ಏನಾದ್ರೂ ಮಹತ್ವದ್ದನ್ನ ಸಾಧಿಸಬೇಕು ಅನ್ನೋ ಮನಸ್ಥಿತಿ ಆಕೆಯದ್ದು.. ಆ ಮಹತ್ವಾಕಾಂಕ್ಷೆನೇ ಆಕೆಯನ್ನು ಆಸ್ಟ್ರೇಲಿಯಾಗೆ ಕರ್ಕೊಂಡು ಹೋಗಿತ್ತು.. ಆದ್ರೆ ಸಿಡ್ನಿ ಹಂತಕರ ಕೈನಲ್ಲಿ, ಆಕೆ ಬರ್ಬರವಾಗಿ ಹತ್ಯೆಗೀಡಾದ್ಳು.. ಹತ್ಯೆಗೂ ಮುನ್ನ ಆಕೆ ತನ್ನ ಗಂಡನಿಗೆ ಹೇಳಿದ ಆ ಕೊನೆ ಮಾತು ಏನ್ ಗೊತ್ತಾ..? ಇಲ್ಲಿದೆ ಓದಿ
ಆಸ್ಟ್ರೇಲಿಯಾದ ಸಿಡ್ನಿ.. ಜಗತ್ತಿನ ಜನರನ್ನು ತನ್ನತ್ತ ಸೆಳೆಯೋ ಮಾಯಾನಗರಿ.. ಇಲ್ಲಿಗೆ ನಾನಾ ಕನಸುಗಳನ್ನು ಹೊತ್ಕೊಂಡು, ಜಗತ್ತಿನ ಮೂಲೆ ಮೂಲೆಯಿಂದ ಜನ ಬರ್ತಾರೆ ಕಣ್ರಿ.. ಹೀಗೆ ನೂರಾರು ಕನಸುಗಳನ್ನು ಹೊತ್ಕೊಂಡು ಆಸ್ಟ್ರೇಲಿಯಾದ ಮಣ್ಣಿಗೆ ಕಾಲಿಟ್ಟ ಭಾರತದ ನಾರಿಯನ್ನು, ಇದೇ ನೆಲದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ..
ಮಾರ್ಚ್ 8, 2015 ನೇ ತಾರೀಕು ಇಡೀ ಜಗತ್ತೇ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಳುಗಿ ಹೋಗಿತ್ತು.. ಆದ್ರೆ ಅದ್ರ ಹಿಂದಿನ ದಿನಾನೇ, ಮಂಗಳೂರಿನ ಮಗಳು ಪ್ರಭಾ ಅರುಣ್ ಕುಮಾರ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ..
ಬದುಕಿನಲ್ಲಿ ಅದೆಷ್ಟೋ ಕಷ್ಟನಷ್ಟಗಳನ್ನು ಎದುರಿಸಿ, ಏನಾದ್ರೂ ಸಾಧಿಸಿ ನನ್ನ ನೆಲದ ಗೌರವ ಹೆಚ್ಚಿಸಬೇಕು ಅನ್ನೋ ಛಲ ಇತ್ತು ಕಣ್ರಿ.. ತನ್ನ ಮಗಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸೋ ಕನಸು ಕಂಡಿದ್ಳು.. ಆದ್ರೆ ಸಿಡ್ನಿ ಹಂತಕರ ಕ್ರೌರ್ಯಕ್ಕೆ ಸಿಲುಕಿ, ಈಕೆ ಕನಸುಗಳೆಲ್ಲಾ ಕಮರಿಹೋಗಿವೆ..
ಪ್ರಭಾ ಅರುಣ್ ಕುಮಾರ್ ಹತ್ಯೆಯ ಆ ಕರುಣಾಕನಕ ಕಥೆಯನ್ನು ಕೇಳಿದ್ರೆ, ನಿಮ್ಮ ಕಣ್ಣಂಚಲ್ಲಿ ನೀರು ಹರಿಯೋದು ಸತ್ಯ ಕಣ್ರಿ.. ಯಾಕಂದ್ರೆ, ಆಕೆ ಕಂಡಿದ್ದ ಕನಸುಗಳು, ಆಕೆಯ ಕಣ್ಣಲ್ಲೇ ಇದ್ದವು.. ಪ್ರಭಾ ಅರುಣ್ ಕುಮಾರ್ ಹತ್ಯೆಯ ಬಗ್ಗೆ ಹೇಳೋದಕ್ಕಿಂತ ಮೊದ್ಲು, ಇವ್ರ ಹಿಸ್ಟರೀನ ಒಮ್ಮೆ ನೀವು ಕೇಳ್ಲೇಬೇಕು ಕಣ್ರಿ.. ಯಾಕಂದ್ರೆ, ಇವ್ರದ್ದು ಅಪರೂಪದ ವ್ಯಕ್ತಿತ್ವ.. ಬದುಕಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸೇ ತೀರ್ತೀನಿ ಅನ್ನೋ ಮನಸ್ಥಿತಿ ಇವ್ರದ್ದು.. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಅಮ್ಟೂರಿನಲ್ಲಿ ಹುಟ್ಟಿದ ಪ್ರಭಾಶೆಟ್ಟಿ, ಓದಿನಲ್ಲೂ ಪ್ರತಿಭಾವಂತೆ..
ಆಟ ಪಾಟದ ಜೊತೆ ತುಂಟಾಟ ಆಡ್ಕೊಂಡೆ ಬೆಳೆದ್ರು.. ತಮ್ಮನಿಗೆ ತಿದ್ದಿ ಬುದ್ದಿ ಹೇಳೋ ಗುರುವಾಗಿದ್ಳು.. ಗುರು ಹಿರಿಯರಿಗೆ ಅಚ್ಚುಮೆಚ್ಚಿನ ಮಗಳಾಗಿದ್ಳು.. ಎಲ್ರನ್ನೂ ಗೌರವದಿಂದ ಕಾಣೋ ದೊಡ್ಡ ಮನಸ್ಸಿನ ಹೆಣ್ಮಗಳು.. ಓದಿನ ಬೆನ್ನತ್ತಿದ ಪ್ರಭಾ ಶೆಟ್ಟಿ, ಸೂಳ್ಯಾದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ಗೆ ಸೇರ್ಕೋತಾರೆ.. 1995 ರಲ್ಲಿ ಯಶಸ್ವಿಯಾಗಿ ಡಿಗ್ರಿಯನ್ನ ಪಾಸ್ ಮಾಡ್ತಾರೆ ಕಣ್ರಿ.. ಓದಿಗೆ ತಕ್ಕಂತೆ ಒಂದು ಖಾಸಗೀ ಕಂಪೆನಿಯಲ್ಲಿ ಒಳ್ಳೇ ಕೆಲಸ ಕೂಡ ಸಿಗುತ್ತೆ..
ಎದೆ ಎತ್ತರಕ್ಕೆ ಬೆಳೆದು ನಿಂತ ಮಗಳಿಗೆ ಮದುವೆ ಮಾಡ್ಬೇಕು ಅಂತ ನಿರ್ಧರಿಸಿದ ಪ್ರಭಾ ಪೋಷಕರು, ಬೆಂಗಳೂರಿನ ಅರುಣ್ ಕುಮಾರ್ ಜೊತೆ ಮದುವೆ ಮಾಡ್ತಾರೆ.. 2002 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಭಾ ಮತ್ತು ಅರುಣ್ ಕುಮಾರ್, ಬೆಂಗಳೂರಿನ ಬಾಪೂಜಿ ನಗರದಲ್ಲಿರೋ ಇದೇ ಮನೇನಲ್ಲೇ ವಾಸವಿರ್ತಾರೆ
ಮದುವೆಗೂ ಮುನ್ನ ಪ್ರಭಾ ಶೆಟ್ಟಿಯಾಗಿದ್ದವರು, ಮದುವೆಯಾದ್ಮೇಲೆ ಪ್ರಭಾ ಅರುಣ್ ಕುಮಾರ್ ಆಗಿ ಬದಲಾಗ್ತಾರೆ.. ಬರೀ ಇಷ್ಟೆ ಬದಲಾಗಿದ್ರೆ ಚೆನ್ನಾಗಿರ್ತಿತ್ತೇನೋ ಕಣ್ರೀ.. ಆದ್ರೆ ವಿಧಿಯ ಆಟ ಬಲು ಘೋರವಾಗಿತ್ತು,.. ಅದಿಕ್ಕೇ ನೋಡಿ.. ಮದುವೆಯಾದ್ಮೇಲೆ, ಪ್ರಭಾ ಅರುಣ್ ಕುಮಾರ್ ತಮ್ಮ ಹೆಸರಿನ ಜೊತೆಗೆ ತಾವು ಕೆಲಸ ಮಾಡ್ತಿದ್ದ ಸಂಸ್ಥೆಯನ್ನೂ ಬದಲಿಸಿಬಿಟ್ಟಿದ್ರು..
ಪತಿ ಅರುಣ್ ಕುಮಾರ್ ಖಾಸಗೀ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾರೆ. ಹೆಚ್ಚಾಗಿ ಓದಿದ ಪ್ರಭಾಗೂ ಕೂಡ, ಏನಾದ್ರೂ ಸಾಧಿಸೋ ಛಲವಿತ್ತು.. ಅದಿಕ್ಕೇನೇ ಉತ್ತಮ ಅವಕಾಶಕ್ಕಾಗಿ ಕಾಯ್ತಾ ಇದ್ರು.. ಅದೇ ಸಮಯಕ್ಕೇ ಸರಿಯಾಗಿ ಒಂದು ಖಾಸಗೀ ಸಂಸ್ಥೆಯಿಂದ ಆಫರ್ ಬಂದಿತ್ತು ಕಣ್ರಿ.. ಆ ಆಫರ್ ನೀಡಿದ್ದು, ‘ಮೈಂಡ್ ಟ್ರೀ’ ಅನ್ನೋ ಮಲ್ಟಿ ನ್ಯಾಷನಲ್ ಕಂಪೆನಿ..
ಮದುವೆಯಾದ್ಮೇಲೆ ಆಕೆಗೆ ಹೊಸ ಕಂಪೆನಿಯಲ್ಲಿ ಕೆಲಸ ಸಿಕ್ತು.. ಅದು ಆಕೆ ಬದುಕಲ್ಲಿ ಒಂದಷ್ಟು ಹೊಸ ಭರವಸೆಗಳನ್ನು ನೀಡಿದ್ವು.. ಆದ್ರೆ, ಕೊನೆಗೆ ಆಕೆ ಬದುಕಿನ ಭರವಸೆಗಳನ್ನೇ ಸುಟ್ಟು ಬೂದಿ ಮಾಡಿತ್ತು.. ಆ ರೋಚಕ ಕಥೆ ಮುಂದಿದೆ
--------------------------------------------------
ಪ್ರಭಾ ಅರುಣ್ ಕುಮಾರ್ ಅವ್ರ ಝಖಾಸಗೀ ಬದುಕು ಚೆನ್ನಾಗೇ ಇತ್ತು. ಖಾಸಗೀ ಸಂಸ್ಥೆಯಲ್ಲಿನ ಬದುಕು ಕೂಡ ಒಂದ್ ಲೆಕ್ಕದಲ್ಲಿ ಚೆನ್ನಾಗೇ ನಡೀತಿತ್ತು.. ಆದ್ರೆ ನಾಲ್ಕು ವರ್ಷಗಳ ಹಿಂದೆ ವಿಧಿ ಅವ್ರ ಮನೆಗೆ ಎಂಟ್ರಿ ಕೊಟ್ಟಿದ್ದ.. ನಾಲ್ಕು ವರ್ಷಗಳ ಹಿಂದೆ ಏನಾಯ್ತು..? ಇಲ್ಲಿದೆ ನೋಡಿ.. ಆ ರೋಚಕ ಸ್ಟೋರಿ..
2002ರಲ್ಲಿ ಒಂಟಿ ಜೀವನ ಸಾಕಾಗಿ ಅರುಣ್ ಜಪೊತೆ ಜೀವನ ಹಂಚಿಕೊಂಡ್ರು ಈ ಪ್ರಭಾ.. ಮದುವೆಯಾದ ನಂತರ, ಅವ್ರು ಬಂದು ಸಂಸಾರ ಶುರುವಿಟ್ಟುಕೊಂಡಿದ್ದು, ಬೆಂಗಳೂರಿನ ಮನೆಯಲ್ಲಿ.. ಎಲ್ಲಾನೂ ಚೆನ್ನಾಗೇ ಇತ್ತು. ಗಂಡ ಅರುಣ್ ಕುಮಾರ್ ಕೂಡ ಹೆಂಡತಿಯ ಪ್ರತಿಯೊಂದು ಹೆಜ್ಜೆಗೂ ಸಾಥ್ ನೀಡ್ತಿದ್ರು.. ಹೆಂಡತಿಯ ಕನಸುಗಳಿಗೆ, ನೀರೆರೆದು ಪೋಷಿಸ್ತಿದ್ರು.. ಆಕೆ ಸಾಧನೆಗೆ, ಬೆನ್ನೆಲುಬಾಗಿ ನಿಂತಿದ್ರು.. ಇದೇ ವಿಷ್ಯಕ್ಕೇ ಕಣ್ರಿ.. ಪ್ರಭಾಗೆ ಅರುಣ್ ಅಂದ್ರೆ ಪಂಚಪ್ರಾಣ..
ವೆಚ್ಚಕ್ಕೆ ಹೊನ್ನಿತ್ತು.. ವಾಸಕ್ಕೆ ಬೆಂಗಳೂರಲ್ಲಿ ಮನೆಯಿತ್ತು.. ದುಡಿಯೋಕೆ ಕೆಲಸಾನೂ ಇತ್ತು,.. ಜೊತೆಗೆ ಬುದ್ದಿವಂತಿಕೆ ಇವ್ರ ಬದುಕಲ್ಲಿ ಹಾಸುಹೊಕ್ಕಾಗಿತ್ತು.. ಗಂಡ ಒಂದ್ಕಡೆ.. ಹೆಂಡ್ತಿ ಮತ್ತೊಂದ್ಕಡೆ ಕೆಲಸ ಮಾಡ್ತಿದ್ರು.. ಕೈತುಂಬ ಸಂಬಳ ಬರ್ತಿತ್ತು.. ಇಚ್ಛೆಯನರಿತು ಬಾಳುವ ಸತಿಪತಿಗಳ ಸಂಸಾರ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು..
ಇವ್ರ ಸುಖ ಸಂಸಾರದ ಪ್ರೀತಿಗೆ ಸಾಕ್ಷಿಯಾಗಿ, ಪುಟ್ಟ ಹೆಣ್ಣುವಿಗೂ ಜನ್ಮ ನೀಡ್ತಾರೆ.. ಯಾವುದಕ್ಕೂ ಕಮ್ಮಿ ಆಗಿರಲಿಲ್ಲ ಇವ್ರ ಸಂಸಾರ.. ದೇವ್ರು ಒಂದ್ ಲೆಕ್ಕದಲ್ಲಿ ಕೇಳಿದ್ದಕ್ಕಿಂತ್ಲೂ ಜಾಸ್ತಿನೇ ಕೊಟ್ಟಿದ್ದ.. ಬದುಕು ಚೆನ್ನಾಗಿದೆ ಅನ್ನೋಷ್ಟ್ರಲ್ಲಿ, ಮತ್ತೊಂದು ಭರವಸೆಯ ಬೆಳಕು ಪ್ರಭಾರ ಮನೆ ಬಾಗಿಲು ತಟ್ಟಿತ್ತು..
ಒಂದು ಹೆಣ್ಣುಮಗುವಿಗೆ ತಾಯಿಯಾಗಿದ್ದ ಪ್ರಭಾಗೆ, ಎಂಟು ವರ್ಷಗಳ ಹಿಂದೆ ಮೈಂಡ್ ಟ್ರೀ ಅನ್ನೋ ಸಾಫ್ಟ್ವೇರ್ ಸಂಸ್ಥೆಯಿಂದ ಕೆಲಸದ ಆಫರ್ ಬಂತು ಕಣ್ರಿ.. ಇದೇ ಈಕೆ ಬದುಕಲ್ಲಿ ಮರೆಯಲಾಗದ ಘಟನೆ..
2002ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಅಮ್ಟೂರು ಗ್ರಾಮದ ಪ್ರಭಾ ಹಾಗೂ ಬೆಂಗಳೂರಿನ ಅರುಣ್ ಕುಮಾರ್ ವಿವಾಹವಾಗಿದ್ದು, ಈ ದಂಪತಿಗೆ 9 ವರ್ಷದ ಮೇಘಾ ಎಂಬ ಹೆಸರಿನ ಮಗಳಿದ್ದಾಳೆ. ಅರುಣ್ ಕುಮಾರ್ ಆಟೋಮೊಬೈಲ್ ಎಂಜಿನಿಯರ್ ಆಗಿದ್ದು, ನಗರದ ಖಾಸಗಿ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸುಳ್ಯದಲ್ಲೇ ಬಿಸಿಎ ವ್ಯಾಸಂಗ ಮುಗಿಸಿದ ಆಕೆ, ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಮದುವೆ ಬಳಿಕ ಮೈಂಡ್ ಟ್ರಿ ಎಂಬ ಸಾಫ್ಟ್ವೇರ್ ಕಂಪೆನಿಯಲ್ಲಿ ಅವರಿಗೆ ಉದ್ಯೋಗ ಸಿಕ್ಕಿತು. ಈ ಕಂಪೆನಿಯೇ ಆಸ್ಟ್ರೇಲಿಯಾಗೆ ಕೆಲಸಕ್ಕೆ ನಿಯೋಜಿಸಿದ್ದು, ಕಳೆದ ಎಂಟು ವರ್ಷಗಳಿಂದ ಆಕೆ ವಿದೇಶದಲ್ಲಿ ನೆಲೆಸಿದ್ದರು. ವರ್ಷಕ್ಕೊಮ್ಮೆ ಆಸ್ಟ್ರೇಲಿಯಾದಿಂದ ತವರಿಗೆ ಬರುತ್ತಿದ್ದ ಪ್ರಭಾ, ಕೆಲ ದಿನಗಳು ಕುಟುಂದದೊಂದಿಗೆ ಕಾಲ ಕಳೆದು ಮರಳುತ್ತಿದ್ದರು.
ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ ಹಾದಿಯಲ್ಲಿದ್ದ ಉದ್ಯಾನದ ಬಳಿ ದುಷ್ಕರ್ಮಿಗಳು ಶನಿವಾರ ರಾತ್ರಿ ಪ್ರಭಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇರಿತದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರು, ಸಾವು ಬದುಕಿನ ಹೋರಾಟ ನಡೆಸುವ ವೇಳೆಯಲ್ಲಿ ತಮ್ಮ ಬಂಧುಗಳಿಗೆ ಕರೆ ಮಾಡಿ, ತಮ್ಮ ಮೇಲೆ ಆದ ದಾಳಿಯನ್ನು ತಿಳಿಸಿದ್ದಾರೆ. ಹಲ್ಲೆ ಸ್ಥಳದಿಂದ ಪ್ರಭಾ ಅವರ ಮನೆ ಕೇವಲ 300 ಮೀಟರ್ ದೂರದಲ್ಲಿತ್ತು. ಇದೊಂದು ಭಯಾನಕ ದಾಳಿ ಎಂದು ಸಿಡ್ನಿ ಪೊಲೀಸರು ಬಣ್ಣಿಸಿದ್ದು ಹಂತಕರ ಹುಡುಕಾಟಕ್ಕೆ ತೀವ್ರ ಪ್ರಯತ್ನ ನಡೆಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭಾ ಅವರನ್ನು ಅವರ ಕುಟುಂಬದ ಮಿತ್ರರೊಬ್ಬರು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಅವರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದರು.
‘ರಾತ್ರಿ ವೇಳೆ ಕಚೇರಿ ವಾಹನದಲ್ಲಿ ಮನೆಗೆ ಹೋಗುವುದಕ್ಕೆ ಆಕೆ ಮುಜುಗರ ಪಡುತ್ತಿದ್ದರು. ನೀವು ನಡೆದುಕೊಂಡು ಹೋಗುವ ಪರ‌್ರಮಟ್ಟ ಉದ್ಯಾನ ತುಂಬ ಅಪಾಯಕಾರಿ, ಅಲ್ಲಿ ನಿಮ್ಮನ್ನು ತಡೆದು 2-3 ಡಾಲರ್‌ಗೆ ಪೀಡಿಸುವವರು ಇರುತ್ತಾರೆ ಎಂದು ಎಚ್ಚರಿಸಿದ್ದೆ ' ಎಂದು ಪ್ರಭಾ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
ಒಬ್ಬರು ಇಲ್ಲವೇ ಅನೇಕರು ಅವರ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದಿರುವ ಪೊಲೀಸರು, ಈ ದುರ್ಘಟನೆ ಬಗ್ಗೆ ಮಾಹಿತಿ ಇರುವವರು ಕೂಡಲೇ ತಿಳಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ನನ್ನನ್ನು ಬಿಟ್ಟು ಬಿಡಿ ಎಂದರೂ ಕರುಣೆ ತೋರಲಿಲ್ಲ
ನನ್ನನ್ನು ಬಿಟ್ಟು ಬಿಡಿ.. ದಯಮಾಡಿ ನನ್ನನ್ನು ಮನೆಗೆ ಹೋಗಲು ಬಿಡಿ, ಏನೂ ಮಾಡ್ಬೇಡಿ, ಈ ಚೀಲ ತೆಗೆದುಕೊಳ್ಳಿ, ನಿಮಗೆ ಬೇಕಾದ್ದನ್ನು ತೆಗೆದುಕೊಳ್ಳಿ,''- ಹೀಗೆಂದು ದುಷ್ಕರ್ಮಿಗಳನ್ನು ಪ್ರಭಾ ಅಂಗಲಾಚಿ ಬೇಡಿಕೊಂಡಿದ್ದರು. ಆದರೆ ಅವರನ್ನು ಸುತ್ತಿವರೆದಿದ್ದ ದುಷ್ಕರ್ಮಿಗಳಿಗೆ ಕೊಂಚವೂ ಕರುಣೆ ಹುಟ್ಟಲಿಲ್ಲ. ಕೆಲವೇ ನಿಮಿಷಗಳಲ್ಲಿ ಅವರ ಮೊಬೈಲ್ ಸ್ತಬ್ಧವಾಯಿತು,''- ಎಂದು ಪ್ರಭಾ ಅವರ ಕೊನೆಯ ಮಾತುಗಳನ್ನು ಅವರ ಸೋದರ ಸಂಬಂಧಿ ತ್ರಿಜೇಶ್ ಜಯಚಂದ್ರ ಹಂಚಿಕೊಂಡರು. 'ಸಾಮಾನ್ಯವಾಗಿ ನಮ್ಮ ಅತ್ತೆ ಕಚೇರಿ ಬಿಟ್ಟ ಕೂಡಲೇ ಮಾವನಿಗೆ ಕರೆ ಮಾಡುತ್ತಿದ್ದರು. ಶನಿವಾರ ಕರೆ ಮಾಡುತ್ತಲೇ ಅತ್ತಲಿನ ದನಿ ನಿಂತು ಹೋಯಿತು' ಎಂದು ಜಯಚಂದ್ರ ಕಂಬನಿಗರೆದರು.
ಕಾರಣ ನಿಗೂಢ: ‘ಆ ಉದ್ಯಾನದಲ್ಲಿ ಜನಾಂಗೀಯ ದಾಳಿಗಳು ಸದಾಕಾಲ ನಡೆಯುತ್ತವೆ ಎಂದು ನನ್ನ ಗೆಳೆಯನೊಬ್ಬ ಹೇಳಿದ್ದ. ಇದೊಂದು ಜನಾಂಗೀಯ ದಾಳಿಯೇ ಇಲ್ಲವೇ ದರೋಡೆಯೇ ಎಂಬುದು ತಿಳಿಯುತ್ತಿಲ್ಲ. ಪೊಲೀಸರು ಆಕೆಯನ್ನು ಗುರುತಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು,'' ಎಂದು ಪ್ರಭಾ ಅವರ ಮೈದುನ ಜಿ. ಮೋಹನ್ ತಿಳಿಸಿದ್ದಾರೆ.
ಇದೊಂದು ಭಯಾನಕ ದಾಳಿ'' ಎಂದು ಸಿಡ್ನಿ ಪೊಲೀಸರು ಬಣ್ಣಿಸಿದ್ದು ಹಂತಕರ ಹುಡುಕಾಟಕ್ಕೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಒಬ್ಬರು ಇಲ್ಲವೇ ಅನೇಕರು ಅವರ ಮೇಲೆ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದಿರುವ ಪೊಲೀಸರು, ಈ ದುರ್ಘಟನೆ ಬಗ್ಗೆ ಮಾಹಿತಿ ಇರುವವರು ಕೂಡಲೇ ತಿಳಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಇಡೀ ವಿಶ್ವ ಮಹಿಳಾ ದಿನಾಚರಣೆಗೆ ಸಜ್ಜಾಗುತ್ತಿದ್ದಾಗ ಬೆಂಗಳೂರಿನ ಮಹಿಳೆಯೊಬ್ಬರು ಆಸ್ಟ್ರೇಲಿಯಾದಲ್ಲಿ ಬರ್ಬರವಾಗಿ ಕೊಲೆಯಾಗಿರುವ ಸಂಗತಿ ಬರಸಿಡಿಲಿನಂತೆ ಬಂದೆರಗಿದೆ. ಸ್ವಾಭಿಮಾನಿ ಮತ್ತು ಮಹತ್ವಾಕಾಂಕ್ಷೆಯ ಹೆಣ್ಣುಮಗಳು ಕಣ್ತುಂಬ ತುಂಬಿಕೊಂಡಿದ್ದ ಕನಸುಗಳನ್ನು ಹೊತ್ತುಕೊಂಡೇ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಅಮ್ಟೂರಿನ ಪ್ರಭಾಶೆಟ್ಟಿ (41) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮನೆಯಿಂದ 300 ಮೀಟರ್ ಅಂತರದಲ್ಲಿ ಹತ್ಯೆಯಾಗಿದ್ದಾರೆ. ಘಟನೆ ನಡೆದಾಗ ಅಲ್ಲಿ ರಾತ್ರಿ 8.30. ಬಾರತೀಯ ಕಾಲಮಾನದಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರು.
ಬಾಲ್ಯದಿಂದಲೂ ಬಹಳ ಛಲ ಮತ್ತು ಮಹತ್ವಾಕಾಂಕ್ಷೆಯಿಂದಲೇ ಓದಿ ಬೆಳೆದ ಪ್ರಭಾ ಅವರು ಸ್ವಂತ ಸಾಮರ್ಥ್ಯದಿಂದಲೇ ತನಗೆ ಬೇಕಾದ್ದೆಲ್ಲವನ್ನೂ ಗಳಿಸುತ್ತಾ ತಾನು ಕಂಡ ಕನಸುಗಳನ್ನೆಲ್ಲಾ ಸಾಕಾರಗೊಳಿಸಿಕೊಳ್ಳುತ್ತಾ ಬೆಳೆದರು. ಇನ್ನೊಂದು ಕನಸು ಮಾತ್ರ ಬಾಕಿ ಇತ್ತು. ಸ್ವಂತದ್ದೊಂದು ಸಾಫ್ಟ್‌ವೇರ್ ಕಂಪನಿಯನ್ನು ಭಾರತ ಇಲ್ಲವೇ ಆಸ್ಟ್ರೇಲಿಯಾದಲ್ಲೇ ತೆರೆಯುವ ಕನಸಿತ್ತು. ಇತ್ತೀಚೆಗೆ ಯಾವಾಗ ಕರೆ ಮಾಡಿದರೂ ಅದರ ಬಗ್ಗೆಯೇ ಹೆಚ್ಚೆಚ್ಚು ಮಾತಾಡುತ್ತಿದ್ದರು. ಅಷ್ಟರಲ್ಲಿ ಈ ಘಟನೆ ನಡೆದುಬಿಟ್ಟಿದೆ. ಪ್ರಭಾ ಅವರ ಹತ್ತಿರದ ಸಂಬಂಧಿ ಎಸ್‌ಸಿ ಜಯಚಂದ್ರ ತಮಗೆ ಗೊತ್ತಿರುವ ಆಕೆಯ ವ್ಯಕ್ತಿತ್ವವನ್ನು ವಿವರಿಸಿದರು.
ಮಗಳಿಗಿನ್ನೂ ವಿಷಯ ಗೊತ್ತಿಲ್ಲ...
ಸುಳ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವೀಧರೆ ಆಗಿದ್ದ ಪ್ರಭಾ ಅವರು ಬಸವೇಶ್ವರನಗರದ ಖಾಸಗಿ ಕಂಪನಿ ಉದ್ಯೋಗಿ ಜಿ.ಅರುಣ್‌ಕುಮಾರ್ ಅವರನ್ನು ಮದುವೆಯಾಗಿದ್ದು 5ನೇ ತರಗತಿ ಓದುತ್ತಿರುವ ಮಗಳಿದ್ದಾಳೆ. ಶನಿವಾರ ಆಸ್ಟ್ರೇಲಿಯಾಗೆ ಹೊರಟು ನಿಂತಾಗ ಪತಿ ಅರುಣ್ ಕುಮಾರ್‌ಗೆ ಪ್ರಭಾ ಅವರನ್ನು ದರೋಡೆಕೋರರು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನುವುದಷ್ಟೇ ಗೊತ್ತಿತ್ತು. ಅವರು ಸಿಡ್ನಿಯಲ್ಲಿ ಇಳಿದು ಆಸ್ಪತ್ರೆ ಬಳಿಗೆ ಹೋದಾಗಲೇ ಅವರಿಗೆ ಪತ್ನಿ ಬದುಕಿಲ್ಲ ಎನ್ನುವುದು ಗೊತ್ತಾಗಿದ್ದು. ಅಲ್ಲಿಯವರೆಗೂ ಅರುಣ್ ಅವರಿಗೆ ಉಳಿದ ಸಂಬಂಧಿಗಳು ವಿಷಯ ತಿಳಿಸಿರಲಿಲ್ಲ. ಭಾನುವಾರ ಸಂಜೆ ಇಡೀ ವಿಶ್ವಕ್ಕೆ ವಿಷಯ ಗೊತ್ತಾಗಿದ್ದರೂ ಮಗಳು ಮೇಘನಾಳಿಗೆ ಇನ್ನೂ ವಿಷಯ ಗೊತ್ತಿರಲಿಲ್ಲ. ಚಂದ್ರಾಲೇಔಟ್‌ನ ಚಿಕ್ಕಮ್ಮನ ಮಡಿಲಿಗೆ ಅಂಟಿಕೊಂಡು ಕುಳಿತಿದ್ದ ಮೇಘನಾಳಿಗೆ ವಿಷಯ ಹೇಗೆ ತಿಳಿಸುವುದು ಎನ್ನುವ ಸಂಕಟ ಅಲ್ಲಿದ್ದವರನ್ನೆಲ್ಳಾ ಆವರಿಸಿತ್ತು.
ಬಸವೇಶ್ವರನಗರದ ಅರುಣ್ ಮನೆಯಲ್ಲಿ ಇವರ ತಾಯಿ ಇಳಿವಯಸ್ಸಿನ ಸುಲೋಚನಮ್ಮ ಅವರನ್ನು ಮತ್ತೊಬ್ಬ ಮಗ ಪ್ರಶಾಂತ್ ಸಂತೈಸುತ್ತಿದ್ದರು. ಸೊಸೆಯ ದೇಹವನ್ನು ಬೆಂಗಳೂರಿಗೆ ತರುವವರೆಗೂ ಮನೆಯ ಹಿರಿಯರಿಗೆ ವಿಷಯ ತಿಳಿಸಬಾರದು ಎಂದು ಮನೆಯವರೆಲ್ಲಾ ಯೋಚಿಸಿದ್ದರಾದರೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದಾಗ ಏನೂ ಮಾಡಲಾಗಲಿಲ್ಲ ಎಂದು ಅರುಣ್ ಅವರ ಬಾವ ಜಯಚಂದ್ರ ತಿಳಿಸಿದರು.
ಪ್ರಭಾ ಅವರ ಅಣ್ಣ ಶಂಕರ್ ಶೆಟ್ಟಿ ಪರ್ತ್‌ನಲ್ಲೇ ವೈದ್ಯರಾಗಿದ್ದಾರೆ. ಇನ್ನೊಬ್ಬ ತಮ್ಮ ನಿಖಿಲ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಕೊನೆಯ ತಮ್ಮ ಶಿವ ಪ್ರಸಾದ್ ಮಾತ್ರ ಅಕ್ಕ ಪ್ರಭಾ ಅವರ ಮಾತಿನಂತೆ ಊರಲ್ಲೇ ಉಳಿದು ತೋಟದ ಕೆಲಸ ಮಾಡುತ್ತಾ ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
2013 ಡಿಸೆಂಬರ್ ಕಡೆಯ ಭೇಟಿ
ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿಗೆ ಬರುತ್ತಿದ್ದ ಪ್ರಭಾ ಅವರು ಕಡೆಯ ಬಾರಿ ಬಂದಿದ್ದು 2013ರ ಡಿಸೆಂಬರ್‌ನ ಕ್ರಿಸ್‌ಮಸ್‌ಗೆ. ಆ ನಂತರ ಮತ್ತೆ ಬರಲು ಆಗಿರಲಿಲ್ಲ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮಹತ್ವವಾದ್ದೇನಾದರೂ ಸಾಧಿಸಬೇಕು. ಆದಷ್ಟು ಬೇಗ ಬಂದುಬಿಡುತ್ತೇನೆ ಎಂದು ಮನೆ ಮಂದಿಗೆಲ್ಲಾ ಹೇಳಿ ಹೋಗಿದ್ದ ಪ್ರಭಾ ಮತ್ತೆ ಬರಲಿಲ್ಲ ಎನ್ನುವ ನೋವು ಇಡೀ ಕುಟುಂಬವನ್ನು ಆವರಿಸಿತ್ತು.
ಕಮರಿತು ಪ್ರಭಾರ ಕೊನೆ ಆಸೆ
ಎಂಜಿನಿಯರಿಂಗ್ ಪದವಿ ಪಡೆದ ತಕ್ಷಣ ಲಿಂಕ್ ಎನ್ನುವ ಕಂಪನಿಯಲ್ಲಿ ಕೆಲ ಸಮಯ ಕೆಲಸ ಮಾಡಿದ ನಂತರ ಮೈಂಡ್‌ಟ್ರಿ ಕಂಪನಿ ಸೇರಿದ್ದ ಪ್ರಭಾ 2012ರಲ್ಲಿ ಆಸ್ಟ್ರೇಲಿಯಾಗೆ ವರ್ಗಾವಣೆಗೊಂಡಿದ್ದರು. 2013ಕ್ಕೇ ವಾಪಸ್ ಬರಬೇಕಿತ್ತು. ಆದರೆ ಒಂದು ವರ್ಷ ಕಂಪನಿಯೇ ಅವರನ್ನು ಮುಂದುವರೆಸಿತ್ತು. 2014ಕ್ಕೆ ವಾಪಸ್ ಬರುವ ತಯಾರಿ ಆಗಿತ್ತಾದರೂ ಮತ್ತೊಂದು ವರ್ಷ ಮುಂದುವರೆಸಿದ ಕಾರಣಕ್ಕೆ 2015ರ ಏಪ್ರಿಲ್‌ಗೆ ವಾಪಾಸ್ ಬರುವ ತೀರ್ಮಾನ ಮಾಡಿದ್ದರು. ಮಗು ಮತ್ತು ಗಂಡನನ್ನು ಬಿಟ್ಟು ಇನ್ನೂ ಇಲ್ಲಿರುವುದು ತುಂಬಾ ಕಷ್ಟ ಎಂದು ಕನವರಿಸುತ್ತಿದ್ದ ಪ್ರಭಾ, 'ಇನ್ನೊಂದೆರಡು ತಿಂಗಳು ಮಗಳೇ ಅಲ್ಲೇ ಬಂದು ನಿನ್ನ ಜತೆಗೇ ಇದ್ದುಬಿಡುತ್ತೇನೆ' ಎಂದು ಪ್ರಾಮಿಸ್ ಮಾಡಿದ್ದರು...ಇದಷ್ಟೆ ಮಗಳು ಮೇಘನಾಳಿಗೆ ಗೊತ್ತಿರುವುದು.
0 Комментарии