Hot Posts

10/recent/ticker-posts

ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್​​ಗೆ ಚಾಣಕ್ಯನೇ ಶಾಕ್​​..!














































ಕರ್ನಾಟಕದಲ್ಲೀಗ ಸಿದ್ದರಾಮಯ್ಯನವರದ್ದೇ ಹವಾ. ಹೈ ಕಮಾಂಡ್​ ಕೂಡ ಸಿದ್ದು ಮುಂದೆ ಮಂಡಿಯೂರಿಬಿಟ್ಟಿದೆ. ಶತಾಯಗತಾಯ ಪಕ್ಷವನ್ನ ಅಧಿಕಾರಕ್ಕೆ ತರ್ತೀನಿ ಅಂತ ಪಣ ತೊಟ್ಟು ನಿಂತಿರೋ ಸಿದ್ದರಾಮಯ್ಯ, ಚಾಣಕ್ಯನಿಗೇ ಶಾಕ್ ನೀಡುವಂಥಾ ರಣತಂತ್ರವನ್ನ ಹೆಣೆದಿದ್ದಾರೆ. ಅಂದ್ಹಾಗೆ  ಸಿದ್ದು ಹೆಣೆದ ಆ ರಣತಂತ್ರ ಹೇಗಿದೆ ಗೊತ್ತಾ? ಸಿದ್ದು ಆರ್ಭಟವನ್ನ ಕಟ್ಟಿ ಹಾಕೋದಕ್ಕೆ ಚಾಣಕ್ಯನಿಂದಲೂ ಸಾಧ್ಯವಾಗ್ತಿಲ್ವಾ? ಇಂಥಾ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.



ಬಿಜೆಪಿಯಲ್ಲಿರೋ ಬಂಡಾಯದ ಅಭ್ಯರ್ಥಿಗಳನ್ನ ಕಾಂಗ್ರೆಸ್​​ ಸೆಳೆದುಕೊಳ್ತಿದೆ. ಕಾಂಗ್ರೆಸ್​ನಲ್ಲಿರೋ ಬಂಡಾಯದ ಅಭ್ಯರ್ಥಿಗಳನ್ನ ಬಿಜೆಪಿ ಎಳ್ಕೋತಾ ಇದೆ. ಇದು ರಾಜಕೀಯದ ಮೇಲಾಟವನ್ನ ಮತ್ತಷ್ಟು ಜೋರಾಗಿಸಿದೆ. ಅಮಿತ್ ಶಾ ತಂತ್ರಗಾರಿಕೆ ಮೇಲಾಗುತ್ತಾ? ಸಿದ್ದು ಚಾಣಾಕ್ಷತೆ ಜೋರಾಗುತ್ತಾ ಅನ್ನೋ ಪ್ರಶ್ನೆಗಳನ್ನ ಹುಟ್ಟು ಹಾಕಿದೆ.



ಅಮಿತ್ ಶಾ ರಾಜಕೀಯ ಲೋಕದ ಚಾಣಕ್ಯ ಆದ್ರೂ, ಕರ್ನಾಟಕದಲ್ಲಿ ಇವ್ರ ತಂತ್ರಗಾರಿಕೆಗಳು ವರ್ಕೌಟ್ ಆಗ್ತಾ ಇಲ್ಲ. ಅಮಿತ್ ಶಾ ಅನ್ಕೊಂಡಿದ್ದೇ ಒಂದು, ಕರ್ನಾಟಕದಲ್ಲಿರೋ ಪರಿಸ್ಥಿತಿನೇ ಒಂದು. ಇದು ಅರಿವಾಗ್ತಿದ್ದಂತೆ ಚಾಣಕ್ಯನಿಗೂ ತಲೆ ಗಿರ್ ಅಂತ ತಿರುಗ್ಹೋಗಿದೆ. ಬಿಜೆಪಿಯನ್ನ ಹೇಗಪ್ಪಾ ಗೆಲ್ಸೋದು ಅಂತ ಚಾಣಕ್ಯ ಅಂಡ್ ಟೀಂ ತಲೆ ಕೆಡಿಸಿಕೊಂಡು ಕೂತಿದ್ರೆ, ಇತ್ತ ಸಿದ್ದರಾಮಯ್ಯ ತಮ್ಮ ಘರ್ಜನೆಯನ್ನ ಮುಂದುವರಿಸಿದ್ದಾರೆ



ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಈಗ ಭಿನ್ನ ಮತದ ಸ್ಫೋಟವಾಗಿದೆ. ಟಿಕೆಟ್​ ಕೈ ತಪ್ಪಿದವರು, ಈಗ ಬಂಡಾಯದ ಬಾವುಟ ಹಾರಿಸ್ತಿದ್ದಾರೆ. ಆದ್ರೆ ಇದೆಲ್ಲವನ್ನ ಸೂಕ್ಷ್ಮವಾಗಿ ಅವಲೋಕಿಸ್ತಿರೋ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಮಾತ್ರ, ಈಸಲ ಕಪ್ ನಮ್ದೇ ಅಂತಿದ್ದಾರೆ.





ಈಸಲದ ಎಲೆಕ್ಷನ್​​ನಲ್ಲಿ ಬರೀ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೇ ಮಾಸ್ಟರ್​​​​ಪ್ಲಾನ್​ಗಳನ್ನ ಮಾಡ್ತಾ ಇಲ್ಲ.. ಜೆಡಿಎಸ್​ ಕೂಡ ಅದೆಲ್ಲದಕ್ಕಿಂತ ದೊಡ್ಡ ಮಟ್ಟದಲ್ಲಿ ಗೇಮ್ ಪ್ಲಾನ್ ರೆಡಿ ಮಾಡ್ಕೊಂಡಿದೆ. ತಮ್ಮ ರಾಜಕೀಯ ಅನುಭವವನ್ನ ಪಣಕ್ಕಿಟ್ಟಿರೋ ದೊಡ್ಡ ಗೌಡರು, ಕುಮಾರ ಸ್ವಾಮಿಯನ್ನ ಸಿಎಂ ಮಾಡೋದಕ್ಕೆ ಬೇಕಾದ ಎಲ್ಲಾ ಥರದ ರಣತಂತ್ರಗಳನ್ನೂ ಪ್ರಯೋಗಿಸ್ತಿದ್ದಾರೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​​ ಮತ್ತು ಸಮಾಜವಾದಿ ಪಕ್ಷದ ಮಾಯಾವತಿ ಹೀಗೆ ಪ್ರಾದೇಶಿಕ ಪಕ್ಷದ ನಾಯಕರನ್ನ ಒಗ್ಗೂಡಿಸಿ, ಕರ್ನಾಟಕವನ್ನ ಗೆಲ್ಲೋ ಲೆಕ್ಕಾಚಾರದಲ್ಲಿದ್ದಾರೆ ದೊಡ್ಡ ಗೌಡರು..



ಮೋದಿ ಬಂದ್ರೆ ಕರ್ನಾಟಕದಲ್ಲಿ ಹೊಸ ಅಲೆ ಏಳುತ್ತೆ. ಆ ಅಲೆ ಒಂದೇ ಸಿದ್ದರಾಮಯ್ಯ ಆರ್ಭಟವನ್ನು ಕಟ್ಟಿ ಹಾಕಬಹುದು ಅನ್ನೋದು ಬಿಜೆಪಿಗರ ಲೆಕ್ಕಾಚಾರ.. ಇದೇ ಕಾರಣಕ್ಕೆ ಮೋದಿಯನ್ನ ಕರ್ನಾಟಕಕ್ಕೆ ಕರೆತರಬೇಕು ಅಂತ ಚಾಣಕ್ಯ ಟ್ರೈ ಮಾಡ್ತಿದ್ದಾರೆ.



ಮೋದಿ ಎಲ್ಲೇ ಹೋಗ್ಲಿ, ಎದುರಾಳಿಗಳ ವಿರುದ್ಧ ಘರ್ಜನೆ ಮಾಡೇ ಮಾಡ್ತಾರೆ. ಜನ ಏನ್​ ನಿರೀಕ್ಷೆ ಮಾಡ್ತಾರೋ, ಅದೇ ಥರ ಘರ್ಜನೆ ಮಾಡೋ ಜಾಯಮಾನ ಮೋದಿಯದ್ದು.. ಅದು ಕರ್ನಾಟಕದಲ್ಲೂ ನಿಜ ಆಗಿತ್ತು.. ಬೆಂಗಳೂರಿಗೆ ಬಂದಾಗ ಮೋದಿ ಸೌಂಡ್ ಮಾಡಿದ ರೀತಿ  ಖುದ್ದು ಬಿಜೆಪಿಯವರಿಗೇ ಅಚ್ಚರಿಯನ್ನ ಉಂಟು ಮಾಡಿತ್ತು. ಯಾಕಂದ್ರೆ, ರಾಜ್ಯ ಬಿಜೆಪಿ ನಾಯಕರೇ ಮೋದಿ ಥರ ಘರ್ಜನೆ ಮಾಡಿರಲಿಲ್ಲ.. ಸೀದಾ ಬೆಂಗಳೂರಿಗೆ ಕಾಲಿಟ್ಟೋರೇ ಸಿದ್ದು ಸರ್ಕಾರ ಟೆನ್ ಪರ್ಸೆಂಟ್ ಸರ್ಕಾರ ಅಂದು ಬಿಟ್ರು..



ಮೋದಿ ಕರ್ನಾಟಕಕ್ಕೆ ಕಾಲಿಟ್ಟಾಗ ಸಿದ್ದು ವಿರುದ್ಧ ಘರ್ಜಿಸಿದ್ರು.. ಅದಕ್ಕೆ ಸಿದ್ದು ಅಂಡ್ ಟೀಂ ಕೂಡ, ಅಷ್ಟೇ ಪವರ್​​ಫುಲ್ ಆಗಿ ತಿರುಗೇಟು ಕೊಟ್ಟಿತ್ತು.. ಮೋದಿ ವಿರುದ್ಧ ಮತ್ತು ಮೋದಿ ಸರ್ಕಾರದ ವಿರುದ್ಧವೇ ಗುಟುರು ಹಾಕಿತ್ತು ಈ ಟಗರು.. ಯಾವಾಗ ಸಿದ್ದರಾಮಯ್ಯ ಗುಟುರು ಹಾಕೋದಕ್ಕೆ ಶುರು ಮಾಡಿದ್ರೋ, ಆ ನಂತರದಲ್ಲಿ ಕರ್ನಾಟಕದಲ್ಲಿ ಕಾಣಿಸಲೇ ಇಲ್ಲ ಮೋದಿ.. ಸಿದ್ದುಗೆ ಹೆದರಿನೇ ಮೋದಿ ಬರ್ತಾ ಇಲ್ಲ ಅನ್ನೋದು ಒಂದಷ್ಟು ಜನರ ಆರೋಪ.. ಆದ್ರೆ ವಿಷ್ಯ ಅದಲ್ಲ.. ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿಲ್ಲ.. ಮೂರನೇ ಪಟ್ಟಿ ರಿಲೀಸ್ ಆಗಬೇಕಿದೆ. ಇನ್ನೂ ಒಂದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಬೇಕಿದೆ. ಎಲ್ಲಾ ಅಭ್ಯರ್ಥಿಗಳು ಫೈನಲ್ ಆದ ನಂತರ, ಸುನಾಮಿಯಂತೆ ಅಪ್ಪಳಿಸಲಿದ್ದಾರೆ ಮೋದಿ..

Отправить комментарий

0 Комментарии