Hot Posts

10/recent/ticker-posts

ಆಂಧ್ರದ ಅಮರಾವತಿಯಲ್ಲಿ ಕಪ್ಪಾಗುತ್ತಿದೆ ಆಕಾಶ.. ಚಂದ್ರಬಾಬು ನಾಯ್ಡು ಶಾಕ್!




ಆಂಧ್ರದ
ಅಮರಾವತಿಯಲ್ಲಿ ಆಕಾಶ ಕಪ್ಪಾಗುತ್ತಿರುವುದೇಕೆ?


ಇದನ್ನು
ನೋಡಿ ಆಂಧ್ರ ಸಿಎಂ ಚಂದ್ರಬಾಬು
ನಾಯ್ಡು ಶಾಕ್














 ಕರ್ನಾಟಕದ ನೆರೆ
ರಾಜ್ಯವಾಗಿರೋ ಆಂಧ್ರಪ್ರದೇಶದಲ್ಲಿ ಬೆಚ್ಚಿ ಬೀಳಿಸುವಂಥಾ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಆಂಧ್ರದದ
ಗುಂಟೂರು ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ರಾಜಧಾನಿ ಅಮರಾವತಿಯಲ್ಲಿ ಗಗನವೇ ಕಪ್ಪಾಗುತ್ತಿರುವಂಥಾ
ಚಿತ್ರಣ ಬೆಳಕಿಗೆ ಬಂದಿವೆ





ಮೂಲಗಳ ಪ್ರಕಾರ ಆಂಧ್ರಪ್ರದೇಶ
ಇಬ್ಭಾಗವಾದ ನಂತರ, ತೆಲಂಗಾಣ ರಾಜಧಾನಿಯಾಗಿ ಹೈದ್ರಾಬಾದ್ ಸೇರಿಕೊಂಡಿತ್ತು. ಆಂದ್ರಕ್ಕೆ ಹೊಸ ರಾಜಧಾನಿಯ
ಹುಡುಕಾಟ ಶುರುವಾಯ್ತು. ಆಗ ಆಂದ್ರ ಸಿಎಂ ಚಂದ್ರಬಾಬು  ನಾಯ್ಡು ಗುಂಟೂರು ಬಳಿ 1700 ಎಕರೆ ಪ್ರದೇಶ ಕೃಷಿ ಭೂಮಿಯಲ್ಲಿ
ಹೊಸ ರಾಜಧಾನಿ
ಯನ್ನು ಕಟ್ಟಲು ಮುಂದಾದರು.





2014ರಿಂದಲೇ ಹೊಸ
ರಾಜಧಾನಿ ಅಮರಾವತಿಯ ನಿರ್ಮಾಣ ಕಾರ್ಯ ಶುರುವಾಗಿದ್ದು, ಸಿಂಗಪೂರ್ ಮಾದರಿಯಲ್ಲಿ ಅಮರವಾತಿ ನಿರ್ಮಾಣವಾಗುತ್ತಿದೆ.
ಇದರಲ್ಲಿ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿಯ ಕಲಾ ಕೈಚಳಕವೂ ಇದೆ ಎಂದು ತಿಳಿದು ಬಂದಿದೆ.





ಆಂದ್ರ ಪ್ರದೇಶದ
ಹೊಸ ರಾಜಧಾನಿ ಅಮರಾವತಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಜಗತ್ತೇ
ತಿರುಗಿ ನೋಡುವಂಥಾ ಅಮರಾವತಿ ನಿರ್ಮಾಣವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಿಂಗಾಪುರದಂಥಾ
ಸುಂದರ ರಾಜಧಾನಿ ನಿರ್ಮಾಣವಾಗುವುದರ ನಡುವಲ್ಲೇ ಅಮರಾವತಿಯಲ್ಲಿ ಬೆಚ್ಚಿ ಬೀಳುವಂಥಾ ಘಟನೆಗಳು  ಗೋಚರಿಸುತ್ತಿವೆ. ಅಮರಾವತಿ ಪ್ರದೇಶದ ಸುತ್ತಮುತ್ತ ಆಕಾಶ
 ಕಪ್ಪಾಗುತ್ತಿದ್ದು, ಸೂರ್ಯನಿದ್ದರೂ ಕತ್ತಲೆಯ ವಾತಾವರಣ
ಸೃಷ್ಟಿಯಾದಂತಾಗುತ್ತಿದೆ





ಅಮರಾವತಿಯಲ್ಲಿ ಆಕಾಶ
ಕಪ್ಪಾಗಲು ಕಾರಣವೇನು?


ಇನ್ನು ಆಂಧ್ರದ ಅಮರಾವತಿಯಲ್ಲಿ
ಆಕಾಶ ಕಪ್ಪಾಗಿ ಕಾಣಿಸುತ್ತಿರುವುದರಿಂದ ಜನರೆಲ್ಲಾ ಆತಂಕಗೊಂಡಿದ್ದಾರೆ. ಈ ಸಂಬಂಧ ಆಂಧ್ರ ಸರ್ಕಾರವೂ
ಪರಿಶೀಲನೆ ನಡೆಸಿದ್ದು, ಇದೆಲ್ಲಾ ಅಮರಾವತಿ ರಾಜಧಾನಿ ನಿರ್ಮಾದಿಂದ ಎದ್ದ ಧೂಳಿನ ಪರಿಣಾಮ ಎಂದು ತಿಳಿದು
ಬಂದಿದೆ.





2014ರಿಂದ ಅಮರಾವತಿ
ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಟ್ಟಡಗಳಿಗಾಗಿ ಭೂಮಿಯನ್ನು ಅಗೆಯಲಾಗುತ್ತಿದೆ. ಪಾಯ ತೋಡುತ್ತಿರುವುದರ
ಜೊತೆಗೆ ಕಟ್ಟಡ ನಿರ್ಮಾಣದಿಂದ ಪರಿಸರವನ್ನು ಸೇರುತ್ತಿರುವ, ಸಿಮೆಂಟ್ ಧೂಳಿನ ಕಣಗಳು, ಮಣ್ಣಿನ ಕಣಗಳು,
ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಯಂತ್ರೋಪಕರಣಗಳ ಹೊಗೆ ಎಲ್ಲವೂ ಆಕಾಶದಲ್ಲಿ ಜಮಾವಣೆಗೊಳ್ಳುತ್ತಿದ್ದು,
ಇಡೀ ಆಕಾಶವೇ ಕಪ್ಪಾಗಿ ಕಾಣಿಸುತ್ತಿದೆ.





ಅಮರಾವತಿ ಸುತ್ತಮುತ್ತಲಿನ
ಪ್ರದೇಶದಲ್ಲಿ ಮೋಡಗಳು ಜಮಾವಣೆಗೊಂಡಿದ್ದು, ಮೋಡದ ನಡುವೆ ಧೂಳಿನ ಕಣಗಳು ಸೇರಿಕೊಂಡಿರೋದ್ರಿಂದ, ಆ
ಭಾಗದಲ್ಲಿ ಆಕಾಶ ಕಪ್ಪಾಗಿ ಕಾಣಿಸುತ್ತಿದೆ. ಸೂರ್ಯನ ಬೆಳಕನ್ನು ಧೂಳಿನ ಕಣಗಳು ತಡೆ ಹಿಡಿಯುತ್ತಿರುವುದರಿಂದ
ಕತ್ತಲೆಯ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಧೂಳನ್ನು ನಿವಾರಿಸಲು ಮತ್ತು
ಇಲ್ಲಿನ ಮಣ್ಣನ್ನು ಬೆರೆ ಕಡೆ ಸ್ಥಳಾಂತರಿಸಲು ನೂರಾರು ಕೋಟಿಯಷ್ಟು ವೆಚ್ಚ ತಗುಲುವ ಸಾಧ್ಯತೆ ಇದೆ
ಎಂದು ತಿಳಿದು ಬಂದಿದೆ. ಸದ್ಯ ಅಮರಾವತಿಯಲ್ಲಿ ನಿರ್ಮಾಣವಾಗಿರೋ ಪರಿಸ್ಥಿತಿ ಆಂಧ್ರ ಪ್ರದೇಶದ ಸಿಎಂ
ಚಂದ್ರಬಾಬು ನಾಯ್ಡುರನ್ನು ಕಂಗಾಲಾಗಿಸಿದೆ.


Отправить комментарий

0 Комментарии