Hot Posts

10/recent/ticker-posts

ಹೇಗೆ ನಡೆದಿದೆ ಗೊತ್ತಾ ಸಿದ್ದು ಸೋಲಿಸಲು ಮಾಸ್ಟರ್ ಪ್ಲಾನ್?













ಬಿಜೆಪಿಯಲ್ಲಿ ರಾಜ್ಯ
ನಾಯಕರು ಮತ್ತು ರಾಷ್ಟ್ರೀಯ ನಾಯಕರು ಎಲ್ಲರೂ ಒಟ್ಟಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಮೋದಿ,
ಯೋಗಿ ಆದಿತ್ಯನಾಥ್ ಹೀಗೆ ಅನೇಕ ನಾಯಕರು ತಂಡೋಪತಂಡವಾಗಿ ರಾಜ್ಯಕ್ಕೆ ಬರ್ತಾ ಇದ್ದಾರೆ. ಆದ್ರೆ ಕಾಂಗ್ರೆಸ್
ನಲ್ಲಿ ಸಿದ್ದರಾಮಯ್ಯ ಒಬ್ಬರೇ ಒಂಟಿಯಾಗಿ ಅಖಾಡಕ್ಕೆ ಧುಮುಕಿದ್ದಾರೆ.





ರಾಹುಲ್ ಗಾಂಧಿ ಆಗಾಗ
ಬಂದು ಹೋಗ್ತಾ ಇದ್ದಾರೆ ಅನ್ನೋದು ಬಿಟ್ಟರೆ, ಸಿದ್ದರಾಮಯ್ಯನವರ ಹಿಂದೆ ಯಾವ ಕಾಂಗ್ರೆಸ್ ನಾಯಕರೂ ಹೆಚ್ಚಾಗಿ
ಕಾಣಿಸಿಕೊಳ್ಳುತ್ತಿಲ್ಲ. ಸಿದ್ದು ಎಲ್ಲೇ ಹೋದರೂ ಒಂಟಿಯಾಗಿಯೇ ಪ್ರಚಾರ ನಡೆಸುತ್ತಿದ್ದಾರೆ. ಇದರ ಹಿಂದೆ
ಬೇರೆಯದೇ ಮರ್ಮ ಇದೆ ಅಂತ ಹೇಳಲಾಗುತ್ತಿದೆ.





ಸದ್ಯಕ್ಕೆ ಓಡಾಡುತ್ತಿರುವ
ಸುದ್ದಿ ಪ್ರಕಾರ, ಕಾಂಗ್ರೆಸ್ ನಲ್ಲಿ ಎಲ್ಲರೂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದು, ಘಟಾನುಘಟಿ ನಾಯಕರು ಸಿದ್ದು
ವಿರುದ್ಧ ಕತ್ತಿ ಮಸೀತಿದ್ದಾರೆ ಅನ್ನೋ ಮಾತಿದೆ. 2008ರಲ್ಲಿ ಖರ್ಗೆ ಪ್ರತಿಪಕ್ಷದ ನಾಯಕರಾಗಿದ್ದಾಗ,
ಸಿದ್ದರಾಮಯ್ಯ ಕಣ್ಣು ಖರ್ಗೆ ಮೇಲೆ ಬಿದ್ದಿತ್ತು. ತನ್ನೇ ಆದ ಗೇಮ್ ಪ್ಲಾನ್ ಮಾಡಿ ಸಿದ್ದರಾಮಯ್ಯ ಖರ್ಗೆ
ಸ್ಥಾನವನ್ನು ಕಿತ್ತುಕೊಂಡು ಬಿಟ್ಟಿದ್ದರು.
ಖರ್ಗೆ ರಾಷ್ಟ್ರ ರಾಜಕಾರಣಕ್ಕೆ ತೆರಳ್ತಾ ಇದ್ದಂತೆ,
2013ರಲ್ಲಿ ಕಾಂಗ್ರೆಸ್ ಗೆದ್ದ ಪರಿಣಾಮ ಮುಖ್ಯಮಂತ್ರಿಯಾದ್ರು. ಒಂದು ವೇಳೆ ಖರ್ಗೆ ಪ್ರತಿಪಕ್ಷ ನಾಯಕನ
ಸ್ಥಾನದಲ್ಲಿ ಇದ್ದಿದ್ರೆ, ಅವರೇ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಸಿದ್ದರಾಮಯ್ಯ ಮಾಡಿದ ಕೆಲಸದಿಂದ
ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತು ಅನ್ನೋ ಮಾತಿದೆ.





ಇನ್ನು ಹೈಕಮಾಂಡ್
ಮಾತಿಗೆ ತಲೆ ಬಾಗಿದ ಖರ್ಗೆ ಇಷ್ಟು ದಿನ ಸುಮ್ಮನಿದ್ದರು. ಆದ್ರೆ ಸಿದ್ದರಾಮಯ್ಯ ಆಗಾಗ ಮಾಡೋ ಭಾಷಣದಲ್ಲಿ
ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಾನೇ ಸಿಎಂ ಆಗ್ತೀನಿ ಅಂತಿದ್ದಾರೆ. ಇದು ಖರ್ಗೆ ಸೇರಿದಂತೆ
ಹಲವು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ತಂದೊಡ್ಡಿದೆ. ಹೀಗಾಗಿ ಎಲ್ಲಾ ನಾಯಕರು ಈಗ ಸಿದ್ದು ವಿರುದ್ಧ
ತಿರುಗಿ ಬಿದ್ದಿದ್ದು, ಸಿದ್ದುರನ್ನು ಒಂಟಿಯಾಗಿಸಿದ್ದಾರೆ ಅನ್ನೋ ಮಾತಿದೆ.





ಇನ್ನು ಖರ್ಗೆ ಸ್ಥಾನ
ಕಿತ್ತುಕೊಂಡಿದ್ದ ಸಿದ್ದರಾಮಯ್ಯ, 2013ರಲ್ಲಿ ಜಿ ಪರಮೇಶ್ವರ್ ಅವ್ರನ್ನ ಸೋಲಿಸಿದ್ದರು ಅನ್ನೋ ಆರೋಪವೂ
ಇದೆ.  ಹೀಗಾಗಿ ಪರಮೇಶ್ವರ್ ಗೂ ಸಿದ್ದು ಮೇಲೆ ಸಿಟ್ಟಿದೆ.
ಡಿ.ಕೆ,ಶಿವಕುಮಾರ್  ಕೂಡ ನಾನು ಸಿಎಂ ಆಗಬಾರದಾ ಅಂತ
ಅಲ್ಲಲ್ಲಿ ಪ್ರಶ್ನೆ ಮಾಡಿದ್ದಾರೆ. ಹೀಗೆ ಕಾಂಗ್ರೆಸ್ ನಲ್ಲಿ ಹಲವು ನಾಯಕರು
ಸಿಎಂ ಆಗಬೇಕು ಅಂತ ಕನಸು
ಕಾಣ್ತಿರೋ ಟೈಮಲ್ಲೇ, ಸಿಎಂ ಸಿದ್ದರಾಮಯ್ಯ, ಮುಂದಿನ ಸಲಾನೂ ನಾನೇ ಸಿಎಂ ಅಂತಿದ್ದಾರೆ.
ಹೀಗಾಗಿ ಸಿದ್ದರಾಮಯ್ಯ
ಗೆದ್ದರೆ ನಮಗೆ ಸಿಎಂ ಸ್ಥಾನ ಸಿಗೋದಿಲ್ಲ ಅಂತ ಭಾವಿಸಿದ ಕೆಲವು ನಾಯಕರು, ಇದೀಗ ಸಿದ್ದರಾಮಯ್ಯರನ್ನ
ಸೋಲಿಸಲು ಒಳಗೊಳಗೇ ಸಂಚು ನಡೆಸಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. 





ಚಾಮುಂಡೇಶ್ವರಿಯಲ್ಲಿ
ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡಗೆ ದಲಿತ ಮತ್ತು ಹಿಂದುಳಿದ ಮತಗಳು ಹೋಗುವಂತೆ ಮಾಸ್ಟರ್ ಪ್ಲಾನ್
ಮಾಡಲಾಗಿದೆ ಅನ್ನೋ ಸುದ್ದಿನೂ ಇದೆ. ಇನ್ನು ಬಾದಾಮಿಯಲ್ಲಿ ಕುರುಬರ ಸಂಖ್ಯೆ ಹೆಚ್ಚಾಗಿದ್ದು, ಅಲ್ಪಸಂಖ್ಯಾತರು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೂ ಸಮ ಪ್ರಮಾಣದಲ್ಲಿದ್ದಾರೆ. ಶ್ರೀರಾಮುಲು ಪರಿಶಿಷ್ಟ
ಜಾತಿ ಮತ್ತು ಪರಿಶಿಷ್ಟ ಸಮುದಾಯದ ಮತಗಳನ್ನು ಸೆಳೆಯುತ್ತಿದ್ದು, ಉಳಿದ ಮತಗಳನ್ನು ಹೇಗೆ ಸಿದ್ದುಗೆ
ಬೀಳದಂತೆ ತಪ್ಪಿಸಬೇಕು ಎಂಬ ತಂತ್ರಗಳು ನಡೀತಾ ಇವೆ ಅನ್ನೋ ಸುದ್ದಿ ಓಡಾಡುತ್ತಿದೆ.





ಎರಡೂ ಕ್ಷೇತ್ರದಲ್ಲಿ
ಸಿದ್ದರಾಮಯ್ಯ ಸೋತರೆ, ಸಿಎಂ ಆಗೋದಕ್ಕೆ ಸಾಧ್ಯವಿಲ್ಲ. ಆಗ ಸಿದ್ದು ಸಿಎಂ ರೇಸ್ ನಿಂದ ಹೊರಗುಳೀತಾರೆ.
ಆಗ ಬಹುಮತ ಇಲ್ಲದಿದ್ದರೂ ಜೆಡಿಎಸ್ ಬೆಂಬಲ ಪಡೆದು ಸರ್ಕಾರ ರಚಿಸಬಹುದು ಅನ್ನೋದು ಕಾಂಗ್ರೆಸ್ ನಲ್ಲೇ
ಇರೋ ಕೆಲವು ಪ್ರಭಾವಿ ನಾಯಕರ ರಣತಂತ್ರವಾಗಿದೆ ಅನ್ನೋ ಮಾತಿದೆ. ಹೀಗಾಗಿ ಸಿದ್ದು ವಿರುದ್ಧ ಕಾಂಗ್ರೆಸ್
ನಲ್ಲಿಯೇ ಸಂಚು ನಡೆದಿದೆ ಅನ್ನೋ ಮಾತು ಹೆಚ್ಚಾಗಿ ಸದ್ದು ಮಾಡ್ತಿದೆ.


Отправить комментарий

0 Комментарии