Hot Posts

10/recent/ticker-posts

ಹಿಂದೂ ದೇವರಿಗೆ ವಿದೇಶಿಗರೇ ವಿಲನ್!


ವಿದೇಶೀ ನೆಲದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೀತಿದೆ ಅಟ್ಯಾಕ್.. ಭಾರತದ ಧರ್ಮ ಸಹಿಷ್ಣುತೆ ಬಗ್ಗೆ ಭಾಷಣ ಮಾಡಿದ ಒಬಾಮಾ ನಾಡಲ್ಲೇ, ಹಿಂದೂ ದೇವಾಲಯಗಳ ಮೇಲೆ ನಡೀತಿದೆ ದಾಳಿ. ವಿದೇಶದಲ್ಲಿ ಎಷ್ಟು ಹಿಂದೂ ದೇವಾಲಯಗಳ ಮೇಲೆ ಅಟ್ಯಾಕ್ ಆಗಿದೆ ಗೊತ್ತಾ..?

ಯಸ್.. ಇದು ನಿಜಾ.. ಜಗತ್ತನ್ನು ಕಾಪಾಡೋ ದೇವ್ರಿಗೇ ಈಗ ಕಿಡಿಗೇಡಿಗಳ ಭಯ ಶುರುವಾಗಿದೆ ಕಣ್ರಿ.. ವಿದೇಶದಲ್ಲಿರೋ ಹಿಂದೂ ದೇವಾಲಯಗಳ ಮೇಲೆ ಮೇಲಿಂದ ಮೇಲೆ ದಾಳಿ ನಡೀತಿದೆ. ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದಿದ್ದ ಬರಾಕ್ ಒಬಾಮಾ, ಧರ್ಮ ಸಹಿಷ್ಣುತೆನೇ ಭಾರತದ ಶಕ್ತಿ ಅಂತ ಹೇಳಿದ್ರು.. ಈ ನೆಲದ ಧರ್ಮ ಸಹಿಷ್ಣುತೆಯನ್ನು ಮೆಚ್ಚಿದ್ರು.

ಬುದ್ದಿ ಹೇಳೋರೇ ಬದ್ನೇಕಾಯಿ ತಿಂತಾರೆ ಅಂತಾರಲ್ಲಾ.. ಹಾಗಿದೆ ಕಣ್ರೀ ಅಮೆರಿಕದ ನಡೆ.. ಯಾಕಂದ್ರೆ, ಒಬಾಮಾ ನಾಡಲ್ಲೇ ಧರ್ಮಾಂಧರ ದರ್ಬಾರ್ ನಡೀತಿದೆ. ಹಿಂದೂ ದೇಗುಲಗಳ ಮೇಲೆ ಕಿಡಿಗೇಡಿಗಳು ನಿರಂತರವಾಗಿ ದಾಳಿ ನಡೆಸ್ತಾನೇ ಇದ್ದಾರೆ.

ಒಬಾಮಾ ನಾಡಲ್ಲೇ ಹಿಂದೂ ದೇವಾಲಯಗಳ ಮೇಲೆ ದಾಳಿ
ಒಂದೇ ತಿಂಗಳಲ್ಲಿ ಎರಡು ದೇವಾಲಯಗಳ ಮೇಲೆ ಅಟ್ಯಾಕ್

ಯಸ್​.. ನೀವು ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ.. ಒಂದೇ ತಿಂಗಳಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.

---------------------------------
ದಿನಾಂಕ : 26, ಫೆಬ್ರವರಿ, 2015
ದಾಳಿ : ಸನಾತನ ಧರ್ಮ ಕೇಂದ್ರ
ಸ್ಥಳ : ಕೆಂಟ್​​, ವಾಷಿಂಗ್​ಟನ್​ ಡಿಸಿ
---------------------------------





 ಇಲ್ನೋಡಿ.. ಒಬಾಮಾ ನಾಡಲ್ಲಿರೋ ಹಿಂದೂ ದೇವಸ್ಥಾನದ ಗತಿ ಏನಾಗಿದೆ ಅಂತ.. ಇದು ವಾಷಿಂಗ್​ಟನ್​ ಡಿಸಿಯಲ್ಲಿರೋ ಸನಾತನ ಧರ್ಮ ಕೇಂದ್ರ. ಗುರುವಾರ ರಾತ್ರಿ ದೇವಸ್ಥಾನದಿಂದ ಹೋಗಿದ್ದ ಜನರು, ಶುಕ್ರವಾರ ಬೆಳಿಗ್ಗೆ ವಾಪಸ್ ಬಂದು ನೋಡೋಷ್ಟ್ರಲ್ಲಿ, ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ವು.. ಇಷ್ಟೇ ಅಲ್ಲ, ದೇಗುಲದ ಗೋಡೆ ಮೇಲೆ ‘ಫಿಯರ್​’ ಅಂತ ಬರೆದು ಭಯ ಸೃಷ್ಟಿಸಿದ್ರು ಧರ್ಮಾಂಧರು.. ಇನ್ನು ಈ ಸನಾತನ ಧರ್ಮ ಕೇಂದ್ರದ ಮೇಲೆ ದಾಳಿ ನಡೆಯೋದಕ್ಕಿಂತ ಜಸ್ಟ್ 10 ದಿನ ಮೊದ್ಲು, ಬೇರೊಂದು ಹಿಂದೂ ದೇವಸ್ಥಾನದ ಮೇಲೆ ಅಟ್ಯಾಕ್ ನಡೆದಿತ್ತು..



---------------------------------
ದಿನಾಂಕ : 16, ಫೆಬ್ರವರಿ, 2015
ದಾಳಿ : ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಿಕ ಕೇಂದ್ರ
ಸ್ಥಳ : ಬೋಥೆಲ್ ನಗರ, ವಾಷಿಂಗ್​ಟನ್​ ಡಿಸಿ
---------------------------------

ಫೆಬ್ರುವರಿ 17, 2015 ರ ಶಿವರಾತ್ರಿಗೆ, ಅಮೆರಿಕದ ಹಿಂದೂಗಳೆಲ್ಲಾ ತಯಾರಿ ನಡೆಸಿದ್ರು.. ಬೋಥೆಲ್​​ ನಗರದಲ್ಲಿರೋ ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಕ ಕೇಂದ್ರ ಎಲ್ಲಾ ರೀತಿಯಲ್ಲೂ ಸಿಂಗಾರಗೊಂಡಿತ್ತು. ಆದರೆ ಶಿವರಾತ್ರಿಯ ಹಿಂದಿನ ದಿನಾನೇ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ರು.. ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಲ್ಲದೇ, ಶಿವನ ಮೂರ್ತಿಯನ್ನು ಧ್ವಂಸಗೊಳಿಸಿದ್ರು ವಿಧ್ವಂಸಕರು..

ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳು ಒಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿದ್ರು.. ಇನ್ನು ಇಲ್ಲೂ ಕೂಡ ಒಂದು ಸಂದೇಶವನ್ನು ಬರೆದು ಹೋಗಿದ್ರು.. ಅದೇ ಗೆಟ್ ಔಟ್​..






ಯಸ್.. ಹಿಂದೂಗಳನ್ನು ಅಮೆರಿಕ ನೆಲದಿಂದ ಓಡಿಸೋ ಹುನ್ನಾರ ಕಿಡಿಗೇಡಿಗಳದ್ದು ಅನ್ನೋದು ಅಲ್ಲಿ ಸ್ಪಷ್ಟವಾಗಿ ಗೊತ್ತಾಗಿಬಿಟ್ಟಿತ್ತು. ಯಾಕಂದ್ರೆ, ದೇವಸ್ಥಾನದ ಮೇಲೆ ದಾಳಿ ನಡಿಸಿದ ಕಿಡಿಗೇಡಿಗಳು ಗೆಟ್​ ಔಟ್​ ಅಂತ ಬೆರೆದು ಹೋಗಿದ್ರು. ಅದರ ಪಕ್ಕ ನಾಜಿ ಪಂಥದ ಸ್ವಸ್ತಿಕ್​​ ಚಿಹ್ನೆ ಕೂಡ ಇತ್ತು..

ಇನ್ನು ಈ ದೇವಸ್ಥಾನದಿಂದ ಅರ್ಧ ಕಿ.ಮೀ ದೂರ ಇರೋ ಸ್ಕೈ ವೀವ್​​ ಮಿಡಲ್​​ ಸ್ಕೂಲ್​ ಮೇಲೂ ಕಿಡಿಗೇಡಿಗಳು ದಾಳಿ ಮಾಡಿದ್ರು.. ಆ ಸ್ಕೂಲಿನ ಗೋಡೆ ಮೇಲೂ ಒಂದು ಸಂದೇಶ ಇತ್ತು..

ಗೆಟ್ ಔಟ್​​ ಮುಸ್ಲಿಂ ಅನ್ನೋ ಸಂದೇಶ ಬರೆದಿದ್ದ ಕಿಡಿಗೇಡಗಳು, ಅಲ್ಲೂ ಕೂಡ ನಾಜಿ ಪಂಥದ ಸ್ವಸ್ತಿಕ್ ಸಿಂಬಲ್​ ಇತ್ತು..!

---------------------------------
2013-14 ರಲ್ಲೂ ಮುಂದುವರಿದ ದಾಳಿ
ಜಾರ್ಜಿಯಾಯದಲ್ಲಿ ಶಿವನ ಮೂರ್ತಿ ಧ್ವಂಸ
---------------------------------

ಇನ್ನು ಜಾಜಿರ್ಯಾದ ಈ ಶಿವನ ದೇವಸ್ಥಾನದ ಮೇಲೆ, ಈ ಹಿಂದಿನಿಂದಲೂ ವಿಧ್ವಂಸಕರು ಕಣ್ಣು ಹಾಕಿದ್ದಾರೆ. 2013 ರಲ್ಲಿ ಈ ದೇವಸ್ಥಾನದ ಮೇಲೆ ದಾಳಿ ನಡೆದಿತ್ತು. ಆದ್ರೆ ಅಷ್ಟ್ರಲ್ಲೇ ಜಸ್ಟ್ ಮಿಸ್ಸು ಅನ್ನೋ ಹಾಗೇ, ದೊಡ್ಡ ದುರಂತವೊಂದು ತಪ್ಪಿತ್ತು.. ಅಷ್ಟ ಮಾತ್ರಕ್ಕೆ ಪಾತಕಿಗಳು ಸುಮ್ಮನಾಗಲಿಲ್ಲ.. 2014ರ ಆಗಸ್ಟ್ ನಲ್ಲಿ ಮತ್ತೆ ಅಟ್ಯಾಕ್ ಮಾಡಿದ ಕಿಡಿಗೇಡಿಗಳು, ಶಿವನ ಮೂರ್ತಿಯನ್ನು ಧ್ವಂಸಗೊಳಿಸಿದ್ರು.. ಇಲ್ಲೂ ಕೂಡ ಲೋಲ್​, ಹ ಹ ಅಂತ ಕುಹಕದ ನಗೆ ಬೀರುವ ಸಂದೇಶ ಬರೆದಿದ್ರು ಆಗಂತುಕರು

ಒಂದಲ್ಲಾ ಎರಡಲ್ಲ.. ಅಮೆರಕದ ನೆಲದಲ್ಲಿರೋ ಹಿಂದೂ ದೇವಾಲಯಗಳ ಮೇಲೆ ಅಲ್ಲಿನ ಕಿಡಿಗೇಡಿಗಳು ದಾಳಿ ನಡೆಸ್ತಾನೇ ಇದ್ದಾರೆ. ಅವ್ರ ಟಾರ್ಗೆಟ್ ಬರೀ ಹಿಂದೂ ದೇವಸ್ಥಾನಗಳು ಮಾತ್ರವಲ್ಲ.. ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಅಮೆರಿಕದಿಂದ ಹೊರ ಹಾಕೋದೇ ಅವ್ರ ಮೇನ್​​ ಉದ್ದೇಶ ಕಣ್ರಿ.. ಅದಿಕ್ಕೆ, ಸಿಕ್ಕ ಸಿಕ್ಕ ಧರ್ಮ ಕೇಂದ್ರದ ಮೇಲೆ ದಾಳಿ ಮಾಡಿ, ಅದ್ರ ಮೇಲೆ ಗೆಟ್ ಔಟ್​ ಅಂತ ಬರೆದು, ನೀವು ಇಲ್ಲಿಂದ ಹೊರಟು ಹೋಗಿ ಅಂತ ಭಯ ಸೃಷ್ಟಿಸ್ತಿದ್ದಾರೆ.

ಬರೀ ಅಮೆರಿಕ ಮಾತ್ರವಲ್ಲ, ಜಗತ್ತಿನಾದ್ಯಂತ ಹಿಂದೂ ದೇವಾಲಯಗಳಿವೆ. ಆದ್ರೆ ಅವೆಲ್ಲಾ ಎಷ್ಟು ಡೇಂಜರ್ ಜೋನ್​ನಲ್ಲಿವೆ.. ಎಷ್ಟು ಹಿಂದೂ ದೇವಸ್ಥಾನಗಳ ಮೇಲೆ ಭೀಕರ ದಾಳಿ ಆಗಿದೆ ಅನ್ನೋದನ್ನು ಮುಂದೆ ಓದಿ
-----------------------------------------------------
ಜಗತ್ತಿನಾದ್ಯಂತ ಹಿಂದೂ ದೇವಾಲಯಗಳು ವಿಸ್ತಾರಗೊಳ್ಳುತ್ತಲೇ ಇವೆ. ಆದ್ರೆ ಆಧುನಿಕ ಜಗತ್ತಿನಲ್ಲೂ ಘಜ್ನಿ ಮನಸ್ಥಿತಿಯ ಮಂದಿ, ದೇಗುಲಗಳ ಮೇಲೆ ದಾಳಿ ನಡೆಸ್ತಾನೇ ಇದ್ದಾರೆ. ವಿದೇಶಗಳಲ್ಲಿ ಹಿಂದೂ ದೇಗುಲಗಳ ಮೇಲೆ ನಡೀತಿರೋ ಆ ವಿಧ್ವಂಸಕ ಕೃತ್ಯಗಳ ಡೀಟೇಲ್ಸ್ ಇಲ್ಲಿದೆ ನೋಡಿ..

ಅಮೆರಿಕ ಒಂದ್ರಲ್ಲೇ ಒಂದೇ ತಿಂಗಳಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ, ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಆದ್ರೆ ಇದು ಕೇವಲ ಅಮೆರಿಕದಲ್ಲಿ ಮಾತ್ರ ಅಲ್ಲ.. ಜಗತ್ತಿನಾದ್ಯಂತ ಇರೋ ಹಿಂದೂ ದೇವಾಲಯಗಳ ಪರಿಸ್ತಿತಿ ಇದೆ.

----------------------
2013 ರಲ್ಲಿ ಕೆನಡಾದ ದೇಗುಲದ ಮೇಲೆ ದಾಳಿ
ಕಿಡಿಗೇಡಿಗಳಿಂದ ಲಕ್ಷ್ಮಿ ನಾರಾಯಣ ದೇಗುಲ ಧ್ವಂಸ
------------------------





ಇದು ಕೆನಡಾದ ಬ್ರಿಟೀಶ್​ ಕೊಲಂಬಿಯಾದಲ್ಲಿರೋ ಲಕ್ಷ್ಮೀ ನಾರಾಯಣ ದೇವಸ್ಥಾನ.. ಕೆನಡಾದಲ್ಲಿರೋ ಹಿಂದೂಗಳಿಗೆ ಈ ದೇವಸ್ಥಾನವೇ ಹಿಮಾಲಯದ ಕಾಶಿ ಇದ್ದಂಗೆ ಕಣ್ರಿ. ಯಾವುದೇ ಹಬ್ಬ ಹರಿದಿನ ಬಂದ್ರೂ, ಎಲ್ಲಾ ಇಲ್ಲೇ ಸೇರ್ಕೊಂಡು ಆಚರಣೆ ಮಾಡ್ತಾರೆ. ಆದ್ರೆ ಈ ದೇವಸ್ಥಾನದ ಮೇಲೂ ದಾಳಿ ಮಾಡಿದ್ಧಾರೆ ವಿಧ್ವಂಸಕರು..

ಇದು 2013, ಜೂನ್​ 23 ನೇ ತಾರೀಕು ಮಧ್ಯರಾತ್ರಿಯಲ್ಲಿ, ನಡೆದ ವಿಧ್ವಂಸಕ ಕೃತ್ಯ.. ಬೇಸ್​ ಬಾಲ್ ಬ್ಯಾಟ್​ಗಳಿಂದ ದೇವಸ್ಥಾನದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ರು ಆಗಂತುಕರು. ಘಟನೆ ವೇಳೆ ಬ್ಯಾಟ್​ನ ಒಂದು ತುಣುಕು ಅಲ್ಲಿ ಬಿದ್ದಿತ್ತು.. ಅದು ದೇವಾಲಯದ ಮೇಲೆ ದಾಳಿ ಮಾಡಿದವರು ಯಾರು ಅನ್ನೋ ಸಾಕ್ಷಿ ಹೇಳಿತ್ತು..
----------------------
2013 ರಲ್ಲಿ ಲಂಡನ್​​ನ ಆದಿಶಕ್ತಿ ದೇವಸ್ಥಾನ ಧ್ವಂಸ
ಸಿಸಿಟಿವಿಯಲ್ಲಿ ಸರೆಯಾಯ್ತು ಆಗಂತುಕನ ಕಳ್ಳಾಟ..!
------------------------

ಇಲ್ನೋಡಿ.. ಇದು ಮಹಾಶಕ್ತಿ ಸ್ವರೂಪಿಣಿಯಾದ ಆಸಿಶಕ್ತಿಯ ದೇವಸ್ಥಾನ.. ಹೀಂದೂ ಮಹಾಮಾತೆಯನ್ನು ಲಂಡನ್​ನಲ್ಲಿ ಪ್ರತಿಷ್ಠಾಪಿಸಿದ ಭಕ್ತರು, ಕಷ್ಟ ಅಂದಾಗೆಲ್ಲಾ ಮಾತೆಯ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಿದ್ರು.. ದೇಹಿ ಎಂದು ಬಂದವರಿಗೆ ದಯ ತೋರೋ ದೇವಿಯ ಮೇಲೆ ಆವತ್ತೊಂದಿನ ಆಗಂತುಕ ಎಂಟ್ರಿ ಕೊಟ್ಟಿದ್ದ..




ನೋಡಿ.. ಚೆನ್ನಾಗಿ ನೋಡಿ.. ಕೈನಲ್ಲಿ ಒಂದಷ್ಟು ಸ್ಫೋಟಕಗಳನ್ನು​ ಹಿಡ್ಕೊಂಡು ಕಳ್ ಹೆಜ್ಜೆ ಇಟ್ಕೊಂಡು ಬರ್ತಾ ಇದ್ದಾನಲ್ಲಾ.. ಇವ್ನೇ ಆಗಂತುಕ.. ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಿಡಿಗೇಡಿ ವ್ಯಕ್ತಿ, ತಾನು ತಂದಿದ್ದ ಸ್ಫೋಟಕಗಳನ್ನು ದೇಗುಲದ ಒಳಗಿಡ್ತಾನೆ.. ಆಮೇಲೆ ಮತ್ತೆ ಹೊರಗೆ ಹೋಗಿ, ಒಂದು ಕ್ಯಾನ್​ನಲ್ಲಿ ಪೆಟ್ರೋಲ್​ ತರ್ತಾನೆ.. ಆ ಪೆಟ್ರೋಲನ್ನು ದೇವಸ್ಥಾನದ ಒಳಗೆ ಮತ್ತು ಸ್ಫೋಟಕ ವಸ್ತುಗಳ ಮೇಲೆ ಸುರಿದು, ಬೆಂಕಿ ಹಚ್ಚಿ ಬಿಡ್ತಾನೆ.. ದೇವಸ್ಥಾನದಲ್ಲಿ ಆಗಂತುಕ ಏನೆಲ್ಲಾ ಮಾಡ್ತಾ ಇದ್ನೋ, ಅವೆಲ್ಲವೂ ದೇವಸ್ಥಾನದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗ್ತಾ ಇದ್ವು.
2013 ರಲ್ಲಿ ನಡೆದ ಈ ಘಟನೆ, ಲಂಡನ್​ನಲ್ಲಿ ನೆಲೆಸಿರೋ ಹಿಂದೂಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದ್ರೆ, ಯಾವುದಕ್ಕೂ ಜಗ್ಗದ ಆದಿಶಕ್ತಿಯ ಮಕ್ಕಳು, ಮತ್ತೆ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಆದ್ರೂ ಮತ್ತೆ ಈ ದೇವಸ್ಥಾನದ ಮೇಲೆ ಅಟ್ಯಾಕ್ ಆಗಬಹುದೇನೋ ಅನ್ನೋ ಆತಂಕದಲ್ಲೇ ದೇವಿಗೆ ಪ್ರತಿನಿತ್ಯ ಪೂಜೆ ನಡೀತಿದೆ.
-----------
ಡಿ.​​ 2011 ರಲ್ಲಿ ಕೃಷ್ಣನ ದೇವಾಲಯದ ಮೇಲೆ ದಾಳಿ
ಡೆನ್ಮಾರ್ಕ್​ನ ಕೂಪನ್​ಹೇಗನ್​ನಲ್ಲಿ ಘಟನೆ
--------------------


ಇನ್ನು ಇಡೀ ಜಗತ್ತನ್ನೇ ಬೆರಳ ತುದಿಯಲ್ಲಿ ಕುಣಿಸಿದ ಶ್ರೀ ಕೃಷ್ಣನನ್ನೂ ವಿಧ್ವಂಸಕರು ಸುಮ್ಮನೇ ಬಿಟ್ಟಿಲ್ಲ.. 2011 ರ ಡಿಸೆಂಬರ್​ನಲ್ಲಿ ಡೆನ್ಮಾರ್ಕ್​ನ ಕೂಪನ್​​ಹೇಗನ್​​ನಲ್ಲಿರೋ ಹರೇ ಕೃಷ್ಣ ದೇವಸ್ಥಾನದ ಮೇಲೆ ಹಾಡ ಹಗಲಲ್ಲೇ ದಾಳಿ ನಡೆದಿತ್ತು..
ಆವತ್ತು ಸಂಜೆ ಟೈಮಲ್ಲಿ, ಎಲ್ಲಾ ಕೃಷ್ಣನ ಭಕ್ತರು ಕೃಷ್ಣನ ಜಪದಲ್ಲಿ ಮಗ್ನರಾಗಿದ್ರು.. ಹರೇ ಕೃಷ್ಣ ಹರೇ ರಾಮ ಅಂತ, ಕೃಷ್ಣನ ನಾಮಸ್ಮರಣೆ ಮಾಡ್ತಿದ್ರು.. ಅದೇ ಟೈಮಲ್ಲಿ, ಹೊರಗಡೆಇಂದ ಕಲ್ಲುಗಳು ನುಗ್ಗಿ ಬಂದವು.. ಕಿಟಕಿ ಗಾಜುಗಳನ್ನು ತೂರಿಕೊಂಡು ಬಂದ ಕಲ್ಲುಗಳು, ಕೃಷ್ಣನ ಭಕ್ತರನ್ನು ಬೆಚ್ಚಿ ಬೀಳಿಸಿತ್ತು..!
----------------
ಮಾರ್ಚ್​ 2011 ರಲ್ಲಿ ಆಸ್ಟ್ರೇಲಿಯಾದಲ್ಲಿ ದಾಳಿ
ಐತಿಹಾಸಿಕ ಹಿಂದೂ ದೇವಾಲಯ ಧ್ವಂಸ..!
--------------
ಇದು ಆಸ್ಟ್ರೇಲಿಯಾದ ನೆಲದಲ್ಲಿರೋ ಶ್ರೀ ಕೃಷ್ಣನ ಐತಿಹಾಸಿಕ ಮಂದಿರ.. ಅಬರ್ನ್​ ಪ್ರದೇಶದಲ್ಲಿರೋ ಈ ಮಂದಿರದ ಮೇಲೂ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಾಚ್​​ 11, 2011 ರಲ್ಲಿ ಮುಸುಕು ಧಾರಿ ಗನ್​ ಮ್ಯಾನ್​ ಒಬ್ಬ, ಶ್ರೀ ಕೃಷ್ಣನ ಸನ್ನಿಧಾನಕ್ಕೆ ಗುಂಡಿಟ್ಟಿದ್ದ.. ಆ ಆಗಂತುಕ ಹಾರಿಸಿದ ಗುಂಡಿನ ರಭಸಕ್ಕೆ ಸಾಕ್ಷಿಯಾಗಿ ನಿಂತಿದ್ದವು, ದೇವಾಲಯದ ಈ ಗೋಡೆಗಳು..

ಈ ಶ್ರೀ ಮಂದಿರ ಉಗ್ರರ ಹಿಟ್​ ಲಿಸ್ಟ್​ನಲ್ಲಿ ಟಾಪ್​ ಸ್ಥಾನದಲ್ಲಿದೆ ಕಣ್ರಿ.. ಅದಿಕ್ಕೆ 2000 ರಲ್ಲಿ, 2004 ರಲ್ಲಿ ಮತ್ತು 2011 ರಲ್ಲಿ.. ಹೀಗೆ ಹಲವು ಬಾರಿ ಈ ದೇಗುಲದ ಮೇಲೆ ದಾಳಿಯಾಗಿವೆ.ಹೀಗೆ ಸಾಲು ಸಾಲು ದಾಳಿಗಳು, ಹಿಂದೂ ದೇವರ ಮೇಲಿನ ಕಿಡಿಗೇಡಿಗಳ ದಾಳಿಗೆ ಸಾಕ್ಷಿಯಾಗಿ ನಿಂತಿವೆ. ಇಷ್ಟಿದ್ರೂ, ಆಗಂತುಕರಿಗೆ ಹೆದರದೇ, ಹಿಂದೂ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸ್ತಿದ್ದಾರೆ ಸಾವಿರಾರು ಭಕ್ತರು..

ಕಟ್ಟಾ ವಿರೋಧಿ ಪಾಕಿಸ್ತಾನದಲ್ಲೂ ಹಿಂದೂ ದೇವಾಲಯಗಳಿವೆ. ಅಲ್ಲಿ ನಡೆಯೋ ದೇವಾಲಯಗಳ ದಾಳಿ ಮಾತ್ರ ನಿಜಕ್ಕೂ ಬೆಚ್ಚಿ ಬೀಳಿಸುವಂಥದ್ದು. ಆ ರೋಚಕ ದಾಳಿಯ ಬಗ್ಗೆ ಮುಂದೆ ಓದಿ
-------------------------------------------------------------
ಪಾಕಿಸ್ತಾನ ಭಾರತದ ಕಟ್ಟಾ ವಿರೋಧಿ.. ಅಂಥ ಜಾಗದಲ್ಲಿ ಹಿಂದೂ ದೇವಾಲಯ ಕಟ್ಬೇಕು ಅಂದ್ರೆ, ನಿಜಕ್ಕೂ ಡಬಲ್ ಗುಂಡಿಗೆ ಇರಬೇಕು.. ಯಾಕಂದ್ರೆ, ಅಲ್ಲಿ ಯಾವಾಗ ಏನಾಗುತ್ತೆ ಅನ್ನೋದು ಯಾರಿಗೂ ಗೊತ್ತೇ ಆಗಲ್ಲ.. ಸ್ವಲ್ಪ ಯಾಮಾರಿದ್ರೂ, ಇಡೀ ಪ್ರದೇಶವೇ ಹೊತ್ತಿ ಉರಿದು ಬಿಡುತ್ತೆ..

ಭಾರತದ ಕಟ್ಟಾ ವಿರೋಧಿ ಪಾಕಿಸ್ತಾನದ ನೆಲದಲ್ಲೂ ಸಾಕಷ್ಟು ಹಿಂದೂ ದೇವಾಲಯಗಳಿವೆ. ಇಸ್ಲಾಂ ನಾಡಿನಲ್ಲಿ ಹಿಂದೂ ಧರ್ಮದ ಹೆಜ್ಜೆಗುರುತಗಳಿವೆ.. ಆದ್ರೆ ಇಲ್ಲೇನಾದ್ರೂ ದೇಗುಲಗಳ ಮೇಲೆ ದಾಳಿಗಳು ನಡೆದ್ರೆ, ಅದು ಅತ್ಯಂತ ಭೀಕರ ಮತ್ತು ಭಯಾನಕವಾಗಿರುತ್ತೆ ಕಣ್ರಿ..

ಪಾಕ್​ ನೆಲದಲ್ಲೂ ಹಿಂದೂ ದೇಗುಲಗಳ ಮೇಲೆ ದಾಳಿ
ಅಟ್ಯಾಕ್​​ ನಡೆದಾಗ ಹೊತ್ತಿ ಉರಿಯುತ್ತೆ ಇಡೀ ಊರು!







ಯಸ್​.. ಇದು ಪಾಕಿಸ್ತಾನದ ಘೋರ ದೇಗುಲ ದಾಳಿಗೆ ಸಾಕ್ಷಿ ಕಣ್ರಿ.. ಹಿಂದೂಗಳ ಮೇಲೆ ಸಿಟ್ಟಿಗೆದ್ದ ಕಲ ಪಾಕಿಸ್ತಾನಿ ಗುಂಪುಗಳು, ಹಿಂದೂ ದೇವಾಲಯಕ್ಕೇ ಬೆಂಕಿ ಇಟ್ಟಿರೋ ದೃಶ್ಯ ಇದು.. ಮಾರ್ಚ್​ 16, 2014 ರಲ್ಲಿ ನಡೆದಿರೋ ಈ ದೃಶ್ಯ ಪಾಕ್​ ನೆಲದಲ್ಲಿ ಬದುಕ್ತಾ ಇರೋ ಹಿಂದೂ ಧರ್ಮೀಯರ ಎದೆಯಲ್ಲಿ ಇಂದಿಗೂ ನಡುಕ ಹುಟ್ಟಿಸ್ತಿದೆ. ಇನ್ನು ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಿದ ಕೆಲ ಗುಂಪುಗಳು, ದೇವಾಲಯ ಕೆಡವೋ ಪ್ರಯತ್ನ ಮಾಡಿದ್ದೂ ಇದೆ.. ಹಿಂದೂ ಧರ್ಮೀಯರ ಪವಿತ್ರ ಗ್ರಂಥ ಭಗವದ್ಗೀತೆಯನ್ನೂ ಸುಟ್ಟು ಹಾಕಿದ್ದಾರೆ ಕೆಲ ಕಿಡಿಗೇಡಿಗಳು..

ಒಂದಲ್ಲ ಎರಡಲ್ಲಾ.. ಪಾಕ್​ನಲ್ಲಿ ಬದುಕ್ತಾ ಇರೋ ಹಿಂದೂ ಧರ್ಮೀಯರಿಗೆ ಇದೊಂಥರ ನರಕವೇ ಆಗ್ಬಿಟ್ಟಿದೆ . ಇದೆಲ್ಲದಕ್ಕಿಂತ ಘನ ಘೋರವಾದ ದೇಗುಲ ದಾಳಿ ನಡೆದಿದ್ದು ಬಾಂಗ್ಲಾದೇಶದಲ್ಲಿ..

2013 ರಲ್ಲಿ ಬಾಂಗ್ಲಾದ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ ಆಗಂತುಕರ ತಂಡ, ಇಲ್ಲಿನ 76 ಹಿಂದೂ ಕುಟುಂಬದ ಮೇಲೂ ಅಟ್ಯಾಕ್​ ಮಾಡಿದ್ರು.. ಇದ್ರಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ರು..

ಈ ವೇಳೆ 5 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸ ಮಾಡಿದ್ರು ಕಿಡಿಗೇಡಿಗಳು.. ಬಾಂಗ್ಲಾದಲ್ಲಿ ನಡೆದ ಈ ಡೆಡ್ಲಿಯೆಸ್ಟ್ ಅಟ್ಯಾಕ್​​ ಇಂದಿಗೂ ಮಾಸದ ನೆನಪಾಗಿ, ಇಲ್ಲಿನ ಜನರ ಕಣ್ಣಲ್ಲಿ, ಜೀವಂತ ವ್ಯಥೆಯಾಗಿ ಉಳಿದುಬಿಟ್ಟಿದೆ.

ಘಜ್ನಿ ಕಾಲದಿಂದಲೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೀತಿದೆ. ಆದ್ರೆ, ದೇವಾಕಯಗಳ ನಿರ್ಮಾಣ ಮಾತ್ರ ನಿಲ್ತಿಲ್ಲ.. ದಾಳಿ ನಂತರ, ಮತ್ತೊಮ್ಮೆ ಅದ್ಭುತ ಶಕ್ತಿ ಕೇಂದ್ರವಾಗಿ ದೇಗುಲಗಳು ಎದ್ದು ನಿಲ್ತಿವೆ. ಇದು ನಿಜಕ್ಕೂ ಗ್ರೇಟ್ ಅಲ್ವಾ?

Отправить комментарий

0 Комментарии