Hot Posts

10/recent/ticker-posts

RTI ನಿಂದ ಬಯಲಾಯ್ತು ಭಯಂಕರ ಸೀಕ್ರೆಟ್. ಮೋದಿ ಬಂದಮೇಲೆ ಹಿಂಗೆಲ್ಲಾ ನಡೀತಾ..?










ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ದೇಶದಲ್ಲಿ
ಏನೆಲ್ಲಾ ಆಗಿದೆ ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. 4 ವರ್ಷಗಳಲ್ಲಿ ಮೋದಿ
ಅಚ್ಚೇದಿನಗಳನ್ನು ಕೊಟ್ಟರಾ? ಅಥವ ಹಿಂದಿನ ಸರ್ಕಾರಗಳಿಗಿಂತ ಕೆಟ್ಟ ದಿನಗಳನ್ನೇ ನೀಡಿದ್ದಾರಾ
ಅನ್ನೋ ಪ್ರಶ್ನೆಗಳು ಎದ್ದಿರುವಾಗಲೇ, ಶಾಕಿಂಗ್ ವಿಚಾರ ಒಂದು ಬಯಲಾಗಿದೆ.





ಪ್ರಸೇನ್ ಜಿತ್ ಬೋಸ್ ಎಂಬ ವ್ಯಕ್ತಿಯು ಹೊರ ಹಾಕಿರುವ ಮಾಹಿತಿ
ಹಕ್ಕು ಅಧಿನಿಯಮದಿಂದ ಹೊರ ಬಿದ್ದ ವಿಷಯದ ಪ್ರಕಾರ, ಮೋದಿ ಅವಧಿಯಲ್ಲಿಯೇ ಅತಿ ಹೆಚ್ಚು ಬ್ಯಾಂಕ್
ವಂಚನೆಗಳು ನಡೆದಿವೆ ಎಂದು ಅಂಕಿ ಅಂಶಗಳಿಂದಲೇ ಹೊರ ಬಿದ್ದಿವೆ.






2008-2009ರಲ್ಲಿ 1,543 ಕೋಟಿ
ವಂಚನೆ ನಡೆದಿತ್ತು. ಆದರೆ
2017-2018ರಲ್ಲಿ 22,470 ಕೋಟಿ
ಬ್ಯಾಂಕ್ ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. 




ಕಳೆದ 10 ವರ್ಷಗಳಲ್ಲಿ ಎಷ್ಟು
ಬ್ಯಾಂಕ್ ವಂಚನೆಗಳು ನಡೆದಿವೆ ಎಂದು ಮಾಹಿತಿ ಕಲೆ ಹಾಕಿದಾಗ, ರಿಜರ್ಸ್ ಬ್ಯಾಂಕ್  ಆಫ್
ಇಂಡಿಯಾನೇ ಅಂಕಿ ಅಂಶವನ್ನು ನೀಡಿದೆ ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲ..
ಮೋದಿ ಅವಧಿಯಲ್ಲಿ ಅಂದ್ರೆ 2014 ರಿಂದ 2018ರವರೆಗೆ, ಕೇವಲ ನಾಲ್ಕು ವರ್ಷಗಳಲ್ಲಿ 77 ಸಾವಿರ ಕೋಟಿ ಬ್ಯಾಂಕ್ ವಂಚನೆಗಳು ನಡೆದಿವೆ ಎಂದು
ತಿಳಿದು ಬಂದಿದೆ.






ಇನ್ನು ಇಷ್ಟೋಂದು ದೊಡ್ಡ ಪ್ರಮಾಣದ ವಂಚನೆ ವಿರುದ್ಧ ಮೋದಿ
ಸರ್ಕಾರ ಈಗಾಗಲೇ ಕಠಿಣ ನಿಯಮಗಳನ್ನು ತೆಗೆದುಕೊಂಡಿದ್ದು, ವಂಚಕರ ಆಸ್ತಿಪಾಸ್ತಿಯನ್ನು ಹರಾಜಿಗೆ
ಹಾಕಿ, ಅದರಿಂದ ಬಂದ ಹಣದಲ್ಲಿ ಸಾಲವನ್ನು ರಿಕವರಿ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗ್ತಿದೆ. ವಿಜಯ್
ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಹೀಗೆ ಅನೇಕರ ಆಸ್ತಿಯನ್ನು ಹರಾಜು ಹಾಕುವ ಪ್ರಯತ್ನ
ನಡೀತಿದ್ದು, ದೇಶ ಬಿಟ್ಟು ಹೋದವರನ್ನು ಎಳೆದು ತರುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದೆಲ್ಲಾ
ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ತಿಳಿದಿಲ್ಲ.








Отправить комментарий

0 Комментарии