Hot Posts

10/recent/ticker-posts

ಕಗ್ಗಲ್ಲು ಶಿಲೆಯಾದ ಕಥೆ.







 ಪಾಪದ
ಪಾಲು ಯಾರೂ ತಗೊಳ್ಳೋದಿಲ್ಲ.. ಹೀಗಾಗಿ ಎಲ್ಲೆಡೆ ಪುಣ್ಯವನ್ನು ಹಂಚಬೇಕು..
ಒಳ್ಳೆಯದ್ದನ್ನು ಹಂಚಬೇಕು.. ಒಳ್ಳೆಯದ್ದನ್ನು ಕಲಿಸಬೇಕು.. ಕಲಿಸುವ ಮನಸಿದ್ಧರೆ ಎಂಥ
ಕಗ್ಗಲ್ಲಿಗೂ ಸಂಗೀತವನ್ನು ಕಲಿಸಬಹುದು ಎಂಬುದಕ್ಕೆ ಈ ಕಥೆಯೊಂದು ದಂಥ ಕಥೆ.. "ರಾಮ"
ಅನ್ನೋ ಎರಡಕ್ಷರ ಹೇಳೋಕೆ ಬಾರದ ಆ ಕಾಡು ಮನುಷ್ಯ ಶ್ರೇಷ್ಟನಾದ ಕಥೆ ಇದು..ಕಗ್ಗಲ್ಲು ಶಿಲೆಯಾದ ಕಥೆ ಇದು..





ಪ್ರಾಚೀನ
ಕಾಲದಲ್ಲಿ ಪ್ರಚೇತಸನೆಂಬ ಬೇಡನು ಕಾಡಿನಲ್ಲಿ ವಾಸಮಾಡುತ್ತಿದ್ದನು. ಅಲ್ಲಿ ಓಡಾಡುವ ಜನರನ್ನು
ಹೆದರಿಸಿ ಅವರಿಂದ ದುಡ್ಡು ಮತ್ತು ಆಭರಣಗಳನ್ನು ಕದಿಯುತ್ತಿದ್ದನು. ಆ ದುಡ್ಡಿನಿಂದ ತನ್ನ
ಮನೆಯನ್ನು ನಿಭಾಯಿಸುತ್ತಿದ್ದನು.


 ಒಂದು ಸಲ ನಾರದ ಮುನಿಗಳು ಪ್ರಚೇತಸನ ಬಳಿ ಹೋಗಿ "ನೀನು ಈ ಪಾಪವನ್ನು ಯಾಕೆ
ಮಾಡುತ್ತಿರುವೆ?
ಜನರಿಗೆ ಕಷ್ಟವನ್ನು ಕೊಟ್ಟು ದುಡ್ಡನ್ನು ಕದಿಯೋದು ಪಾಪದ ಕೆಲಸವಾಗಿದೆ"ಎಂದರು.
ಆಗ
ಪ್ರಚೇತಸನು "ಈ ದುಡ್ಡಿನಿಂದ ನಾನು ನನ್ನ ಪತ್ನಿ ಮತ್ತು
ಮಕ್ಕಳ ಹೊಟ್ಟೆ ತುಂಬಿಸುತ್ತೇನೆ"
 ಎಂದನು. ನಾರದ ಮುನಿಗಳು ಅವನಿಗೆ
"ನೀನು ಯಾರಿಗೋಸ್ಕರ ಈ ಪಾಪಮಾಡುತ್ತಿರುವೆಯೋ ಅವರು ನಿನ್ನ ಪಾಪದಲ್ಲಿ ಅರ್ಧ ಭಾಗವನ್ನು
ತೆಗೆದುಕೊಳ್ಳುವರೇ?"
ಕೇಳಿ ಬಾ ಎಂದು ಹೇಳಿದನು..
ಪ್ರಚೇತಸನು ತನ್ನ ಮನೆಗೆ ಹೋಗಿ ಪತ್ನಿ ಮತ್ತು ಮಕ್ಕಳಲ್ಲಿ ವಿಚಾರಿಸಿದನು,
ಆಗ ಅವರು "ಪಾಪ ಮಾಡಿದ್ದು ನೀನು.. ನಿನ್ನ ಪಾಪದ ಫಲವನ್ನು ನಾವೇಕೆ ಹಂಚಿಕೊಳ್ಳಬೇಕು?? ನೀನೇ ಆ ಪಾಪವನ್ನು ಅನುಭವಿಸಬೇಕು"
 ಎಂದರು. ಪ್ರಚೇತಸನಿಗೆ ದುಃಖವಾಯಿತು “ನಾನು ನನ್ನ ಹೆಂಡತಿ ಮಕ್ಕಳಿಗಾಗಿ
ಇಂಥಾ ಕೆಲಸ ಮಾಡಿದೆ.. ಆದರೆ ಅವರ‍್ಯಾರೂ ನನ್ನ ಪಾಪಗಳನ್ನು ಹಂಚಿಕೊಳ್ಳಲು ಸಿದ್ಧರಿಲ್ಲ.. ಎಂದು
ತಿಳಿದು ನೊಂದುಕೊಂಡನು. ನಂತರ ನಾರದಮುನಿಗಳಿಗೆ ಶರಣಾಗಿ, "ನೀವು ನನ್ನನ್ನು ಕ್ಷಮಿಸಿ, ಈ
ಘೋರ ಪಾಪದಿಂದ ಮುಕ್ತ ಮಾಡಬೇಕೆಂದು ಬೇಡಿಕೊಂಡನು". ನಾರದಮುನಿಗಳು ಅವನಿಗೆ ’ರಾಮ ರಾಮ’ ಎಂದು
ಜಪಿಸುವಂತೆ ಹೇಳಿದರು.


ಆದರೆ ಆ ಬೇಡನಿಗೆ “ರಾಮ-ರಾಮ
ಹೇಳಲು ಬರುತ್ತಿರಲಿಲ್ಲ..
ಆಗ ನಾರದರು ಒಂದು ಮರವನ್ನು ತೋರಿಸಿ ಅದೇನು ಎಂದು ಕೇಳಿದರು.. “ಮರ”
ಎಂದು ಹೇಳಿದ.. ಮತ್ತೊಂದು ಮರವನ್ನು ತೋರಿಸಿ “ ಆ ಮರ.. ಆ ಮರ” ಅಂತಲೇ ಜಪಿಸು ಭಗವಂತ ಮುಕ್ತಿ
ಕೊಡುತ್ತಾನೆ ಎಂದು ಹೇಳಿ ಹೊರಟರು.
ಆಗ ಆ ಬೇಡನು ಆ ಮರ ಆ ಮರ ಎಂದು ಜಪಿಸುತ್ತಿದ್ದ.. ನಂತರ ಅದು
ರಾಮ ರಾಮ ಅಂತ ಆಯ್ತು..


ಆಗ ನಾರದ ಬೇಡನಾಗಿದ್ದ ವ್ಯಕ್ತಿ
ಋಷಿ ಮುನಿಯಾದ.. ನಂತರ ಆ ಮುನಿಯಿಂದಲೇ ಒಂದು ಗ್ರಂಥವನ್ನು ಬರೆಸಿ ವಿಶ್ವಕ್ಕೇ ಆ ಬೇಡ
ಮಾದರಿಯಾಗಲಿ ಎಂದು ತಿಳಿದ ನಾರದರು ಆ ಋಷಿ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದರು. ಅವರ ಸುತ್ತ
ಹುತ್ತ ಕಟ್ಟಿಕೊಂಡಿದ್ದರಿಂದ ಆ ಋಷಿಯನ್ನು ’ವಾಲ್ಮೀಕಿ ಋಷಿ’ ಅಂತ ಕರೆದರು.. ಬೇಡನಾಗಿದ್ದ ಕ್ರೂರ
ವ್ಯಕ್ತಿಯೇ ಮಹಾನ್ ಗ್ರಂಥವಾದ ರಾಮಾಯಣವನ್ನು ಬರೆದನು..


Отправить комментарий

0 Комментарии