Hot Posts

10/recent/ticker-posts

ಭಾರತದ ಮೊದಲ ಮಹಿಳಾ ಕಮಾಂಡರ್​!




ಮಹಿಳೆ ಅಂದ್ರೆ ಬರೀ ಅಡಿಗೆ ಮನೆಗೆ ಮಾತ್ರ ಸೀಮಿತ ಅಲ್ಲ.. ಅವಕಾಶ ಸಿಕ್ರೇ ಆಕೆ ಎಂಥ ದಿಟ್ಟ ಮಹಿಳೆಯಾಗಿ ಯಶಸ್ಸು ಗಳಿಸ್ತಾಳೆ ಅನ್ನೋದನ್ನ ತೋರಿಸೋದಕ್ಕೆ, ಇವತ್ತಿನ ಸ್ಟೋರಿಯನ್ನ ಹೊತ್ತು ತಂದಿದ್ದೀವಿ. ಶತೃಗಳನ್ನು ಸದೆಬಡಿಯೋ ವೀರರನ್ನು ದೇಶಕ್ಕೆ ನೀಡ್ತಾ ಇರೋ ಓರ್ವ ಸಾಹಸಿಯ ಕಥೆ ಇದು.. ಆಕೆ ಬದುಕೇ ಒಂದು ರೋಚಕತೆಯಿಂದ ಕೂಡಿದೆ.

ಯಸ್.. ಇವತ್ತು ನಾವ್ ನಿಮಗೆ ಹೇಳೋಕೆ ಹೊರಟಿರೋಸ್ಟೋರಿ ಅಂತಿಂಥದ್ದಲ್ಲ ಕಣ್ರಿ.. ಇಡೀ ಜಗತ್ತಿಗೆ ಭಾರತದ ಪವರ್ ಏನು ಅನ್ನೋದನ್ನು ತೋರಿಸೋಕೆ ಹೊರಟಿರೋ ರೋಚಕ ಸ್ಟೋರಿ ಇದೆ. ಅದ್ರಲ್ಲೂ ಭಾರತದ ಮಹಿಳೆ ಎಂಥ ದಿಟ್ಟ ಮಹಿಳೆ ಅನ್ನೋದನ್ನು ತೋರಿಸೋ ರೊಮಾಂಚಕಾರಿಯಾದ ಸ್ಟೋರಿ ಕಣ್ರಿ..

ದೇಶ ಕಾಯೋ ಕೆಲ್ಸಕ್ಕೆ ಸೇರ್ಬೇಕಾದ್ರೆ, ಗಟ್ಟಿ ಗುಂಡಿಗೆ ಇರಬೇಕು.. ಯಾವ ಟೈಮಲ್ಲಿ ಶತೃಗಳು ಎಲ್ಲಿ ದಾಳಿ ನಡೆಸ್ತಾರೋ ಗೊತ್ತಾಗೋದಿಲ್ಲ.. ಶತೃಗಳಿಗೆ ಮಣ್ಣು ಮುಕ್ಕಿಸೋ ಖದರ್​ನ ಜೊತೆಗೆ ಎಂಟೆದೆ ಭಂಟನಂಥ ಗುಂಡಿಗೆ ಇರಬೇಕು.. ಆಗ್ಲೇ ದೇಶ ಕಾಯೋ ಸೈನಿಕನಾಗೋದಕ್ಕೆ ಸಾಧ್ಯವಾಗೋದು.. ಆವತ್ತು ಮುಂಬೈ ತಾಜ್ ಹೊಟೆಲ್​​ ಮೇಲೆ ಉಗ್ರರು ದಾಳಿ ಮಾಡಿದಾಗ, ಈ ಎಂಟೆದೆ ಭಂಟರೇ ಉಗ್ರರನ್ನು ಮಟ್ಟ ಹಾಕಿದ್ದು.. ಕೈನಲ್ಲಿ ಎಕೆ47 ಹಿಡ್ಕೊಂಡು, ಹೆಲಿಕಾಪ್ಟರ್​ನ ಹಗ್ಗದಿಂದ ತಾಜ್ ಹೊಟೆಲ್​ ಮೇಲಿಳಿದು ಕಾರ್ಯಾಚರಣೆ ನಡೆಸಿದ್ರು.. ಇವ್ರು ಇಡೋ ಪ್ರತಿ ಹೆಜ್ಜೇನೂ ಚಾಣಾಕ್ಷತನೆಯಿಂದ ಕೂಡಿರುತ್ತೆ ಕಣ್ರಿ.. ಉಗ್ರರ ತಂತ್ರಕ್ಕೆ ಪ್ರತಿತಂತ್ರ ಹೂಡೋ ಟ್ರಿಕ್ಸ್ ಇವ್ರಿಗೆ ಗೊತ್ತಿರುತ್ತೆ.. ಆ ತಂತ್ರಗಳನ್ನು ಬಳಸಿಕೊಂಡೇ 2008 ರಲ್ಲಿ ನಡೆದ ಮುಂಬೈ ದಾಳಿಯಲ್ಲಿ, ನಮ್ಮ ಕಮಾಂಡೋಸ್​​ ಉಗ್ರರನ್ನು ಮಟ್ಟ ಹಾಕಿದ್ದು..

ನಮ್ಮ ದೇಶವನ್ನು ಇಂಚಿಂಚಾಗಿ ಕಾಪಾಡ್ತಿರೋ ಇಂಥಾ ಬ್ರಿಲಿಯಂಟ್​ ಕಮಾಂಡೋಗಳನ್ನು ಹುಟ್ಟು ಹಾಕಿದ್ದು ಒಬ್ಬ ಲೇಡಿ ಕಣ್ರಿ... ಅವ್ರೇ ಸೀಮಾ ರಾವ್​..!

ಯಸ್.. ಸೇನೆ ಸೇರ್ಬೇಕು ಅಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು.. ಆದ್ರೆ ಎಂಟೆದೆ ಭಂಟರನ್ನೇ ನಡುಗಿಸಿದ ವೀರ ವನಿತೆ ಈ ಸೀಮಾ ರಾಯ್​... ಇವತ್ತು ನಮ್ಮ ದೇಶವನ್ನು ಕಾಪಾಡ್ತಾ ಇರೋ ಭಾರತದ ಕಮಾಂಡೋಗಳಿಗೆ ಟ್ರೈನಿಂಗ್ ಕೊಟ್ಟಿರೋ ಒನ್ ಅಂಡ್ ಓನ್ಲಿ ಲೇಡಿ ಕಮಾಂಡರ್​ ಇವ್ರು.. ನಮ್ಮ ದೇಶದಲ್ಲೇ ಈ ಮಹಿಳೇ ಥರ ಯಾರೂ ಇಲ್ಲ.. ಮಹಿಳಾ ಸಮಾಜವೇ ಹೆಮ್ಮೆ ಪಡೋ ಈ ಮಹಿಳಾ ಮಣಿ, ಭಾರತದ ಮೊಟ್ಟ ಮೊದಲ ಮಹಿಳಾ ಕಮಾಂಡರ್​ ಟ್ರೈನರ್​...

ಸಿಂಹ ಇವ್ರು.. ಶತೃಗಳು ಅಪ್ಪಿ ತಪ್ಪಿ ಇವ್ರ ಕೈಗೆ ಸಿಕ್ಕುಬಿಟ್ರೆ, ಅವ್ರ ಎದೆ ಬಗೆದು ಬಿಡೋ ವೀರ ವನಿತೆ.. ಭಾರತದ ಸಾವಿರಾರು ಯೋಧರಿಗೆ ಹೋರಾಟದ ಟ್ರಿಕ್ಸ್ ಕಲಿಸಿದ ಎಂಟೆದೆ ಗುಂಡಿಗೆ ಇರೋ ಭಾರತದ ದಿಟ್ಟ ಮಹಿಳೆ ಈ ಸೀಮಾ ರಾಯ್​..

ಶತೃಗಳ ಜೊತೆ ಸೆಣೆಸಾಡೋ ಸೈನಿಕರ ಕೆಲಸ ಅಂದ್ರೆನೇ ಸಾವಿನ ಜೊತೆ ಆಡೋ ಜೂಟಾಟ ಇದ್ದಂಗೆ ಕಣ್ರಿ.. ಇಂಥ ಸೈನಿಕರಿಗೇ ಶತೃಗಳನ್ನು ಮಟ್ಟ ಹಾಕೋ ಟ್ರಿಕ್ಸ್​ಗಳನ್ನ ಕೊಡೋ ಮಟ್ಟಕ್ಕೆ ಈ ಸೀಮಾ ರಾವ್​ ಬೇಳೆದಿದ್ದಾರೆ. ಕಳೆದ 18 ವರ್ಷಗಳಿಂದ ಸಾವಿರಾರು ಯೋಧರಿಗೆ ಮಾರ್ಷಲ್ ಆರ್ಟ್ಸ್​​​​ ಟ್ರಿಕ್ಸ್​ನ ಜೊತೆಗೆ ಶತೃಗಳನ್ನು ಮಣ್ಣು ಮುಕ್ಕಿಸೋದರ ಬಗ್ಗೆ ಕಮಾಂಡೋಗಳಿಗೆ ತರಬೇತಿ ನೀಡ್ತಿದ್ದಾರೆ.. ಭಾರತದ ದಿಟ್ಟ ವ್ಯಕ್ತಿತ್ವದ ಈ ಮಹಿಳೆಯ ಕಡೆ, ಈಗ ಇಡೀ ಜಗತ್ತೇ ತಿರುಗಿ ನೋಡ್ತಿದೆ ಕಣ್ರಿ..

ಇವ್ರು ಈ ಮಟ್ಟಕ್ಕೆ ಬೆಳೆದಿರೋದೇ ಒಂದು ರೋಚಕ ಕಥೆ ಇದೆ ಕಣ್ರಿ.. ನಿಜ್ವಾಗ್ಲೂ ನೀವು ಅದನ್ನು ಕೇಳಿದ್ರೆ, ಒಂದು ಕ್ಷಣ ಅಬ್ಬಬ್ಬಾ ಅಂದು ಬಿಡ್ತೀರ.. ಸೀಮಾ ರಾಯ್​​ ಈ ಮಟ್ಟಕ್ಕೆ ಬೆಳೆಯೋದಕ್ಕೆ ಕಾರಣಾನೇ ಇವ್ರ ತಂದೆ ಕಣ್ರಿ.. ಅವ್ರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವ್ರು.. ಅವ್ರ ಮಗಳಾದ ಸೀಮಾ ರಾಯ್​ಗೆ, ದೇಶಪ್ರೇಮ ಅನ್ನೋದು ರಕ್ತದ ಕಣದಲ್ಲೇ  ಬಂದ್ಬಿಟ್ಟಿದೆ..

ಈ ಸೀಮಾ ರಾವ್​ ಓದಿದ್ದು ವೈದ್ಯಕೀಯ ಶಿಕ್ಷಣ ಕಣ್ರಿ.. ಲಂಡನ್​ನಲ್ಲಿ ಎಂಬಿಎ ಕೂಡ ಮಾಡಿದ್ರು.. ಫಾರಿನ್​ಗೆ ಹೋಗಿ ಆರಾಮಾಗಿ ಸೆಟ್ಲ್​ ಅಗಿ, ಲಕ್ಷ ಲಕ್ಷ ಸಂಬಳ ತಗೊಂಡಿ ಇರಬಹುದಾಗಿತ್ತು.. ಆದ್ರೆ, ಅದೆಲ್ಲವನ್ನೂ ಬಿಟ್ಟು ಭಾರತದ ಮಾತೆಯ ವೀರ ಯೋಧರಿಗೆ, ತರಬೇತಿ ನೀಡೋಕೆ ಮುಂದಾದ್ರು..

ನಿಮ್ಗೆ ಗೊತ್ತಿಲ್ದೇ ಇರೋ ಇನ್ನೊಂದ್ ವಿಷ್ಯಾ ಇದೆ ಕಣ್ರಿ.. ಒಂದ್​ ಸಣ್ಣ ಉಪಕಾರ ಮಾಡಿದ್ರೂ, ಅದಕ್ಕೆ ಪ್ರತಿಫಲ ಮಾಡೋ ಕಾಲ ಇದು.. ಆದ್ರೆ ಯಾವ ಪ್ರತಿಫಲಾನೂ ಇಲ್ಲದೇ ಸಾವಿರಾರು ಕಮಾಂಡೋಗಳಿಗೆ ಟ್ರೀನಿಂಗ್ ನೀಡಿದ್ದಾರೆ. 18 ವರ್ಷಗಳ ಕಾಲ ಕಮಾಂಡೋಗಳಿಗೆ ಟ್ರೈನಿಂಗ್ ನೀಡಿದ ಸೀಮಾ ರಾವ್​, ಸರ್ಕಾರದಿಂದ ಒಂದ್ ಪೈಸೆ ದುಡ್ಡು ಕೂಡ ಇಸ್ಕೊಂಡಿಲ್ಲ..

ಯಾವ ಗೌರವ ಧನಾನೂ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ, ಭಾರತವನ್ನು ಕಾಪಾಡೋ ವೀರರಿಗೆ ತನ್ನಿಂದಾದ ಟ್ರಿಕ್ಸ್್ಗಳನ್ನು ಹೇಳಿಕೊಟ್ಟಿದ್ದಾರೆ. ನಾನು ಮಹಿಳೆ ಅನ್ನೋ ಕಟ್ಟುಪಾಡಿನ ಬಾರ್ಡರ್​ ದಾಟಿ ಬಂದು, ದೇಶ ಕಾಯೋ ದಿಟ್ಟ ಯೋಧರನ್ನು ಹುಟ್ಟು ಹಾಕ್ತಿದ್ದಾರೆ ಸೀಮಾ ರಾಯ್​.. ತಮ್ಮ ಸೇವೆಗೆ ದುಡ್ಡು ಕೂಡ ಪಡೆಯದೇ, ನಿಸ್ವಾರ್ಥ ದೇಶಸೇವೆ ಮಾಡಿದ್ದಾರೆ. ಆದ್ರೆ ನಿಜ ಜೀವನದಲ್ಲಿ ಆಕೆ ಅನುಭವಿಸಿದ ಪರಿಸ್ಥಿತಿ ಇದ್ಯಲ್ಲಾ.. ನಿಜಕ್ಕೂ ಯಾರಿಗೂ ಬೇಡ ಅನ್ಸುತ್ತೆ.. ಆ ಕರುಣಾಜನಕ ಕಥೆ ಮುಂದಿದೆ ಓದಿ..
------------------------------------
ಸೀಮಾ ರಾವ್​​ ಓದಿದ್ದು ಎಂಬಿಬಿಎಸ್.. ಮನಸ್ಸು ಮಾಡಿದ್ರೆ, ಕೈತುಂಬಾ ಸಂಬಳ ಬರೋ ಕೆಲಸ ನೋಡ್ಕೊಂಡು, ಫಾರಿನ್​ನಲ್ಲಿ ಸೆಟ್ಲ್​ ಆಗಬಹುದಿತ್ತು. ಆದ್ರೆ, ತಂದೆಯಿಂದ ಬಂದ ದೇಶ ಪ್ರೇಮ, ಆಕೆಯನ್ನು ಭಾರತದ ಸೇವೆಗೆ ಅಣಿಯಾಗುವಂತೆ ಮಾಡಿತ್ತು..

ಓದಿನಲ್ಲೂ ಸೀಮಾ ರಾವ್​ ಭೇಷ್ ಅನ್ನಿಸಿಕೊಂಡಾಕೆ ಕಣ್ರಿ.. ಎಂಬಿಬಿಎಸ್​, ಎಂಬಿಎ ಓದಿದ್ದಾರೆ. ಇದಾದ ನಂತರ, ಮಿಲಿಟರಿ ಸೈನ್ಸ್​ ಅನ್ನೂ ಅರೆದು ಕುಡಿದಿದ್ದಾರೆ.. ಕಾನೂನಿನಲ್ಲಿ ಪಿಹೆಚ್​ಡಿ ಮಾಡಿ, ಡಾಕ್ಟರ್​ ಸೀಮಾ ರಾವ್ ಅಂತ ಬಿರುದಾಂಕಿತರಾಗಿದ್ದಾರೆ.. ಕರಾಟೆ, ಮಾರ್ಷಲ್​ ಆರ್ಟ್​ನಲ್ಲಂತೂ, ಇವ್ರನ್ನು ಮೀರಿಸೋರು ಯಾರೂ ಇಲ್ಲ.. ಇದೇ ಇವ್ರಿಗೆ ವರವಾಗಿದ್ದು..

ಮಿಲಿಟರಿ ತಂಡದಲ್ಲಿ ಗಂಡಭೇರುಂಡನಾಗಿ ಹೋರಾಡಿದ ದೀಪಕ್ ರಾಯ್​ ಜೊತೆ ಸೀಮಾರಾಯ್​ ಮದುವೆಯಾಗುತ್ತೆ ಕಣ್ರಿ.. ಇವ್ರ ಈ ಸಾಧನೆಗೆ ಬೆನ್ನೆಲುಬಾಗಿ ನಿಲ್ತಾರೆ ದೀಪಕ್ ರಾಯ್.. 90 ರ ದಶಕದಲ್ಲಿ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಸೇನೆಗೆ ಸೇರಿಕೊಳ್ತಾರೆ.. ಆ ಮೂಲಕ, ಭಾರತದ ಮೊದಲ ಲೇಡಿ ಕಮಾಂಡೋ ಟ್ರೈನರ್ ಆಗಿ ತಮ್ಮ ಸೇವೆ ಆರಂಭಿಸ್ತಾರೆ..

ಯುದ್ಧಭೂಮಿಯಲ್ಲಿ ಶತೃ ಹೂಡುವ ತಂತ್ರಕ್ಕೆ ಹೇಗೆ ಪ್ರತಿ ತಂತ್ರ ಹೂಡ್ಬೇಕು ಅನ್ನೋ ಟ್ರಿಕ್ಸ್ ಅನ್ನ ಹೇಳಿಕೊಟ್ಟಿದ್ದಾರೆ. ವೈಮಾನಿಕ ಸಾಹಸದಲ್ಲೂ ಶೌರ್ಯ ಮರೆದಿದ್ದಾರೆ.. ಕೈನಲ್ಲಿ ಯಾವ ಆಯುಧ ಇಲ್ದೇ ಇದ್ರೂ, ಶತೃ ಎದುರಾದಾಗ, ಆತನನ್ನ ಹೇಗೆ ಕ್ಷಣಾರ್ಧದಲ್ಲಿ ನೆಲಕ್ಕುರುಳಿಸಬೇಕು ಅನ್ನೋ ಟ್ರಿಕ್ಸ್​ಗಳು ಸೀಮಾರಾಯ್​ಗೆ ಚೆನ್ನಾಗಿ ಗೊತ್ತಿದೆ. ಆ ತಂತ್ರಗಳನ್ನು ಕಮಾಂಡೋಗಳಿಗೆ ಕಲಿಸಿಕೊಟ್ಟಿದ್ದಾರೆ.

ಇನ್ನು ಸ್ಕೈ ಡೈವಿಂಗ್​ನಲ್ಲೂ ಸೀಮಾರಾಯ್​ಗೆ ಸರಿ ಸಾಟಿ ಯಾರೂ ಇಲ್ಲ ಕಣ್ರಿ.. ಹಾರೋ ವಿಮಾನದಿಂದ ನೆಲಕ್ಕೆ ಜಿಗಿದು, ಸಾಹಸ ಮೆರೆಯೋ ಎಂಟೆದೆ ಗುಂಡಿಗೆ ಇವ್ರದ್ದು.. ಬೆಟ್ಟ ಗುಡ್ಡಗಳಲ್ಲಿ, ಪವರ್ತಾರೋಹಣದಲ್ಲೂ, ಹಿಗ್ಗಿನಿಂದಲೇ ಮುನ್ನುಗ್ಗೋ ಛಲಗಾತಿ ಇವ್ರು..

ಮಹಿಳೆಯಾಗಿದ್ರೂ, ಇವ್ರು ಕಮಾಂಡೋಗಳಿಗೆ ನೀಡ್ತಿರೋ ಟ್ರೈನಿಂಗ್​ ತುಂಬಾನೇ ಮಹತ್ವದ್ದಾಗಿದೆ ಕಣ್ರಿ. ಅದ್ರಲ್ಲೂ 2008 ರಲ್ಲಿ ಮುಂಬೈ ಮೇಲೆ ದಾಳಿ ನಡೆದಾಗ, ಸೀಮಾ ರಾಯ್​ ತರಬೇತಿ ನೀಡಿದ ಕಮಾಂಡೋ ಪಡೆಯ ಸಾಹಸ ನಿಜಕ್ಕೂ ಮೆಚ್ಚಲೇ ಬೇಕು.. ಅದಿಕ್ಕೇ.. ಇವ್ರ ಸಾಹಸ ಪ್ರವೃತ್ತಿಯನ್ನು ಕಂಡ ಭಾರತ ಸೇನೆ, ಡಾ.ಸೀಮಾರಾವ್​ ಮತ್ತು ಪತಿ ದೀಪಕ್​ ರಾವ್​ ಅವ್ರನ್ನ ಗೌರವಿಸ್ತು. ಭಾರತದ ಎಲ್ಲಾ ರಾಜ್ಯಗಳಲ್ಲಿರೋ ಕಮಾಂಡೋ ಪಡೆಗೆ ಟ್ರೈನಿಂಗ್ ನೀಡೋದಕ್ಕೆ ಇವರನ್ನ ನೇಮಿಸಿತು..

ಸೇನಾ ಮುಖಂಡರ ಆದೇಶದ ಅನ್ವಯ ರಾಜ್ಯಗಳಲ್ಲಿರೋ ಕಮಾಂಡೋಪಡೆಗೆ ತರಬೇತಿ ನೀಡೋದಕ್ಕೆ ಅಂತ ಅಣಿಯಾತ್ತು ಈ ಸೀಮಾ ರಾವ್​​ ತಂಡ..
----------------------------------------------
ಭಾರತ ಸೇನೆಯಲ್ಲಿ 18 ವರ್ಷಗಳ ನಿಸ್ವಾರ್ಥ ಸೇವೆ
20 ರಾಜ್ಯಗಳಲ್ಲಿನ ಕಮಾಂಡೋಗಳಿಗೆ ತರಬೇತಿ
15 ಸಾವಿರ ಕಮಾಂಡೋಗಳಿಗೆ ಹೇಳಿಕೊಟ್ರು ಟ್ರಿಕ್ಸ್
----------------------------------------------

ಭಾರತ ಸೇನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಸೀಮಾ ರಾವ್, ಒಟ್ಟು 18 ವರ್ಷಗಳ ಕಾಲ ಕಮಾಂಡೋಗಳಿಗೆ ಮಾರ್ಷಲ್ ಆರ್ಟ್ಸ್​​ ಟ್ರಿಕ್ಸ್​ಗಳನ್ನು ಹೇಳಿ ಕೊಟ್ಟಿದ್ದಾರೆ. ಸುಮಾರು 20 ರಾಜ್ಯಗಳಲ್ಲಿರೋ 15 ಸಾವಿರಕ್ಕೂ ಹೆಚ್ಚು ಕಮಾಂಡೋಗಳನ್ನು ಟ್ರೈನಪ್ ಮಾಡಿದ್ದಾರೆ.

ಗನ್ ಹಿಡ್ಕೊಂಡು ಎದುರಾಳಿ ಗುಂಡಿಗೆ ಸೀಳೋದೂ ಗೊತ್ತು., ಬರೀ ಗೈನಲ್ಲಿ ಎದುರಾಳಿಯ ಎದೆ ಬಗೆಯೋದು ಗೊತ್ತು.. ಆಧುನಿಕ ಯುದ್ಧ ತಂತ್ರಜ್ಞಾನಗಳ ಬಳಕೆ ಕೂಡ ಇವ್ರಿಗೆ ಕರಗತವಾಗಿತ್ತು. ಈ ಎಲ್ಲಾ ಟ್ರಿಕ್ಸ್​​ಗಳನ್ನು ಯುದ್ಧಭೂಮಿಯಲ್ಲಿ ನಿಂತು ಭಾರತ ಮಾತೆಯ ರಕ್ಷಣೆಗಾಗಿ ಹೋರಾಟ ಮಾಡ್ತಿರೋ ವೀರ ಯೋಧರಿಗೆ ಹೇಳಿ ಕೊಟ್ಟಿದ್ದಾರೆ.

ಸೀಮಾರಾವ್​ಗೆ ಗೊತ್ತಿಲ್ದೇ ಇರೋ ವಿಷ್ಯಾನೇ ಇಲ್ಲಾ.. ಅವ್ರು ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್ ಆಗಿದ್ರು. ಸೇನಾ ಕಮಾಂಡರ್ ಆದ್ರು.. ಆಮೇಲೆ ಲೇಖಕರೂ ಆದ್ರು.. ಇಷ್ಟೆಲ್ಲಾ ವ್ಯಕ್ತಿತ್ವವುಳ್ಳ ಸೀಮಾರಾವ್​ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ..? ಆ ಸ್ಟೋರಿ ಕೇಳಿದ್ರೆ, ನಿಜಕ್ಕೂ ನೀವು ಕಣ್ಣೀರ್ ಹಾಕ್ತೀರ.. ಆ ಸ್ಟೋರಿ ಮುಂದಿದೆ ಓದಿ..
------------------------------------------------------------------
ಸೀಮಾ ಬಗ್ಗೆ ನೀವು ತಿಳ್ಕೊಬೇಕಾದಂಥ ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯಾ ಇದೆ.. ಅದೇನಪ್ಪಾ ಅಂದ್ರೆ, ಸೀಮಾರಾವ್ ಕೇವಲ ಸೇನಾ ಕಮಾಂಡರ್ ಟ್ರೈನರ್ ಮಾತ್ರವಲ್ಲ.. ಬ್ಯೂಟಿ ಕ್ವೀನ್ ಕೂಡ ಹೌದು.. ಪದಗಳನ್ನು ಅದ್ಬುತವಾಗಿ ಪೋಣಿಸೋ ಸಾಹಿತಿ ಕೂಡ ಹೌದು.. ಆದ್ರೆ ಸೇನೆಗೆ ಮಾತ್ರವೇ ತಮ್ಮ ಸಂಪೂರ್ಣ ಬದುಕನ್ನು ಮುಡಿಪಿಟ್ಟಿದ್ರು.. ಆದ್ರೆ ಅವ್ರ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ..? ಮುಂದೆ ಓದಿ

ಸೀಮಾರಾವ್ ಅಂತಿಂಥ ಹೆಣ್ಣಲ್ಲ.. ಮಹಿಳಾ ಮಾಣಿಕ್ಯ ಕಣ್ರಿ.. ಭಾರತದಂಥ ರಾಷ್ಟರರದಲ್ಲಿ ಮಿಲಿಟರಿ ಸೈನಿಕರಿಗೆ ತರಬೇತಿ ನೀಡೋ ಸಾಮರ್ಥ್ಯ ಇವ್ರಿಗೆ ಇದೆ ಅಂದ್ರೆ, ಇವ್ರ ತಾಕತ್ತು ಎಂಥದ್ದು ಅಂತ ಗೊತ್ತಾಗುತ್ತೆ..

ಇವ್ರು ಬರೀ ಸೇನಾ ಕ್ಷೇತ್ರದಲ್ಲಿ ಮಾತ್ರ ಹೆಸರಾಗಿಲ್ಲ ಕಣ್ರಿ. ಬ್ಯೂಟಿ ಕ್ಷೇತ್ರದಲ್ಲೂ ಮಿಂಚಿದ್ದಾರೆ.. ರೂಪದರ್ಶಿಯಾಗಿ ಕೂಡ, ತಮ್ಮನ್ನು ತಾವು ಗುರ್ತಿಸಿಕೊಂಡಿದ್ರು ಈ ಸೀಮಾ ರಾವ್​.. ಆದ್ರೆ ದೇಶಸೇವೆ ಅನ್ನೋದು ಇವ್ರನ್ನು ಕಮಾಂಡೋ ಟ್ರೈನರ್​ ಆಗಿ ಮಾಡ್ತು ಕಣ್ರಿ.. ಅದಿಕ್ಕೆ ಬಣ್ಣದ ಲೋಕವನ್ನು ಬಿಟ್ಟು, ವೈದ್ಯಕೀಯ ಪದವಿಯನ್ನು ಪಕ್ಕಕ್ಕಿಟ್ಟು, ಕಮಾಂಡೋಗಳಿಗೆ ತಂತ್ರಗಳನ್ನು ಕಲಿಸಿಕೊಡೋ ಶಕ್ತಿಯಾಗಿ ನಿಂತುಬಿಟ್ರು..

ಸೀಮಾ ರಾವ್​ ಶಿಷ್ಯನ ಜೊತೆ ಯಾವ ಶತೃವಾದ್ರೂ ಯುದ್ಧಕ್ಕೆ ಇಳಿದ ಅಂದ್ರೆ, ಆತನ ಮೈಮೂಳೆಗಳು ಕ್ಷಣಮಾತ್ರದಲ್ಲು ಪುಡಿ ಪುಡಿಯಾಗ್ತಿದ್ದಿದ್ದು ಗ್ಯಾರಂಟಿ ಕಣ್ರಿ.. ಬರೀ ಕೈನಲ್ಲೇ ಇದ್ರೂ, ಶತೃ ತನ್ನ ಆಯುದ್ಧ ತೆಗೆಯೋಷ್ಟ್ರಲ್ಲಿ ಮಣ್ಣು ಮುಕ್ಕಿಸಿಬಿಡ್ತಾರೆ..

ಇಂಥಾ ಹಲವಾರು ಟ್ರಿಕ್ಸ್್​ಗಳನ್ನು ಸೀಮಾರಾಯ್ ಕಮಾಂಢೋಗಳಿಗೆ ಹೇಳಿಕೊಟ್ಟಿದ್ದಾರೆ. ಇಷ್ಟೇ ಅಲ್ಲ, ತನ್ನಲ್ಲಿರೋ ತಂತ್ರಗಾರಿಕೆಯನ್ನ ಮುಂದಿನ ಜನಾಂಗಕ್ಕೂ ತಿಳಿಸ್ಬೇಕು ಅಂತ, ಪುಸ್ತಕದ ರೂಪದಲ್ಲಿ ಅದನ್ನು ಅಚ್ಚೊತ್ತಿದ್ದಾರೆ. ಮಾರ್ಷಲ್ ಆರ್ಟ್ಸ್​ ಮತ್ತು ತಂತ್ರಗಾರಿಕೆ ಜೊತೆಗೆ ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ ಈ ಸೀಮಾ ರಾವ್​..

ಇವ್ರ ಈ ಸೇವೆಗೆ ರಾಷ್ಟ್ರಪತಿ ಪದಕ ಒಲಿದು ಬಂದಿದೆ. ಭಾರತದ ದಿಟ್ಟ ಮಹಿಳೆಯ ಸಾಹಸವನ್ನು ಕಂಡು ಬೆರಗಾದ ಅಮೆರಿಕ ಮತ್ತು ಮಲೇಷಿಯಾದಂಥ ದೇಶಗಳೂ ಕೂಡ, ಇವ್ರನ್ನ ಸನ್ಮಾನಿಸಿವೆ. ದೇಶಕ್ಕಾಗಿ ಇಷ್ಟೆಲ್ಲಾ ಸೇವೆ ಮಾಡಿದ ಈ ಸಾಹಸಿ, ಪರಿಸ್ಥಿತಿ ಈಗ ಅಧೋಗತಿ ತಲುಪಿದೆ.. ಈಗ್ಲೋ ಆಗ್ಲೋ ಅನ್ನೋ ಜೀವ ಭಯದಲ್ಲಿ ಸೀಮಾ ರಾವ್​ ಬದುಕ್ತಿದ್ದಾರೆ ಕಣ್ರಿ.

ತಮ್ಮ 18 ವರ್ಷದ ತರಬೇತಿಯಲ್ಲಿ, ಯಾರೂ ಮಾಡಲಾಗದ ಟ್ರಿಕ್ಸ್​​ಗಳನ್ನು ಮಾಡಿದ್ದಾರೆ. ಸಾವಿರಾರು ಕಮಾಂಡೋಗಳಿಗೆ ಅದನ್ನ ಹೇಳಿಕೊಟ್ಟಿದ್ದಾರೆ. ಆದ್ರೆ ಈ ವೇಳೆ, ಸೀಮಾರಾವ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ ಕಣ್ರಿ.. ಅದು ಈಗ ಅವ್ರನ್ನ ಕಾಡ್ತಾ ಇದೆ.. ಅಷ್ಟೇ ಅಲ್ಲ, ದೇಹದ ಕೆಲವು ಮೂಳೆಗಳು ಮುರಿದು ಹೋಗಿವೆ. ಇದ್ರ ಜೊತೆಗೆ ಅಮ್ನೇಷಿಯಾ ಅನ್ನೋ ಖಾಯಿಲೆ ಇವರನ್ನ ಕಿತ್ತು ತಿಂತಾ ಇದೆ.

ಇನ್ನು ಇವ್ರ ಪತಿ ದೀಪಕ್​ ರಾವ್​​ ಆದ್ರೂ ಇವ್ರನ್ನ ನೋಡ್ಕೋತಾರೆ ಅಂತ ಅಂದ್ರೆ, ಅವ್ರಿಗೂ ಆ ದೇವ್ರು ಖಾಯಿಲೆಗಳ ಸರಮಾಲೆ ನೀಡಿದ್ದಾನೆ. ದೀಪಕ್​ ರಾವ್​ ಅವ್ರ ಒಂದು ಕಣ್ಣು ಈಗ ಕಾಣ್ತಾ ಇಲ್ಲ ಕಣ್ರಿ.. ಮೊಣಕಾಲಿನ ಸಮಸ್ಯೆ ಕೂಡ ಅವ್ರನ್ನ ಬಾಧಿಸ್ತಾ ಇದೆ..

ದೇಶಕ್ಕಾಗಿ ಬದುಕನ್ನೇ ಮುಡಿಪಿಟ್ಟ ಈ ದಂಪತಿಗಳ ಪರಿಸ್ಥಿತಿ ಈಗ ನಿಜಕ್ಕೂ ಅಯ್ಯೋ ಅನ್ನೋ ಥರ ಇದೆ ಕಣ್ರಿ,..  ತಮ್ಮ ಸೇವೆಗೆ ಸರ್ಕಾರದಿಂದ ಒಂದು ರೂಪಾಯಿ ಹಣವನ್ನೂ ಪಡೆಯದೇ, ದೃಶ ಪ್ರೇಮ ಮೆರೆದ ಈ ದಂಪತಿಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ..

ನೋಡಿದ್ರಲ್ಲಾ.. ಭಾರತದ ದಿಟ್ಟ ಮಹಿಳೆಯ ಸಾಹಸದ ಕಥೆಯನ್ನ.. ಅವಕಾಶ ಕೊಟ್ರೆ, ಜಗತ್ತೇ ಮೆಚ್ಚುವಂತೆ ಬೆಳೀತೀನಿ ಅನ್ನೋದಕ್ಕೆ, ಸೀಮಾ ರಾವ್​ ಬದುಕೇ ಸಾಕ್ಷಿ.. 18 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಈ ದಂಪತಿಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅನ್ನೋದೇ ನಮ್ಮ ಆಶಯ..

Отправить комментарий

0 Комментарии