Hot Posts

10/recent/ticker-posts

ಶಿವ - ಪರಮಾತ್ಮ- ಮುಕ್ಕಣ್ಣ


ಹಿಂದೂ ಧರ್ಮದ ಪ್ರಕಾರ ಕೈಲಾಸವಾಸಿಯಾದ ಶಿವನು ತ್ರಿಮೂರ್ತಿಗಳಲ್ಲಿ ಒಬ್ಬ.. ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ ಆ ಸೃಷ್ಟಿಯಾದ ಆಕರಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ, ಆದ್ದರಿಂದ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ.



ಶಿವನಿಗೆ ಗಂಗೆ ಮತ್ತು ಗೌರಿ ಎಂಬ ಇಬ್ಬರು ಪತ್ನಿಯರಿದ್ದಾರೆ. ಗಣೇಶ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪ ಎಂಬ ಮೂವರು ಮಕ್ಕಳಿದ್ದಾರೆ. ಶಿವನಿಗೆ ಮೂರು ಕಣ್ಣುಗಳಿದ್ದು ಮೂರನೇ ಕಣ್ಣು ನಾಶದ ಸಂಕೇತವಾಗಿದೆ. ಆ ಮೂರನೇ ಕಣ್ಣನ್ನು ತೆಗೆದರೆ ಭೂಮಂಡಲವೇ ಭಸ್ಮವಾಗುತ್ತದೆ ಎಂಬ ಮಾತಿದೆ. ಹಿಂದೊಮ್ಮೆ ಕಾಮನು ಶಿವನ ಮೇಲೆ ಹೂ ಬಾಣ ಬಿಟ್ಟಾಗ ಕುಪಿತಗೊಂಡ ಶಿವನು ಮೂರನೇ ಕಣ್ಣು ತೆರೆದು ಕಾಮನನ್ನು ಭಸ್ಮ ಮಾಡಿದ್ದ. ಹೀಗಾಗಿ ಶಿವನಿಗೆ ವಿಶೇಷ ಸ್ಥಾನವಿದೆ

Отправить комментарий

0 Комментарии