ಇವತ್ತು ಶಿವರಾತ್ರಿ.. ಪರಶಿವನ ಧ್ಯಾನದಲ್ಲೇ ನೀವೆಲ್ಲಾ ಇದ್ದೀರ ಅಂತ ನಮಗ್ ಗೊತ್ತು. ನಿಮಗೆಲ್ಲರಿಗೂ ಇವತ್ತು ಆ ಪರಶಿವನ ದರ್ಶನ ಮಾಡಿಸ್ಬೇಕು ಅಂತಾನೇ ನಾವೀವತ್ತು ಬಂದಿದ್ದೀವಿ. ಜಗತ್ತಿನಾದ್ಯಂತ ಇರುವ ಎತ್ತರ ಶಿವಮೂರ್ತಿಯ ದರ್ಶನ ಮಾಡಿ.. ಶಿವನ ಕೃಪೆಗೆ ಪಾತ್ರರಾಗಿ.
ಓಂ ನಮಃ ಶಿವಾಯ.. ಶಿವಾಯ ನಮಃ.. ಹೀಗೆ ನೀವು ನಾನಾ ವಿಧವಾಗಿ ಆ ಪರಶಿವನ ಧ್ಯಾನ ಮಾಡ್ತಿದ್ದೀರ ಅಂತ ನಮಗ್ ಗೊತ್ತು.. ಶಿವನ ದರ್ಶನ ಪಡೆಯೋದಕ್ಕೆ ತುದಿಗಾಲಲ್ಲಿ ನಿಂತ್ಕೊಂಡಿದ್ದೀರ ಅಂತಲೂ ಗೊತ್ತು. ಶಿವರಾತ್ರಿಯ ದಿನದಂದು ಧರೆಗಿಳಿದುಬರುವ ಆ ಶಿವ, ತನ್ನ ಭಕ್ತರಿಗೆಲ್ಲಾ ಆಶೀರ್ವಾದಿಸ್ತಾನೆ ಅನ್ನೋ ಪ್ರತೀತಿ ಇದೆ. ಪ್ರತಿ ಶುಕ್ರವಾರದಂದು ಪಾರ್ವತಿಯ ಜೊತೆಗೆ ಲೋಕಸಂಚಾರ ನಡೆಸೋ ಈಶ್ವರ, ಜಗತ್ತಿನಾದ್ಯಂತ ನೆಲೆಸಿದ್ದಾನೆ. ಬೇಡಿದ ಭಕ್ತರ ಮನದಲ್ಲಿ ಸದಾ ನೆಲೆಯೂರಿದ್ದಾನೆ. ಸದ್ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಲೇ ಬಂದಿದ್ದಾನೆ.
ಕರ್ನಾಟಕದ ಮುರುಡೇಶ್ವರ ಸೇರಿದಂತೆ, ಭಾರತ, ನೇಪಾಳ ಹೀಗೆ ಜಗತ್ತಿನಾದ್ಯಂತ ಪೂಜೆಗೊಳಪಟ್ಟಿದ್ದಾನೆ ಪರಮಾತ್ಮ.. ಹೀಗೆ ವಿವಿಧ ದೇಶಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ನೆಲೆ ನಿಂತ ಶಿವನ ಬಗ್ಗೆ ಇವತ್ತು ನಾವ್ ನಿಮಗೆ ಹೇಳ್ತೀವಿ ಕೇಳಿ..
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಬೆಲೆಶ್ವರ ಮಹಾದೇವ
ಸ್ಥಳ : ಒಡಿಶಾ
ಎತ್ತರ : 61 ಅಡಿ
ನಿರ್ಮಾಣ : ಮಾರ್ಚ್ 6, 2013
ಜಗತ್ತಿನ ಎತ್ತರದಲ್ಲಿ 11ನೇ ಸ್ಥಾನ
ಒಡಿಶಾದ ಬಂಜಾನಗರ್ ಪ್ರದೇಶದಲ್ಲಿ ಈ ಶಿವನ ದೇವಾಲಯ ಇದೆ. ಈ ದೇಗುಲದಲ್ಲಿ ನೆಲೆಸಿರೋ ಶಿವನನ್ನು ಬೆಲೆಶ್ವರ ಮಹಾದೇವ ಅಂತಲೇ ಭಕ್ತರು ಕರೀತಾರೆ. ಸುಮಾರು 61 ಅಡಿ ಎತ್ತರದಲ್ಲಿ ಶಾಂತಚಿತ್ತನಾಗಿ ನೆಲೆಸಿರುವ ಈ ಪರಶಿವನನ್ನು ಮಾರ್ಚ್ 6, 2013 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಜಗತ್ತಿನ 11 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಕೆಂಪ್ಫೋರ್ಟ್ ಶಿವನ ದೇವಾಲಯ
ಸ್ಥಳ : ಬೆಂಗಳೂರು
ಎತ್ತರ : 65 ಅಡಿ
ಜಗತ್ತಿನ ಎತ್ತರದಲ್ಲಿ 10 ನೇ ಸ್ಥಾನ
ಬೆಂಗಳೂರಿನಲ್ಲಿರೋ ಶಿವನ ಮೂರ್ತಿ ಕೂಡ, ಜಗತ್ತಿನ ಎತ್ತರದ ಶಿವಮೂರ್ತಿಗಳಲ್ಲಿ ಒಂದಾಗಿದೆ. ಶಿವರಾತ್ರಿ ಬಂತು ಅಂದ್ರೆ ಸಾಕು.. ಭಕ್ತರು ಸಾಲುಗಟ್ಟಿ ನಿಂತು, ಅತಿ ಎತ್ತರ ಶಿವನನ್ನು ಪೂಜಿಸ್ತಾರೆ. 1993 ರಲ್ಲಿ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು, ಬೆಂಗಳೂರಿನ ಕೆಂಪ್ಫೋರ್ಟ್ನಲ್ಲಿ ಮಂದಿರ ಕಟ್ಟುವಂತೆ ಹೇಳಿದ್ನಂತೆ. ಆ ಕಾರಣಕ್ಕಾಗಿ 65 ಅಡಿ ಎತ್ತರದ ಶಿವನ ಮೂರ್ತಿಯನ್ನು ಕೆಂಪ್ಪೋರ್ಟ್ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಜಗತ್ತಿನಲ್ಲಿರೋ ಶಿವನ ಮೂರ್ತಿಗಳಿಗೆ ಹೋಲಿಸಿದ್ರೆ, ಕೆಂಪ್ಫೋರ್ಟ್ನಲ್ಲಿರೋ ಶಿವನ ಮೂರ್ತಿ, 10 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಗೌರಿಶಂಕರ ದೇವಾಲಯ
ಸ್ಥಳ : ನವದೆಹಲಿ
ಎತ್ತರ : 74 ಅಡಿ
ಜಗತ್ತಿನ ಎತ್ತರದಲ್ಲಿ 9 ನೇ ಸ್ಥಾನ
ಇದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರೋ ಶಿವಾಲಯ. ಇಲ್ಲಿ ನೆಲೆಯೂರಿರುವ ಶಿವನಿಗೆ 800 ವರ್ಷಗಳ ಇತಿಹಾಸವಿದೆ. ಹೀಗಾಗಿ ಲಕ್ಷಾಂತರ ಮಂದಿ ಭಕ್ತರು ಈ ಶಿವನ ದರ್ಶನಕ್ಕಾಗಿ ದೆಹಲಿಗೆ ಆಗಮಿಸ್ತಾರೆ. ಅದ್ರಲ್ಲೂ ಶಿವರಾತ್ರಿ ಬಂದ್ರೆ ಸಾಕು, ಭಕ್ತರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತೆ. ದೆಹಲಿಯಲ್ಲಿರೋ ಈ ಶಿವನ ಮೂರ್ತಿ 74 ಅಡಿ ಎತ್ತರವಿದೆ. ಜಗತ್ತಿನಲ್ಲಿರೋ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ, ಇದು 9 ನೇ ಸ್ಥಾನವನ್ನು ಪಡೆದಿದೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಜಬಲ್ಪುರ್ ಶಿವಾಲಯ
ಸ್ಥಳ : ಕಚ್ನಾರ್, ಮಧ್ಯಪ್ರದೇಶ
ಎತ್ತರ : 76 ಅಡಿ
ಜಗತ್ತಿನ ಎತ್ತರದಲ್ಲಿ 8 ನೇ ಸ್ಥಾನ
ಇದು ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಶಿವಾಲಯ. 2006 ರಲ್ಲಿ ಇಲ್ಲಿನ ಕಚ್ನಾರ್ ನಗರದಲ್ಲಿ, ಈ ಬೃಹತ್ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 76 ಅಡಿ ಎತ್ತರವಿರುವ ಈ ಶಿವನ ಮೂರ್ತಿ, ಜಗತ್ತಿನ 8 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಜೊತೆಗೆ 12 ಜ್ಯೋತಿರ್ಲಿಂಗಗಳನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಾಂತಚಿತ್ತನಾಗಿ, ತಪೋನಿರತನಾಗಿರುವ ಶಿವನನ್ನು ನೋಡೋದಕ್ಕೆ, ಲಕ್ಷಾಂತರ ಮಂದಿ ಇಲ್ಲಿಗೆ ಬರ್ತಾರೆ. ಶಿವನ ಆಶೀರ್ವಾದ ಪಡೆದು, ಪಾವನರಾಗ್ತಿದ್ದಾರೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ನಾಗೇಶ್ವರ ದೇಗುಲ
ಸ್ಥಳ : ದ್ವಾರಕ, ಗುಜರಾತ್
ಎತ್ತರ : 82 ಅಡಿ
ಜಗತ್ತಿನ ಎತ್ತರದಲ್ಲಿ 7 ನೇ ಸ್ಥಾನ
ಇದು ಹಿಂದೂಗಳ ಪವಿತ್ರ ಭೂಮಿಯಾದ ಗುಜರಾತ್ನ ದ್ವಾರಕದಲ್ಲಿದೆ. ಇಲ್ಲಿ ನಾಗೇಶ್ವರ ಎಂಬ ಹೆಸರಿನಲ್ಲಿ ಸಾಕ್ಷಾತ್ ಪರಶಿವನು ನೆಲೆಸಿದ್ದಾನೆ. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಈ ದೇಗುಲದ ಬಗ್ಗೆ, ಶಿವ ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿಗೆ ಬಂದ್ರೆ, ಜ್ಯೋತಿರ್ಲಿಂಗಗಳ ದರ್ಶನದ ಜೊತೆಗೆ 82 ಅಡಿ ಎತ್ತರವಿರುವ ಶಿವನ ಮೂರ್ತಿಯ ದರ್ಶನ ಪಡೀಬಹುದು. ಇಲ್ಲಿ ನೆಲೆಸಿರೋ ಶಿವನ ಮೂರ್ತಿ, ಜಗತ್ತಿನ 7 ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ ಅನ್ನೋದು ಮತ್ತೊಂದು ವಿಶೇಷ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಶಿವಗಿರಿ ಶಿವಮೂರ್ತಿ
ಸ್ಥಳ : ಬಿಜಾಪುರ, ಕರ್ನಾಟಕ
ಎತ್ತರ : 85 ಅಡಿ
ನಿರ್ಮಾಣ : ಫೆ.26, 2006
ಜಗತ್ತಿನ ಎತ್ತರದಲ್ಲಿ 6 ನೇ ಸ್ಥಾನ
ಕರ್ನಾಟಕದ ಬಿಜಾಪುರದಲ್ಲೂ, ಪರಶಿವನು ನೆಲೆಸಿದ್ದಾನೆ. ಟಿಕೆ ಪಾಟೀಲ್ ಬನಕಟ್ಟಿ ಟ್ರಸ್ಟ್ ವತಿಯಿಂದ 2006 ರಲ್ಲಿ ಶಿವನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಜಾಪುರದಲ್ಲಿರೋ ಈ ಶಿವನ ಮೂರ್ತಿ ಬರೋಬ್ಬರಿ 85 ಅಡಿ ಉದ್ದ ಇದೆ. ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ, ಬಿಜಾಪುರದಲ್ಲಿರೋ ಈ ಶಿವನ ಮೂರ್ತಿ 6 ನೇ ಸ್ಥಾನವನ್ನು ಹೊಂದಿದೆ. ಶಿವಗಿರಿಯಲ್ಲಿ ನೆಲೆಸಿರೋ ಈ ಶಿವನ ಮೂರ್ತಿ, ಸಾಕಷ್ಟು ಭಕ್ತರನ್ನು ತನ್ನತ್ತ ಸೆಳೀತಿದೆ.
ಭಾರತವನ್ನು ಹಿಂದೂಸ್ತಾನ ಅಂತ ಕರೀತಾರೆ. ಆದ್ರೆ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಹಿಂದೂಸ್ತಾನದಲ್ಲಿ ಇಲ್ಲ.. ಹಾಗಿದೆ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಇರೋದಾದ್ರೂ ಎಲ್ಲಿ..? ಹೇಳ್ತೀವಿ ಬ್ರೇಕ್ ಆದ್ಮೇಲೆ..
-----------------------------------------------
ಕರ್ನಾಟಕದ ಮುರುಡೇಶ್ವರದಲ್ಲಿಯೂ ಶಿವ ನೆಲೆಸಿದ್ದಾನೆ. 2010 ರವರೆಗೆ, ಮುರುಡೇಶ್ವರದ ಶಿವನ ಮೂರ್ತಿಯೇ ಜಗತ್ತಿನ ಅತಿ ಎತ್ತರದ ಶಿವ ಮೂರ್ತಿಯಾಗಿತ್ತು. ಆದ್ರೆ 2011 ರಲ್ಲಿ ವಿದೇಶದಲ್ಲಿ ಅದಕ್ಕಿಂತಲೂ ಎತ್ತರದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡಲಾಯ್ತು. ಈಗ ಅದೇ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಅಂತ ಹೇಳಲಾಗ್ತಿದೆ.
ಭಾರತದಲ್ಲಿ ಶಿವನ ಆರಾಧಕರು ಹೆಚ್ಚಾಗಿದ್ದಾರೆ. ಹೀಗಾಗಿ ಹಿಂದಿನಿಂದಲೂ ಸಾಕಷ್ಟು ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗ್ತಿದೆ. ಹರಿದ್ವಾರ, ಮುರುಡೇಶ್ವರ, ಸೇರಿದಂತೆ ವಿದೇಶಗಳಲ್ಲೂ ಶಿವನ ದೇಗುಲ ನಿರ್ಮಿಸಿ, ಶಿವನ ಮೂರ್ತಿಯನ್ನು ಪೂಜಿಸಲಾಗ್ತಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಪುರಿಯಲ್ಲಿ ನೆಲೆನಿಂತ ಹರ
ಸ್ಥಳ : ಹರಿದ್ವಾರ, ಉತ್ತರಾಖಂಡ್
ಎತ್ತರ : 100 ಅಡಿ
ಜಗತ್ತಿನ ಎತ್ತರದಲ್ಲಿ 5 ನೇ ಸ್ಥಾನ
ಹರಿದ್ವಾರ ಪೌರಾಣಿಕ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಹೆಸರೇ ಹೇಳುವಂತೆ ಇದು ಹರಿ ನೆಲೆಸಿದ ಕ್ಷೆತ್ರ.. ಹೀಗಾಗಿ ಇಲ್ಲಿ ಹರನನ್ನು ಕೂಡ ಪೂಜಿಸಲಾಗುತ್ತೆ. ಈ ಕ್ಷೇತ್ರದಲ್ಲಿ ಹರನನ್ನು ಪೂಜಿಸುವುದರಿಂದ, ಹರ್ ಕಿ ಪುರಿ ಅಂತ ಕರೀತಾರೆ. ರಿಶಿಕೇಶ್ ಮತ್ತು ಹರಿದ್ವಾರಕ್ಕೆ ಸಾಗುವ ಮಾರ್ಗದಲ್ಲಿ ಗಂಗಾ ನದಿಯ ತಟದಲ್ಲಿ ಶಿವ ನೆಲೆಸಿದ್ದಾನೆ. ನಿಂತ ಭಂಗಿಯಲ್ಲಿರುವ ಶಿವನ ಎತ್ತರ ಬರೋಬ್ಬರಿ 100 ಅಡಿ. ಕೈನಲ್ಲಿ ತ್ರಿಶೂಲ ಹಿಡಿದು ನಿಂತು, ಬಂದು ಹೋಗೋ ಭಕ್ತರನ್ನು ಆಶೀರ್ವದಿಸ್ತಿದ್ದಾನೆ. ಆಕಾಶದೆತ್ತರಕ್ಕೆ ಇರಿವ ಈ ಶಿವನ ಮೂರ್ತಿ, ಜಗತ್ತಿನ 5 ನೇ ಎತ್ತರದ ಶಿವನ ಮೂರ್ತಿಯಾಗಿದೆ. ಇವತ್ತು ಶಿವರಾತ್ರಿಯ ಸಂಭ್ರಮವಾದ್ದರಿಂದ, ಬೃಹತ್ ಶಿವನನ್ನು ಪೂಜಿಸಲು, ಇಂದು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದಾರೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಮಂಗಲ್ ಮಹಾದೇವ
ಸ್ಥಳ : ಮಾರಿಷಸ್ ಗಣರಾಜ್ಯ
ಎತ್ತರ : 108 ಅಡಿ
ನಿರ್ಮಾಣ: 2007
ಜಗತ್ತಿನ ಎತ್ತರದಲ್ಲಿ 4 ನೇ ಸ್ಥಾನ
ಇನ್ನು ಮಾರೀಷಸ್ನಲ್ಲೂ ಅದ್ಭುತವಾದ ಶಿವಾಲಯವಿದೆ. ಮಂಗಲ್ ಮಹಾದೇವ್ ಅಂತ ಮಾರೀಷಸ್ನಲ್ಲಿ ನೆಲೆಸಿದ್ದಾನೆ ಮಹಾದೇವ.. ಇನ್ನು 1893 ರಲ್ಲಿ ಹಿಂದೂ ಪೂಜಾರಿಯೊಬ್ಬರಿಗೆ ಬಿದ್ದ ಕನಸು, ಈ ದೇವಾಲಯ ನಿರ್ಮಾಣಕ್ಕೆ ಕಾರಣವಾಯ್ತು.. ಹಿಂದೂಗಳೇ ಹಣ ಹಾಕಿ ನಿರ್ಮಾಣ ಮಾಡಿದ ಈ ಮಂಗಲ್ ಮಹಾದೇವನ ಮೂರ್ತಿಯನ್ನು 2007 ರಲ್ಲಿ ಲೋಕಾರ್ಪಣೆ ಮಾಡಲಾಯ್ತು. 108 ಅಡಿ ಎತ್ತರವಿರುವ ಈ ಶಿವನ ಮೂರ್ತಿ, ಜಗತ್ತಿನ 4 ನೇ ಅತ್ಯಂತ ಎತ್ತರದ ಶಿವನ ಮೂರ್ತಿಯಾಗಿದೆ. ಮಹಾದೇವನ ಆಕಾಶದೆತ್ತರದ ಮೂರ್ತಿ, ಜಗತ್ತಿನ ಜನರನ್ನು ಕೈಬೀಸಿ ಕರೀತಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ನಾಂಚಿ ಶಿವಮೂರ್ತಿ
ಸ್ಥಳ : ಸಿದ್ದೇಶ್ವರ ಧಾಮ, ಸಿಕ್ಕಿಂ
ಎತ್ತರ : 108 ಅಡಿ
ಜಗತ್ತಿನ ಎತ್ತರದಲ್ಲಿ 3 ನೇ ಸ್ಥಾನ
ಇನ್ನು ಭಾರತದಲ್ಲಿರೋ ಸಿಕ್ಕಿಂ ಪ್ರದೇಶದಲ್ಲೂ ಎತ್ತರದ ಶಿವನ ಮೂರ್ತಿ ಇದೆ. ಇಲ್ಲಿನ ಸಿದ್ದೇಶ್ವರ ಧಾಮದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 2011 ರಲ್ಲಿ ಈ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಬರೋಬ್ಬರಿ 108 ಅಡಿ ಎತ್ತರವಿದೆ. ಬೃಹದಾಕಾರವಾದ ಈ ಶಿವನ ಮೂರ್ತಿ ಜಗತ್ತಿನ 3 ನೇ ಅತಿ ಎತ್ತರದ ಮೂರ್ತಿಯಾಗಿದೆ. ಶಿವಾರಾಧಕರು, ಪ್ರವಾಸಿಗರು ಸೇರಿದಂತೆ, ದಿನಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬಂದು ಶಿವನ ಕೃಪೆಗೆ ಪಾತ್ರರಾಗ್ತಿದ್ದಾರೆ.
-----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
-----------------------------
ಮುರುಡೇಶ್ವರದ ಶಿವ ಮೂರ್ತಿ
ಸ್ಥಳ : ಮುರುಡೇಶ್ವರ, ಕರ್ನಾಟಕ
ಎತ್ತರ : 122 ಅಡಿ
ಜಗತ್ತಿನ ಎತ್ತರದಲ್ಲಿ 2 ನೇ ಸ್ಥಾನ
ಇನ್ನು ಕರ್ನಾಟಕದ ಪವಿತ್ರ ಕ್ಷೇತ್ರವಾದ ಮುರುಡೇಶ್ವರದಲ್ಲೂ ಆಕಾಶದೆತ್ತರಕ್ಕೆ ನೆಲೆಸಿದ್ದಾನೆ ಈ ಪರಶಿವ. ಶಿವನ ಆತ್ಮಲಿಂಗ ಗೋಕರ್ಣದಲ್ಲಿ ಭೂಸ್ಪರ್ಶವಾದಾಗ, ರಾವಣ ಸಿಟ್ಟಿಗೆದ್ದು ಆತ್ಮಲಿಂಗವನ್ನು ಛಿದ್ರಗೊಳಿಸಿ ಎಸೀತಾನೆ. ಆ ವೇಳೆ ಶಿವನ ಆತ್ಮಲಿಂಗದ ಒಂದು ಭಾಗ ಮುರುಡೇಶ್ವರದಲ್ಲಿ ಬೀಳುತ್ತೆ. ಹೀಗಾಗಿ ಇಲ್ಲಿ ಶಿವನನ್ನು ಆರಾಧಿಸಲಾಗುತ್ತೆ. ಸಮುದ್ರ ತೀರದಲ್ಲಿ ತಪೋನಿರತನಾಗಿರುವಂತೆ ಕಾಣುವ, ಆಕಾಶದೆತ್ತರದ ಶಿವನ ಮೂರ್ತಿ, ನೋಡುಗರನ್ನು ಮನಸೆಳೆಯುತ್ತೆ. ಇದು 122 ಅಡಿ ಎತ್ತರವಿದ್ದು, ಭಾರತದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇನ್ನು ಜಗತ್ತಿನಾದ್ಯಂತ ಇರೋ ಶಿವನ ಮೂರ್ತಿಗಳಿಗೆ ಹೋಲಿಸಿದ್ರೆ, ಮುರುಡೇಶ್ವರದ ಶಿವನ ಮೂರ್ತಿ, ಎರಡನೇ ಸ್ಥಾನವನ್ನು ಅಲಂಕರಿಸಿದೆ.
----------------------------
ಜಗತ್ತಿನ ಎತ್ತರದ ಶಿವ ಮೂರ್ತಿ
----------------------------
ಕೈಲಾಸನಾಥ ಮಹಾದೇವ
ಸ್ಥಳ : ನೇಪಾಳ
ಎತ್ತರ : 143 ಅಡಿ
ನಿರ್ಮಾಣ : 2011
ಜಗತ್ತಿನ ಎತ್ತರದಲ್ಲಿ 1 ನೇ ಸ್ಥಾನ
ಭಾರತವನ್ನು ಹೊರತುಪಡಿಸಿದ್ರೆ, ಅತಿ ಎತ್ತರದ ಶಿವನ ಮೂರ್ತಿ ಇರೋದು ನೆರೆ ರಾಷ್ಟ್ರ ನೇಪಾಳದಲ್ಲಿ.. ಭಕ್ತಾಪುರ್ ಜಿಲ್ಲೆಯ ಸಾಂಗ ಪ್ರದೇಶದಲ್ಲಿ ಕೈಲಾಸನಾಥ ಮಹಾದೇವನಾಗಿ ಪರಶಿವನು ನೆಲೆಸಿದ್ದಾನೆ.. ನಿಂತ ಭಂಗಿಯಲ್ಲಿರುವ ಪರಶಿವನ ಮೂರ್ತಿಯನ್ನು, ತಾಮ್ರ, ಜಿಂಕ್, ಸಿಮೆಂಟ್ ಮತ್ತು ಉಕ್ಕಿನಿಂದ ತಯಾರಿಸಲಾಗಿದೆ. 143 ಅಡಿ ಎತ್ತರವಿರುವ ಈ ಶಿವನ ಮೂರ್ತಿಯನ್ನು, ಜೂನ್ 21, 2011 ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಇದು ಜಗತ್ತಿನ ಅತಿ ಎತ್ತರ ಶಿವನ ಮೂರ್ತಿಯಾಗಿದ್ದು, 1 ನೇ ಸ್ಥಾನದಲ್ಲಿದೆ.
ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹಿಂದೂ ದೇವಾಲಯಗಳು ಕೂಡ ನೇಪಾಳದಲ್ಲಿ ಹೆಚ್ಚಾಗಿವೆ. ಹೀಗಾಗಿ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ, ಪರಶಿವನನ್ನು ನೇಪಾಳದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಬೃಹದಾಕಾರವಾದ ಶಿವನ ದರ್ಶನಕ್ಕೆ ಅಂತಲೇ, ಸಾಕಷ್ಟು ಜನರು ಇಲ್ಲಿಗೆ ಬರ್ತಾರೆ.. ಭಕ್ತಿಯಿಂದ ನಮಿಸಿ, ಪಾದಕ್ಕೆ ಎರಗ್ತಾರೆ. ಶಿವನ ಕೃಪೆಗೆ ಪಾಗತ್ರರಾಗ್ತಾರೆ.
ಇದುವರೆಗೂ ನೀವು ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಗಳ ದರ್ಶನ ಮಾಡಿದ್ದೀರ.. ಆದ್ರೆ ಜಗತ್ತಿನ ಅತಿ ಎತ್ತರದ ಶಿವಲಿಂಗಗಳ ಬಗ್ಗೆ ಮಾಹಿತಿ ನೀಡ್ತೀವಿ ಒಂದು ಬ್ರೇಕ್ ಆದ್ಮೇಲೆ
------------------------------------------------
ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ಇರೋದು ನೇಪಾಳದಲ್ಲಿ.. ಆ ಮೂಲಕ, ಸಾಕಷ್ಟು ಭಕ್ತರಿಗೆ ತನ್ನ ದರ್ಶನ ನೀಡ್ತಿದ್ದಾನೆ. ಆದ್ರೆ ಜಗತ್ತಿನ ಅತಿ ಎತ್ತರದ ಶಿವಲಿಂಗದ ರೂಪದಲ್ಲಿ ಭಾರತದಲ್ಲಿ ನೆಲೆಯೀರಿದ್ದಾನೆ ಆ ಪರಮೇಶ್ವರ..
ಜಗತ್ತಿನ ಉದ್ದಾರಕ್ಕೆ ಅಂತ ಸಮುದ್ರ ಮಂಥನದ ವೇಳೆ ಉದ್ಭವಿಸಿದ ವಿಷವನ್ನು ಸೇವಿಸಿದ ವಿಷಕಂಠನಿಗೆ, ಭಕ್ತರು ಅಂದ್ರ ಪ್ರಾಣ. ಭಕ್ತಿಯಿಂದ ಭಗವಂತನನ್ನು ಪ್ರಾರ್ಥನೆ ಮಾಡಿದ್ರೆ ಸಾಕು.. ಅವ್ರಿಗೆ ಕೇಳಿದ್ದೆಲ್ಲವನ್ನೂ ಕರುಣಿಸ್ತಾನೆ ಈ ಕರುಣಾಮಯಿ.. ಹೀಗಾಗಿನೇ ಭಕ್ತರು ಮೂರ್ತಿಯ ರೂಪದಲ್ಲಿ ಶಿವನನ್ನು ಆರಾಧಿಸ್ತಿದ್ದಾರೆ. ಶಿವಲಿಂಗದ ರೂಪದಲ್ಲಿ ಪ್ರತಿಷ್ಠಾಪಿಸಿ, ಪೂಜಿಸ್ತಿದ್ದಾರೆ. ಇಡೀ ಜಗತ್ತಿನಲ್ಲಿರೋ ಶಿವಲಿಂಗಗಳಲ್ಲಿ ಭಾರತದಲ್ಲಿರೋ ಶಿವಲಿಂಗಗಳೇ ಅತಿ ಎತ್ತರದ್ದು..
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಜಾರ್ಖಂಡ್
ಎತ್ತರ : 65 ಅಡಿ
ನಿರ್ಮಾಣ : 30 ವರ್ಷಗಳ ಹಿಂದೆ
ಜಗತ್ತಿನ ಎತ್ತರದಲ್ಲಿ 4 ನೇ ಸ್ಥಾನ
ಪರಶಿವ ಅಮೂರ್ತ ಸ್ವರೂಪಿ.. ಇಂಥದ್ದೇ ರೂಪ ಅನ್ನೋದು ಆತನಿಗಿಲ್ಲ.. ಭಕ್ತರಿಗೆ ದರ್ಶನ ನೀಡೋದಕ್ಕೆ ಅಂತ ವಿವಿಧ ರೂಪದಲ್ಲಿ ಧರೆಗಿಳಿದು ಬರ್ತಾನೆ. ಹೀಗೆ ಆತನ ರೂಪಗಳಲ್ಲಿ ಒಂದಾಗಿರೋದು ಈ ಶಿವಲಿಂಗ..
ಇದು ಜಾರ್ಖಂಡ್ನ ಛೋಟಾನಾಗ್ಪುರ್ದಲ್ಲಿರೋ ಅತಿ ಎತ್ತರದ ಶಿವಲಿಂಗ. ಗಿರಿದಿ ಜಿಲ್ಲೆಯ ಹರಿಹರಧಾಮದಲ್ಲಿರುವ ಈ ಶಿವಲಿಂಗ, ಇಡೀ ದೇಶ ಮಾತ್ರವಲ್ಲ, ಜಗತ್ತಿನಲ್ಲೇ ಪ್ರಖ್ಯಾತಿಯಾಗಿದೆ. ನದಿ ನೀರಿನಿಂದ ಸುತ್ತುವರಿದ 25 ಎಕೆರೆ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ವಿರಾಜಮಾನವಾಗಿ ನೆಲೆಯೂರಿದ್ದಾನೆ ಈ ಈಶ್ವರ.. ಈ ಶಿವಲಿಂಗ ಸುಮಾರು 65 ಅಡಿ ಎತ್ತರವಿದೆ. 30 ವರ್ಷಗಳ ಹಿಂದೆ ಈ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಜಗತ್ತಿನ ಶಿವಲಿಂಗಗಳಲ್ಲಿ ಇದು ನಾಲ್ಕನೇ ಅತಿ ಎತ್ತರವಾದ ಶಿವಲಿಂಗವಾಗಿದೆ. ಶ್ರಾವಣ ಪೌರ್ಣಮಿಯಂದು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ. ಆ ಮೂಲಕ, ಲಿಂಗದ ರೂಪದಲ್ಲಿ ಬೃಹದಾಕಾರವಾಗಿ ನೆಲೆಯೂರಿರೋ ಪಾರ್ವತಿಪತಿಯನ್ನು ಆರಾಧಿಸ್ತಾರೆ..
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ತಮಿಳುನಾಡು
ಎತ್ತರ : 90 ಅಡಿ
ನಿರ್ಮಾಣ : ಅಕ್ಟೋಬರ್ 15, 1989
ಜಗತ್ತಿನ ಎತ್ತರದಲ್ಲಿ 3 ನೇ ಸ್ಥಾನ
ಈ ಶಿವಲಿಂಗವನ್ನೊಮ್ಮೆ ನೋಡಿ.. ಇದು ತಮಿಳುನಾಡಿನಲ್ಲಿರೋ ಸರ್ವೇಶ್ವರ ದೇಗುಲದಲ್ಲಿದೆ. ತಮಿಳುನಾಡಿನ ತಾಮರೈಪಾಕಮ್ ಪ್ರದೇಶದಲ್ಲಿರೋ ಈ ಶಿವಲಿಂಗವನ್ನ, ಅಕ್ಟೋಬರ್ 15, 1989 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಮೂಲಕ ಶಿವನ ಆರಾಧನೆಯಲ್ಲಿ ಮುಳುಗಿದ್ದಾರೆ ಇಲ್ಲಿನ ಭಕ್ತರು.
ಇನ್ನು ಈ ಶಿವಲಿಂಗವು ಭೂಮಿಯಿಂದ ಸುಮಾರು 90 ಅಡಿ ಎತ್ತರವಿದೆ. ಹೀಗಾಗಿ ಇದು ಜಗತ್ತಿನ ಅತಿ ಎತ್ತರದ ಶಿವಲಿಂಗಗಳಲ್ಲಿ, ಮೂರನೆಯದ್ದಾಗಿದೆ. ಪ್ರತಿ ನಿತ್ಯ ಪೂಜಾವಿಧಿ ವಿಧಾನಗಳೊಂದಿಗೆ ಈ ಶಿವಲಿಂಗಕ್ಕೆ ಪೂಜೆ ನೆರವೇರಿಸಲಾಗುತ್ತೆ. ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸೋ ಭಕ್ತರು ಶಿವಲಿಂಗದ ದರ್ಶನ ಮಾಡಿ, ತನ್ಮಯರಾಗ್ತಾರೆ.
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಹೈದ್ರಾಬಾದ್
ಎತ್ತರ : 108 ಅಡಿ
ನಿರ್ಮಾಣ : 2010
ಜಗತ್ತಿನ ಎತ್ತರದಲ್ಲಿ 2 ನೇ ಸ್ಥಾನ
ಇಲ್ನೋಡಿ.. ಇದು ಜಗತ್ತಿನ 2 ನೇ ಅತಿ ಎತ್ತರದ ಶಿವಲಿಂಗ.. ಜಗತ್ತಿನ ಅತಿ ಎತ್ತರದ ಎರಡನೇ ಶಿವಲಿಂಗ ಇರೋದು ಭಾರತದ ಮುತ್ತಿನ ನಗರಿ ಹೈದ್ರಾಬಾದ್ನಲ್ಲಿ.. ಸಿದ್ದೇಶ್ವರ ಪೀಠದವತಿಯಿಂದ ಈ ಬೃಹತ್ ಶಿವಲಿಂವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2010 ರಲ್ಲಿ ಧರ್ಮ ರಕ್ಷಾ ಮಹಾಯಾಗ ಮಾಡೋ ಮೂಲಕ, ಈ ಶಿವಲಿಂಗವನ್ನು ಲೋಕಾರ್ಪಣೆ ಮಾಡಲಾಯ್ತು.. ಆಗಸದೆತ್ತರಕ್ಕೆ ಕಾಣುವ ಈ ಶಿವಲಿಂಗ, ಬರೋಬ್ಬರಿ 108 ಅಡಿಗಳಷ್ಟಿದೆ. ಆ ಮೂಲಕ ಜಗತ್ತಿನ ಎರಡನೆಯ ಅತಿ ಎತ್ತರದ ಶಿವಲಿಂಗ ಅನ್ನೋ ಹಿರಿಮೆಗೆ ಪಾತ್ರವಾಗಿದೆ.
-------------------------
ಜಗತ್ತಿನ ಎತ್ತರದ ಶಿವಲಿಂಗ
-------------------------
ಸ್ಥಳ : ಕೋಲಾರ, ಕರ್ನಾಟಕ
ಎತ್ತರ : 108 ಅಡಿ
ನಿರ್ಮಾಣ :
ಜಗತ್ತಿನ ಎತ್ತರದಲ್ಲಿ 1 ನೇ ಸ್ಥಾನ
ಇದೇ ನೋಡಿ.. ಜಗತ್ತಿನ ಅತಿ ಎತ್ತರದ ಶಿವಲಿಂಗ... ಇದು ಇರೋದು ಕರುನಾಡಿನ ಮಡಿಲಲ್ಲೇ.. ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿ ಸಮೀಪದಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ತ್ರೇತಾಯುಗದ ಇತಿಹಾಸಹೊಂದಿರುವ ಕೋಟಿಲಿಂಗೇಶ್ವರದಲ್ಲಿ, ಮೊದಕಲು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು, ಸಾಕ್ಷಾತ್ ಶ್ರೀರಾಮ..
ಇನ್ನು ಇಲ್ಲಿರುವ ಕೋಟಿ ಲಿಂಗಗಳಲ್ಲಿ ಒಂದು ಬೃಹದಾಕಾರವಾದ ಶಿವಲಿಂಗವಿದೆ. 108 ಅಡಿಗಳಷ್ಟು ಎತ್ತರವಿರುವ ಈ ಶಿವಲಿಂಗ, ಜಗತ್ತಿನ ಅತಿ ಎತ್ತರದ ಶಿವಲಿಂಗವಾಗಿದೆ.
ಜಗತ್ತಿನ ಅತಿ ಎತ್ತರದ ಶಿವಲಿಂಗದ ದರ್ಶನಕ್ಕೆ, ಸಾಗರೋಪಾದಿಯಲ್ಲಿ ಭಕ್ತರು ಬರ್ತಾರೆ. ಕರ್ನಾಟಕ ಮಾತ್ರವಲ್ಲ, ದೇಶ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರ್ತಾರೆ. ಕೋಟಿ ಲಿಂಗಗಳ ರೂಪದಲ್ಲಿರೋ ಶಿವನ ಪಾದಕ್ಕೆ ಎರಗಿ, ಶಿವನ ಕೃಪೆಗೆ ಪಾತ್ರರಾಗ್ತಾರೆ..
ಕರ್ನಾಟಕ ಮಣ್ಣಿನ ಕಣಕಣದಲ್ಲೂ ಶಿವನ ಸತ್ವವಿದೆ. ಮುರುಡೇಶ್ವರದಲ್ಲಿ ಶಾಂತಚಿತ್ತನಾಗಿ ತಪೋನಿರತನಾಗಿದ್ರೆ, ಕೋಲಾರದ ಕೋಟಿ ಲಿಂಗೇಶ್ವರದಲ್ಲಿ, ಲಿಂಗಗಳ ರೂಪದಲ್ಲಿ ಭಕ್ತರಿಗೆ ದರ್ಶನ ನೀಡ್ತಿದ್ದಾನೆ. ಆ ಮೂಲಕ, ತನ್ನನ್ನು ಆರಾಧಿಸೋ ಭಕ್ತರ ಸಂಕಷ್ಟಗಳನ್ನು ನಿವಾರಿಸ್ತಿದ್ದಾನೆ.
0 Комментарии