Hot Posts

10/recent/ticker-posts

ಜಗತ್ತನ್ನು ಕಾಡುತ್ತಿದೆ ಹೊಸ ಸಾವಿನ ಗೇಮ್. ಏನಿದು ಐರನ್ ಬೂಟ್ ಗೇಮ್ ?











































































ಕೆಲ ದಿನಗಳ ಹಿಂದೆ ಬ್ಲೂವೇಲ್
ಗೇಮ್ ಅನ್ನೋದು ಜನರನ್ನ ಬೆಚ್ಚಿ
ಬೀಳಿಸಿತ್ತು. ಆಟದ ನೆಪದಲ್ಲಿ ಸಾಲು
ಸಾಲು ಜೀವಗಳನ್ನು ಬಲಿ ತೆಗೆದುಕೊಳ್ತಿತ್ತು.
ಗೇಮ್. ಆದ್ರೀಗ ಬ್ಲೂವೇಲ್ ಥರದ್ದೇ
ಮತ್ತೊಂದು ಗೇಮ್ ಹುಟ್ಟಿಕೊಂಡಿದೆ.
ಗೇಮ್ ಗೆ ಇದೀಗ ಕೇರಳದ
ಯುವಕನೇ ಬಲಿಯಾಗಿದ್ದಾನೆ. ಅಂದ್ಹಾಗೆ ಯುವಕ ಗೇಮ್
ಆಡ್ತಾ ಆಡ್ತಾ ಸತ್ತಿದ್ದು ಎಲ್ಲಿ
ಗೊತ್ತಾ? ಕರ್ನಾಟಕದಲ್ಲಿ. ಅದೂ ಚಿತ್ರದುರ್ಗದಲ್ಲಿ.





ಅಂದ್ಹಾಗೆ
ಕೇರಳದ ಯುವಕ ಸತ್ತಿದ್ದು ಬ್ಲೂವೇಲ್
ಥರಾನೇ ಸಾವಿನ ಗೇಮ್ ಅನ್ನಿಸಿಕೊಂಡಿರೋ
ಐರನ್ ಗೇಮ್ ನಿಂದ.
ಐರನ್ ಬೂಟ್ ಗೇಮ್ ಅಂದ್ರೆ
ಏನು ಅನ್ನೋದು ಬಹುಶಃ ಕೇಳಿರ್ಲಿಕ್ಕಿಲ್ಲ.
ಐರನ್ ಬೂಟ್
ಗೇಮ್ ನಿಂದಾಗಿ ಕೇರಳದ ಯುವಕನೊಬ್ಬ
ಚಿತ್ರದುರ್ಗದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೇಮ್ ನಿಂದ ಸಾಧನೆಯ ಮೆಟ್ಟಿಲು
ತಲುಪಬೇಕೆಂದುಕೊಂಡಿದ್ದ ಯುವಕ ಗೇಮ್
ನಿಂದಾಗಿ ಸಾವಿನ ತೊಟ್ಟಿಲನ್ನು ಸೇರುವಂತಾಗಿದೆ.





ಐರನ್ ಬೂಟ್ ಗೇಮ್
ಎನ್ನುವುದು ಅಮೇರಿಕಾ ದೇಶ ನಡೆಸಿಕೊಡುವ
ಆನ್ ಲೈನ್ ಬೈಕ್ ಗೇಮ್
ಆಗಿದ್ದು, 24 ಗಂಟೆಯಲ್ಲಿ 1624 ಕಿ.ಮೀ.ದೂರ
ಬೈಕ್ ಸವಾರಿ ನಡೆಸುವ ಗುರಿ
ಹೊಂದಿದೆ. ಮೊದಲು ಬೈಕ್ ಮೀಟರ್
ಬೋರ್ಡ್ ಫೋಟೋ ತೆಗೆದು ಅದನ್ನು
ಆನ್ ಲೈನ್ ವಿಳಾಸಕ್ಕೆ ಅಪ್ಲೋಡ್
ಮಾಡಬೇಕು. ಬಳಿಕ ಗೇಮ್ ನಲ್ಲಿ
ಭಾಗವಹಿಸುವ ವ್ಯಕ್ತಿ ತನ್ನ ಪಯಣವನ್ನ
ಆರಂಭಿಸಬೇಕು. 24 ಗಂಟೆಯ ನಂತರ ತಾನು
ಪ್ರಯಾಣಿಸಿದ ಕಿ.ಮೀ ಎಷ್ಟು
ಎಂಬುದನ್ನು ಖಚಿತಪಡಿಸಲು ಮತ್ತೆ ಕಿ.ಮೀ
ಬೋರ್ಡ್ ಅನ್ನು ಆನ್ ಲೈನ್
ವಿಳಾಸಕ್ಕೆ ಅಪ್ಲೋಡ್ ಮಾಡಬೇಕು. ಒಂದು
ವೇಳೆ ಅವರ ಪ್ರಯಾಣ 24 ಗಂಟೆಯಲ್ಲಿ
1624 ಕಿ.ಮೀ ಆದಲ್ಲಿ
ವ್ಯಕ್ತಿಗೆ ಐರನ್ ಬೂಟ್ ತಂಡದ
ಸದಸ್ಯತ್ವ ಸಿಗುತ್ತದೆ.





ಐರನ್ ಬೂಟ್ ಗೇಮ್
ಚಾಲೆಂಜ್ ಪಡೆದಿದ್ದ
ಕೇರಳದ ಮಿಥುನ್ ಎಂಬ ಯುವಕ
ಕೊಯಂಬತೂರ್ ಮಾರ್ಗವಾಗಿ ಬೆಂಗಳೂರು, ಹುಬ್ಬಳ್ಳಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದ.
ಪಯಣದ ವೇಳೆ
ಮಾರ್ಗಮಧ್ಯ ಚಿತ್ರದುರ್ಗದಲ್ಲಿ ತನ್ನ ಜೀವನದ ಪಯಣವನ್ನೇ
ಮುಗಿಸಿಬಿಟ್ಟ.




Отправить комментарий

0 Комментарии