Hot Posts

10/recent/ticker-posts

ರೈತರೆಲ್ಲಾ ಜಮೀನು ಕೆಲಸಗಳಿಗೆ ಗುಡ್ ಬೈ ಹೇಳ್ತಿದ್ದಾರೆ..ಮುಂದಿನ ವರ್ಷಗಳಲ್ಲಿ ತಿನ್ನೋಕೆ ಏನೂ ಸಿಗೋದಿಲ್ಲ..!! ಇದಕ್ಕಿರೋದು ಒಂದೇ ದಾರಿ



ನೆನ್ನೆ ನಾನು ರೈಲ್ವೇ ಗಾಡಿಯಲ್ಲಿ ಗುಲ್ಬರ್ಗದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದೆ.. ನಾ ಕಂಡ ಒಂದು ದೃಶ್ಯ ನಿಜಕ್ಕೂ ಅಚ್ಚರಿ ಎನಿಸಿತು.. ಹಿಂಡು ಹಿಂಡು ಜನಗಳು ದಂಡು ದಂಡಾಗಿ ಗುಳೆ ಹೊರಟ ದೃಶ್ಯ ಅದು.. ಇದಕ್ಕೆ ಕಾರಣಗಳು ಬಡತನ..


ರೈತರೇ ದೇಶದ ಬೆನ್ನೆಲುಬು ರೈತರ ಜೀವನ ಉದ್ದಾರ ಆಗೋವರೆಗೂ ಭಾರತ ದೇಶದ ಉದ್ದಾರ ಖಂಡಿತವಾಗಿಯೂ ಆಗೋದಿಲ್ಲ ಎಂಬ ಮಹಾತ್ಮಾ ಗಾಂಧೀಜಿಯವರ ಕನಸು ಪ್ರಸ್ತುತ ಪರಿಸ್ತಿತಿಯಲ್ಲಿ ಅಕ್ಷರಸಹ ನುಚ್ಚು ನೂರಾಗಿದೆ.. ಬಹುಶಹ ಇನ್ನು ಮುಂದೆ ಆ ಕನಸು ಕೇವಲ ಕನಸಾಗಿಯೇ ಉಳಿದುಕೊಳ್ಳಲಿದೆ ಎಂಬ ಆತಂಕ ಕಾರಿ ಚಿತ್ರಣಗಳೂ ನಿಧಾನವಾಗಿ ಕಾಣಿಸಿಕೊಳ್ತಾ ಇವೆ.. ರೈಲ್ವೇ ಗಾಡಿಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಕಂಕುಳಲ್ಲಿ ಹೊತ್ತುಕೊಂಡು ರೈಲಿನಲ್ಲೇ ಜೋಳಿಗೆಯನ್ನು ಕಟ್ಟಿ ಬೆಂಗಳೂರಿನವರೆಗೂ ಜೋ ಜೋ ಹಾಡುವ ತಾಯಂದಿರೂ ಕೂಡಾ ಬಹಳಷ್ಟು ಜನರಿದ್ದಾರೆ.. ಇಂಥಾ ಪರಿಸ್ಥಿತಿ ಯಾಕೆ..?
ಗ್ರಾಮೀಣ ಜನರಲ್ಲಿ ಸುಮಾರು ಅರ್ಧದಷ್ದಟು ಜನರು ನಗರ ಪ್ರದೇಶಗಳ ಕಡೆಗೆ ಗುಳೆ ಹೊರಡುತ್ತಿದ್ದಾರೆ ಎಂಬುದು ಇದುವರೆಗಿನ ಅಂಕಿ ಅಂಶ.. ಆದ್ರೆ ಈ ವರ್ಷ ಕ್ಕೆ ಹೋಲಿಸಿದ್ರೆ ಸುಮಾರು ಮುಕ್ಕಾಲು ಭಾಗದಷ್ಟು ಜನರು ನಗರ ಪ್ರದೇಶಗಳತ್ತ ಒಲಸೆ ಬರುತ್ತಿದ್ದಾರೆ.. ಜಮೀನು ಕೆಲಸಗಳಿಗೆ ಸಲಾಂ ಹೊಡೆದು ಕೂಲಿಯನ್ನು ಅರಸಿ ಮತ್ತು ಬೆಂಗಳೂರಿನ ಐಶಾರಾಮೀ ಜೀವನವನ್ನು ಅನುಭವಿಸುವ ಕನಸಿನೊಂದಿಗೆ ಕೃಷಿ ಬದುಕನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಉಳುಮೆ ಮಾಡಲು ಯಾರೂ ಮುಂದಾಗುತ್ತಿಲ್ಲ.. ಹೀಗಾದರೆ ಹೊಟ್ಟೆಗೆ ತಿನ್ನೋದಾದ್ರೂ ಏನು..?? ಇತ್ತೀಚಿನ ಅಂಕೀ ಅಂಶಗಳ ಪ್ರಕಾರ ಮೂರು ವರ್ಷಗಳ ಹಿಂದೆ ಇದ್ದ ದಾಸ್ತಾನುಗಳ ಬೆಲೆ ಈಗ ಎರಡರಷ್ಟು ಹೆಚ್ಚಾಗಿದೆ.. ಯಾಕೆ ಅಂದ್ರೆ ಉತ್ಪಾದನೆ ಕಡಿಮೆಯಾಗಿದೆ.. ಉತ್ಪಾದನೆ ಕಡಿಮೆ ಆಗೋದಕ್ಕೆ ಪ್ರಮುಖ ಕಾರಣ ಹೊಲಗಳನ್ನು ತ್ಯಜಿಸಿ ಬೆಂಗಳೂರಿಗೆ ಗುಳೆ ಹೊರಡುತ್ತಿರುವುದು..



ಸುಮಾರು ಇನ್ನು ಕೇವಲ ಐದು ಅಥವ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಎಲ್ಲರೂ ಅಕ್ಷರಸ್ತರಾಗುತ್ತಾರೆ.. ಓದಿ ಮೇಧಾವಿಗಳಾಗುತ್ತಾರೆ.. ಇಂಥಾ ಮೇಧಾವಿಗಳೆಲ್ಲರೂ ಸಾಫ್ಟ್ ವೇರ್, ಹಾರ್ಡವೇರ್ ಅಂತ ಇಂಜಿನಿಯರಿಂಗ್ ಮತ್ತು ಡಾಕ್ಟರ್ ಹುದ್ದೆಗಳನ್ನು ಅರಸಿ ತಂಪಾಗಿ ಕುಳಿತುಕೊಳ್ತಾರೆ.. ಬಿಸಿಲಿನಲ್ಲಿ ಬೆವರು ಹರಿಸಿ ಆಹಾರವನ್ನು ಬೆಳೆಯುವ ಕೆಲಸ ಯಾರಾದ್ರೂ ಮಾಡ್ತಾರಾ..? ಖಂಡಿತ ಇಲ್ಲ.. ಹಿಂಗಾದ್ರೆ ಇನ್ನು ಹತ್ತು ವರ್ಷಗಳಲ್ಲಿ ಯಾರ ಬೇಡಿಕೆ ಹೆಚ್ಚಾಗುತ್ತೆ ಅಂತ ಸ್ವಲ್ಪ ಯೋಚಿಸಿನೋಡಿ...?? ರೈತನಾಗಿ ದುಡಿಯುವವನಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ವೇತನ ಮತ್ತು ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್ ಕೆಲಸ ಮಾಡುವವರಿಗೆ ಕೇವಲ ಹತ್ತು ಸಾವಿರ ರೂಪಾಯಿಗಳು ವೇತನ ನೀಡಬೇಕಾದ ಅನಿವಾರ್ಯತೆ ಅಥವ ಪರಿಸ್ಥಿತಿ ಒದಗಿ ಬರುತ್ತೆ.


ಅಲ್ಲಿಯವರೆಗೂ ಬಡ ರೈತನ ಶ್ರಮ, ಮತ್ತು ಬೆವರಿಗೆ ಬೆಲೆ ತಿಳಿಯೋದೇ ಇಲ್ಲ.. ನಮ್ಮ ಗುರುಗಳಾದ ಡಾ. ಪ್ರೋ. ಕೋಡಿ ರಂಗಪ್ಪನವರು ಸದಾ ಒಂದು ಮಾತನ್ನು ಹೇಳ್ತಿದ್ರು “ ಈ ಪ್ರಪಂಚದಲ್ಲಿ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಅಥವಾ ದೊಡ್ಡ ದೊಡ್ಡ ಮನುಷ್ಯರು ಒಂದು ವರ್ಷ ಕೆಲಸ ಮಾಡದೇ ಹಾಗೆ ಕುಳಿತಿದ್ರೆ ದೇಶಗಳು ಮುಳುಗಿ ಹೋಗೋದಿಲ್ಲ.. ಪ್ರಪಂಚ ಅಂತ್ಯವಾಗೋದಿಲ್ಲ.. ಆದ್ರೆ ಸರಿಯಾದ ಸಮಯದಲ್ಲಿ ರೈತನು ಬಿತ್ತನೆ ಮಾಡದೇ ಇದ್ರೆ, ಬೆಳೆ ಬೆಳಿಯನ್ನು ಮುಗಸದೇ ಇದ್ರೆ ಪ್ರಪಂಚದಲ್ಲಿ ಇರೋರೆಲ್ಲ ಹಸಿವಿನಿಂದಲೇ ಸತ್ತು ಹೋಗಬೇಕಾಗುತ್ತೆ.. ಹಸಿವನ್ನು ನೀಗಿಸೋದಕ್ಕೆ ಯಾವ ಸಾಫ್ಟ್ ವೇರ್ ಕೂಡಾ ಇಲ್ಲ.. ಇದನ್ನು ಅರ್ಥ ಮಾಡಿಕೊಂಡು ಜನರನ್ನು ಮತ್ತು ವಿದ್ಯಾವಂತ ನಿರುದ್ಯೋಗಿಗಳನ್ನು ಕೃಷಿಯತ್ತ ಆಸಕ್ತಿ ಮೂಡಿಸುವಂತೆ ಮಾಡಿ ಸೂಕ್ತ ಭೂಮಿಗಳೆಲ್ಲವನ್ನೂ ಬಿತ್ತನೆಗೆ ಒಳಪಡಿಸಿದಾಗ ನಮ್ಮ ದೇಶ ಶ್ರೀಮಂತ ದೇಶವಾಗಿ ಹೊರ ಹೊಮ್ಮುತ್ತದೆ” ನಿಜಕ್ಕೂ ಇದು ನಡೆಯುತ್ತಾ..? ಇಂಥಾ ಪರಿವರ್ತನೆ ಮಾಡೋಕೆ ಸರ್ಕಾರ ಏನು ಮಾಡಬೇಕು ಅನ್ನೋದು ನಿಮ್ಮ ನಮ್ಮೆಲ್ಲರ ಪ್ರೆಶ್ನೆ..!!






ಆದ್ರೆ ಅದಕ್ಕೂ ನನ್ನ ಹತ್ರ ಒಂದು ಉಪಾಯ ಇದೆ.. “ಪದವಿ ಹಂತದಲ್ಲಿ ಕೃಷಿ ಅಂತ ಒಂದು ವಿಷಯವನ್ನು ಕಡ್ಡಾಯವಾಗಿ ಇಡಬೇಕು.” ಇದರಲ್ಲಿ ಬಿತ್ತನೆ ಮಾಡೋದು ಹೇಗೆ? ಯಾವ ಬೆಳೆ ಗೆ ಯಾವ ಗೊಬ್ಬರ ಹಾಕಬೇಕು ಮತ್ತು ಎಷ್ಟು ಹಾಕಬೇಕು ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪದವಿ ಹಂತದಲ್ಲಿ ಸ್ಪಷ್ಟವಾಗಿ ತಿಳಿಸಬೇಕು.. ಹೀಗಾದಾಗ ಪದವಿಯನ್ನು ಮುಗಿಸಿದಾಗ ನಿರುದ್ಯೋಗಿಗಳಾಗಿ ಉಳಿಯುವ ಬಹಳಷ್ಟು ಜನರು ನನಗೆ ಕೃಷಿ ತಿಳಿದಿದೆ.. ಹೀಗಾಗಿ ನಾನು ನನ್ನ ಜಮೀನಿನಲ್ಲಿಯೇ ಉಳುಮೆ ಮಾಡ್ತೀನಿ ಅಂತ ಕೃಷಿ ಜೀವನಕ್ಕೆ ಕಾಲಿಡುತ್ತಾನೆ.. ಅವನು ಅತ್ಯುತ್ತಮವಾಗಿ ಓದಿದ್ದರಿಂದ ಇಳುವರಿ ಹೆಚ್ಚಿಸಲು ಏನು ಮಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾನೆ,.. ಹೀಗಾಗಿ ಅತ್ಯುತ್ತಮ ಇಳುವರಿಯನ್ನು ಪಡೆಯುತ್ತಾನೆ.. ಇದರಿಂದ ನಿರೋದ್ಯೋಗಿಗಳು ಉದ್ಯೋಗಿಗಳಾಗ್ತಾರೆ.. ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ.. ಬೆಲೆ ಏರಿಕೆ ಕಡಿಮೆ ಆಗುತ್ತದೆ.. ದಾಸ್ತಾನುಗಳ ರಫ್ತು ಹೆಚ್ಚಾಗುತ್ತದೆ.. ತಲಾ ಆದಾಯ ಮತ್ತು ರಾಷ್ಟ್ರೀಯ ಆದಾಯ ಕೂಡ ಹೆಚ್ಚಾಗುತ್ತದೆ., ಮತ್ತು ಹಲವು ದೇಶಗಳು ನಮ್ಮ ದೇಶವನ್ನು ಅವಲಂಬಿಸುವಂತಾಗುತ್ತದೆ,..


 


ಆದ್ರೆ ಇದೆಲ್ಲ ಆಗಬೇಕಾದ್ರೆ ಒಂದೇ ಒಂದು ಸಮಸ್ಯೆ.. ನಮ್ಮ ಸರ್ಕಾರ ಇಂಥಾ ಕಾರ್ಯಕ್ಕೆ ಮುಂದಾಗುತ್ತಾ..?? ಇಂಥಾ ಕಾರ್ಯವನ್ನು ಜಾರಿಗೊಳಿಸಲು ಶ್ರಮಿಸಿದ್ರೆ ಬದಲಾವಣೆ ಖಂಡಿತವಾಗ್ಲೂ ಆಗುತ್ತೆ ಅನ್ನೋದು ನನ್ನ ಬಲವಾದ ನಂಬಿಕೆ..






ಇದು ಸತ್ಯಾ ಅಲ್ವಾ ಸ್ನೇಹಿತರೆ..?? ನಿಮ್ಮ ಅನಿಸಿಕೆ ಏನು ಅಂತ ದಯವಿಟ್ಟು ಹೇಳಿ..
ಇಂತಿ
ಸವಿ ನೆನ ಪಿನ
ಶೇಖ್(ಸ್ಪಿಯ)ರ್
9980868898

Отправить комментарий

0 Комментарии