Hot Posts

10/recent/ticker-posts

3 ದಿನವಾದ್ರೂ ಅಲುಗಾಡದೇ ಹೆದರಿಸಿದ ವಿಷಸರ್ಪ!





3 ದಿನವಾದ್ರೂ ಅಲುಗಾಡದೇ ಹೆದರಿಸಿದ ವಿಷಸರ್ಪ!































ಒಂದು ಸುಂದರವಾದ ಮನೆ ಇತ್ತು. ಆ ಮನೆಯ ಸುತ್ತಮುತ್ತಲೂ ಸುಂದರವಾದ ಹಚ್ಚಹಸಿರಿನ
ವಾತಾವರಣ. ಹೀಗೆ ಆ ಮನೆಯ ಮಾಲಿಕ ಒಮ್ಮೆ ತಂಗಾಳಿಯ ಸ್ಪರ್ಶಕ್ಕೆಂದು ಹೊರಬಂದ.  ಹಾಗೆ ಬಂದವನೇ ಸುತ್ತಮುತ್ತಲೂ ಕಣ್ಣಾಡಿಸುತ್ತಿರುವಾಗ ಒಂದು
ಭಯಾನಕ ವಿಷಸರ್ಪ ಕಣ್ಣಿಗೆ ಬಿತ್ತು.
ಅದನ್ನು ನೋಡು ನೋಡುತ್ತಲೇ ಅಲ್ಲಿಂದ ಓಡಿ ಮನೆಯೊಳಗೆ ಓಡಿಹೋದ.








ಮತ್ತೆ ಸ್ವಲ್ಪ ಸಮಯದ ನಂತರ ಹಾವು ಅಲ್ಲಿಂದ ಹೊರಟು ಹೋಗಿದೆಯೋ ಇಲ್ಲವೋ
ಎಂದು ಮತ್ತೆ ಮನೆಯೊಳಗಿಂದಲೇ ಕಣ್ಣಾಡಿಸಿದ. ಆದರೆ ಆ ಹಾವು ಮಾತ್ರ ಜಾಗದಿಂದ ಕದಲಿರಲಿಲ್ಲ. ಇದನ್ನು
ನೋಡಿದ ಮನೆ ಮಾಲೀಕನಿಗೆ ಮೈ ನೀರಿಳಿಯಿತು. ಹಾಗೇ ಪ್ಲ್ಯಾಶ್ ಬ್ಯಾಕ್ ಹೋದ ಹಾವಿನ ದ್ವೇಷ ಹನ್ನೆರಡು
ವರುಷ ತಾನೇನಾದ್ರು ಹಾವಿಗೆ ತೊಂದ್ರೆ ಕೊಟ್ಟಿದ್ನಾ ಅಂತ ವಿಚಾರ ಮಾಡಿದ
ಆದ್ರೆ ಯಾವ ಪ್ಲ್ಯಾಶ್ ಬ್ಯಾಕು
ನೆನಪಿಗೆ ಬರ್ಲಿಲ್ಲ. ಹಾಗಾದ್ರೆ ಈ ಹಾವು ಮತ್ಯಾಕೆ ಇಲ್ಲಿ ಬಂದು ಫಿಕ್ಸ್ ಆಯ್ತು ಅಂತ ಯೋಚನೆ ಮಾಡತೊಡಗಿದ.








ಹಾಗೆ ಆ ಹಾವಿಗೆ ಅಂಜಿ ಮತ್ತೆ ಒಳಗೆ ಓಡಿಹೋದ. ಸಾಯಂಕಾಲ ಆಯ್ತು ಇವಾಗಾದ್ರು
ಹಾವು ಅಲ್ಲಿಂದ ಹೊಯ್ತಾ ಅಂತ ಮತ್ತೆ ಹೊರ ಬಂದು ಇಣುಕಿ ನೋಡಿದ ಆದ್ರೆ ಹಾವು ಮಾತ್ರ ಅಲ್ಲೇ ಇತ್ತು.
ಇದರಿಂದ ಭಯಭೀತನಾದ ಮನೆ ಮಾಲೀಕ ಇನ್ಯಾಕೊ ನನಗೆ ಉಳಿಗಾಲ ಇಲ್ಲ ಅಂತ ಕಾಣುತ್ತೆ ಅಂತ ಹಾವು ಹಿಡಿಯುವವರನ್ನು
ಕರೆಯಿಸಿಬಿಟ್ಟ.








ಹಾವು ಹಿಡಿಯುವವರು ಬರುತ್ತಿದ್ದಂತೆ ಮನೆ ಮಾಲೀಕ ಹಾವನ್ನು ದೂರದಿಂದಲೇ
ತೋರಿಸಿಬಿಟ್ಟ. ಹಾವು ಹಿಡಿಯುವವರು ನಿಧಾನವಾಗಿ ಹಾವು ಇರುವ ಜಾಗಕ್ಕೆ ಹೋದರು ಮೊದಲಿಗೆ ಭಯಗೊಣಡಿದ್ದ
ಹಾವು ಹಿಡಿಯುವವನು ಕೊನೆಗೆ ಅದರ ಬಳಿ ಹೋಗಿ ಅದನ್ನು ಹಿಡಿದು ಮುದ್ದುಮಾಡಲು ಆರಂಭಿಸಿದ.








ನಂತರ ಹಾವನ್ನು ಮನೆ ಮಾಲೀಕನ ಬಳಿ ತೆಗೆದುಕೊಂದು ಬರತೊಡಗಿದ. ಆದ್ರೆ ಮನೆ
ಮಾಲೀಕ ಮಾತ್ರ ಆ ಹಾವನ್ನು ನೋಡಿ ದೂರ ಹೋಗತೊಡಗಿದ. ಹಾವು ಹಿಡಿಯುವವನು ಸರ್ ಹೆದರ್ಕೋಬೇಡಿ ಇದು ಏನೂ
ಮಾಡಲ್ಲ ಅಂತ ಹೇಳಿ ನೀಧಾನವಾಗಿ ಮಾಲೀಕನ ಕೈಗೆ ಹಾವನ್ನ ಕೊಟ್ಟ. ಭಯದಿಂದಲೇ ಹಾವನ್ನು ಹಿಡಿದುಕೊಂಡ
ಮನೆ ಮಾಲೀಕನಿಗೆ ಗೊತ್ತಾಯ್ತು ಅದು ಪ್ಲಾಸ್ಟಟಿಕ್ ಹಾವು ಎಂದು.....








ಅಲ್ಲಿ ಯಾರೋ ಕಿಡಿಗೇಡಿಗಳು ಬೇಕಂತಲೇ ಪ್ಲಾಸ್ಟಿಕ್ ಹಾವನ್ನು ಅಲ್ಲಿ ಇಟ್ಟಿದ್ರು
ಹಾಗಾಗಿ ಅದು ಜಾಗವನ್ನು ಬಿಟ್ಟು ಕದಲಿರಲಿಲ್ಲ.
ಇಷ್ಟೂ ಯೋಚನೆ ಮಾಡದ ಆ ಮನೆ ಮಾಲೀಕ ಈ ಪ್ಲಾಸ್ಟಿಕ್
ಹಾವನ್ನು ನೋಡಿ ರಾದ್ದಾಂತ ಮಾಡಿದ.



Отправить комментарий

0 Комментарии