Hot Posts

10/recent/ticker-posts

ಪೆಟ್ರೋಲ್ ಇಲ್ಲದೆ ಓಡುತ್ತೆ ಈ ವಿಮಾನ!




ಇಂಧನವೇ ಇಲ್ಲದೇ ಆಕಾಶದಲ್ಲಿ ಹಾರಾಡುತ್ತೆ ವಿಮಾನ.. ಸೂರ್ಯನ ಬೆಳಕನ್ನೇ ಶಕ್ತಿಯಾಗಿ ಪರಿವರ್ತಿಸುತ್ತೇ ಆ ವಿಮಾನ.. ಇಬ್ಬರು ಸೋದರ ಕನಸಿನ ಕೂಸು, ಈಗ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಜಗತ್ತಿನಲ್ಲೆಡೆ ತೀವ್ರ ಸಂಚಲನ ಮೂಡಿಸಿದ ಆ ಅಚ್ಚರಿಯ ವಿಮಾನ ಇವತ್ತು ಮಧ್ಯರಾತ್ರಿ ಭಾರತಕ್ಕೆ ಬಂದಿಳೀತಿದೆ. ಆ ವಿಮಾನದ ಹಿಂದಿನ ರೋಚಕ ಕಥೆ ಇಲ್ಲಿದೆ ನೋಡಿ

ವಿಮಾನ.. ಅದು ರೈಟ್​ ಬ್ರದರ್ಸ್ ಜಗತ್ತಿನ ಜನಕ್ಕೆ ಕೊಟ್ಟ ಬಹುಮಾನ.. ಅಂದಿನ ಕಾಲದಲ್ಲಿ ಅದು ವೈಮಾನಿಕ ಲೋಕದ ಅತಿ ದೊಡ್ಡ ಸಂಶೋಧನೆಯಾಗಿತ್ತು.. ಆದ್ರೆ ಈವತ್ತು, ಅದಕ್ಕಿಂತಲೂ ಅಚ್ಚರಿಯ ಸಂಶೋಧನೆ ಮಾಡಿದ್ದಾರೆ ವಿಜ್ಞಾನಿಗಳು.. ಇಂಧನವೇ ಇಲ್ಲದೇ ಆಕಾಶದಲ್ಲಿ ಹಾರಾಡಬಲ್ಲ ಅಚ್ಚರಿಯ ವಿಮಾನವನ್ನು ಕಂಡು ಹಿಡಿದಿದ್ದಾರೆ..

ಇದೇ.. ಇಂಧನವೇ ಇಲ್ಲದೇ ಆಕಾಶದಲ್ಲಿ ನಿರಾತಂಕವಾಗಿ ಹರಾಡಿ ಜಗತ್ತನ್ನೇ ಅಚ್ಚರಿಯಲ್ಲಿ ಮುಳುಗೋಹಾಗೇ ಮಾಡಿದ ಹೊಸ ವಿಮಾನ.. ಇಂಧನ ಇಲ್ಲದೇ ಕೇವಲ ಸೂರ್ಯನ ಶಕ್ತಿಯನ್ನೇ ಬಳಸಿಕೊಂಡು ಹಾರಾಟ ನಡೆಸೋ ಈ ವಿಮಾನ, ಈಗ ಜಗತ್ತನ್ನ ಸುತ್ತೋಕೆ ಸಿದ್ಧವಾಗಿದೆ. ಇವತ್ತು ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿಯುತ್ತೆ ಈ ಅಚ್ಚರಿಯ ವಿಮಾನ...

ಆವತ್ತು ಇಬ್ಬರು ರೈಟ್​ ಬ್ರದರ್ಸ್​ ಆಕಾಶದಲ್ಲಿ ಹಾರಾಡೋ ವಿಮಾನ ತಯಾರಿಸಿ, ಜಗತ್ತನ್ನೇ ನಿಬ್ಬೆರಗುಗೊಳಿಸಿದ್ರು.. ಆದ್ರೆ ಇವತ್ತು ಕೂಡ ಇಬ್ಬರು ವಿಜ್ಞಾನಿಗಳು ಈ ಹೊಸ ವಿಮಾನವನ್ನ ಕಂಡು ಹಿಡಿದಿದ್ದಾರೆ.. ಅವ್ರೇ ಸ್ವಿಟ್ಜರ್​ ಲ್ಯಾಂಡಿನ ಬೆರ್​​ಟ್ರಾಂಡ್​​ ಪಿಕ್ಕಾರ್ಡ್‌ ಮತ್ತು ಌಂಡ್ರೆ ಬೋರ್ಶ್‌ಬಗ್‌.. ಈ ಇಬ್ಬರು ವಿಜ್ಞಾನಿಗಳ ಕನಸಿನ ಫಲವಾಗಿ ಇವತ್ತು ಈ ದೈತ್ಯ ವಿಮಾನ ಆಕಾಶದಲ್ಲಿ ಹಾರಾಡಿ ಜಗತ್ತನ್ನೇ ಅಚ್ಚರಿಯಲ್ಲಿ ಮುಳುಗುವಂತೆ ಮಾಡ್ತಿದೆ..

ಇಂಧನ ಇಲ್ದೇ ವಿಮಾನ ಹಾರುತ್ತೇ ಅನ್ನೋದಕ್ಕೆ ಸಾಕ್ಷಿಯಾಗಿದೆ ಇಲ್ಲಿ ಹಾರ್ತಾ ಇರೋ ವಿಮಾನಾ.. ಈ ವಿಮಾನದ ಹೆಸ್ರು ‘ಸೋಲಾರ್​ ಇಂಪಲ್ಸ್​-2’.. ಇದು ಇಂದನ ಇಲ್ಲದೇ, ಬರೀ ಸೂರ್ಯನ ಶಾಖದಿಂದ ಆಕಾಶದಲ್ಲಿ ಹಾರುತ್ತೆ.. ಹೊಸದೇನಾದ್ರೂ ಹುಟ್ಟು ಹಾಕಿ ಜಗತ್ತೇ ತನ್ನತ್ತ ತಿರುಗಿ ನೋಡ್ಬೇಕು ಅನ್ನೋ ಮಹತ್ವಾಕಾಂಕ್ಷೆ ಇದ್ದ ಈ ಇಬ್ಬರು ಸಾಹಸಿ ಪೈಲಟ್​ಗಳು, ಈ ವಿಮಾನದ ಸಂಶೋಧನೆಗೆ  ತಯಾರಾಗಿ ನಿಂತ್ರು..









ಮೊದಲಿಗೆ ಸಂಶೋಧನೆಯಲ್ಲಿ ಮುಳುಗಿದ ಬೆರ್​​ಟ್ರಾಂಡ್​​ ಪಿಕ್ಕಾರ್ಡ್‌ ಮತ್ತು ಌಂಡ್ರೆ ಬೋರ್ಶ್‌ಬಗ್‌, ನಂತರದಲ್ಲಿ ಯುವ ವಿಜ್ಞಾನಿಗಳ ತಂಡವನ್ನೇ ಕಟ್ಟಿಕೊಂಡು, 2003 ರಲ್ಲಿ ಈ ವಿಮಾನದ ತಯಾರಿಗೆ ಸಿದ್ಧವಾಗ್ತಾರೆ.. ಯುವ ತಂಡವನ್ನು ಕಟ್ಟಿಕೊಂಡು ಮೊದಲಿಗೆ ಈ ಸೋಲಾರ್​​ ವಿಮಾನದ ರೂಪು ರೇಷೆಯನ್ನ ರೆಡಿ ಮಾಡ್ತಾರೆ.. ವಿಮಾನದ ಕಂಪ್ಲೀಟ್​ ನೀಲ ನಕ್ಷೆಯನ್ನು ತಯಾರಿಸ್ತಾರೆ..  ಮೊದಲಿಗೆ ಪೈಲೆಟ್ ಒಬ್ಬನೇ ವಿಮಾನದಲ್ಲಿ ಕೂತ್ಕೊಳ್ಳೋಕೆ ಅನುಕೂಲವಾಗೋ ಥರ ಸೀಟಿಂಗ್​ ವ್ಯವಸ್ಥೆ ಮಾಡ್ತಾರೆ..

ಮೊದಲಿಗೆ ವಿಮಾನದ ಇಂಜಿನ್​ ಅನ್ನ ತಯಾರು ಮಾಡ್ತಾರೆ.. ಅದ್ರಲ್ಲಿ ಪೈಲಟ್ ಕೂತ್ಕೊಳ್ಳೋಕೆ ಮತ್ತು ಮಲಗೋದಕ್ಕೆ ಅನುಕೂಲವಾಗೋ ಥರ, ವಿಶಾಲವಾದ ಜಾಗವನ್ನ ಮೀಸಲಿಡ್ತಾರೆ.. ಆಮ್ಲಜನಕದ ಕೊರತೆಯುಂಟಾದ್ರೆ, ಉಸಿರಾಟಕ್ಕೆ ತೊಂದರೆಯಾಗದೇ ಇರಲಿ ಅನ್ನೋ ಉದ್ದೇಶಕ್ಕಾಗಿ, ವಿಮಾನದಲ್ಲಿ ಆಮ್ಲಜನಕದ ಪೂರೈಕೆ ಕೂಡ ಮಾಡಲಾಗುತ್ತೆ..

ಇನ್ನು ಪೈಲಟ್​ಗೆ ಆಯಾಸವಾದ್ರೆ, ಆತ ಅದೇ ಸೀಟನ್ನ ಹಿಂದಕ್ಕೆ ಬಾಗಿಸಿ ವಿಮಾನದಲ್ಲೇ ನಿದ್ದೇ ಮಾಡ್ಬಹುದು..ಇದಾದ ನಂತರ, ವಿಮಾನಕ್ಕೆ ಬೇಕಾದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತೆ.. ವಿಮಾನದ ಪ್ರತಿಯೊಂದು ಭಾಗವನ್ನೂ, ತೂಕ ಮಾಡಿನೇ ಅಳವಡಿಸಲಾಗುತ್ತೆ.. ಯಾಕಂದ್ರೆ, ಒಂದು ಗ್ರಾಂ ಹೆಚ್ಚು ಕಡಿಮೆ ಇದ್ರೂ, ಅದು ವಿಮಾನದ ಹಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ.. ಅದಕ್ಕೆ ತುಂಬಾ ಸೂಕ್ಷ್ಮವಾಗಿ ಈ ವಿಮಾನವನ್ನ ತಯಾರಿಸಲಾಗುತ್ತೆ.. ಇಂಜಿನ್​ ಭಾಗ ರೆಡಿಯಾದ್ಮೇಲೇ ವಿಮಾನದ ರೆಕ್ಕೆಗಳ ತಯಾರಿಕೆಗೆ ಮುಂದಾಗ್ತಾರೆ ವಿಜ್ಞಾನಿಗಳು.. ಇದೇ ಕಣ್ರಿ.. ವಿಜ್ಞಾನಿಗಳಿಗೆ ಸವಾಲಿನ ಕೆಲಸ ಅಂದ್ರೆ.. ಯಾಕಂದ್ರೆ, ಇಂಧನವಿಲ್ಲದೇ ಈ ವಿಮಾನ ಆಕಾಶದಲ್ಲಿ ಹಾರಾಡೋಕೆ ಸಹಾಯಕವಾಗೋದೇ ಈ ರೆಕ್ಕೆಗಳಿಂದ.. ಅದಕ್ಕಾಗಿ ಈ ರೆಕ್ಕೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಜಾಗರೂಕತೆಯಿಂದ ತಯಾರಿಸ್ತಾರೆ..

ಸೋಲಾರ್​ ವಿಮಾನದ ಜೀವಾನೇ ಈ ರೆಕ್ಕೆಗಳು.. ಈ ಸೌರ ಕೋಶಗಳೇ, ಸೂರ್ಯನ ಶಕ್ತಿಯನ್ನು ಹೀರಿಕೊಂಡು, ವಿಮಾನದ ಇಂಜಿನ್​ಗೆ ಅದನ್ನ ರವಾನೆ ಮಾಡುತ್ತೆ.. ಆ ಸೌರ ಶಕ್ತಿಯಿಂದಾನೇ, ಈ ವಿಮಾನ ಆಕಾಶದೆತ್ತರಕ್ಕೆ ನಿರಾತಂಕವಾಗಿ ಹಾರುತ್ತೆ.. ಆಧುನಿಕ ತಂತ್ರಜ್ಞಾನದ ಇಂಜಿನ್​​, ಸೌರಶಕ್ತಿಯನ್ನು ಹೀರುವ ರೆಕ್ಕೆಗಳನ್ನು ಹೊತ್ತುಕೊಂಡ ವಿಮಾನ ಹಾರಾಟಕ್ಕೆ ಸಿದ್ಧವಾಗಿ ನಿಲ್ಲುತ್ತೆ.. 2003 ರಲ್ಲಿ ಮೊದಲ ಸೌರ ವಿಮಾವನ್ನು ತಯಾರಿಸಲು ಮುಂದಾದ ಬೆರ್​​ಟ್ರಾಂಡ್​​ ಪಿಕ್ಕಾರ್ಡ್‌ ಮತ್ತು ಌಂಡ್ರೆ ಬೋರ್ಶ್‌ಬಗ್‌ ತಂಡ, 2009 ರಲ್ಲಿ ಮೊದಲ ಬಾರಿಗೆ ಸ್ವಿಟ್ಜರ್​ ಲ್ಯಾಂಡ್​ನಲ್ಲಿ 26 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ನಡೆಸುತ್ತೆ.. ಇದಾದ ನಂತರ ಸ್ವಲ್ಪ ಸುಧಾರಣೆ ತಂದು, ‘ಸೋಲಾರ್​ ಇಂಪಲ್ಸ್​​-2’ ವಿಮಾನವನ್ನು ಯಶಸ್ವಿಯಾಗಿ ತಯಾರಿಸಿದ್ದಾರೆ. ಈಗ ಆ ವಿಮಾನ ಜಗತ್ತಿನಾದ್ಯಂತ ಹಾರಾಡಿ, ಜಗತ್ತಿನ ಜನರನ್ನ ನಿಬ್ಬೆರಗಾಗುವಂತೆ ಮಾಡ್ತಿದೆ.

ಇವತ್ತು ಮಧ್ಯರಾತ್ರಿ ಭಾರತಕ್ಕೆ ಬಂದಿಳೀತಿರೋ ಈ ಸೋಲಾರ್​ ವಿಮಾನದ ತೂಕ ಎಷ್ಟಿದೆ ಗೊತ್ತಾ..? ಅದನ್ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರ.. ಇನ್ನು ಆ ವಿಮಾನದ ರೆಕ್ಕೆಗಳ ಬಗ್ಗೆ ಕೇಳಿದ್ರೆ, ಅಬ್ಬಬ್ಬಾ ಅಂತೀರ.. ಸೋಲಾರ್​ ವಿಮಾನದ ಹಿಂದಿನ ರೋಚಕ ಕಥೆ ಮುಂದಿದೆ ಓದಿ..
-----------------------------------------
ಈ ಸೋಲಾರ್​ ವಿಮಾನದ ಬಗ್ಗೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರ.. ಯಾಕಂದ್ರೆ, ಆ ಕಥೇನೇ ರೋಚಕವಾಗಿದೆ. ಇಂಧನ ಇಲ್ಲದೇನೇ ಆಕಾಶದಲ್ಲಿ ಹಾರಾಟ ನಡೆಸುತ್ತೆ.. ಅದೂ ಹಗಲಲ್ಲಿ ಮಾತ್ರ ಅಲ್ಲ.. ರಾತ್ರಿ ಟೈಮಲ್ಲೂ ಈ ವಿಮಾನ ನಿರಾತಂಕವಾಗಿ, ಆಕಾಶದಲ್ಲಿ ಹಾರಾಡುತ್ತೆ..

ಸೋಲಾರ್​ ಶಕ್ತಿಯನ್ನು ಬಳಸಿಕೊಂಡು ಹಾರಾಡ್ತಿರೋ ಈ ವಿಮಾನ ಜಗತ್ತಿನಾದ್ಯಂತ ಸದ್ದು ಮಾಡ್ತಿದೆ. ಇಂಧನದ ಕೊರತೆ ಎದುರಿಸ್ತಿರೋ ಆಧುನಿಕ ಜಗತ್ತಿನಲ್ಲಿ, ಇಂಥಾ ಸೋಲಾರ್​ ವಿಮಾನ ಒಂದು ವಿಶಿಷ್ಟ ಮೈಲುಗಲ್ಲಾಗಿ ಪರಿಣಮಿಸಿದೆ. ಈ ಸೋಲಾರ್ ಇಂಪಲ್ಸ್​-2 ವಿಮಾನದ ರೆಕ್ಕೆಗಳು ಬೃಹದಾಕಾರವಾಗಿದೆ ಕಣ್ರಿ.. ಒಂದಲ್ಲ ಎರಡಲ್ಲ ಇದರ ರೆಕ್ಕೆಗಳು ಬರೋಬ್ಬರಿ 72 ಮೀಟರ್​ ಉದ್ದವಾಗಿದೆ.. ಅಂದ್ರೆ, ಸಾಮಾನ್ಯ ಬೋಯಿಂಗ್ ವಿಮಾನದ ರೆಕ್ಕೆಗಿಂತ ದೊಡ್ಡದಾಗಿದೆ. ಇನ್ನು ಈ ವಿಮಾನದ ತೂಕ 2.3 ಟನ್ ಅಷ್ಟೇ ಕಣ್ರಿ.. ಅಂದ್ರೆ, ಒಂದು ಕಾರಿನ ತೂಕಕ್ಕೆ ಸಮನಾಗಿದೆ ಈ ಸೋಲಾರ್ ವಿಮಾನ.. ಬೇರೆ ವಿಮಾನಗಳಿಗಿಂತ ತುಂಬಾನೇ ಕಡಿಮೆ ತೂಕ ಹೊಂದಿದೆ..

ಇನ್ನು 72 ಮೀಟರ್​ ಉದ್ದವಿರುವ ಈ ರೆಕ್ಕೆಗಳು ಸಂಪೂರ್ಣವಾಗಿ ಸೌರ ಕೋಶಗಳಿಂದ ನಿರ್ಮಾಣ ಮಾಡಲಾಗಿದೆ. ಸುಮಾರು 17248 ಸೌರ ಕೋಶಗಳನ್ನು ಈ ರೆಕ್ಕೆಗಳಲ್ಲಿ ಅಳವಡಿಸಲಾಗಿದೆ. ಈ ಸೌರ ಕೋಶಗಳು ಸೂರ್ಯನ ಶಾಖವನ್ನು ಹೀರಿ, ಹಿಡಿದಿಟ್ಟುಕೊಂಡು, ಇಂಜಿನ್​ಗೆ ಶಕ್ತಿ ನೀಡುತ್ತದೆ. ಇನ್ನು ಹಿಂಭಾಗದಲ್ಲಿರುವ ರೆಕ್ಕೆ ಕೂಡ ಸೌರ ಕೋಶಗಳಿಂದ ಕೂಡಿದ್ದು, ಸೌರ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತೆ..

ಇನ್ನು ಇದ್ರ ಮಧ್ಯಭಾಗ ಫೈಬರ್​ನಿಂದ ಕೂಡಿದೆ. ಪೈಲಟ್ ಕೂತ್ಕೊಳ್ಳೋದ್ರ ಹಿಂಭಾಗದಲ್ಲಿ 6 ಆಕ್ಸಿಜನ್ ಸಿಲಿಂಡರ್​​ಗಳಿರುತ್ತೆ. ಇದು ಪೈಲಟ್​ನ ಉಸಿರಾಟಕ್ಕೆ ಸಹಾಯಕವಾಗುತ್ತೆ. ಇದ್ರಲ್ಲಿ ಇಬ್ಬರು ಪೈಲಟ್​ಗಳು ಕೂತ್ಕೊಳ್ಳೋಕೆ ಅವಕಾಸ ಕಲ್ಪಿಸಲಾಗಿದೆ. ಒಬ್ಬರು ಕೂತ್ಕೊಂಡು ವಿಮಾನ ಓಡಿಸ್ತಿದ್ರೆ, ಮತ್ತೊಬ್ಬ ಪೈಲೆಟ್​ ಹಿಂದೆ ನಿದ್ದೆ ಮಾಡ್ತಿರ್ತಾನೆ.. ಅದಕ್ಕಾಗಿ ಹಿಂಭಾಗದಲ್ಲಿ ಜಾಗ ಕಲ್ಪಿಸಲಾಗಿದೆ. ಏನಾದ್ರೂ ಎಮರ್ಜನ್ಸಿ ಇದ್ರೆ, ಮಲಗಿದ್ದ ಪೈಲಟ್​ನನ್ನ ಎಚ್ಚರಿಸೋದಕ್ಕೆ, ಆತನ ಕೈನಲ್ಲಿ ಒಂದು ರಿಸ್ಟ್ ವಾಚ್ ಇರುತ್ತೆ.. ಇನ್ನು ಸೀಟಿನ ಹಿಂಭಾಗದಲ್ಲಿ ಲಗೇಜ್​ ಬ್ಯಾಗ್​ಗಳನ್ನು ಇಡೋದಕ್ಕೆ ಜಾಗ ಇದೆ..


ಇನ್ನು ಈ ಸೋಲಾರ್​ ವಿಮಾನ ಹಗಲು ಹೊತ್ತಲ್ಲಿ, ಸೂರ್ಯನ ಬಿಸಿಲಿನಿಂದಾಗಿ, ಗರಿಷ್ಠ 140 ಕಿಮೀ ವೇಗದಲ್ಲಿ ಮುನ್ನುಗುತ್ತೆ.. ಆದ್ರೆ ರಾತ್ರಿ ಸಮಯದಲ್ಲಿ ಸೂರ್ಯನ ಬೆಳಕು ಇರೋದಿಲ್ಲ.. ಆದ್ರೂ, ಹಗಲಲ್ಲಿ ಶೇಖರಿಸಿಕೊಂಡಿರೋ ಸೂರ್ಯನ ಬೆಳಕನ್ನೇ ಬಳಸಿಕೊಂಡು, 35 ಕಿಮಿ ವೇಗದಲ್ಲಿ ಹಾರುತ್ತೆ.. ಒಟ್ಟಾರೆ ಈ ವಿಮಾನದ ಸರಾಸರಿ ವೇಗ 70 ಕಿಮೀ. ಇನ್ನು ಈ ವಿಮಾನಕ್ಕೆ ಒಟ್ಟು ನಾಲ್ಕು ಚಕ್ರಗಳಿವೆ.. ಮುಂದೆ ಒಂದು ಚಕ್ರವದ್ದು, ಅದಕ್ಕೆ ಆಧಾರ ಅನ್ನುವಂತೆ ಮತ್ತೆರಡು ಚಕ್ರಗಳು ಅದರ ಪಕ್ಕದಲ್ಲೇ ಇವೆ.. ಇದ್ರ ಜೊತೆಗೆ, ಹಿಂಬದಿಯಲ್ಲಿರೋ ಅಡ್ಡ ರೆಕ್ಕೆಯ ಕೆಳಭಾಗದಲ್ಲಿ ಒಂದು ಚಕ್ರವಿದೆ.

ಇನ್ನು ಈ ವಿಮಾನಕ್ಕೆ, ಒಟ್ಟು ನಾಲ್ಕು ಫ್ಯಾನ್​ಗಳಿವೆ.. ಅದ್ರ ಹಿಂಭಾಗದಲ್ಲಿ ಎಲೆಕ್ಟ್ರಿಕ್​ ಇಂಜಿನ್​​ ಅನ್ನ ಅಳವಡಿಸಲಾಗಿದೆ. ನಾಲ್ಕು ಮೀಟರ್​​ ಉದ್ದವಾಗಿರೋ ಫ್ಯಾನ್​ ರೆಕ್ಕೆಗಳು ತಿರುಗಿದಾಗ, ಈ ಸೌರ ವಿಮಾನದ ಹಾರಾಟಕ್ಕೆ ಬೇಕಾದ ಶಕ್ತಿ ಉತ್ಪಾದನೆಯಾಗುತ್ತೆ. ಒಂದಲ್ಲ ಎರಡಲ್ಲ.. ಸಾಕಷ್ಟು ವೈಶಿಷ್ಟ್ಯತೆಗಳಿಂದ ಕೂಡಿದೆ ಈ ಸೋಲಾರ್ ವಿಮಾನ.. ಇಷ್ಟೋಂದು ವಿಭಿನ್ನವಾದ ಈ ವಿಮಾವನ್ನು ತಯಾರಿಸೋ ಮೂಲಕ, ಜಗತ್ತಿನಲ್ಲೇ ಸುದ್ದಿ ಮಾಡಿದ್ದಾರೆ ಈ ವಿಜ್ಞಾನಿಗಳು..

ವಿಭಿನ್ನವಾಗಿ ಯೋಚಿಸೋರನ್ನ ಹುಚ್ಚ ಅಂತಾರೆ.. ಆ ಆಲೋಚನೆ ವೈಜ್ಞಾನಿಕವಾಗಿ ಸಫಲವಾದ್ರೆ, ಅವನನ್ನೇ ವಿಜ್ಞಾನಿ ಅಂತಾರೆ.. ಇದು ಈ ಇಬ್ಬರು ವಿಜ್ಞಾನಿಗಳ ಬದುಕಲ್ಲೂ ನಿಜ ಆಗಿದೆ ಕಣ್ರಿ.. ಮೊದಲಿಗೆ ಇಂಧನ ಇಲ್ದೇ ಹಾರಾಡೋ ವಿಮಾನ ಕಂಡ್ ಹಿಡೀತೀವಿ ಅಂತ ಅಂದಾಗ, ಜನ್ರು ಇವ್ರನ್ನ ಹುಚ್ಚ ಅಂದುಕೊಂಡಿದ್ರಂತೆ.. ಆದ್ರೆ ಈಗ ತಮ್ಮ ಸಾಧನೆ ಏನು ಅನ್ನೋದನ್ನ, ಇಡೀ ಜಗತ್ತಿಗೆ ತೋರಿಸಿದ್ದಾರೆ.

ಸಂಶೋಧಕ ಆಂಡ್ರೆ ಬೋರ್ಶ್‌ಬಗ್‌ ಹೇಳಿದ್ದೇನು?
------------------------------------
ಡಿಯರ್ ಫ್ರೆಂಡ್ಸ್​.. ವೆಲ್​ಕಂ.. ನಾನು ಪ್ರತಿಯೊಂದು ಬಾರಿ ಈ ವಿಮಾ ನೋಡಿದಾಗೆಲ್ಲಾ, ನನಗೆ ನನ್ನ ಬಾಲ್ಯದ ನೆನಪಾಗುತ್ತೆ. ನಿಮಗೂ ಆಗುತ್ತೆ ಅಂತ ಭಾವಿಸ್ತೀನಿ. ಇದೊಂಥರ ಡಿಸ್ನಿಯಲ್ಲಿ ಬರೋ ಅನಿಮೇಷನ್ ಕಾರ್ಟೂನ್ ಥರ ಇದೆ. ಆನೆಮರಿ ಮೊದಲು ಜನ್ಮತಾಳಿದಾಗ, ಜನರು ಅದನ್ನ ನೋಡಿ ಅಪಹಾಸ್ಯ ಮಾಡ್ತಾರೆ. ಆದ್ರೆ ಅದು ದೊಡ್ಡದಾಗಿ ಬೆಳೆದು ನಿಂತಾಗ, ಅದರ ಸಾಮರ್ಥ್ಯ ಗೊತ್ತಾಗುತ್ತೆ


ಯಸ್.. ನಿಜ.. ಇವ್ರು ಸಂಶೋಧನೆಗೆ ನಿಂತಾಗ ಬಹಳಷ್ಟು ಜನ್ರು ಇವ್ರನ್ನ ಅಪಹಾಸ್ಯ ಮಾಡಿದ್ರು.. ಇವ್ರಿಂದ ಏನ್ ಸಾಧ್ಯವಾಗುತ್ತೆ ಬಿಡ್ರಿ ಅಂತ ಇವ್ರನ್ನ ಕಡೆಗಣಿಸಿದ್ರು.. ಆದ್ರೆ ಆ ಎಲ್ಲಾ ಅವಮಾನಗಳನ್ನು ಮೆಟ್ಟಿನಿಂತು ತಮ್ಮ ಸಾಮರ್ಥ್ಯ ಎನು ಅಂತ ತೋರಿಸಿಕೊಟ್ಟಿದ್ದಾರೆ. ಆವತ್ತು ಅಪಹಾಸ್ಯ ಮಾಡಿದ್ದ ಜನ್ರೇ ಇವತ್ತು ಇವ್ರನ್ನು ಮಹಾನ್ ವಿಜ್ಞಾನಿಗಳು ಅಂತ ಜೈಕಾರ ಹಾಕ್ತಿದ್ದಾರೆ. ಇವ್ರ ಸಾಧನೆಯನ್ನ ಮೆಚ್ಚಿ ಕೊಂಡಾಡ್ತಿದ್ದಾರೆ.. ಇದಕ್ಕೆ ಕಾರಣ ಇವರ ಶ್ರಮದ ಫಲವಾಗಿ ಜನ್ಮತಾಳಿದ, ಇಂಧನ ರಹಿತ ಸೋಲಾರ್​ ವಿಮಾನ..

ಅಪಹಾಸ್ಯ ಮಾಡಿದವರ ಎದುರಲ್ಲೇ, ಜಗತ್ತೇ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ ಈ ವಿಜ್ಞಾನಿಗಳು.. ಇವರ ಕನಸಿನ ಕೂಸು ಭಾರತದಲ್ಲೂ ಹಾರಾಟ ನಡೆಸಿದೆ. ಮುಂದೆ ಓದಿ ಆ ವಿಷ್ಯ
--------------------------------
ಈ ಸೋಲಾರ್​ ವಿಮಾನ ಈಗ ಜಗತ್ತಿನ ಜನರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಶಿಂಡ್ಲರ್​​ ಗ್ರೂಪ್​ ನಿರ್ಮಿಸಿದ ಜಗದ್ವಿಖ್ಯಾತ ವಿಮಾನ ಇದು.. ಬೆರ್​​ಟ್ರಾಂಡ್​​ ಪಿಕ್ಕಾರ್ಡ್‌ ಮತ್ತು ಌಂಡ್ರೆ ಬೋರ್ಶ್‌ಬಗ್‌ ತಂಡ 2003 ರಿಂದ ಸುರಿಸಿದ ಬೆವರಿನ ಫಲ ಕಣ್ರಿ ಈ ವಿಮಾನ.. ಇಂಧನದ ಕೊರತೆ ಎದುರಿಸ್ತಿರೋ ಜಗತ್ತಿನಲ್ಲಿ, ಈ ವಿಮಾನ ಒಂದು ಅದ್ಭುತ ಸಂಶೋಧನೆಯಾಗಿದೆ. ವೈಮಾನಿಕ ಲೋಕದಲ್ಲಿ ಇದೊಂದು, ಮೈಲುಗಲ್ಲಾಗಿದೆ.

ಹೀಗೆ ಸೌರಶಕ್ತಿಯನ್ನು ಬಳಸಿಕೊಂಡು ಹಾರಾಡೋ ಈ ವಿಮಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸೋ ಉದ್ದೇಶ ಈ ವಿಜ್ಞಾನಿಗಳದ್ದು.. ಹೀಗಾಗಿ ಈಗ ವಿಶ್ವ ಪರ್ಯಟೆನೆಗೆ ಮುಂದಾಗಿದ್ದಾರೆ.. ಅದೂ ತಾವು ತಯಾರಿಸಿರೋ ಈ ಸೋಲಾರ್​ ವಿಮಾನದಲ್ಲೇ.. ರಾತ್ರಿ ಹೊತ್ತಲ್ಲಿ, ಆಕಾಶದಲ್ಲಿ ನಕ್ಷತ್ರದಂತೆ ಮಿನುಗೋ ಈ ವಿಮಾನದಲ್ಲಿ, ರಾತ್ರಿಯಲ್ಲೂ ಹಾರುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.. ಸೂಕ್ಷ್ಮ ಲೈಟ್​ಗಳ ವ್ಯವಸ್ಥೆ ಇರೋ ಈ ವಿಮಾನ ಸತತ ಐದು ದಿನಗಳ ಕಾಲ ನಿರಂತರವಾಗಿ ಹಾರಾಡುತ್ತೆ... ಹೀಗಾಗಿ ತಾವು ತಯಾರಿಸಿರೋ ಇದೇ ವಿಮಾನವನ್ನ ಹತ್ತಿ, ಜಗತ್ತನ್ನ ಸುತ್ತಲು ರೆಡಿಯಾಗೇಬಿಟ್ಟಿದ್ದಾರೆ.

ವಿಜ್ಞಾನ ಲೋಕದ ಈ ಆವಿಷ್ಕಾರದ ಬಗ್ಗೆ ಜಗತ್ತಿನ ಜನರಲ್ಲಿ ಅರಿವು ಮೂಡಿಸಬೇಕು.. ಅದ್ರಲ್ಲೂ ಇಂಧನದ ಕೊರತೆ ಇರೋ ಜಾಗತಿಕ ಪರಿಸ್ಥಿತಿಯಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಜನ್ಮತಾಳಿದ ಈ ವಿಮಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಅನ್ನೋದು ಇವ್ರ ಆಸೆ..  ಆರಂಭದಲ್ಲಿ ನಾವು ಇಂಥದ್ದೊಂದು ವಿನೂತನ ಸಂಶೋಧನೆಗೆ ಕೈ ಹಾಕಿದ್ದೀವಿ ಅಂದಾಗ ಯಾರೂ ಇವ್ರ ಸಹಕಾರಕ್ಕೆ ಬರಲೇ ಇಲ್ಲ.. ಎಷ್ಟೋ ಪ್ರಯತ್ನಗಳ ಫಲವಾಗಿ ಇದೀಗ ಕೆಲವು ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ಸೋಲಾರ್ ವಿಮಾನ ತಯಾರಾಗಿದೆ.

ಆದ್ರೆ ಇಂಥ ಸೋಲಾರ್​ ವಿಮಾನಗಳು ಜನರ ಓಡಾಟಕ್ಕೆ ಅನುಕೂಲವಾಗುವಂತೆ ಮಾಡ್ಬೇಕು.. ಆದ್ರೆ ಅಷ್ಟೋಂದು ವಿಮಾನಗಳ ತಯಾರಿಕೆ ಸುಲಭದ ಮಾತಲ್ಲ.. ಹೀಗಾಗಿ ಜಗತ್ತಿನಾದ್ಯಂತ ಇರೋ ಎಲ್ಲಾ ದೇಶಗಳ ಸಹಾಯ ಬೇಡೋ ಉದ್ದೇಶ ಕೂಡ ಇವ್ರಲ್ಲಿದೆ. ಅರಬ್​ ಸಂಯುಕ್ತ ಸಂಸ್ಥಾನದ ಅಬುದಾಬಿಯಲ್ಲಿ ತಮ್ಮ ವಿಮಾನ ಹತ್ತಿ  ಹೊರಟಿದ್ದಾರೆ.

ಮಾರ್ಚ್​ 9, 2015 ನೇ ತಾರೀಕು ಬೆಳಿಗ್ಗೆ 3 ಗಂಟೆಗೆ ಅಬುದಾಬಿಯಿಂದ ಹೊರಟ ಈ ವಿಮಾನ, 733 ಕಿಮೀ ದೂರದಲ್ಲಿರೋ ಒಮನ್ ಪ್ರದೇಶದ ಮಸ್ಕಟ್​​ ಅನ್ನ ಕೇವಲ 13 ಗಂಟೆಗಳಲ್ಲಿ ತಲುಪಿದೆ. ಮಸ್ಕಟ್​ಗೆ ಬಂದಿಳಿದ ಈ ವೈಮಾನಿಕ ಸಾಧಕರಿಗೆ ಭರಪೂರ ಸ್ವಾಗತ ಕೋರಿದ್ರು ಅಲ್ಲಿನ ವಿಜ್ಞಾನಿಗಳು.. ಇನ್ನು ಮಸ್ಕಟ್​ನಿಂದ ಹೊರಟು ನಿನ್ನೆನೇ ಭಾರತದ ಅಹಮದಾಬಾದ್​ಗೆ ಬಂದಿಳೀಬೇಕಿತ್ತು.. ಆದ್ರೆ ಮಸ್ಕಟ್​​ನಲ್ಲಿ ಹವಾಮಾನ ವೈಪರಿತ್ಯದಿಂದಾಗಿ, ವಿಮಾನ ಹೊರಡೋದು ತಡವಾಯ್ತು.. ನಂತರ ಮಸ್ಕಟ್​​ನಿಂದ ಭಾರತಕ್ಕೆ ಬಂದಿಳೀತು..

ಇನ್ನು ಭಾರತದಲ್ಲಿ ಎರಡು ದಿನಗಳ ಕಾಲ ನೆಲೆಸಿದ ಈ ವಿಮಾನದ ನಿರ್ಮಾತೃಗಳು.. ನಂತರ ಇಲ್ಲಿನ ಎನ್​ಜಿಓ ಮತ್ತು ಬಿಸಿನೆಸ್​ ಮ್ಯಾನ್​ಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದ್ರು, ನಂತರ ಅಹಮದಾಬಾದ್​ನಿಂದ ಗಂಗಾನದಿಯ ಮಾರ್ಗವಾಗಿ ವಾರಣಾಸಿ ತಲುಪಿದ್ರು..

ಗಂಗಾನದಿಯ ಮೇಲೆ ಈ ವಿಮಾನ ಹಾರಾಟ ಮಾಡೋ ಮೂಲಕ, ಗಂಗಾಮಾತೆಯ ದರ್ಶನ ಪಡೆಯೋದು, ಈ ವಿಜ್ಞಾನಿಗಳ ಆಶಯವಾಗಿತ್ತು. ವಾರಣಾಸಿಯಿಂದ ಮಯನ್ಮಾರ್​ ತಲುಪಿತು. ಅಲ್ಲಿಂದ ಚೀನಾದ ಚಾಂಗ್​ಕಿಂಗ್​​ಗೆ ತೆರಳಿತು.. ನಂತರ ಚೀನಾದ ನಾಂಜಿಂಗ್ ಪ್ರದೇಕ್ಕೆ ತೆರಳಿ, ಫ್ಯಾಸಿಫಿಕ್ ಸಾಗರದ ಮಾರ್ಗವಾಗಿ ಹವಾಯಿ ದ್ವೀಪವನ್ನು ತಲುಪಿತು ಎಂದು ತಿಳಿದು ಬಂದಿದೆ.

ನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಫಿಯೋನಿಕ್ಸ್, ನ್ಯೂಯಾರ್ಕ್​ ಮಾರ್ಗವಾಗಿ ಅಟ್ಲಾಂಟಿಕ್ ಸಾಗರವನ್ನು ದಾಟಿ ಯೂರೋಪ್​ ಮತ್ತು ಆಫ್ರಿಕಾ ಖಂಡವನ್ನ ತಲುಪಲಿದೆ. ನಂತರ ಅಲ್ಲಿಂದ ಅಬುದಾಬಿಗೆ ವಾಪಸ್ಸಾಗಲಿದೆ.

ಹೀಗೆ ಅರಬ್​ನ ಅಬುದಾಬಿಯಿಂದ ಹೊರಟ ಈ ಸೌರ ವಿಮಾನ, ಒಟ್ಟು 35 ಸಾವಿರ ಕಿಮೀ ಪ್ರಯಾಣ ಮಾಡಿ ಮತ್ತೆ ಅಬುದಾಬಿಯನ್ನು ತಲುಪುತ್ತೆ.. ಬರೀ ವಿಶ್ವ ಸುತ್ತೋದು ಮಾತ್ರ ಇವ್ರ ಉದ್ದೇಶವಾಗಿದ್ದಿದ್ರೆ, 25 ದಿನಗಳಲ್ಲಿ ಜಗತ್ತನ್ನು ಸುತ್ತಿ ಬರ್ತಿತ್ತು.. ಆದ್ರೆ ಅಲ್ಲಿನ ಜನ್ರಿಗೆ ಈ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸೋ ಉದ್ದೇಶ ಇವ್ರದ್ದು.. ಹೀಗಾಗಿ ಜಗತ್ತಿನ ಜನರಲ್ಲಿ ಜಾಗೃತಿ ಮೂಡಿಸ್ತಾ, ಜಗತ್ತನ್ನು ಒಂದು ರೌಂಡ್ ಹಾಕಬೇಕು ಅಂದ್ರೆ, ಇವ್ರಿಗೆ 5 ತಿಂಗಳುಗಳೇ ಬೇಕಾಗುತ್ತೆ ಅಂತ ಅಂದಾಜಿಸಲಾಗಿದೆ.

ಸಂಶೋಧಕ ಬೆರ್​​ಟ್ರಾಂಡ್​​ ಪಿಕ್ಕಾರ್ಡ್‌ ಹೇಳಿದ್ದೇನು?
-------------------------------------------
10 ವರ್ಷಗಳ ಹಿಂದೆ ಈ ಪ್ರಾಜೆಕ್ಟ್ ಶುರು ಮಾಡುವ ಮೊದಲು, ಈ ಬಗ್ಗೆ ಹಲವರ ಮುಂದೆ ಪ್ರಪೋಸಲ್ ಇಟ್ಟಿದ್ದೆವು. ಇದನ್ನು ಕೇಳಿದ ತಕ್ಷಣವೇ ಅವ್ರಿಂದ ತಕ್ಷಣ ಪ್ರತಿಕ್ರಿಯೆ ಬಂತು.. ಅವರು ಹೇಳಿದ್ರು ಇದು ಅಸಾಧ್ಯವಾದದ್ದು ಅಂತ


ಯಸ್.. ಈ ಪ್ರಾಜೆಕ್ಟ್ ಶುರುವಾಗೋದಕ್ಕೆ ಮೊದಲು ಇವ್ರು ಯಾರನ್ನು ಭೇಟಿ ಮಾಡಿ ಇದ್ರ ಬಗ್ಗೆ ಪ್ರಪೋಸಲ್ ಇಟ್ರೂ, ಅವ್ರೆಲ್ಲಾ ಹೇಳಿದ್ದು ಒಂದೆ.. ಇದು ಸಾಧ್ಯ ಇಲ್ಲ.. ಈ ಪ್ರಾಜೆಕ್ಟ್​ ವರ್ಕೌಟ್​ ಆಗೋದೇ ಇಲ್ಲ ಅಂತ.. ಆದ್ರೆ ಆಗಲ್ಲ ಅಂದವರ ಮುಂದೇನೇ ಆಗುತ್ತೆ ಅಂತ ಸಾಧಿಸಿ ತೋರಿಸಿದ್ದಾರೆ ಈ ಛಲವಾದಿಗಳು.. ಆ ಮೂಲಕ ಅಸಾಧ್ಯವಾದದ್ದು ಏನೂ ಇಲ್ಲ ಅನ್ನೋದನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ. ಸಾಧಿಸೋ ಛಲವಿರೋ ಯುವ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ ಸಾಧನೆಯಿಂದ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.. ಮುಂದಿನ ದಿನಗಳಲ್ಲಿ ಜನ್ರು ಕಾರ್​ನಲ್ಲಿ ಓಡಾಡೋ ಬದಲು, ಖರ್ಚೇ ಇಲ್ಲದಂತೆ ಈ ಸೋಲಾರ್ ವಿಮಾನದಲ್ಲಿ ಓಡಾಡೋಹಾಗೇ ಆದ್ರೂ ಅಚ್ಚರಿ ಇಲ್ಲಾ..

ಇವ್ರಿಂದ ಏನ್ ಮಾಡೋಕೆ ಆಗುತ್ತೆ ಬಿಡ್ರಿ ಅಂತ ಅಂದವರಿಗೆ, ತಮ್ಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಈ ವಿಜ್ಞಾನಿಗಳು.. ಇವ್ರ ಸಾಧನೆ, ಆಧುನಿಕ ಯುಗದಲ್ಲಿ ಒಂದು ಕ್ರಾಂತಿಯಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಸೋಲಾರ್ ವಿಮಾನದ ಹಾರಾಟ, ಭಾರತ ಸೇರಿದಂತೆ ಜಗತ್ತಿನ ದೇಶಗಳಲ್ಲಿ ಶುರುವಾಗಲಿದೆ ಅಂತ, ಅಂತಾರಾಷ್ಟ್ರೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ನಿಜಕ್ಕೂ ಈ ಸಾಧಕರಿಗೆ ಸಲಾಂ ಹೇಳಲೇ ಬೇಕು

Отправить комментарий

0 Комментарии