Hot Posts

10/recent/ticker-posts

ಸಚಿನ್ ತೆಂಡೂಲ್ಕರ್












ಏಪ್ರಿಲ್ 24,
1973 ರಲ್ಲಿ ಮುಂಬೈನಲ್ಲಿ ಜನಿಸಿದ ಸಚಿನ್ ತೆಂಡೂಲ್ಕರ್ 1989 ರಲ್ಲಿಯೇ  ಅಂದರೆ ತಮ್ಮ ಹದಿನಾರನೆಯ
ವಯಸ್ಸಿನಲ್ಲಿಯೇ ಅಂತರ್ ರಾಷ್ಟ್ರೀಯ ಮಟ್ಟದ ಕ್ರಿಕೇಟ್ ನಲ್ಲಿ ಧುಮುಕಿದ್ರು..


 ಕಾಕತಾಳಿಯವೋ ಏನೋ ಸಚಿನ್
ಮೊಟ್ಟ ಮೊದಲ ಬಾರಿಗೆ
1989 ರಲ್ಲಿ ಪಾಕಿಸ್ತಾನದ ವಿರುದ್ಧ
ಹೋರಾಡಿದ್ರು.
ಕ್ರಿಕೇಟ್ ಲೋಕದ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಓದಿದ್ದು
ಮಾತ್ರ ಅತ್ಯಲ್ಪ.. ಆದ್ರೆ ಸಾಧನೆ ಮಾತ್ರ ಅಗಾಧ.. ಹೆಜ್ಜೆ ಹೆಜ್ಜೆಗೂ ಸಾಧನೆಯನ್ನು ಮಾಡುತ್ತ
ದಾಖಲೆಯ ಪುಟಗಳಲ್ಲಿ ರಾರಾಜಿಸುತ್ತಿರುವ ವಿಶ್ವದ ಏಕೈಕ ಸರಳ ವ್ಯಕ್ತಿ.. ಸಚಿನ್ ಅತಿ ಹೆಚ್ಚು
ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅತಿ ಹೆಚ್ಚು ಏಕ ದಿನ ಪಂದ್ಯಗಳನ್ನು ಆಡಿದ್ದಾರೆ.. ಏಕದಿನ
ಪಂದ್ಯದಲ್ಲಿ ವಿಶ್ವದಲ್ಲೇ ಮೊಟ್ಟ ಮೊದಲಿಗೆ
200 ರನ್ ಗಳನ್ನು ಗಳಿಸಿದ
ಏಕೈಕ ಆಟಗಾರ. ಅತಿ ಹೆಚ್ಚು ರನ್ ಗಳನ್ನು ಗಳಿಸಿದ ಮಹಾನ್ ಆಟಗಾರರೂ ಹೌದು.. ಮತ್ತು
ಇತ್ತೀಚೆಗಷ್ಟೇ ನೂರು ಶತಕಗಳನ್ನು ಪೂರೈಸಿ, ದಾಖಲೆ ಮಾಡಿದ್ರು,, ಇಂಥಾ ದಾಖಲೆಯ ವೀರ ಈಗ
ರಾಜ್ಯಸಭೆಗೆ ಆಯ್ಕೆಯಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದೇಶವು ಆಸ್ಟ್ರೇಲಿಯಾದ ಶ್ರೇಷ್ಟ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.



Отправить комментарий

0 Комментарии