Moonfall ಜಾರಿಬಿದ್ದ ಚಂದ್ರ.. ಎಲ್ಲಾ ಪೀಸ್ ಪೀಸ್..!
Moonfall ಎಂದರೆ ಚಂದ್ರ ಕೆಳಗೆ ಬಿದ್ದ ಎಂದರ್ಥ. ಚಂದ್ರನ ಬಗ್ಗೆ
ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಅದರಲ್ಲೂ ನಾಸಾ (NASA) ಬಾಹ್ಯಾಕಾಶ
ಸಂಸ್ಥೆ ಚಂದ್ರನ ಬಗ್ಗೆ ಸಾಕಷ್ಟು ಅಚ್ಚರಿಗಳನ್ನು
ಹೊರ ಹಾಕಿದೆ. ಚಂದ್ರನ ಅಂಗಳದಲ್ಲಿ ಇರುವ ಕಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಚಂದ್ರನಲ್ಲಿ ಏಲಿಯನ್‌ಗಳು (ALIENS, UFO) ವಾಸಿಸುತ್ತಿವೆಯಾ ಎಂಬ ಪ್ರಶ್ನೆಗಳಿಗೂ ಉತ್ತರ ಹುಡುಕುತ್ತಿದೆ. ಭೂಮಿಯ ಸುತ್ತಲೂ ಸುತ್ತುತ್ತಿರುವ
ಚಂದ್ರನಲ್ಲಿ ಊಹೆಗೂ ಮೀರಿದ ನಿಗೂಢತೆಗಳಿವೆ. ಯಾರೂ ಭೇದಿಸದ ರಹಸ್ಯಗಳು ಅಡಗಿವೆ. ಇಂಥಾ ರಹಸ್ಯಗಳ ಲೋಕದ
ಬಗೆಗಿನ ಭಯಾನಕ ಸತ್ಯವೇ Moonfall.
Moonfall ಎಂದರೆ ಚಂದ್ರ ಜಾರಿ ಬಿದ್ದ ಎಂದರ್ಥ. ಹಾಗಾದ್ರೆ ಆಕಾಶದಲ್ಲಿ ಕಾಣಿಸುವ ಚಂದ್ರ ಜಾರಿ
ಬಿದ್ದಿದ್ದು ಎಲ್ಲಿ..? ಚಂದ್ರನ ತುಣುಕು ಭೂಮಿಗೆ ಕಳಚಿ ಬಿದ್ದಿತಾ..? ಸಮುದ್ರದಲ್ಲಿ ಚಂದ್ರನ
ತುಂಡು ಕತ್ತರಿಸಿಕೊಂಡು ಬಿತ್ತಾ..? ಆಕಾಶಕಾಯ ಭೂಮಿಗೆ ಬಂದು ಬಿತ್ತಾ...? ಹೀಗೆ ಹತ್ತಾರು
ಪ್ರಶ್ನೆಗಳು ನಿಮ್ಮನ್ನ ಕಾಡಬಹುದು. ಆದ್ರೆ ನಾವು ಹೇಳುತ್ತಿರುವ Moonfall ಆಕಾಶದಲ್ಲಿ ಇರೋ
ಚಂದ್ರನದ್ದಲ್ಲ. ಬದಲಿಗೆ ಆಕಾಶದಲ್ಲಿರೋ ಚಂದ್ರನ ರಹಸ್ಯಗಳನ್ನು ಒಳಗೊಂಡ Moonfall ಸಿನಿಮಾ ಕಥೆ. ನಟ ರೊನಾಲ್ಡ್
ಎಮ್ಮಿರಿಚ್ (Roland Emmerich) ಅಭಿನಯದ ಹೊಸ
ಸಿನಿಮಾದ ಕಥೆ.
Moonfall ಹಾಲಿವುಡ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಂದ್ರಲೋಕದ ಮಹಾ ರಹಸ್ಯಗಳನ್ನು
ಒಳಗೊಂಡ ಸಿನಿಮಾ ಇದಾಗಿತ್ತು. ಚಂದ್ರಲೋಕದಲ್ಲಿ ಏಲಿಯನ್‌ಗಳು ಇವೆಯಾ ಎಂಬ ಪ್ರಶ್ನೆಗಳಿಗೂ ಈ
ಸಿನಿಮಾದಲ್ಲಿ ಉತ್ತರವಿತ್ತು. ಚಂದ್ರಲೋಕದ ಮಹಾಪ್ರಳಯದ ಸತ್ಯವನ್ನು ಈ ಚಿತ್ರದಲ್ಲಿ
ತೋರಿಸಲಾಗಿತ್ತು. ಈ ಸಿನಿಮಾ ಅತಿದೊಡ್ಡ ಯಶಸ್ಸು ಕಾಣಲಿದೆ ಎಂದು ಎಲ್ಲರೂ ಭವಿಸಿದ್ದು. ಇಡೀ
ಜಗತ್ತೇ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಈ ಸಿನಿಮಾ ಪಾತಾಳಕ್ಕೆ
ಕುಸಿದಿದೆ. Moonfall ಎಂಬ ಹೆಸರಿನಂತೆ ಗಳಿಕೆಯಲ್ಲಿ fall ಆಗಿದೆ.
ನಾಸಾ ಸಂಶೋಧನೆಯ ಕಥೆಯನ್ನ ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ
ಮಾಡಲಾಗಿತ್ತು. 100 ಸಂಶೋಧನಾ ವರದಿಗಳನ್ನು ಆಧರಿಸಿ Moonfall ಸಿನಿಮಾ ಮಾಡಲಾಗಿತ್ತು. ಭೂಮಿಯನ್ನು ಹೊರತು ಪಡಿಸಿ ಮನುಷ್ಯ ಬೇರೆ ಎಲ್ಲಿ ಹೋಗಿ
ಬದುಕಬಹುದು. ಯಾವ ಗ್ರಹದಲ್ಲಿ ಮನುಷ್ಯ ವಾಸಿಸಬಹುದು ಎಂಬ ಪ್ರಶ್ನೆಗಳಿಗೆ ಸಿನಿಮಾ ಮೂಲಕ ಉತ್ತರ
ಕೊರುವ ಪ್ರಯತ್ನವನ್ನ Moonfall ಸಿನಿಮಾ ಮಾಡಿತ್ತು. ಆದ್ರೆ ಸಿನಿಮಾ
ಬಿಡುಗಡೆಯಾದ ಮೊದಲ ವಾರದ ಗಳಿಕೆ ಕಳಪೆಯಾಗಿದೆ.
ಈ ಮೂನ್ ಫಾಲ್ 150 ಮಿಲಿಯನ್ ಡಾಲರ್ ($150 million budget) ಮೊತ್ತದಲ್ಲಿ ನಿರ್ಮಾಣವಾಗಿತ್ತು. ಆದರೆ ಮೊದಲ ವಾರದ ಗಳಿಕೆ ಕೇವಲ 10 ಮಿಲಿಯನ್ ಡಾಲರ್ ($10 million) ಆಗಿದ್ದು,
ಎಲ್ಲರನ್ನೂ ನಿರಾಶೆಗೊಳಿಸಿದೆ.
'Moonfall' is the biggest box-office flop of the year
so far ಅಂತ ಜಗತ್ತಿನ ಪತ್ರಿಕೆಗಳು ವರದಿ ಮಾಡಿವೆ.
ಇತ್ತೀಚೆಗೆ Universal's ನ "The 355" ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದು ಕೂಡ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅತ್ಯಂತ
ಕಳಪೆಯಾಗಿತ್ತು. 75 ಮಿಲಿಯನ್ ಡಾಲರ್ ಬಜೆಟ್ ($75
million budget) ಸಿನಿಮಾ ಇದಾಗಿತ್ತು. ಆದ್ರೆ ಈ ಸಿನಿಮಾ ಗಳಿಸಿದ್ದು ಕೇವಲ 4 ಮಿಲಿಯನ್ ಡಾಲರ‍್
ಮಾತ್ರ.
0 Комментарии