ಮದುವೆ ಅನ್ನೋದು ಬರೀ ಮನುಷ್ಯರಿಗೆ ಮಾತ್ರ ಅಲ್ಲ.. ಕಪ್ಪೆಗಳಿಗೂ ಮಾಡ್ತಾರೆ.. ಕತ್ತೆಗಳಿಗೂ ಮಾಡ್ತಾರೆ.. ಒಂದೊಂದ್ ಕಡೆ ಮರ, ಕಲ್ಲುಗಳಿಗೂ ಮದುವೆ ಮಾಡ್ತಾರೆ. ಆದ್ರೆ ಈ ಊರಲ್ಲಿ ಸತ್ತಿರೋ ಆತ್ಮಗಳಿಗೂ ಮದ್ವೆ ಮಾಡ್ತಾರೆ..
ಮದುವೆಯಾಗದೆ ಸತ್ತ ಪ್ರೇತಾತ್ಮಗಳು ಜನರಿಗೆ ಹೆಚ್ಚಾಗಿ ಕಾಟ ಕೊಡುತ್ತಂತೆ.. ಇಂಥಾ ಅವಿವಾಹತ ಪ್ರೇತಗಳ ಕಾಟದಿಂದ ತಪ್ಪಿಸಿಕೊಳ್ಬೇಕು ಅಂದ್ರೆ, ಆ ಆತ್ಮಕ್ಕೆ ಮತ್ತೊಂದು ಆತ್ಮದ ಜೊತೆ ಮದುವೆ ಮಾಡಿಸ್ಬೇಕು.. ಅಂದ್ಹಾಗೆ ಈ ಆತ್ಮಗಳಿಗೆ ಮದುವೆ ಮಾಡೋದು ಅಷ್ಟೋಂದು ಸುಲಭದ ಮಾತಲ್ಲ.. ಪ್ರೇತಗಳ ಮದುವೆಗೂ ಮುಹೂರ್ತ ನೋಡ್ಬೇಕು.. ಒಂದು ಆತ್ಮಕ್ಕೆ ಪಕ್ಕಾ ಸೂಟಾಗೋ ಮತ್ತೊಂದು ಪ್ರೇತವನ್ನು ಹುಡುಕಬೇಕು.. ಆ ಎರಡೂ ಪ್ರೇತಗಳ ಜಾತಕ ಕೂಡ ನೋಡ್ಬೇಕು.. ಆ ಎರಡೂ ಪ್ರೇತ ಜಾತಕಗಳೂ ಕೂಡ ಪಕ್ಕಾ ಮ್ಯಾಚ್ ಆಗ್ಬೇಕು.. ಪ್ರೇತಗಳ ಗೋತ್ರ ನೋಡಿನೇ ಮದುವೆ ಮಾಡಲಾಗುತ್ತೆ..
ಕೆಲವೊಮ್ಮೆ, ಗೋತ್ರ ಹೊಂದಾಣಿಕೆ ಆಗದೇ ಇದ್ರೇ, ಅನುರೂಪವಾದ ಜೋಡಿ ಪ್ರೇತಾತ್ಮ ಸಿಗದೇ ಇದ್ರೆ,ಕಲ್ಪವೃಕ್ಷವನ್ನೇ ವಧು ಅಥವಾ ವರನ ರೂಪದಲ್ಲಿ ಇರಿಸಿ, ಮದುವೆ ಮಾಡಲಾಗುತ್ತೆ..
ಹೀಗೆ ಪ್ರೇತಾತ್ಮಗಳಿಗೆ ಮದುವೆ ಮಾಡೋ ಸಂಪ್ರದಾಯ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚಾಲ್ತಿಯಲ್ಲಿದೆ. ಇಲ್ಲಿನ ಜನಾರ್ದನ ದೇವರ ಸನ್ನಿಧಾನದಲ್ಲಿ ಪ್ರೇತಗಳಿಗೆ ಮದುವೆ ಮಾಡಲಾಗುತ್ತೆ..!
ಜನಾರ್ಧನ ದೆವರ ಕೈಯ್ಯಲ್ಲಿ ಶಂಖ, ಚಕ್ರ ಗಧೆಯ ಜೊತೆಗೆ ಪಿಂಡ ಕೂಡ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಇದೆ. ವೈದಿಕ ಪದ್ದತಿಯಂತೆ ಈ ಪ್ರೇತ ವಿವಾಹ ಕಾರ್ಯಕ್ರಮ ನಡೆಯುತ್ತೆ.. ಮನುಷ್ಯರ ಮದುವೆನಲ್ಲಿ ಏನೆಲ್ಲಾ ಆಚರಣೆಗಳನ್ನು ಅನುಸರಿಸಲಾಗುತ್ತೋ, ಆ ಎಲ್ಲಾ ಆಚರಣೆ, ಸಂಪ್ರದಾಯಗಳನ್ನು ಇಲ್ಲಿ ಪಾಲನೆ ಮಾಡಲಾಗುತ್ತೆ.
ಒಂದು ಪ್ರೇತದ ತೆಂಗಿನ ಕಾಯಿಯೊಂದಿಗೆ, ಇನ್ನೊಂದು ಪ್ರೇತದ ತೆಂಗಿನ ಕಾಯಿ ಜೊತೆಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಲಾಗುತ್ತೆ.
ಈ ಪ್ರೇತಗಳಿಗೂ ಕೂಡ, ಅಗ್ನಿ ಸಾಕ್ಷಿಯಾಗಿ, ಮಾಂಗಲ್ಯಧಾರಣೆ ಮಾಡಲಾಗುತ್ತೆ.. ಈ ಪ್ರೇತದ ಬಾದಿಯಿಂದ ಬಳಲ್ತಾ ಇರೋರ ಕುಟುಂಬ, ಪ್ರೇತ ವಿವಾಹಕ್ಕೆ ಸಾಕ್ಷಿಯಾಗಿರ್ತಾರೆ.. ಅಕ್ಷತೆ ಹಾಕಿ, ನಿಮ್ಮ ವಿವಾಹ ಜೀವನ ಚೆನ್ನಾಗಿರಲಿ ಅಂತ ನೆರೆದವರೆಲ್ಲಾ ಹರಸ್ತಾರೆ.. ಈ ರೀತಿ ಅತೃಪ್ತ ಆತ್ಮಗಳಿಗೆ ಮದುವೆ ಮಾಡಿಸಿದ್ರೆ, ಒಳ್ಳೇದಾಗುತ್ತೆ ಅನ್ನೋ ಮಾತುಗಳು ಕೂಡ ಈ ಭಾಗದಲ್ಲಿ ಕೇಳಿ ಬರ್ತವೆ.
ಆಧುನಿಕ ಜಗತ್ತಿನಲ್ಲಿ, ವಿಜ್ಞಾನ ಯುಗದಲ್ಲಿ, ಇಂಥಾ ಆಚರಣೆಗಳೆಲ್ಲಾ ನಾಟಕೀಯ ಅನ್ನಿಸಬಹುದು. ಆದರೆ ಇಂತಹಾ ವಿಶಿಷ್ಟ ಆಚರಣೆಗಳ ಇಲ್ಲಿನ ಜನರ ಜೀವನದಲ್ಲಿ ಬೆರೆತು ಹೋಗಿದೆ. ಜೀವಂತ ವ್ಯಕ್ತಿಗಳನ್ನೇ ಗೌರವದಿಂದ ಕಾಣದ ಈ ದಿನಗಳಲ್ಲಿ ಪ್ರೇತಾತ್ಮಗಳಿಗೂ ಮದುವೆ ಮಾಡಿ, ಅತೃಪ್ತ ಆತ್ಮಗಳಿಗೆ ತೃಪ್ತಿ ನೀಡುವ ಈ ಸಂಪ್ರದಾಯದ ಬಗ್ಗೆ ಏನ್ ಅನ್ಬೇಕೋ ಗೊತ್ತಿಲ್ಲ.
ಶೇಖ್(ಸ್ಪಿಯ)ರ್
0 Комментарии