
@Jeeva Jeeva.. ಈತನ ಬಗ್ಗೆ ಒಂದಷ್ಟು ವಿಚಾರಗಳನ್ನ ಹೇಳಲೇಬೇಕು. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಸೆಣೆಸಾಡುತ್ತಲೇ ಬದುಕಿದ ಹುಡುಗ.. ತಂದೆ ಚಿಕ್ಕ ವಯಸ್ಸಿನಲ್ಲೇ ವಿಧಿವಶ. ಅಪ್ಪ ಗಳಿಸಿದ ಆಸ್ತಿ ಇಲ್ಲ. ಹಣ ಅಂತಸ್ತು ಇಲ್ವೇ ಇಲ್ಲ. ತುತ್ತು ಅನ್ನಕ್ಕೂ ಪರದಾಡುವಂಥಾ ಪರಿಸ್ತಿತಿ ಇದ್ರೂ ತನ್ನ ಹಣೆಬರಹವನ್ನ ತಾನೇ ಬರೆದುಕೊಳ್ಳಲು ಆರಂಭಿಸಿದ್ದ. ಡಿಗ್ರಿ ಮುಗಿಸಿದ. ಆಗಾಗ ಫೋನ್ ಮಾಡಿ, ನಾನು ಸಿನಿಮಾ ರಂಣಗದಲ್ಲಿ ಮಿಂಚಬೇಕು ಅಂದಿದ್ದೀನಿ ಅಂತ ಹೇಳ್ತಾ ಇದ್ದ.ಅದೆಂಥಾ ಹಠವೋ ಇವನಿಗೆ. ಯಾರ್ ಯಾರ ಕೈಕಾಲು ಹಿಡಿದನೋ, ಯಾವ್ ಯಾವ ದೇವರಿಗೆ ಕೈ ಮುಗಿದನೋ, ಕೊನೆಗೂ ಒಂದೆರಡು ಸಿನಿಮಾಗಳಲ್ಲಿ ಬಣ್ನ ಹಚ್ಚಿದ. ಆದ್ರೆ ಆ ಸಿನಿಮಾಗಳು ತೆರೆಗೆ ಬರಲೇ ಇಲ್ಲ.


ಕೆಲವು ದಿನಗಳ ಹಿಂದೆ ಮಗನ ಜವಳಿ ಕಾರ್ಯಕ್ರಮ (ಕೂದಲು ತೆಗೆಸುವ ಕಾರ್ಯಕ್ರಮ)ಕ್ಕೆ ಹೋಗುತ್ತಿರಬೇಕಾದ್ರೆ ಅಪಘಾತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಎದ್ದು ಬಂದು ಎಲ್ಲರನ್ನೂ ಹೊರಗೆಳೆದು ಎಲ್ಲರನ್ನೂ ಆಪತ್ತಿನಿಂದ ಕಾಪಾಡಿದ್ದ. ತನ್ನ ದೇಹದಿಂದ ರಕ್ತ ಹರಿಯುತ್ತಿದ್ದರೂ ಲೆಕ್ಕಿಸದೇ ಎಲ್ಲರ ಜೀವ ಉಳಿಸಲು ಯತ್ನಿಸಿದ್ದ. ಆಸ್ಪತ್ರೆಗೆ ಸೇರಿಸಿದಾಗ ಆಪರೇಷನ್ ಮಾಡಬೇಕು ಅಂದಾಗಲೂ ನನಗೆ ಅಂಥಾದ್ದೇನೂ ಆಗಿಲ್ಲ ಅಂತಲೇ ಇದ್ದ. ಅದೆಷ್ಟೋ ಸಮಯ ಕುಳಿತು ಎಲ್ಲರೊಂದಿಗೂ ಮಾತನಾಡಿದ್ದ. ಆದ್ರೆ ಆಪರೇಷನ್ ಆದ ನಂತರ ಸಾವು ಬದುಕಿನ ನಡುವೆ ಹೋರಾಟ ಆರಂಭವಾಯಿತು. ವಾರಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ವಿಧಿಯ ಜೊತೆಗೆ ಹೋರಾಡುತ್ತಲೇ ಇದ್ದ. ಆದ್ರೆ ವಿಧಿಯ ಮುಂದೆ ನರ ಮಾನವನ ಹೋರಾಟ ಎಂದೂ ಗೆದ್ದಿಲ್ಲ. ಈತನ ವಿಚಾರದಲ್ಲಿ ಆಗಿದ್ದೂ ಅದೇ. ಮೇ 1ನೇ ತಾರೀಕು ಮದುವೆಯಾದ ದಿನವೇ ಜೀವ ಬಿಟ್ಟಿದ್ದ.
ಕುಟುಂಬಕ್ಕೆ ಜೀವ ಆಗಿದ್ದವನು ಈಗ ಬದುಕಿಲ್ಲ. ಅಪಘಾತದಿಂದ ಪತ್ನಿ ಸ್ಥಿತಿಯೂ ಗಂಭೀರವಾಗಿದೆ. ತಾಯಿಗೂ ಮಗನ ಅನುಪಸ್ಥಿತಿ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇರೋದು ಪುಟ್ಟ ಮಗ. ಬದುಕು ಸಾಗಿಸೋದು ಹೇಗೆ ಈ ಕುಟುಂಬ?
ವಿಚಿತ್ರ ಎಂದರೆ, ಜೀವ ಸಾವನ್ನೇ ಬಹಳಷ್ಟು ಜನ ಎದುರು ನೋಡ್ತಿದ್ರೇನೋ ಅನ್ನಿಸ್ತಿದೆ. ಜೀವ ಸಾವಿನ ನಮತರ ಕೆಲವರು ಬಿಜೆಪಿಯನ್ನು ಬೈಯುವಂಥಾ ಪೋಸ್ಟ್ಗಳನ್ನು ಫೇಸ್ಬುಕ್ನಲ್ಲಿ ಟ್ಯಾಗ್ ಮಾಡಿದ್ದಾರೆ. ಅವರಿಗೆ ಜೀವ ಇಲ್ಲ ಅನ್ನೋದು ಗೊತ್ತಿಲ್ಲೊವೋ, ಅಥವ ರಾಜಕೀಯ ಎದುರಾಳಿ ಅಂತ ಟ್ಯಾಗ್ ಮಾಡಿದ್ರೋ ಗೊತ್ತಿಲ್ಲ. ಆದರೆ ಸಾವಿನಲ್ಲೂ ವೈರತ್ವ ಮೆರೆಯುತ್ತಿದ್ದಾರೆ ಕೆಲವರು.
ಬಡತನದೊಂದಿಗೆ ಹೋರಾಡಿ ಡಿಗ್ರಿ ಓದಿದೆ. ಹಳ್ಳಿಯಲ್ಲಿ ಹುಟ್ಟಿ ಬೆಳದರೂ ಛಲ ಬಿಡದೇ ಸಿನಿಮಾ ರಂಗಕ್ಕೂ ಕಾಲಿಟ್ಟೆ. ಛಲವಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಅಂತ ತೋರಿಸಿಕೊಡಲು ರಾಜಕೀಯದಲ್ಲೂ ಕಾಲಿಟ್ಟೆ. ಬದುಕಿನುದ್ದಕ್ಕೂ ವಿಧಿಯ ಜೊತೆಗೆ ಹೋರಾಡುತ್ತಲೇ ಬೆಳೆದೆ. ಆದ್ರೆ ಅಂತಿಮವಾಗಿ ವಿಧಿಯೇ ಗೆದ್ದು ಬಿಟ್ಟಿದೆ. ಆ ವಿಧಿ ಈಗ ನಿನ್ನ ಸಾವನ್ನು ನೋಡಿ ನಗುತ್ತಿದೆ. ನಿನ್ನ ಕುಟುಂಬದ ಕಣ್ಣೀರನ್ನು ನೋಡಿ ಗಹಗಹಿಸುತ್ತಿದೆ. ಬದುಕಿದ್ದಷ್ಟು ದಿನವೂ ಬಿಜೆಪಿ, ಬಿಜೆಪಿ ಅಂತಿದ್ದ. ಅಪ್ಪಾಜಿ ಅಂತ ಬಿಎಸ್ಯಡ್ಯೂರಪ್ಪನವರನ್ನ ಕರೀತಿದ್ದ. ಅಪ್ಪಾಜಿನೇ ಮುಂದಿನ ಸಿಎಂ ಅಂತಿದ್ದ. ಈಗ ಅವನಿಲ್ಲ. ಅವನ ಕುಟುಂಬವನ್ನು ಅಪ್ಪಾಜಿ ನೋಡಿಕೊಳ್ತಾರಾ? ಬಿಜೆಪಿ ಗೆಲ್ಲಿಸಿ, ರಾಜ್ ಕುಮಾರ್ ಪಾಟೀಲ್ ಗೆ ಜೈ ಅಂತ ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಅಂತ ಪ್ರತಿ ದಿನ ಪ್ರತಿ ಕ್ಷಣ ಹೇಳ್ತಾನೇ ಇದ್ದ. ಕಣ್ನೀರಲ್ಲಿ ಮುಳುಗಿದ ಕುಟುಂಬವನ್ನು ಯಾರು ಕಾಪಾಡೋರು?
ರಾಜಕೀಯ ಪಕ್ಷಕ್ಕಾಗಿ ಬದುಕನ್ನು ಮುಡಿಪಿಡುವ ಬದಲಿಗೆ, ಕುಟುಂಬಕ್ಕಾಗಿ ಬದುಕನ್ನು ಮೀಸಲಿಟ್ಟಿದ್ದರೆ, ರಾಜಕೀಯ ಪಕ್ಷಕ್ಕಾಗಿ ಹೋರಾಡುವ ಬದಲು ನಿನ್ನ ಕುಟುಂಬದ ಆಸರೆಗಾಗಿ ಹೋರಾಡಿದ್ದರೆ, ರಾಜಕೀಯ ನಾಯಕರನ್ನ ಜೀವ ಅಂದುಕೊಳ್ಳುವ ಬದಲು ನಿನ್ನ ಕುಟುಂಬವೇ ಜೀವ ಅಂದುಕೊಂಡಿದ್ದರೆ, ಬಹುಶಃ ನಿನ್ನ ಬದುಕಿನ ದಿಸೆಯೇ ಬದಲಾಗಿರುತ್ತಿತ್ತೇನೋ.. ರಾಜಕೀಯದ ಗೀಳು ಅಂಟಿಸಿಕೊಂಡೆ. ಡಿಗ್ರಿ ಓದಿದರೂ ಊರಲ್ಲೇ ಉಳಿದು ಬಿಟ್ಟೆ. ಬಹುಶಃ ಒಂದು ಕೆಲಸ ಅಂತ ಹುಡುಕಿಕೊಂಡು ನಿನ್ನದೇ ದಾರಿ ಕಂಡು ಕೊಂಡಿದ್ದರೆ ನಿನ್ನ ಬದುಕಿನ ಚಿತ್ರಣವೇ ಬದಲಾಗುತ್ತಿತ್ತು. ಆದರೆ ನೀನು ರಾಜಕೀಯವನ್ನೇ ಜೀವ ಎಂದುಕೊಂಡೆ. ಆದರೀಗ ನಿನ್ನ ಕುಟುಂಬಕ್ಕೆ ಆಸರೆ ಯಾರು? ಅವರ ಕಣ್ಣೀರನ್ನು ಒರೆಸುವವರು ಯಾರು? ನಿನ್ನ ತಾಯಿಯ ಆ ಆರ್ತನಾದವನ್ನು ಆಲಿಸುವವರು ಯಾರು? ನಿನ್ನ ಮಗನ ಅಳುವನ್ನು ನಿಲ್ಲಿಸುವವರು ಯಾರು? ನೀನೇ ಜೀವ ಅಂದುಕೊಂಡು ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಿರೊ ಆ ನಿನ್ನ ಮಡದಿಯ ಅಳಲನ್ನು ಆಲಿಸುವವರು ಯಾರು?
0 Комментарии