Hot Posts

10/recent/ticker-posts

ಮತ್ತೆ ಭಾರತದ ಸಂಸತ್ ಮೇಲೆ ದಾಳಿಗೆ ಉಗ್ರರ ಸಂಚು?











ಆಫ್ಘಾನಿಸ್ತಾನದಲ್ಲಿ ಉಗ್ರರು ರಕ್ತದೋಕುಳಿಯಾಡಿದ್ದಾರೆ. ಸಂಸತ್ತಿನ ಮೇಲೆ
ದಾಳಿ ಮಾಡಿ ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದಾರೆ ತಾಲಿಬಾನಿಗಳು.. ಆದ್ರೀಗ
ಅವ್ರ ಕಣ್ಣು ಭಾರತದ
ಮೇಲೆ ಬಿದ್ದಿದೆ.. ಭಾರತವನ್ನ ಟಾರ್ಗೆಟ್ ಮಾಡಿರೋ
ಉಗ್ರರು ಈಗಾಗಲೇ ಭಾರತದತ್ತ ನುಗ್ಗಿ ಬರ್ತಿದ್ದಾರೆ.
ಹಾಗಿದ್ರೆ ಭಾರತದಲ್ಲಿ ಇಂಥದ್ದೇ ದಾಳಿ ನಡೆಯುತ್ತಾ?
ಆಫ್ಘಾನ್ ದಾಳಿಯಂತೆ ಭಾರತದ
ಮೇಲೆ ದಾಳಿ ಮಾಡ್ತಾರಾ ಉಗ್ರರು? ಎಂಬ ಅನುಮಾನಗಳು ಈಗ ಗರಿಗೆದರಿವೆ





ಆಫ್ಘಾನಿಸ್ತಾನ ಬೆಚ್ಚಿ ಬಿದ್ದಿದೆ..
ಬರೀ ಜನರು ಮಾತ್ರವಲ್ಲ..
ಆಫ್ಘಾನಿಸ್ತಾನವನ್ನ ಆಳೋಕೆ
ನಿಂತ ಜನಪ್ರತಿನಿಧಿಗಳು ಕೂಡ
ಬೆಚ್ಚಿ ಬಿದ್ದಿದ್ದಾರೆ.. ಸೋಮವಾರ
ನಡೆದ ಘಟನೆ, ಆಫ್ಘಾನಿಸ್ತಾನದ ಜನರನ್ನ ಜೀವ
ಭಯದಲ್ಲಿ ಬದುಕುವಂತೆ ಮಾಡಿದೆ.
ಘಟನೆ ಬೇರೆ
ಯಾವುದು ಅಲ್ಲ.. ಆಫ್ಘಾನ್​​
ಸಂಸತ್ತಿನ ಮೇಲೆ ಉಗ್ರರು
ನಡೆಸಿದ ದಾಳಿ..




ಯಸ್.. ಹೊಗೆಯಲ್ಲಿ ಮುಚ್ಚಿಕೊಂಡಿರೋ ಜನರನ್ನು ನೋಡಿ.. ಇದ್ಯಾವುದೋ ಬೆರೆ ಜಾಗ
ಅಂತ ಅಂದುಕೋಬೇಡಿ.. ಇದು
ಆಫ್ಘಾನಿಸ್ತಾನದಲ್ಲಿರೋ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ..
ಕಾಬೂಲ್ನಲ್ಲಿರೋ ಆಫ್ಘಾನಿಸ್ತಾನದ ಸಂಸತ್ತು..!





ಸೋಮವಾರ ಬೆಳಗ್ಗೆ 10.30 ಕ್ಕೆ
ಉಗ್ರರು ಅಟ್ಟಹಾಸಗೈದಿದ್ದಾರೆ. ಸಂಸತ್ತಿನ ಮೇಲೆ ದಾಳಿ
ನಡೆಸಬೇಕು ಅಂತ ಮೊದಲೇ
ಸಜ್ಜಾಗಿ ಬಂದ ಉಗ್ರರು,
ಬಾಂಬ್ಗಳು ಮತ್ತು
ಮದ್ದುಗುಂಡುಗಳೊಂದಿಗೆ ಸಂಸತ್ತಿಗತ್ತ ನುಗ್ಗಿ ಬರ್ತಾರೆ.
ಸಂಸತ್ತಿನ ಒಳಗೆ ನುಗ್ಗೋದಕ್ಕೂ ಮೊದಲು,. ಸಂಸತ್ತಿನ ಹೊರಗೆ ಕಾರ್​​
ಬ್ಲಾಸ್ಮಾಡ್ತಾರೆ.





ಸಂಸತ್ತಿನ ಹೊರಗೆ ಕಾರ್
ಬ್ಲಾಸ್ಟ್ ಆದ ತೀವ್ರತೆಗೆ,
ಸುತ್ತಮುತ್ತಲಿನ ಭೂಮಿ
ಕಂಪಿಸಿತ್ತು. ಸಂಸತ್ತಿನ ಒಳಗೆ
ಹೊಗೆ ಆವರಿಸಿತ್ತು.





ಹೊರಗೆ ಕಾರ್ ಬ್ಲಾಸ್ಟ್ ಆಗುತ್ತಿದ್ದಂತೆ ಸಂಸತ್ತಿನ ಒಳಗೆ ನುಗ್ಗಲು ಉಗ್ರರು ಪ್ರಯತ್ನಿಸಿದ್ರು,.
ಆದ್ರೆ ರಕ್ಷಣಾಪಡೆಗಳು ಉಗ್ರರು
ಒಳನುಗ್ಗುವುದನ್ನ ತಡೆಯೋದ್ರಲ್ಲಿ ಯಶಸ್ವಿಯಾದ್ರು.. ಸಂಸತ್ತಿನ ಬಾಗಿಲ ಮುಂದೇನೇ ಉಗ್ರರನ್ನ ಹೊಡೆದುರುಳಿಸಿದ್ರು..





ಒಂದಲ್ಲ ಎರಡಲ್ಲ.. ಒಟ್ಟು
ಏಳು ಉಗ್ರರ ಹೆಣ
ಉರುಳಿಸಿದ್ದಾರೆ ಆಫ್ಘಾನಿಸ್ತಾನದ ರಕ್ಷಣಾಪಡೆ.





ಸೋಮವಾರ ಬೆಳಗ್ಗೆ 10.30ಕ್ಕೆ
ನಡೆದ ದಾಳಿಗೆ ಓರ್ವ
ಮಹಿಳೆ ಮತ್ತು ಮಗು ಬಲಿಯಾಗಿದೆ.
ಇನ್ನುಳಿದಂತೆ 40 ಮಂದಿ ಗಾಯಗೊಂಡಿದ್ದಾರೆ.





ಪಾರ್ಲಿಮೆಂಟ್ಗೇ ಉಗ್ರರು ನುಗ್ಗಿ
ದಾಳಿ ನಡೆಸಿರೋದು ಆಫ್ಘಾನಿಸ್ತಾನದ
ಪ್ರಜೆಗಳನ್ನ ಆತಂಕಕ್ಕೆ ನೂಡಕಿದೆ. ನಮ್ಮ ಪ್ರಾಣಕ್ಕೆ
ಯಾರು ರಕ್ಷಣೆ ನೀಡ್ತಾರೆ ಅಂತ
ಜೀವ ಭಯದಲ್ಲಿ ಬದುಕ್ತಿದ್ದಾರೆ.





ಇನ್ನು ದಾಳಿಯ ಹೊಣೆಯನ್ನ
ತಾಲೀಬಾನಿ ಸಂಘಟನೆ ಹೊತ್ತುಕೊಂಡಿದೆ. ನಾವೇ
ದಾಳಿ ನಡೆಸಿದ್ದು.. ಹೊಸ ರಕ್ಷಣಾ
ಸಚಿವರ ಆಯ್ಕೆಯನ್ನು ವಿರೋಧಿಸಿ
ದಾಳಿ ನಡೆಸಿದ್ದೇವೆ ಅಂತ
ತಾಲಿಬಾನ್​​ ಸಂಘಟನೆಯ ವಕ್ತಾರ ಜಬೀವುಲ್ಲಾ
ದೂರವಾಣಿ ಮೂಲಕ ತಿಳಿಸಿದ್ದಾನೆ





ದಾಳಿಯ ಹಿಂದೆ ಒಂದು
ದೊಡ್ಡ ಸಂಚೇ ಇದೆ.. ಇಷ್ಟು ದಿನಗಳ
ಕಾಲ ವಿಶ್ವಸಂಸ್ತೆಯ ನ್ಯಾಟೋ
ಪಡೆ ಅಫ್ಘಾನಿಸ್ತಾನದಲ್ಲಿ ನೆಲೆಯೂರಿತ್ತು..
ಉಗ್ರರನ್ನು ಧಮನ ಮಾಡಿದ ನಂತರ, ಅಫ್ಘಾನ್ನಲ್ಲಿ
ಶಾಂತಿ ನೆಲೆಸುವಂತೆ ಮಾಡಿ, ಕಳೆದ
ಡಿಸೆಂಬರ್ನಲ್ಲಿ ನ್ಯಾಟೋ ಪಡೆ ನಿರ್ಗಮಿಸಿತ್ತು.
ಆದ್ರೆ ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳುವ
ಉದ್ದೇಶದಿಂದ ತಾಲಿಬಾನ್ಉಗ್ರ ಸಂಘಟನೆ
ದಾಳಿ ನಡೆಸಿದೆ. ಯಾರು ನಮ್ಮ
ಮೇಲೆ ದಾಳಿ ನಡೆಸಿದ್ರೂ, ನಮ್ಮ ಶಕ್ತಿ
ಕುಂದೋದಿಲ್ಲ ಅಂತ ದಾಳಿ
ಮೂಲಕ ಸಾರಿ ಹೇಳಿದ್ದಾರೆ..





ಆದ್ರೆ ಆಫ್ಘಾನಿಸ್ತಾನದ ಮೇಲೆ
ನಡೆದಿರೋ ದಾಳಿಯ ಕರಿ
ನೆರಳು ಭಾರತದ ಮೇಲೂ ಬೀಳ್ತಿದೆ.
ಯಾಕೆ ಗೊತ್ತಾ? ಆಫ್ಘಾನಿಸ್ತಾನದ ಸಂಸತ್ಮೇಲೆ
ನಡೆಸಿದ ದಾಳಿ ಕೇವಲ
ತಾಲಿಬಾನಿಗಳ ಕೃತ್ಯವಲ್ಲ.. ಕೃತ್ಯದ
ಹಿಂದೆ ತಾಲೀಬಾನಿಗಳ ಜೊತೆ
ಕೈ ಜೋಡಿಸಿದ್ದು, ಆಧುನಿಕ ಜಗತ್ತಿನಲ್ಲಿ
ರಕ್ತದೋಕುಳಿಯಾಡ್ತಿರೋ ಐಸಿಸ್ಉಗ್ರರು..





ಯಸ್..
ಐಸಿಸ್ಉಗ್ರರು ತಾಲಿಬಾನಿಗಳ ಜೊತೆ
ಕೈ ಜೋಡಿಸಿ ಅಲ್ಲಿನ ಸರ್ಕಾರವನ್ನ
ಅಲುಗಾಡಿಸ್ತಾ ಇದ್ದಾರೆ. ಅದೇ ರೀತಿ
ಭಾರತದಲ್ಲೂ ದಾಳಿ ನಡೆಸಿ, ತಮ್ಮ ಸಾಮ್ರಾಜ್ಯ
ವಿಸ್ತರಿಸೋದಕ್ಕೆ ಸಂಚು ರೂಪಿಸ್ತಿದ್ದಾರೆ ಅಂತ
ಹೇಳಲಾಗ್ತಿದೆ. ಭಯಾನಕ ಸ್ಟೋರಿ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿದೆ ನೋಡಿ





ಐಸಿಸ್ಉಗ್ರರು.. ಇಡೀ ಜಗತ್ತಿಗೆ ಕಂಟಕವಾಗಿರೋ
ನರ ಹಂತಕರು.. ಅವರ ಕಣ್ಣು
ಈಗ ಭಾರತದ ಮೇಲೆ ಬಿದ್ದಿದೆ.
ಭಾರತದಲ್ಲಿ ಇಂಥದ್ದೇ ದಾಳಿ ನಡೆಸೋ
ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.





ಯಸ್..
ಐಸಿಸ್ಉಗ್ರರು.. ಆಧುನಿಕ ಜಗತ್ತಿನ ಕ್ರೂರಾತಿ
ಕ್ರೂರ ಜನಗಳು. ಇಡೀ ಜಗತ್ತನ್ನೇ
ತಮ್ಮ ಕಪಿ ಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕು ಅಂತ ಸಾಮ್ರಾಜ್ಯ ವಿಸ್ತರಣೆಯಲ್ಲಿ
ತೊಡಗಿರೋ ನರ ರಾಕ್ಷಸರು.





ಸಿಕ್ಕ ಸಿಕ್ಕವರ ಕತ್ತು ಕತ್ತರಿಸಿ,
ಅದನ್ನು ಜಗತ್ತಿನ ಜನರಿಗೆ ತೋರಿಸಿ
ವಿಕೃತ ಆನಂದ ಪಡೋ ರಾಕ್ಷಸರಿವರು..
ಇರಾಕ್ ಮತ್ತು ಸಿರಿಯಾದಲ್ಲಿ ರಕ್ತದೋಕುಳಿಯಾಡಿದ ಜನರು ಅಲ್ಲಿನ ಸರ್ಕಾರವನ್ನೇ
ಬುಡಮೇಲು ಮಾಡಿದ್ದಾರೆ. ದಿನೇ ದಿನೇ
ಸಿರಿಯಾದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆ
ಮಾಡ್ತಿರೋ ಐಸಿಸ್ ಉಗ್ರರು, ಈಗ ಉಗ್ರ
ಸಂಘಟನೆಗಳಿಗೆ ಗಾಡ್ ಫಾದರ್ ಆಗಿದೆ. ಇದೇ
ಕಾರಣಕ್ಕೆ.. ತಾಲೀಬಾನ್​, ಲಷ್ಕರ್
ತೋಯ್ಬಾ ಸೇರಿದಂತೆ ಬಹುತೇಕ ಎಲ್ಲಾ
ಉಗ್ರ ಸಂಗಟನೆಗಳು ಈಗ
ಐಸಿಸ್​​ ಬೆನ್ನಿಗೆ ನಿಂತಿವೆ.





ಯಾವ ಯಾವ ದೇಶದಲ್ಲಿ ಉಗ್ರ
ಸಂಘಟನೆಗಳು ತಮ್ಮ ವಿಧ್ವಂಸಕ ಕೃತ್ಯಗಳನ್ನು
ನಡೆಸುತ್ತೋ, ಅಂಥಾ ಉಗ್ರ ಸಂಘಟನೆಗಳಿಗೆ
ಬೇಕಾದ ಎಲ್ಲಾ ರೀತಿಯ ಸಪೋರ್ಟ್ನೀಡ್ತಾರೆ
ಐಸಿಸ್ ಉಗ್ರರು..





ಉಗ್ರರಿಗೆ ಭಯ ಅನ್ನೋದೇ
ಉಲ್ಲವಾಗಿದೆ.. ಅಮೆರಿಕ ಸೇನೆ ಈಗಾಗಲೇ 10
ಸಾವಿರಕ್ಕಲೂ ಹೆಚ್ಚು ಉಗ್ರರನ್ನ ಸದೆ
ಬಡಿದಿದ್ರೂ, ಉಗ್ರ ಸಂಘಟನೆಯ
ಶಕ್ತಿ ಕುಂದಿಲ್ಲ,.. ಬದಲಿಗೆ ರಕ್ತ
ಬೀಜಾಸುರರಂತೆ ಇವರ ಸಂಖ್ಯೆಯಲ್ಲಿ ಮತ್ತಷ್ಟು
ಹೆಚ್ಚಳವಾಗ್ತಿದೆ.





ಸಿರಿಯಾದಲ್ಲಿನ ಸರ್ಕಾರವನ್ನೇ ಕಿತ್ತೊಗೆದು
ದಿನೇ ದಿನೇ ಸಿರಿಯಾವನ್ನ ಆಕ್ರಮಿಸಿಕೊಳ್ತಿದ್ದಾರೆ ಐಸಿಸ್ಉಗ್ರರು..





ಯಾವ ಮಟ್ಟಿಗೆ ಸಿರಿಯಾದಲ್ಲಿ ಇವರ
ಅಬ್ಬರವಿದೆ ಅಂದ್ರೆ, ಇವರ ಅಟ್ಟಹಾಸಕ್ಕೆ
ಸೋತು ಏನೂ ಮಾಡಲಾಗದೇ ಕೈಕಟ್ಟಿ
ಕೂತ್ಕೊಂಡಿದೆ ಸಿರಿಯಾ ಸರ್ಕಾರ.. ಸಿರಿಯಾ ಮಿಲಿಟರಿ
ಪಡೆ ಕೂಡ ದೈತ್ಯ
ಸೇನೆಯ ಕ್ರೂರ ಕೃತ್ಯಕ್ಕೆ ನಲುಗಿ
ಹೋಗಿದೆ.





ಇಂಥಾ ವಿಕೃತ ಉಗ್ರರು ಇದೀಗ
ಒಂದೊಂದೇ ದೇಶದಲ್ಲಿ ತಮ್ಮ ಹಿಡಿತವನ್ನ
ಸಾಧಿಸ್ತಾ ಇದ್ದಾರೆ.. ಅಫ್ಘಾನಿಸ್ತಾ ನದಲ್ಲಿ
ತಮ್ಮ ಪ್ರಾಬಲ್ಯ ಸಾಧಿಸೋ ನಿಟ್ಟಿನಲ್ಲಿ
ತಾಲೀಬಾನಿಗಳ ಜೊತೆಗೆ ಕೈ ಜೋಡಿಸಿದೆ
ಐಸಿಸ್ಸಂಘಟನೆ.





ಸಿರಿಯಾ ಸರ್ಕಾರವನ್ನ ನಡುಗಿಸಿ
ಮೂಲೆಗುಂಪು ಮಾಡಿದಂತೆ, ಆಫ್ಘಾನಿಸ್ತಾನದಲ್ಲಿರೋ ಪ್ರಜಾಪ್ರಭುತ್ವ
ಸರ್ಕಾರವನ್ನೂ ಬುಡಮೇಲು ಮಾಡೋ ತಂತ್ರಗಾರಿಕೆ
ಇವರದ್ದು.. ಇದೇ ಉದ್ದೇಶದೊಂದಿಗೆ ತಾಲೀಬಾನಿಗಳನ್ನ
ಮುಂದಿಟ್ಟುಕೊಂಡು ಐಸಿಸ್ ಉಗ್ರರು ಅಫ್ಘಾನಿಸ್ತಾನದ
ಪಾರ್ಲಿಮೆಂಟ್ಮೇಲೆ ದಾಳಿ ನಡೆಸಿದ್ದಾರೆ
ಅಂತ ಹೇಳಲಾಗ್ತಿದೆ..





ಬರೀ ಆಫ್ಘಾನಿಸ್ತಾನ ಮಾತ್ರವಲ್ಲ..
ಐಸಿಸ್ಉಗ್ರರ ಹಿಟ್ ಲಿಸ್ಟ್ನಲ್ಲಿ
ಭಾರತ ಕೂಡ ಇದೆ.. ಭಾರತದ ಮೇಲೂ
ಇಂಥದ್ದೇ ದಾಳಿ ನಡೆಸೋದಕ್ಕೆ
ಹಿಂದಿನಿಂದಲೂ ಸ್ಕೆಚ್ ಹಾಕ್ತಾನೇ ಬಂದಿದೆ. ಇದಕ್ಕಾಗಿ
ನೂರಾರು ಮಂದಿಯನ್ನ ಐಸಿಸ್ಸಂಘಟನೆ ನೇಮಕ
ಮಾಡಿಕೊಂಡಿದೆ. ಭಾರತದಲ್ಲಿ ಐಸಿಸ್ಉಗ್ರರು
ಬೇರೂರೋದಕ್ಕೆ ಸಾಥ್ ನೀಡ್ತಾ ಇರೋದು
ಯಾರು ಗೊತ್ತಾ? ಲಷ್ಕರ್
ತೋಯ್ಬಾ ಸಂಘಟನೆ
ಇಂಡಿಯನ್ ಮುಜಾಹಿದ್ದೀನ್
ಸಂಘಟನೆ.





ಈಗಾಗಲೇ ಸಿರಿಯಾದಲ್ಲಿದ್ದ ಭಾರತೀಯರನ್ನ
ಹತ್ಯೆ ಮಾಡಿ, ಭಾರತದಲ್ಲಿ ರಕ್ತದೋಕುಳಿಯಾಡೋದಕ್ಕೆ ಐಸಿಸ್ ಉಗ್ರರು ಸಿದ್ಧತೆ
ನಡೆಸಿದ್ದಾರೆ. ಪಾಕಿಸ್ತಾನದ ಗಡಿ
ದಾಟಿ ಭಾರತದತ್ತ ಹೆಜ್ಜೆ ಹಾಕ್ತಿದ್ದಾರೆ
ಐಸಿಸ್ಉಗ್ರರು!





ಯಸ್..
ಭಾರತದ ಮೇಲಿನ ದಾಳಿಗೆ ಐಸಿಸ್
ಉಗ್ರರು ಪ್ಲಾನ್ ಹಾಕಿದ್ದಾರೆ. ಭಾರತದಲ್ಲಿ ಐಸಿಸ್
ಸಾಮ್ರಾಜ್ಯ ಸ್ಥಾಪಿಸೋದಕ್ಕೆ ಖತರ್ನಾಕ್
ಪ್ಲಾನ್ ಒಂದು ರೆಡಿಯಾಗಿದೆ. ಅದೇನು ಅಂತ
ಮುಂದಿದೆ ಓದಿ





ಪ್ರಜಾಪ್ರಭುತ್ವದ ತಳಹದಿಯ ಮೇಲೆ ಭಾರತ
ಭದ್ರವಾಗಿ ನೆಲೆಯೂರಿದೆ. ಆದ್ರೆ ಇದು
ಐಸಿಸ್ಉಗ್ರರಿಗೆ ನುಂಗಲಾರದ ತುತ್ತಾಗಿದೆ.
ಇದೇ ಕಾರಣಕ್ಕೆ, ಭಾರತದಲ್ಲಿ ವಿಧ್ವಂಸಕ
ಕೃತ್ಯ ನಡೆಸೋದಕ್ಕೆ ಪ್ಲಾನ್
ಮಾಡಿದ್ದಾರೆ.





ಆಫ್ಘಾನಿಸ್ತಾನದಲ್ಲಿ ನಡೆದಿರೋ ಪಾರ್ಲಿಮೆಂಟ್
ದಾಳಿಯ ಬಗ್ಗೆ ನೆನೆಸ್ಕೊಂಡ್ರೆ ಮೈ
ಜುಂ ಅನ್ನುತ್ತೆ.. ಅಷ್ಟೇ ಅಲ್ಲ, ಭಾರತದಲ್ಲಿ
2001
ರಲ್ಲಿ ನಡೆದ ಸಂಸತ್ ದಾಳಿಯನ್ನ
ನೆನಪಿಸುತ್ತೆ.





2001
ಡಿಸೆಂಬರ್ತಿಂಗಳಲ್ಲಿ ಲಕ್ಷರ್
ತೋಯ್ಬಾ ಸಂಘಟನೆ ಭಾರತದ
ಸಂಸತ್ಮೇಲೆ ಇದೇ ರೀತಿ
ದಾಳಿ ನಡೆಸಿತ್ತು. ದಾಳಿ ವೇಳೆ 6 ಮಂದಿ
ಭದ್ರತಾ ಸಿಬ್ಬಂದಿಗಳು ಪ್ರಾಣ
ತ್ಯಾಗ ಮಾಡಿ, ಐವರು ಉಗ್ರರನ್ನ
ಹತ್ಯೆ ಮಾಡುವಲ್ಲಿ ಯಶಸ್ವಿಯಾದ್ರು..





ವೇಳೆ ಸೆರೆ ಸಿಕ್ಕ
ಉಗ್ರ ಅಫ್ಜಲ್ ಗುರುನ್ನ 12 ವರ್ಷಗಳ ಬಳಿಕ 2013
ರಲ್ಲಿ ಗಲ್ಲಿಗೇರಿಸಲಾಯ್ತು.. ಭಾರತೀಯ ಜನತೆ
ಇನ್ನೂ ಸಂಸತ್ದಾಳಿಯ ಗುಂಗಿನಿಂದ
ಹೊರಬರಲು ಸಾಧ್ಯವಾಗಿಲ್ಲ.. ಹೀಗಿರುವಾಗ ಐಸಿಸ್ಉಗ್ರರು
ಭಾರತದ ಪ್ರಜಾ ಪ್ರಭುತ್ವ ಬುನಾದಿಯನ್ನ
ಬುಡ ಮೇಲು ಮಾಡಲು ಸಂಚು
ರೂಪಿಸಿದ್ದಾರೆ ಎನ್ನಲಾಗ್ತಿದೆ.





ಐಸಿಸ್ಉಗ್ರರು ಭಾರತದ ಮೇಲೆ
ಕೆಂಗಣ್ಣು ಬೀರೋದಕ್ಕೂ ಒಂದು
ಕಾರಣ ಇದೆ. ಆಧುನಿಕ ಜಗತ್ತಿನಲ್ಲಿ
ಭಾರತ ಪ್ರಭುತ್ವ ಸಾಧಿಸುತ್ತಿದೆ. ಜಗತ್ತಿನ ಜನರೆಲ್ಲಾ
ಭಾರತದತ್ತ ತಿರುಗಿ ನೋಡುವಂತಾಗುತ್ತಿದೆ. ತಂತ್ರಜ್ಞಾನದಿಂದ ಹಿಡಿದು
ಎಲ್ಲಾ ಕ್ಷೇತ್ರಗಳಲ್ಲೂ ಭಾರತ
ತನ್ನ ವರ್ಚಸ್ಸನ್ನ ಹೆಚ್ಚಿಸಿಕೊಂಡಿದೆ.
ಇದು ಉಗ್ರರ ನಿದ್ದೆಗೆಡಿಸಿದೆ.





ಮೋದಿ ಪ್ರಧಾನಿಯಾಗಿರೋದು ಉಗ್ರ
ಸಂಘಟನೆಗಳಿಗೆ ನುಂಗಲಾರದ ತುತ್ತಾಗಿದೆ. ಇದೇ ಕಾರಣಕ್ಕೆ..
ಅಫ್ಘಾನ್ಸಂಸತ್ದಾಳಿಯಂತೆಯೇ ಭಾರತದಲ್ಲಿ
ದಾಳಿ ನಡೆಸಿ, ಆತಂಕ ಸೃಷ್ಟಿಸುವ
ಬಗ್ಗೆ ಉಗ್ರರು ಪ್ಲಾನ್ ಹಾಕ್ತಿದ್ದಾರೆ.
2001
ರಲ್ಲಿ ನಡೆದ ಸಂಸತ್ ದಾಳಿ
ಪ್ರಕರಣ ಮತ್ತೆ ಮರುಕಳಿಸುವ ಸಾಧ್ಯತೆ
ಇದೆ ಅನ್ನೋ ಲೆಕ್ಕಾಚಾರ ಕೂಡ
ನಡೀತಿದೆ.





ಭಾರತದ ಏಳಿಗೆಯನ್ನು ಸಹಿಸದ
ಕೆಲವು ಉಗ್ರ ಸಂಘಟನೆಗಳು ಭಾರತದಲ್ಲಿ
ದಾಳಿ ನಡೆಸೋದಕ್ಕೆ ಸ್ಕೆಚ್
ಹಾಕಿವೆ. ಉಗ್ರ ಸಂಘಟನೆಗಳಿಗೆ
ಐಸಿಸ್ ಬಾಹ್ಯ ಬೆಂಬಲ ನೀಡುತ್ತಿದೆ.
ಐಸಿಸ್ನಿರ್ದೇಶನದಲ್ಲಿ ದಾಳಿ ನಡೆಸೋದಕ್ಕೆ
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್
ತೋಯ್ಬಾ, ಅಲ್ಖೈದಾ ಸಂಘಟನೆಗಳು ಸಜ್ಜಾಗಿವೆ.





ಇಂಡಿಯನ್ ಮುಜಾಹಿನ್ ಮುಂದಾಳತ್ವದಲ್ಲಿ ಐಸಿಸ್
ಸಂಘಟನೆಗೆ ಉಗ್ರರನ್ನನೇಮಕಾತಿ ಮಾಡಿಕೊಳ್ಳಲಾಗ್ತಿದೆ.
ಅದ್ರ ಜೊತೆಗೆ ಸಿರಿಯಾದಲ್ಲಿದ್ದ ಐಸಿಸ್ಉಗ್ರರು, ಸಿರಿಯಾ
ಗಡಿ ದಾಟಿ ಅಫ್ಘಾನಿಸ್ತಾ ಮತ್ತು
ಪಾಕಿಸ್ತಾನದ ಗಡಿ ದಾಟಿ ಬಂದಿದ್ದು,
ಭಾರತಕ್ಕೆ ನುಗ್ಗೋ ಯತ್ನದಲ್ಲಿದ್ದಾರೆ. ಇದು ಭಾರತದ
ನಿದ್ದೆಗೆಡಿಸಿದೆ.





ಆದ್ರೆ ಉಗ್ರರ ಎಲ್ಲಾ
ಚಟುವಟಿಕೆಗಳನ್ನು ಗುಪ್ತಚರ ಇಲಾಖೆ ಗಮನಿಸ್ತಾನೆ
ಇದೆ.
ಗಡಿ ಭಾಗದಲ್ಲಿ ಸೇನೆಯನ್ನ ಬಲಪಡಿಸಲಾಗಿದೆ.
ದೆಹಲಿಯ ಸಂಸತ್ಭವನದ ಸುತ್ತಮುತ್ತ
ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿದೆ.
ದೇಶದೊಳಗಿನ ಉಗ್ರರನ್ನ ಹೆಡೆಮುರಿ ಕಟ್ಟಲಾಗಿದ್ದು,
ಹೊರಗಿನ ಉಗ್ರರು ಗಡಿ ನುಸುಳದಂತೆ
ಎಚ್ಚರವಹಿಸಲಾಗಿದೆ. ಹೀಗಾಗಿ ಭಾರತದಲ್ಲಿ ಉಗ್ರರು
ಬಾಲ ಬಿಚ್ಚೋದು ಅಷ್ಟು ಸುಲಭವಲ್ಲ. ಹಾಗಂತ
ಉಗ್ರರ ಹೆಜ್ಜೆಗುರುತುಗಳನ್ನ ನಿರ್ಲಕ್ಷಿಸೋದಕ್ಕೂ ಆಗೋದಿಲ್ಲ.. ಸದ್ಯಕ್ಕೆ ಸಂಸತ್ಭವನ
ಸೇರಿದಂತೆ ಎಲ್ಲೆಡೆ ಬಿಗಿ ಭದ್ರತೆಯನ್ನ
ಕೈಗೊಳ್ಳಲಾಗಿದೆ. ಉಗ್ರರ ಜಾಡು ಹಿಡಿದು
ಗುಪ್ತಚರ ಇಲಾಖೆ ತನಿಖೆ ನಡೆಸ್ತಾ
ಇದೆ.


Отправить комментарий

0 Комментарии