Hot Posts

10/recent/ticker-posts

ಸುಬ್ರಹ್ಮಣ್ಯ


ತಮಿಳುನಾಡಿನಲ್ಲಿ ಮುರುಗನ್ ಎಂದು ಕರೆಯಲ್ಪಡುವ ಹಿಂದೂ ದೇವರು ಕರ್ನಾಟಕದಲ್ಲಿ ಕಾರ್ತಿಕೇಯ, ಕುಮಾರಸ್ವಾಮಿ, ಸುಬ್ರಹ್ಮಣ್ಯ ಎಂದು ನಾಮಾಂಕಿತಗೊಂಡಿದ್ದಾನೆ..



ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಕುಮಾರಸ್ವಾಮಿಯು ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಕೊಂದು ಕರ್ನಾಟಕದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಂದು ರಕ್ತಸಿಕ್ತವಾದ ತನ್ನ ಶಕ್ತಿಯಾಯುಧವನ್ನು ಇಲ್ಲಿನ ನದಿಯಲ್ಲಿ ತೊಳೆದನು. ಈ ಘಟನೆಯ ಆನಂತರ ಈ ನದಿ ಕುಮಾರಧಾರೆಯೆಂದು ಪ್ರಸಿದ್ದವಾಯಿತು.



ರಾಕ್ಷಸರೊಂದಿಗಿನ ಯುದ್ದದಲ್ಲಿ ಗೆದ್ದ ಸಂತೋಷಕ್ಕಾಗಿ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ಮದುವೆಯಾಗುವಂತೆ ಯಾಚಿಸಿದರು. ಸ್ವಾಮಿಯು ಈ ಯಾಚನೆಯನ್ನು ಮನ್ನಿಸಿದನು.
ಒಮ್ಮೆ ಮಹಾಶಿವ ಭಕ್ತ ಹಾಗು ನಾಗರಾಜನಾದ ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯದ ಬಿಲ್ವದ್ವಾರಾ ಎಂಬ ಗುಹೆಯಲ್ಲಿ ಗರುಡನ ದಾಳಿಯಿಂದ ಪಾರಾಗಲು ಆನೇಕ ವರ್ಷಗಳಿಂದ ತಪಸ್ಸನ್ನು ಮಾಡಿದನು. ತನ್ನ ಪರಮ ಭಕ್ತನಾದ ವಾಸುಕಿ ಯೊಂದಿಗೆ ಶಾಶ್ವತವಾಗಿ ನೆಲೆನಿಲ್ಲುವುದಾಗಿ ಆಭಯ ನೀಡಿದನು.  ಹೀಗಾಗಿ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಸ್ಥಳವಾಗಿದೆ

Отправить комментарий

0 Комментарии