ಮಹೇಶ್ ಬಾಬು SSMB2 ಸಿನಿಮಾ ಮುಹೂರ್ತದಲ್ಲಿ ಪತ್ನಿ ನಮ್ರತಾ ಶಿರೋಡ್ಕರ್
ಕಣ್ಣೀರು..!
ಮಹೇಶ್ ಬಾಬು,
ತೆಲುಗು ಚಿತ್ರರಂಗದ ಪ್ರಖ್ಯಾತ ನಟ. ಸೂಪರ‍್ ಸ್ಟಾರ‍್ ಅಂತಲೇ ಹೆಸರಾಗಿರುವ ಮಹೇಶ್ ಬಾಬು ಈಗ ಹೊಸ
ಸಿನಿಮಾಗೆ ಸಿದ್ಧವಾಗಿದ್ದಾರೆ. SSMB2 ಹೆಸರಿನ
ಸಿನಿಮಾದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಮಹೇಶ್ ಬಾಬು ಹೊಸ ಸಿನಿಮಾದ
ಸಮಯದಲ್ಲೇ ಪತ್ನಿ ನಮ್ರತಾ ಶಿರೋಡ್ಕರ್ ಕಣ್ಣೀರು ಹಾಕಿದ್ದಾರೆ.
ಹೌದು. ಮಹೇಶ್ ಬಾಬು
ಪತ್ನಿ ನಮೃತಾ ಶಿರೋಡ್ಕರ್ ತಮ್ಮ ಪತಿ ಸೂಪರ‍್ ಸ್ಟಾರ್ ಮಹೇಶ್ ಬಾಬು ಹೊಸ ಸಿನಿಮಾದ ಮುಹೂರ್ತದ
ಸಮಯದಲ್ಲಿ ಕಣ್ಣೀರು ಹಾಕಿದ್ದಾರೆ. ಇದು ತೆಲುಗು ಚಿತ್ರರಂಗ ರಸಿಕರಿಗೆ ನೋವುಂಟು ಮಾಡಿದೆ. ಮಹೇಶ್
ಬಾಬು ಪತ್ನಿಯ ಕಣ್ಣೀರಿಗೆ ಜನರ ಮನ ಮಿಡಿದಿದೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂದಜು ಬಹಳಷ್ಟು
ಮಂದಿ ಅವರಿಗೆ ರೀಪ್ಲೇ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ.
ಮಹೇಶ್ ಬಾಬು ಪತ್ನಿ
ಕಣ್ಣೀರು ಹಾಕಿದ್ದು ಯಾಕೆ..? ಹೊಸ ಸಿನಿಮಾದ ಮುಹೂರ್ತದ ಸಮಯದಲ್ಲಿ ಏನಾಯ್ತು..? ಈ ಪ್ರಶ್ನೆ
ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ತೆಲುಗು ಸೂಪರ‍್ ಸ್ಟಾರ್ ಮಹೇಶ್ ಬಾಬು
ಮತ್ತು ನಿರ್ದೇಶಕ ತ್ರಿವಿಕ್ರಮ ಜೋಡಿ ಒಂದಾಗಿದೆ. ಹಲವು ವರ್ಷಗಳ ನಂತರ ಒಂದಾಗಿರೋ ಈ ಮ್ಯಾಜಿಕ್
ಜೋಡಿ ಈಓಗ ಹೊಸ ಸಿನಿಮಾ ಮಾಡುತ್ತಿದೆ. ಈ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಕೂಡ ನಟಿಸುತ್ತಿದ್ದಾರೆ.
ಈ ಚಿತ್ರದ ಮುಹೂರ್ತ ಹೈದ್ರಾಬಾದಿನ ರಾಮಾನಾಯ್ಡು ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ನಟ ಮಹೇಶ್
ಬಾಬು ಪತ್ನಿ ನಮೃತಾ ಕೂಡ ಇದ್ದರು.
ಮತ್ತು ತ್ರಿವಿಕ್ರಮ, ಜೋಡಿಯ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡಲಿದೆ. ಭಾರತೀಯ ಚಿತ್ರರಂಗದಲ್ಲಿ
ದೊಡ್ಡ ಮಟ್ಟದಲ್ಲಿ ಸುನಾಮಿ ಸೃಷ್ಟಿ ಮಾಡಲಿದೆ ಎಂದು ಹಲವರು ನಂಬಿದ್ದಾರೆ. ಹೊಸ ಸಿನಿಮಾ ತುಂಬಾನೇ
ಅದ್ಧೂರಿಯಾಗಿ ಮೂಡಿ ಬರಲಿದೆ. ಚಿತ್ರಕಥೆ ಕೂಡ ಅಷ್ಟೇ ಅದ್ಭುತವಾಗಿ ಹೆಣೆಯಲಾಗಿದೆ ಎಂದು
ಹೇಳಲಾಗುತ್ತಿದೆ. ಇದು ಮಹೇಶ್ ಬಾಬುಗಾಗಿಯೇ ಮಾಡಿರುವ ಸಿನಿಮಾ ಆಗಿದೆ. ಮಹೇಶ್ ಬಾಬು ಅಭಿಮಾನಿಗಳಿಗೆ
ಈ ಚಿತ್ರ ಖಂಡಿತವಾಗ್ಲೂ ಇಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.
ಮಹೇಶ್ ಬಾಬು
ಅಭಿನಯದ ಸಿನಿಮಾ ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಸೃಷ್ಟಿಸಲಿದೆ. ಇದರ ಮುಹೂರ್ತಕ್ಕೆ
ಆಗಮಿಸುವ ಎರಡು ದಿನಗಳ ಹಿಂದೆ ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ಭಾವುಕರಾಗಿ ತಮ್ಮ
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ”ನಾನು ನಮ್ಮ ತಂದೆಯನ್ನು ತುಂಬಾನೇ ಮಿಸ್
ಮಾಡಿಕೊಳ್ಳುತ್ತೇನೆ. ನಮ್ಮ ತಂದೆ ನಮಗೆ ಶಕ್ತಿಯಾಗಿದ್ದರು” ಎಂದು ಹೇಳುತ್ತಾ, ತಮ್ಮ ತಂದೆಯ ಹಳೆಯ
ಫೋಟೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು. ಈ ವೇಳೆ ಅಭಿಮಾನಿಗಳು ನಮೃತಾ ಅವರಿಗೆ ಧೈರ್ಯ
ತುಂಬಿದರು, ನೀವು ಧೈರ್ಯವಾಗಿರಿ. ನಿಮ್ಮ ಜೊತೆಗೆ ನಾವಿದ್ದೇವೆ. ಎಂದು ಹೇಳಿದ್ದರು.
ತಮ್ಮ ತಂದೆಯ
ದುಃಖವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ನಮೃತಾ ತಮ್ಮ ಪತಿ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾದ ಮುಹೂರ್ತಕ್ಕೆ
ಆಗಮಿಸಿದ್ದರು. ಆಗಲೂ ಅವರ ಮುಖದಲ್ಲಿ ನೋವು ಹಾಗೆಯೇ ಇತ್ತು ಎಂದು ಹಲವರು ಹೇಳುತ್ತಾರೆ.
ಇನ್ನು ತೆಲುಗು
ಸೂಪರ‍್ ಸ್ಟಾರ್ ಮಹೇಶ್ ಬಾಬು ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಲೂಟಿ
ಮಾಡುತ್ತವೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಹವಾ ಕ್ರಿಯೇಟ್ ಮಾಡುತ್ತವೆ. ಈಗ ಅಂಥದ್ದೇ ಹವಾ
ಕ್ರಿಯೇಟ್ ಮಾಡಲು ಮುಂದಾಗಿದೆ ಮಹೇಶ್ ಬಾಬು ಮತ್ತು ತ್ರಿವಿಕ್ರಮ ತಂಡ. ತ್ರಿವಿಕ್ರಮ ಮತ್ತು
ಮಹೇಶ್ ಬಾಬು ಕಾಂಬಿನೇಷನ್‌ನ ಹೊಸ ಸಿನಿಮಾಗಳು ಈ ಹಿಂದೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿವೆ.
ದೊಡ್ಡ ಮಟ್ಟದಲ್ಲಿ ಆದಾಯವನ್ನೂ ಗಳಿಸಿವೆ. ನೂರಾರು ಕೋಟಿ ಬಾಚಿಕೊಂಡಿವೆ. ಅತಡು, ಖಲೇಜಾ
ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿವೆ. ಸೂಪರ‍್ ಹಿಟ್ ಸಿನಿಮಾಗಳಾಗಿವೆ. ಈಗ ಮತ್ತೆ
ಇಂಥದ್ದೇ ರೀತಿಯಲ್ಲಿ ಯಶಸ್ಸನ್ನು ಎದುರು ನೋಡುತ್ತಿದೆ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾ.
0 Комментарии