ಮನುಷ್ಯರ ಮೈಂಡಲ್ಲಿ ಕಂಪ್ಯೂಟರ್ ಚಿಪ್..!
ಇದಕ್ಕಿದೆ ಮಿದುಳಿನ ಸನ್ನೆ ಗ್ರಹಿಸೋ ಶಕ್ತಿ..!
ಇದು ದೇಹವನ್ನು ಕಂಟ್ರೋಲ್ ಮಾಡೋ ಚಿಪ್..!
ವಾ1: ಮನುಷ್ಯನ ಮೈಂಡನ್ನ ಅರ್ಥ ಮಾಡ್ಕೊಳ್ಳೋಕೆ ಯಾರಿಂದಲೂ ಸಾಧ್ಯವಾಗೋದಿಲ್ಲ
ಅಂತಾರೆ.. ಆದ್ರೆ, ಮನುಷ್ಯನ ಮೈಂಡನ್ನ ಅರ್ಥ ಮಾಡ್ಕೊಳ್ಳುವಂತ ಒಂದು ಚಿಪ್ಪನ್ನ, ವಿಜ್ಞಾನಿಗಳು ಕಂಡು
ಹಿಡಿದಿದ್ದಾರೆ. ಅದನ್ನು ನಿಮ್ಮ ತಲೇಲಿ ಫಿಕ್ಸ್ ಮಾಡಿದ್ರೆ ಸಾಕು.. ನಿಮ್ಮ ಮೈಂಡ್ನಲ್ಲಿನ ಆಲೋಚನೆಗಳು
ಆ ಚಿಪ್ಗೆ ಅರ್ಥ ಆಗುತ್ತೆ... ಅಷ್ಟೇ ಅಲ್ಲ, ನಿಮ್ಮ ಮಿದುಳಿನ ಸನ್ನೆಗಳು ಏನ್ ಹೇಳುತ್ತೋ, ಅದರಂತೆ
ದೇಹದ ವಿವಿಧ ಭಾಗಗಳು ಕೆಲಸ ಮಾಡುತ್ತೆ..!
ಫ್ಲೋ.....
ಪಾರ್ಶ್ವವಾಯು ರೋಗಿಗಳಿಗೆ ‘ಚಿಪ್’ ಚಿಕಿತ್ಸೆ
ಚಿಪ್ನಿಂದ ಸ್ವಾಧೀನವಿಲ್ಲದ ಭಾಗ ಕಂಟ್ರೋಲ್..!
ವಾ2: ಅಂದ್ಹಾಗೆ, ಈ ಚಿಪ್ ಪಾರ್ಶ್ವರೋಗಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ.
ಸ್ವಾಧೀನ ಕಳೆದುಕೊಂಡ ದೇಹದ ಭಾಗಗಳನ್ನು ಈ ಚಿಪ್ ಸಹಾಯದಿಂದ ಕಂಟ್ರೋಲ್ ಮಾಡಬಹುದು..!
ಫ್ಲೋ...
ವಾ3: ಈ ದೃಶ್ಯವನ್ನ ಒಮ್ಮೆ ನೋಡಿ.. ಈತನ ಹೆಸ್ರು ಬುರ್ಖಾರ್ತ್
ಅಂತ.. ಅಮೇರಿಕಾದ ಅಟ್ಲಾಂಟಾ ಮೂಲದವನು.. ಪಾರ್ಶ್ವವಾಯುನಿಂದ 2010
ರಲ್ಲಿ ಈತನ ಕೈ ಒಂದು ಸ್ವಾಧೀನ ಕಳೆದುಕೊಳ್ತು.. ಆಸ್ಪತ್ರೆಗೆ ಹೋದ್ರು ಪ್ರಯೋಜನವಾಗಲಿಲ್ಲ. ಆಗ ಈತನ ಸಹಾಯಕ್ಕೆ ಬಂದದ್ದು, ಕರೋಲಿನಾದ ವಿಜ್ಞಾನಿಗಳು..
ಫ್ಲೋ...
ವಾ4: ವಿಜ್ಞಾನಿಗಳು ಈತನ ಮಿದುಳಿನಲ್ಲಿ
ಒಂದು ಚಿಪ್ಪನ್ನ ಅಳವಡಿಸಿದ್ರು.. ನಂತರ ಆ ಚಿಪ್ನಿಂದ ಈತನ ನಿಷ್ಕ್ರಿಯಗೊಂಡ ಕೈಗಳಿಗೆ ವೈಯರ್ಗಳ
ಮೂಲಕ ಸಂಪರ್ಕ ಕಲ್ಪಿಸಲಾಯ್ತು.. ಮಿದುಳಿನಲ್ಲಿ ಫಿಕ್ಸ್ ಮಾಡಿರೋ ಈ ಚಿಪ್, ಮಿದುಳಿನ ಸನ್ನೆಗಳನ್ನು
ವೇಗವಾಗಿ ಗ್ರಹಿಸಿ, ಕ್ಷಣ ಮಾತ್ರದಲ್ಲಿ ಕೈಗಳಿಗೆ ರವಾನಿಸಲು ಪ್ರಾರಂಭಿಸಿತು.. ಎಲೆಕ್ಟ್ರೋಡ್ಗಳ
ಮೂಲಕ ನಿಷ್ಕ್ರಿಯಗೊಂಡ ಕೈಗಳಿಗೆ ಸಂದೇಶಗಳನ್ನು ರವಾನೆಯಾದ ನಂತರ, ಸಂದೇಶಗಳಿಗೆ ಅನುಗುಣವಾಗಿ ಕೈಗಳು
ಚಲನವಲನಗೊಳ್ಳೊಕೆ ಶುರು ಮಾಡಿದ್ವು..
ಫ್ಲೋ....
ವಾ5: ನೋಡಿದ್ರಲ್ಲಾ.. ಪಾರ್ಶ್ವವಾಯುನಿಂದ ನಿಷ್ಕ್ರಿಯಗೊಂಡ ಕೈಗಳು ಹೇಗೆ ಕೆಲಸ ಮಾಡ್ತಾ ಇದೆ ಅಂತ.. ಮಿದುಳಿನಲ್ಲಿ
ಅಳವಡಿಸಿರೋ ಚಿಪ್ ಮಿದುಳಿನ ಸನ್ನೆಗಳನ್ನು ಗ್ರಹಿಸಿ, ಅದನ್ನು ಎಲೆಕ್ಟ್ರೋಡ್ಗಳ ಮೂಲಕ ಕೈಗಳಿಗೆ ರವಾನಿಸೋದ್ರಿಂದ,
ಕೈಗಳಲ್ಲಿ ಚಲನವಲನ ಉಂಟಾಗುತ್ತೆ. ಇಂಥ ವಿನೂತನ ಚಿಪ್ನಿಂದ ಪಾರ್ಶ್ವವಾಯುನಿಂದ ಬಳಲುತ್ತಿರೋರು,
ಕೈಕಾಲುಗಳ ಸ್ವಾಧೀನ ಕಳೆದುಕೊಂಡವರು, ಮೊದಲಿನಂತ ಕೈಕಾಲುಗಳಲ್ಲಿ ಶಕ್ತಿ ಪಡೆದುಕೊಳ್ಳಬಹುದಾಗಿದೆ.
ವಿಜ್ಞಾನಿಗಳ ಈ ವಿನೂತನ ಸಂಶೋಧನೆ ನಿಜಕ್ಕೂ ಶ್ಲಾಘನೀಯ..



















Комментарии
Отправить комментарий