ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರ.
ಚತುರ್ಮುಖ ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ ಇದೆ. ಹಾಗಾಗಿ ಬ್ರಹ್ಮನಿಗೆ ಜಡಜ ಎಂಬ ಹೆಸರು ಉಂಟು. ಬ್ರಹ್ಮದೇವನಿಗೆ ನಾಲ್ಕು ತಲೆಗಳಿವೆ. ತಾನು ಸೃಷ್ಟಿಸಿದ ಸರಸ್ವತಿಯನ್ನು ಬ್ರಹ್ಮದೇವನು ಮದುವೆಯಾಗಿದ್ದಾನೆ ಎಂಬ ಕಲ್ಪನೆಯು ಜನರ ಮನದಲ್ಲಿದೆ. ಹೀಗಾಗಿಯೇ ಬ್ರಹ್ಮನಿಗೆ ಈ ಜಗದಲ್ಲಿ ಯಾವುದೇ ದೇವಾಲಯವಿಲ್ಲ ಮತ್ತು ಬ್ರಹ್ಮನನ್ನು ಯಾರೂ ಪೂಜಿಸುದಿಲ್ಲ,... ಹಬ್ಬ ಹರಿದಿನಗಳಲ್ಲಿ ಬ್ರಹ್ಮದೇವನಿಗೆ ಪೂಜೆಯ ಭಾಗ್ಯವೇ ಇಲ್ಲ ಎಂಬುದು ಹಲವರ ಮಾತು.
ಆದರೆ ಜಾನಪದ ಸಾಹಿತ್ಯದ ಹಿನ್ನೆಲೆಯ ಪ್ರಕಾರ ಸರಸ್ವತಿ ಬ್ರಹ್ಮನಿಗೆ ಕೇವಲ ಪತ್ನಿ ಮಾತ್ರ.. ಮಗಳಲ್ಲ.. ಬ್ರಹ್ಮನಿಂದ ಸರಸ್ವತಿ ಜನ್ಮ ಪಡೆದಿಲ್ಲ ಎಂದು ಹೇಳುತ್ತದೆ ಪುರತನ ಜಾನಪದ ಸಾಹಿತ್ಯ. ಅದ್ರೆ ಇದರಲ್ಲಿ ಸತ್ಯ ಅಸತ್ಯ ಯಾವುದೆಂದು ಸ್ಪಷ್ಟವಾಗಿ ಅರಿಯಲು ಸಾಧ್ಯವಿಲ್ಲ. ಆದರೆ ಬಹು ಸಂಖ್ಯೆ ಆಧಾರದ ಇಲ್ಲಿ ಮುಖ್ಯವಾಗುತ್ತದೆ
0 Комментарии