Hot Posts

10/recent/ticker-posts

ತಿಮ್ಮಪ್ಪನನ್ನು ವರಿಸಿದಳಾ ಮುಸ್ಲಿಂ ಯುವತಿ..?








ತಿರುಪತಿಯ ಬಾಲಾಜಿ ವಿವಾಹ ಯಾರ್ ಜೊತೆ ಆಯ್ತು..? ಈ ಪ್ರಶ್ನೆಗೆ ಯಾರನ್ನು ಕೇಳಿದ್ರೂ, ಶ್ರೀ ಲಕ್ಷ್ಮಿ ಜೊತೆ ಆಯ್ತು ಎಲ್ರೂ ಹೇಳ್ತಾರೆ.. ಆದ್ರೆ ಈಗ ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ತಿರುಪತಿ ತಿಮ್ಮಪ್ಪ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ರಂತೆ..? ಇದು ನಿಜಾನಾ..? ಅಷ್ಟಕ್ಕೂ ಆ ಯುವತಿಯಾದ್ರೂ ಯಾರು..? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ..



ಓಂ ಶ್ರೀ ವೆಂಕಟೇಶ್ವರಾಯ ನಮಃ... ಗೋವಿಂದಾಯ ನಮಃ.. ಇದು ಕೋಟ್ಯಾಂತರ ಭಕ್ತರ ಎದೆಯೊಳಗಿಂದ ಉಕ್ಕಿ ಹರಿಯುವ ಪದಗಳು.. ಕೇಳಿದ್ದನ್ನು ಕರುಣಿಸೋ ಕರುಣಾಮಯಿಯ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಬರ್ತಾರೆ. ಬ್ಯುಸಿ ಶೆಡ್ಯೂಲ್ ನಡುವೆಯೂ ತಿರುಪತಿಗೆ ಬಂದು, ತಿಮ್ಮಪ್ಪನಿಗೆ ನಮಿಸಿ ಹೋಗ್ತಾರೆ.



ತಿಮ್ಮಪ್ಪ ಅಂದ್ರೆ ಸಾಕು.. ಜಗತ್ತಿನ ಜನರಿಗೆ ಥಟ್ ಅಂತ ನೆನಪಾಗೋದು, ಹಿಂದೂ ಧರ್ಮ.. ಯಾಕಂದ್ರೆ, ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು, ಶ್ರೀ ವೆಂಕಟೇಶ್ವರ ಎಂಬ ಹೆಸರಿನಲ್ಲಿ ತಿರುಪತಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ತಿರುಪತಿ ಅಂದ್ರೆ, ಹಿಂದೂಗಳ ಪವಿತ್ರ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ..





ಆದ್ರೆ ಈ ಪವಿತ್ರ ತಾಣದಲ್ಲಿ ಜಾತಿ ಧರ್ಮದ ಭೇಧವಿಲ್ಲ.. ಶುದ್ಧ ಮನಸ್ಸಿನಿಂದ, ಭಕ್ತಿ ಭಾವದಿಂದ ನಮಿಸಿದ್ರೆ ಸಾಕು, ಎಲ್ಲರಿಗೂ ಒಲಿದು ಬಿಡ್ತಾನೆ ಈ ತಿಮ್ಮಪ್ಪ. ಅದಕ್ಕಾಗೇ, ಇಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಬರ್ತಾರೆ. ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಾರೆ.



ಆದ್ರೆ ಪುರಾಣ ಪುಣ್ಯಗಳ ಪ್ರಕಾರ, ಶ್ರೀ ವೆಂಕಟೇಶ್ವರ ಹಿಂದೂ ದೇವರು.. ಆತ ಮದುವೆಯಾಗಿರೋದು ಪದ್ಮಾವತಿ ಮತ್ತು ಲಕ್ಷ್ಮಿಯನ್ನು.. ಪುರಾಣಗಳಲ್ಲಿ ಉಲ್ಲೇಖವಿರುವಂತೆ, ಪದ್ಮಾವತಿ ಮತ್ತು ಲಕ್ಷ್ಮಿ ಎರಡೂ, ಲಕ್ಷ್ಮಿಯ ಅವತಾರಗಳೇ.. ಲಕ್ಷ್ಮಿ ಕೂಡ ಹಿಂದೂಗಳ ಆರಾಧ್ಯ ದೇವತೆ ಅನ್ನೋದು ಎಲ್ಲರಿಗೂ ಗೊತ್ತಿದೆ.



ಆದ್ರೆ ವಿಷ್ಯ ಇದಲ್ಲ.. ಹೊಸ ಸುದ್ದಿಯೊಂದು ಈಗ ಎಲ್ಲೆಡೆ ಗದ್ದಲ ಸೃಷ್ಟಿಸುತ್ತಿದೆ. ತಿರುಪತಿ ಗಿರಿವಾಸ, ಶ್ರೀ ಶ್ರೀನಿವಾಸ ಮುಸ್ಲಿಂ ಯುವತಿಯನ್ನು ವರಿಸಿದ್ದಾರಂತೆ.. ಮುಸ್ಲಿಂ ಯುವತಿಯೋರ್ವಳು ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳಂತೆ..!



ಇದನ್ನ ಕೇಳಿದ ತಕ್ಷಣ ನಿಮಗೆ ಶಾಕ್ ಆಗಬಹುದು.. ಆದ್ರೆ ಹೀಗಂತ ಒಂದು ಸುದ್ದಿ ಈಗ ಸದ್ದು ಮಾಡ್ತಿದೆ. ಆ ಮೂಲಕ, ಶ್ರೀನಿವಾಸನ ಮದುವೆ ವಿಚಾರ, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.



ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಮುಸ್ಲಿಂ ಯುವತಿಯೋರ್ವಳು, ಶತಮಾನಗಳ ಹಿಂದೆಯೇ ಶ್ರೀ ವೆಂಕಟೇಶ್ವರನನ್ನು ವರಿಸಿದ್ದಾಳಂತೆ.



ಈ ವಿಷ್ಯ ಹೊರ ಬೀಳ್ತಿದ್ದಂತೆ, ತಿಮ್ಮಪ್ಪನ ಭಕ್ತರು ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಂತೂ ಸತ್ಯ. ಇದು ನಿಜಾನಾ,..? ಅಥವ ಇದೊಂದು ಕೇವಲ ಗಾಳಿ ಸುದ್ದೀನ ಅನ್ನೋ ಅನುಮಾನ ಕೂಡ ಎಲ್ಲರಲ್ಲೂ ಮನೆ ಮಾಡಿತ್ತು.. ಆದ್ರೆ, ಅದೆಲ್ಲದಕ್ಕಿಂತ ಮಿಗಿಲಾಗಿ, ಶ್ರೀನಿವಾಸನ ಕಲ್ಯಾಣದ ಹಿಂದೆ ಒಂದು ದೊಡ್ಡ ರಹಸ್ಯ ಅಡಗಿದೆ ಅನ್ನೋದು ಖಾತ್ರಿಯಾಗಿತ್ತು..



ಯಸ್​.. ಒಂದು ಮೂಲದ ಮಾಹಿತಿ ಪ್ರಕಾರ, ಶ್ರೀ ವೆಂಕಟೇಶ್ವರನನ್ನು ಬಿಬಿ ನಂಚಾರಿ ಅನ್ನೋ ಮುಸ್ಲಿಂ ಯುವತಿ ವರಿಸಿದ್ದಾಳೆ ಅಂತ ಹೇಳಲಾಗುತ್ತಿದೆ. ಯಾವಾಗ ಎಲ್ಲಿ ಈ ಮದುವೆ ನಡೀತು ಅನ್ನೋಕ್ಕೂ ಒಂದು ಕಥೆ ಹುಟ್ಟಿಕೊಂಡಿದೆ. ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನ ಮದುವೆ ನಡೆದಿತ್ತಂತೆ. ಪೂಜೆಗೆಂದು ಬಂದಿದ್ದ ಬಿಬಿ ನಂಚಾರಿ, ಏಳು ಬೆಟ್ಟದ ಒಡೆಯನನ್ನ ಒಲಿಸಿಕೊಂಡು, ವಿವಾಹವಾಗಿದ್ದಾರಂತೆ.



ಇದು ನಂಬೋದಕ್ಕೆ ಆಗದೇ ಇರುವಂಥ ವಿಷ್ಯ.. ಆದ್ರೆ ಕೆಲವೊಂದು ಮೂಲಗಳನ್ನು ಕೆದಕುತ್ತಾ ಹೋದಾಗ, ಈ ಎಲ್ಲಾ ವಿಷಯಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತೆ. ಪದ್ಮಾವತಿ ಮತ್ತು ಲಕ್ಷ್ಮಿ ಮಾತ್ರವಲ್ಲ, ಬಿಬಿ ನಂಚಾರಿ ಅನ್ನೋ ಯುವತಿ, ಶ್ರೀ ವೆಂಕಟೇಶ್ವರನನ್ನ ವರಿಸಿದ್ದಾಳಂತೆ..



ಅಷ್ಟಕ್ಕೂ ಈ ಬಿಬಿ ನಂಚಾರಿ ಯಾರು..? ಆಕೆ ತಿರುಪತಿ ತಿಮ್ಮಪ್ಪನನ್ನು ಯಾವಾಗ ಮದುವೆಯಾಗಿದ್ಳು..? -------------------------------------------------------------------

ಬಿಬಿ ನಂಚಾರಿ.. ಆಕೆ ಒಂದು ರಾಜಮನೆತನಕ್ಕೆ ಸೇರಿದವಳು.. ಆಕೆಯ ಧರ್ಮ ಇಸ್ಲಾಂ ಆಗಿತ್ತು.. ವೆಂಕಟೇಶ್ವರನ ರೂಪಕ್ಕೆ ಮರುಳಾಗಿ, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡು, ವಿವಾಹ ಕೂಡ ಆಗಿದ್ರಂತೆ..!



ಬಿಬಿ ನಂಚಾರಿ ಶ್ರೀ ವೆಂಕಟೇಶ್ವರನನ್ನು ಆಕೆ ಮದುವೆಯಾಗಿದ್ದು ನಿಜಾನಾ..? ಅಷ್ಟಕ್ಕೂ ಬಿಬಿ ನಂಚಾರಿ ಯಾರು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಕೆ ಹೊರಟ್ರೆ, ದೆಹಲಿಯನ್ನಾಳಿದ ಸುಲ್ತಾನರ ಇತಿಹಾಸ ತೆರೆದುಕೊಳ್ಳುತ್ತೆ..



ಯಸ್​.. ಶ್ರೀ ವೆಂಕಟೇಶ್ವರನನ್ನು ಮದುವೆಯಾಗಿದ್ದಾಳೆ ಅಂತ ಹೇಳಲಾಗ್ತಿರೋ ಬಿಬಿ ನಂಚಾರಿ, ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದವಳು ಅಂತ ಹೇಳಲಾಗ್ತಿದೆ.



ಅದು ಸುಮಾರು 700 ವರ್ಷಗಳ ಹಿಂದಿನ ಇತಿಹಾಸ.. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಶುರುವಾಗಿತ್ತು.. ದಿನೇ ದಿನೇ ಪ್ರಾಬಲ್ಯ ಗಳಿಸ್ತಿದ್ದ ದೆಹಲಿಯ ಸುಲ್ತಾನರ ಸಾಮ್ರಾಜ್ಯ, ನಿಧಾನವಾಗಿ ದಕ್ಷಿಣ ಭಾರತದತ್ತ ವಿಸ್ತರಿಸಿತ್ತು. ಯುದ್ಧ ಪ್ರಿಯರಾದ ಸುಲ್ತಾನರು, ಹೈದರಾಬಾದ್ ಮೇಲೂ ತಮ್ಮ ಹಿಡಿತ ಸಾಧಿಸಿದ್ರು.. ಸಾಮ್ರಾಜ್ಯ ವಿಸ್ತರಣೆಯ ನೆಪದಲ್ಲಿ ದೆಹಲಿ ಸುಲ್ತಾನರು ಈ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೂ ಲಗ್ಗೆ ಇಟ್ಟರು..







ದೆಹಲಿ ಸುಲ್ತಾನರು ಸುಮಾರು 450 ವರ್ಷಗಳ ಹಿಂದೆ, ಆಂಧ್ರ ಪ್ರದೇಶದ ಮೇಲೆ ದಾಳಿ ಇಟ್ಟರು. ಅಲ್ಲಿ ‘ದೂದೆಕುಲು’ ಅನ್ನೋ ಸಮುದಾಯದವರು ವಾಸ ಮಾಡ್ತಿದ್ರು.. ಬುಡಕಟ್ಟು ಜನಾಂಗಕ್ಕೆ ಸೇರಿದ ಇವ್ರು, ತಿಮ್ಮಪ್ಪನ ಆರಾಧಕರಾಗಿದ್ದರು.. ಆದ್ರೆ ದೆಹಲಿ ಸುಲ್ತಾನರು ಅದ್ಯಾವುದನ್ನೂ ಪರಿಗಣಿಸದೇ, ಇವ್ರ ಬುಡಕಟ್ಟು ಜನರ ಮೇಲೆ ದಾಳಿ ಇಟ್ರು.. ಸುಲ್ತಾನರು ಝಳಪಿಸಿದ ಕತ್ತಿಗೆ, ಬುಡಕಟ್ಟು ಜನರ ನೆತ್ತರು ಹರಿಯತೊಡಗಿತು. ಇದ್ರಿಂದ ಕುಪಿತಗೊಂಡ ವೆಂಕಟೇಶ್ವರ ದೆಹಲಿ ಸುಲ್ತಾನರಿಗೆ ಶಾಪ ಕೊಟ್ನಂತೆ..



ಇದಾದ ನಂತರ ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಒಮ್ಮೆ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬಂದ್ರಂತೆ. ಆಗ ವೆಂಕಟೇಶ್ವರನ ರೂಪ ಲಾವಣ್ಯಕ್ಕೆ ಮನಸೋತುಬಿಟ್ರಂತೆ..!



ಹಿಂದೂ ಧರ್ಮದ ಸಂಪ್ರದಾಯದಂತೆ, ತನ್ನ ಆಚಾರ ವಿಚಾರಗಳನ್ನು ಬದಲಿಸಿಕೊಂಡು, ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಳ್ಳಲು ಅಣಿಯಾದಳಂತೆ..!



ವೆಂಕಟೇಶ್ವರನಿಗೆ ಮನಸೋತ ಬಿಬಿ ನಂಚಾರಿ, ಹಗಲಿರುಳು ಬಾಲಾಜಿಯನ್ನು ಒಲಿಸಿಕೊಳ್ಳೋಕೆ ಜಪತಪಗಳನ್ನ ಮಾಡಿದ್ರಂತೆ.. ನಂಚಾರಿಯ ಭಕ್ತಿಗೆ ಒಲಿದ ಬಾಲಾಜಿ, ನಂಚಾರಿಯ ತಂದೆ ಮತ್ತು ದೆಹಲಿಯ ಸುಲ್ತಾನನ ಕನಸಲ್ಲಿ ಬಂದು, ನಿನ್ನ ಮಗಳನ್ನು ನನಗೆ ಕೊಟ್ಟು ಕಲ್ಯಾಣ ಮಾಡು. ನಿನ್ನ ಎಲ್ಲಾ ಶಾಪಗಳು ಮುಕ್ತವಾಗುತ್ತವೆ ಅಂತ ಹೇಳಿದ್ನಂತೆ...



ಬಾಲಾಜಿ ಕನಸಲ್ಲಿ ಬಂದು ಹೇಳಿದ್ದೇ ತಡ, ದೆಹಲಿಯ ಸುಲ್ತಾನ ತನ್ನ ಮಗಳನ್ನು ವೆಂಕಟೇಶ್ವರನ ಜೊತೆ ಮದುವೆ ಮಾಡಲು ನಿರ್ಧರಿಸಿದ್ರಂತೆ. ಶ್ರೀ ವೆಂಕಟೇಶ್ವರನ ರೂಪ ಮತ್ತು ಲಾವಣ್ಯಕ್ಕೆ ಮರುಳಾಗಿದ್ದ ಬಿಬಿ ನಂಚಾರಿ ಕೂಡ, ಶ್ರೀನಿವಾಸನ ಜೊತೆ ಕಲ್ಯಾಣಕ್ಕೆ ಒಪ್ಪಿಕೊಂಡ್ರಂತೆ. ಶ್ರೀ ವೆಂಕಟೇಶ್ವರನನ್ನು ಒಲಿಸಿಕೊಂಡ ಬಿಬಿ ನಂಚಾರಿ, ಸುಮಾರು 450 ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರನನ್ನು ವಿವಾಹವಾದ್ರಂತೆ. ಮುಸ್ಲಿಂ ಧರ್ಮೀಯರಾಗಿದ್ರೂ, ಹಿಂದೂ ದೇವರ ಜೊತೆ ನಂಚಾರಿಯ ಕಲ್ಯಾಣವಾಯ್ತಂತೆ..!



ಇನ್ನು ವೆಂಕಟೇಶ್ವರನನ್ನು ವಿವಾಹವಾದ ಮುಸ್ಲಿಂ ಯುವತಿ ಬಿಬಿ ನಂಚಾರಿಯ ಬಗ್ಗೆ ಒಂದು ಪುಸ್ತಕ ಕೂಡ  ಬಂದಿದೆ. ‘ಬಿಬಿ ನಂಚಾರಿ ಪ್ರಬಂಧಂ’ ಅನ್ನೋ ತೆಲುಗು ಪುಸ್ತಕದಲ್ಲಿ ಬಿಬಿ ನಂಚಾರಿಯ ಬದುಕು ಮತ್ತು ಶ್ರೀನಿವಾಸನ ಜೊತೆಗಿನ ಕಲ್ಯಾಣದ ಬಗೆಗಿನ ಕಥೆ ಇದೆ ಅಂತ ಹೇಳಲಾಗ್ತಿದೆ. ಸಿವಿ ಸುಬ್ಬಣ್ಣ ಅನ್ನೋರು ಈ ಪುಸ್ತಕವನ್ನು ಬರೆದಿದ್ದು, ತಿರುಪತಿ ತಿರುಮಲ ಟ್ರಸ್ಟ್​​ ವತಿಯಿಂದ ಈ ಪುಸ್ತಕ ಬಿಡುಗಡೆ ಮಾಡಲಾಗಿದೆ.



ಅಷ್ಟೇ ಅಲ್ಲ, ತಿರುಪತಿ ಸಮೀಪದಲ್ಲೇ ಬಿಬಿ ನಂಚಾರಿಯಮ್ಮನ ದೇವಾಲಯವನ್ನೂ ಕಟ್ಟಲಾಗಿದೆ. ಆ ಮೂಲಕ, ಬಿಬಿ ನಂಚಾರಿಯಮ್ಮನನ್ನು ತಿಮ್ಮಪ್ಪನ ಪತ್ನಿ ಅಂತ ಸ್ವೀಕರಿಸಲಾಗಿದೆ ಎಂದು ಹೇಳಲಾಗ್ತಿದೆ



ಸಿವಿ ಸುಬ್ಬಣ್ಣ ಬರೆದಿರೋ ಪುಸ್ತಕದಲ್ಲಿ ಬಿಬಿ ನಂಚಾರಿ ಬಗ್ಗೆ ಉಲ್ಲೇಖ ಇದೆ. ಮುಸ್ಲಿಂ ರಾಜಮನೆತನದ ಯುವತಿಯನ್ನ ಶ್ರೀ ವೆಂಕಟೇಶ್ವರನೇ ವರಿಸಿದ್ದ ಅಂತ ಆ ಪುಸ್ತಕದಲ್ಲಿ ಹೇಳಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ನಿಜಾ..? -------------------------------------------------

ಬಿಬಿ ನಂಚಾರಿಯನ್ನು ತಿರುಪತಿ ತಿಮ್ಮಪ್ಪ ಮದುವೆ ಆಗಿದ್ದಾನೆ ಅನ್ನೋ ಮಾತನ್ನೂ ಯಾರಿಂದಲೂ ನಂಬೋಕೆ ಆಗ್ತಿಲ್ಲ.. ಇದು ಕೇವಲ ಅವರಿವರು ಹೇಳೋ ಕಥೆ ಅಂತ ಹೇಳಲಾಗ್ತಿದೆ. ಯಾಕಂದ್ರೆ, ತಿಮ್ಮಪನ ಇತಿಹಾಸಕ್ಕೂ, ಬಿಬಿ ನಂಚಾರಿಯ ಇತಿಹಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ರೆ, ಈ ಕಥೆ ಹುಟ್ಟಿಕೊಂಡಿದ್ಯಾಕೆ..? ಬಿಬಿ ನಂಚಾರಿ ತಿಮ್ಮಪ್ಪನನ್ನು ಮದುವೆಯಾಗಿಲ್ವಾ..? ಈ ರಿಪೋರ್ಟ್​ ನೋಡಿ.. ನಿಮ್ಗೇ ಗೊತ್ತಾಗುತ್ತೆ..



ಶ್ರೀನಿವಾಸನ ಕಲ್ಯಾಣದ ವಿಚಾರ ಒಂದು ನಿಗೂಢತೆಯಿಂದ ಕೂಡಿದೆ. ಆ ನಿಗೂಢತೆಯ ಜೊತೆಗೆ ಒಂದಷ್ಟು ಕಾಲ್ಪನಿಕ ಕಥೆಗಳು ಸೇರಿಕೊಂಡಿವೆ. ಹೀಗಾಗಿ ಬಿಬಿ ನಂಚಾರಿಯನ್ನು ಶ್ರೀನಿವಾಸ ವಿವಾಹವಾಗಿದ್ದಾನೆ ಅನ್ನೋ ಕಥೆಗಳು ಹುಟ್ಟಿಕೊಂಡಿವೆ. ಆದ್ರೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನನಿಗೂ ಮದುವೆಯಾಗಿಲ್ಲ.. ಅಸಲಿಗೆ ಶ್ರೀನಿವಾಸನ ಜೊತೆ ಬಿಬಿ ನಂಚಾರಿಯ ಮದುವೆ ಆಗಿದೆ ಅನ್ನೋ ಮಾತೇ ಸುಳ್ಳು..!





ಯಸ್​.. ಬಿಬಿ ನಂಚಾರಿ ಮುಸ್ಲಿಂ ಧರ್ಮೀಯಳಾಗಿದ್ದಳು ಅನ್ನೋದು ಸತ್ಯ.. ದೆಹಲಿ ಸುಲ್ತಾನರ ರಾಜಮನೆತನಕ್ಕೆ ಸೇರಿದ್ದಳು ಅನ್ನೋದು ಕೂಡ ಅಷ್ಟೇ ಸತ್ಯ.. ಆದ್ರೆ ಶ್ರೀನಿವಾಸನ ಜೊತೆ ಮದುವೆಯಾಗಿದ್ದಾಳೆ ಅನ್ನೋ ಮಾತು ಮಾತ್ರ ಸತ್ಯವಲ್ಲ..



ಕ್ರಿ.ಪೂ 500ರಲ್ಲಿ ತಿರುಪತಿಯಲ್ಲಿ ನೆಲೆ ನಿಂತ ತಿಮ್ಮಪ್ಪ

ಬಿಬಿ ನಂಚಾರಿ ಇತಿಹಾಸ ಕೇವಲ 450 ವರ್ಷಗಳದ್ದು



ಯಸ್.. ಇತಿಹಾಸದ ಪುಟ ಕೆದಕಿ ನೋಡಿದ್ರೆ, ಕಾಲಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಈ ತಿರುಪತಿಯಲ್ಲಿ ತಿಮ್ಮಪ್ಪ ನೆಲೆ ನಿಂತು ಅದೆಷ್ಟೋ ಸಾವಿರ ವರ್ಷಗಳಾಗಿವೆ. ಚೋಳರ ಕಾಲದ್ದು ಎನ್ನಲಾಗಿರೋ ತಿಮ್ಮಪ್ಪನ ದೇಗುಲವನ್ನು, ಕ್ರಿ.ಪೂರ್ವ 500 ರಲ್ಲಿ ನಿರ್ಮಾಣ ಮಾಡಲಾಗಿದೆ ಅಂತ ಇತಿಹಾಸ ಹೇಳುತ್ತೆ. ಅಂದ್ರೆ, ಸುಮಾರು 2 ಸಾವಿರದ 515 ವರ್ಷಗಳ ಹಿಂದೆ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆ ಶುರುವಾಗಿದ್ದೇ, ಕ್ರಿ.ಶ 12 ನೇ ಶತಮಾನದಲ್ಲಿ..



ಕ್ರಿ.ಶ 1206 ರಲ್ಲಿ ಕುತ್ಬುದ್ದೀನ್ ಐಬಕ್​​ ಸ್ಥಾಪಿಸಿದ ಗುಲಾಮಿ ಸಂತತಿಯಿಂದ, ಭಾರತದಲ್ಲಿ ಮುಸ್ಲೀಮರ ಆಳ್ವಿಕೆ ಶುರುವಾಗಿತ್ತು.. ಅಂದ್ರೆ ಶ್ರೀ ವೆಂಕಟೇಶ್ವರ ತಿರುಪತಿಯಲ್ಲಿ ನೆಲೆ ನಿಂತಾದ ಸುಮಾರು 1700 ವರ್ಷಗಳ ನಂತರ ಭಾರತದಲ್ಲಿ ಮುಸ್ಲಿಂ ಆಳ್ವಿಕೆ ಶುರುವಾಯ್ತು. ಹೀಗಿರುವಾಗ, ಶ್ರೀ ವೆಂಕಟೇಶ್ವರ ಮುಸ್ಲಿಂ ಯುವತಿಯನ್ನು ವರಿಸೋದಾದ್ರೂ ಹೇಗೆ ಸಾಧ್ಯ..?





ಇನ್ನೂ ಬಿಬಿ ನಂಚಾರಿಗೆ ಕೇವಲ 450 ವರ್ಷಗಳ ಇತಿಹಾಸವಿದೆ. ಅಂದ್ರೆ ಬಿಬಿ ನಂಚಾರಿ ಬದುಕಿದ್ದ ಕಾಲಮಾನ ಸುಮಾರು 14-15ನೇ ಶತಮಾನ.. ತಿಮ್ಮಪ್ಪ ತಿರುಮಲದಲ್ಲಿ ನೆಲೆ ನಿಂತು, ಸುಮಾರು 2 ಸಾವಿರ ವರ್ಷಗಳ  ನಂತರ ಬಿಬಿ ನಂಚಾರಿಯ ಬದುಕು ಪ್ರಾರಂಭವಾಗುತ್ತೆ. ಹೀಗಿರುವಾಗ 2 ಸಾವಿರ ವರ್ಷಗಳ ಅಂತರವಿರುವ ಬಾಲಾಜಿಯನ್ನು, ಬಿಬಿ ನಂಚಾರಿ ಒಲಿಸಿಕೊಂಡು ವಿವಾಹವಾಗಿದ್ದಾಳೆ ಅಂದ್ರೆ, ಇದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನೀವೇ ಊಹೆ ಮಾಡ್ಕೊಳ್ಳಿ..



ಅಸಲಿಗೆ ಬಿಬಿ ನಂಚಾರಿ ಮತ್ತು ಶ್ರೀನಿವಾಸನ ನಡುವಿನ ಕಥೆಯನ್ನೇ ಇಲ್ಲಿ ತಿರುಚಲಾಗಿದೆ. ಆ ಮೂಲಕ, ತಿಮ್ಮಪ್ಪನ ಮುಸ್ಲಿಂ ಪತ್ನಿ ಎಂದು ಬಿಬಿ ನಂಚಾರಿಯನ್ನು ಕರೆಯಲಾಗ್ತಿದೆ. ಇದು ಸತ್ಯವಲ್ಲ.. ಯಾಕಂದ್ರೆ, ಬಿಬಿ ನಂಚಾರಿ ಶ್ರೀನಿವಾಸನನ್ನು ಮದುವೆಯಾಗಿಲ್ಲ.. ಆಕೆ ಕೇವಲ ಶ್ರೀನಿವಾಸನ ಪರಮ ಭಕ್ತೆ..!



ಸುಮಾರು 450 ವರ್ಷಗಳಿಗೂ ಹಿಂದೆ, ದೆಹಲಿ ಸುಲ್ತಾನರು ತಮ್ಮ ಸಾಮ್ರಾಜ್ಯವನ್ನು ಆಂಧ್ರದವರೆಗೆ ವಿಸ್ತರಿಸ್ತಾರೆ. ಈ ವೇಳೆ ಸುಲ್ತಾನರ ಮನೆತನಕ್ಕೆ ಸೇರಿದ ಬಿಬಿ ನಂಚಾರಿ, ಕೂಡ ಆಂಧ್ರಕ್ಕೆ ಕಾಲಿಡ್ತಾಳೆ.. ಈ ವೇಳೆ ಏಳು ಬೆಟ್ಟದಲ್ಲಿ ನೆಲೆಸಿರೋ ತಿಮ್ಮಪ್ಪನ ಸನ್ನಿಧಾನಕ್ಕೂ ಬರ್ತಾಳೆ. ಅಲ್ಲಿ ತಿಮ್ಮಪ್ಪನ ರೂಪ ಮತ್ತು ಲಾವಣ್ಯವನ್ನು ನೋಡಿ ಮಾರು ಹೋಗ್ತಾಳೆ. ಅದ್ರ ಜೊತೆಗೆ ತಿಮ್ಮಪ್ಪನ ದರ್ಶನದಿಂದಾಗಿ ದೆಹಲಿ ಸುಲ್ತಾನರ ಕೆಲವು ಸಮಸ್ಯೆಗಳು ಕೂಡ ನಿವಾರಣೆಯಾಗ್ತವೆ. ಇದು ಬಿಬಿ ನಂಚಾರಿಗೆ ತಿಮ್ಮಪ್ಪನ ಮೇಲಿರೋ ಭಕ್ತಿಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತೆ..



ಮುಸ್ಲಿಂ ಧರ್ಮೀಯಳಾಗಿದ್ದರೂ, ಹಿಂದೂ ಸಂಪ್ರದಾಯದಂತೆ, ತಿಮ್ಮಪ್ಪನನ್ನು ವಿಧಿಬದ್ಧವಾಗಿ ಪೂಜಿಸ್ತಾಳೆ.. ಆರಾಧಿಸ್ತಾಳೆ. ವೆಂಕಟೇಶ್ವರನ ಸೇವೆಗೆ ನಿಂತ ಬಿಬಿ ನಂಚಾರಿ, ಮದುವೆಯ ಆಸೆಯನ್ನೇ ಬಿಟ್ಟು ಬಿಡ್ತಾಳೆ.. ತನು ಮನದಲ್ಲಿ ಶ್ರೀ ವೆಂಕಟೇಶ್ವರನನ್ನೇ ತುಂಬಿಕೊಳ್ತಾಳೆ.



ಬಾಲಾಜಿಯ ಪರಮ ಭಕ್ತೆಯಾಗಿದ್ದ ಬಿಬಿ ನಂಚಾರಿ, ‘ವೆಂಕಟೇಶ್ವರನೇ ನನ್ನ ಪತಿ.. ವೆಂಕಟೇಶ್ವರನೇ ನನ್ನ ದೈವ.. ವೆಂಕಟೇಶ್ವರನೇ ನನ್ನ ಸರ್ವಸ್ವ ಎಂದು, ಬದುಕಿನ ಕಣ ಕಣದಲ್ಲೂ ವೆಂಕಟೇಶ್ವರನನ್ನೇ ಸ್ಮರಿಸ್ತಾಳೆ’. ಆ ಮೂಲಕ, ತಿರುಪತಿ ತಿಮ್ಮಪ್ಪನ ಸೇವೆಯಲ್ಲಿಯೇ ತನ್ನ ಜೀವನವನ್ನು ಕಳೀತಾಳೆ. ಆದ್ರೆ ಭಕ್ತೆಯ ಭಾವನೆಗಳನ್ನು ಇತಿಹಾಸದ ಪುಟಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಅಂತ ಹೇಳಲಾಗ್ತಿದೆ. ತಿಮ್ಮಪ್ಪನ ಭಕ್ತೆಯನ್ನು, ತಿಮ್ಮಪ್ಪನ ಪತ್ನಿ ಎನ್ನುವ ಮೂಲಕ, ಮುಸ್ಲಿಂ ಯುವತಿ ಬಿಬಿ ನಂಚಾರಿಯನ್ನು ಶ್ರೀನಿವಾಸ ಕಲ್ಯಾಣವಾಗಿದ್ದಾನೆ ಅಂತ ಹೇಳಲಾಗಿದೆ.



ಒಟ್ಟಾರೆ, ಬಿಬಿ ನಂಚಾರಿ ಮತ್ತು ವೆಂಕಟೇಶ್ವರನ ಕಲ್ಯಾಣದ ಕಥೆ ಒಂದು ಕಟ್ಟು ಕಥೆ ಅಂತ ಹೇಳಲಾಗ್ತಿದೆ. ನಂಚಾರಿ ಕೇವಲ ವೆಂಕಟೇಶ್ವರನ ಭಕ್ತೆ ಮಾತ್ರ.



ನೋಡಿದ್ರಲ್ಲಾ..? ಸತ್ಯಾಸತ್ಯತೆ ಏನು ಅಂತ.. ದೆಹಲಿ ಸುಲ್ತಾನರ ಮನೆತನಕ್ಕೆ ಸೇರಿದ ಮುಸ್ಲಿಂ ಮಹಿಳೆ ಬಿಬಿ ನಂಚಾರಿ, ಶ್ರೀನಿವಾಸನ ಪರಮ ಭಕ್ತೆ ಅಷ್ಟೇ.. ಆದ್ರೆ, ಕಾಲಾನಂತರದಲ್ಲಿ, ಸಂಹನದ ತೊಡಕಿನಿಂದಾಗಿ, ಭಕ್ತೆಯನ್ನು ಪತ್ನಿ ಅಂತ ತಪ್ಪಾಗಿ ಅರ್ಥೈಸಲಾಗ್ತಿದೆ.

Отправить комментарий

0 Комментарии