Hot Posts

10/recent/ticker-posts

ಗಣೇಶ


ವಿದ್ಯಾಧಿಪತಿಯಾದ ಗಣೇಶನು ಪಾರ್ವತಿ (ಗೌರಿ) ಯ ಪ್ರೀತಿಯ ಪುತ್ರ. ಪಾರ್ವತಿ ದೇವಿಯು ಸ್ನಾನಕ್ಕೆಂದು ಹೊರಟಾಗ ಕಾವಲಿಗಾಗಿ ತನ್ನ ಮೈಯ ಮಣ್ಣಿನಿಂದ ಗೊಂಬೆಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವ ನೀಡುತ್ತಾಳೆ.. ಆ ಗೊಂಬೆಯೇ ಗಣೇಶ.. ಅದೇ ಸಮಯದಲ್ಲಿ ಪಾರ್ವತಿ ದೇವಿಯನ್ನು ಕಾಣಲು ಶಿವನು ಬಂದಾಗ, ಶಿವನನ್ನು ಒಳ ಪ್ರವೇಶಿಸಿದಂತೆ ತಡೆದು ಶಿವನ ಕೋಪಕ್ಕೆ ಒಳಗಾಗುತ್ತಾನೆ. ಕೋಪದಲ್ಲಿದ್ದ ಶಿವನು ತನ್ನ ತ್ರಿಶೂಲದಿಂದ ಗಣಪತಿಯ ಶಿರಚ್ಛೇದನ ಮಾಡುತ್ತಾನೆ. ನಂತರ ಪಾರ್ವತಿ ದೇವಿಯು ದುಃಖಿತಳಾದಾಗ, ಆಕೆಯ ಮಾತಿನ ಮೇರೆಗೆ ಆ ಮುಂಡಕ್ಕೆ ಗಜ ರುಂಡವನ್ನು ಸೇರಿಸಿ ಮತ್ತೆ ಜೀವ ತುಂಬುತ್ತಾನೆ. ಪಾರ್ವತಿಯ ಪ್ರಿಯ ಪುತ್ರನಾದ್ದರಿಂದ ಗೌರಿ ಮತ್ತು ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುವ ಪದ್ಧತಿ ಇದೆ.

Отправить комментарий

0 Комментарии