯ ನಂತರ ಗಂಡನ ಜೊತೆಗೆ ಹೆಚ್ಚು ಜಗಳವಾಡ್ತಾರೆ
ಗಂಡ, ಗಂಡನ ಮನೆ ಮತ್ತು ತವರು ಮನೆ ಬಗ್ಗೆ ವೈರಾಗ್ಯ
ಕೆಲವೊಮ್ಮೆ ಮಗುವಾದ್ರೂ, ಅದನ್ನು ಪ್ರೀತಿಸುವುದಿಲ್ಲ..!
ಕೆಲವೊಮ್ಮೆ ಮಕ್ಕಳನ್ನು ಕೊಲ್ಲಲೂ ಮುಂದಾಗುತ್ತಾರೆ
---------------------------------------------------------
ಮಕ್ಕಳಿಗೆ ಅತ್ಯಾಚಾರದ ದುಃಸ್ವಪ್ನ..!
-----------------------------------------------------
ತಾಯಿ ಮೇಲಿನ ಅತ್ಯಾಚಾರ ಮಕ್ಕಳ ಮೇಲೆ ಪರಿಣಾಮ
ಸಂತ್ರಸ್ಥರ ಮಕ್ಕಳನ್ನು ಪ್ರತ್ಯೇಕವಾಗಿ ಪರಿಗಣಿಸ್ತಾರೆ
ಆಟವಾಡಲು ಮಗು ಹೋದಾಗ, ಪ್ರತ್ಯೇಕ ಭಾವದಿಂದ ನೋಡ್ತಾರೆ
ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ
ಸಮ ವಯಸ್ಕರ ಗುಂಪಿನೊಂದಿಗೆ ಬೆರೆಯಲು ತೊಂದರೆಯಾಗುತ್ತೆ
ಇದ್ರಿಂದ ಮನೆಯಿಂದ ಹೊರಗೆ ಬರೋದು ಕಡಿಮೆಯಾಗುತ್ತೆ
ಏಕಾಂಗಿತನದಿಂದ ಬೆಳೆದು, ಅಂತರ್ಮುಖಿಗಳಾಗ್ತಾರೆ
ದ್ವೇಷದ ಭಾವನೆ ಮಕ್ಕಳ ಮನಸ್ಸಿನಲ್ಲಿ ಹೆಚ್ಚುತ್ತೆ
ಸಮಾಜದೊಂದಿಗಿನ ಸಂಬಂಧವನ್ನು ಕಳೆದುಕೊಳ್ತಾರೆ
ಮಗುವಿನ ಸಾಮಾಜಿಕ ಬೆಳವಣಿಗೆಗೆ ಮಾರಕವಾಗುತ್ತೆ
ಸಮಾಜದ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಕಾಯ್ತಾರೆ
ಮಗುವಿನ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಸಾಧ್ಯತೆ
ಮಗುವಿನ ಸಾಧನೆಗೆ ‘ಅತ್ಯಾಚಾರ’ ಪದ ಅಡ್ಡಿಯಾಗೋ ಸಾಧ್ಯತೆ
ದೇಶದ ಉತ್ತಮ ಪ್ರಜೆಯಾಗಿ ಬದಲಾಗುವಲ್ಲಿ ವಿಫಲ ಸಾಧ್ಯತೆ
0 Комментарии