ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡೋಕೆ ಹಲವಾರು ಬಿಸಿನೆಸ್ ಸಂಸ್ಥೆಗಳು ಹಲವಾರು ಟ್ರಿಕ್ಸ್ಗಳನ್ನ ಮಾಡ್ತಾ ಇರುತ್ತೆ.. ಎಲ್ಲಾ ವರ್ಗದವರನ್ನು ತನ್ನ ಕಡೆ ಸೆಳೆಯೋದೆ ಬಿಸಿನೆಸ್ನ ತಂತ್ರ.. ಈ ತಂತ್ರಕ್ಕೆ ಗಂಟು ಬಿದ್ದ ಆಪಲ್ ಸಂಸ್ಥೆ ಹೊಸ ಹೊಸ ವಿನೂತನ ಗ್ಯಾಜೆಟ್ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಇವುಗಳು ನೋಡೋಕೆ ಎಷ್ಟು ಅಟ್ರ್ಯಾಕ್ಷನ್ ಆಗಿವೆಯೋ, ಅಷ್ಟೇ ದುಬಾರಿ ಕೂಡ ಹೌದು..
ಹೊಸ ಹೊಸ ವಿನೂತನ ಗೆಜೆಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳನ್ನು ಸಾಮಾನ್ಯ ಜನ್ರು ಕೊಂಡುಕೊಳ್ಳೋಕಂತೂ ಆಗಲ್ಲ.. ಏನಿದ್ರೂ ನೋಡಿ ಖುಷಿ ಪಡ್ಬೇಕು ಅಷ್ಟೇ.. ಅಂದ್ಹಾಗೆ ಅಷ್ಟೋಂದು ದುಬಾರಿಯಾಗಿರೋ ಆ ಗೆಜೆಟ್ಗಳು ಯಾವ್ದು ಆಂದ್ರಾ..? ಇಲ್ಲಿವೆ ನೋಡಿ..
ಐಫೋನ್ 5 ಬ್ಲಾಕ್ ಡೈಮಂಡ್
======================-
ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ
135 ಗ್ರಾಂ ಇದ್ದು, 24 ಕ್ಯಾರೆಟ್ ಚಿನ್ನದಿಂದ ಕೂಡಿದೆ
600 ಡೈಮಂಡ್ ಹರಳುಗಳ ಬಳಕೆ
ಬೆಲೆ 901 ದಶಲಕ್ಷ ರೂಪಾಯಿಗಳು
9 ವಾರಗಳ ಕಾಲ ನಿರ್ಮಿಸಿದ ತಜ್ಞರು
ಚೀನಾದ ಬಿಸಿನೆಸ್ ಮ್ಯಾನ್ ಇದರ ಒಡೆಯ
ಇನ್ನು ಈ ದುಬಾರಿ ಐಫೋನ್ 5 ಅನ್ನ ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ. ಇದು ಸುಮಾರು 135 ಗ್ರಾಂ ಇದ್ದು, ಪಕ್ಕಾ 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. 600 ಡೈಮಂಡ್ ಹರಳುಗಳಿಂದ ನಿರ್ಮಿಸಲಾಗಿದೆ. ಇನ್ನು ಇದ್ರ ಬೆಲೆ 901 ದಶಲಕ್ಷ ರೂಪಾಯಿಗಳಾಗಿದ್ದು, ಇದನ್ನು ನಿರ್ಮಾಣ ಮಾಡೋಕೆ 9 ವಾರಗಳ ಕಾಲ ತಜ್ಞರು ಶ್ರಮಿಸಿದ್ದಾರೆ. ಜಗತ್ತಿನ ಈ ಅತಿ ದುಬಾರಿ ಐಫೋನನ್ನ ಚೀನಾದ ಬಿಸಿನೆಸ್ ಮ್ಯಾನ್ ತಮ್ಮದಾಗಿಸಿಕೊಂಡಿದ್ದಾರೆ
ಐಪ್ಯಾಡ್ 2 ಗೋಲ್ಡ್ ಎಡಿಷನ್
==============================-
65 ದಶಲಕ್ಷ ವರ್ಷದ ಡೈನೋಸರಸ್ ಮೂಳೆ ಬಳಕೆ
75 ದಶಲಕ್ಷ ವರ್ಷ ಹಳೆಯ ಕಲ್ಲು ಬಳಕೆ
53 ಬಗೆಯ ಡೈಮಂಡ್ಗಳನ್ನು ಬಳಸಲಾಗಿದೆ
24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ
2 ಕೆಜಿ ತೂಕವನ್ನು ಇದು ಹೊಂದಿದೆ
ಐಪ್ಯಾಡ್2ನ ಬೆಲೆ 468 ದಶಲಕ್ಷ ರೂಪಾಯಿಗಳು
ಇದು ಐಪ್ಯಾಡ್ 2 ಗೋಲ್ಡ್ ಎಡಿಷನ್ ಅನ್ನು 65 ದಶಲಕ್ಷ ವರ್ಷಗಳ ಹಳೆಯ ಡೈನೋಸರಸ್ನ ಮೂಳೆಗಳಿಂದ ತಯಾರಿಸಲಾಗಿದೆ. ಅಷ್ಟೆ ಅಲ್ಲ,ಇದ್ರ ಮುಂದಿನ ಭಾಗದ ಸ್ಕ್ರೀನ್ನಲ್ಲಿ ಅಮೋಲೈಟ್ ಎಂಬ ಜಗತ್ತಿನ ಅತ್ಯಂತ ಹಳೆಯ ಕಲ್ಲನ್ನು ಬಳಸಲಾಗಿದ್ದು, ಇದು 75 ದಶಲಕ್ಷ ವರ್ಷಗಳಷ್ಟು ಹಳೆಯದಾಗಿದೆ. ಇನ್ನು ಇದ್ರಲ್ಲಿ 53 ಬಗೆಯ ಡೈಮಂಡ್ಗಳನ್ನು ಬಳಸಲಾಗಿದ್ದು, 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಇದ್ರ ತೂಕ ಬರೋಬ್ಬರಿ 2 ಕೆಜಿ ಇದೆ. ಇನ್ನು ಈ ಆಕರ್ಷಕವಾದ ಐಪ್ಯಾಡ್ನ ಬೆಲೆ 468 ದಶಲಕ್ಷ ರೂಪಾಯಿಗಳು.
ದುಬಾರಿ ಲೌಡ್ ಸ್ಪೀಕರ್ಸ್
==================================-
ಜಗತ್ತಿನ ಅತಿ ದುಬಾರಿ ಸ್ಪೀಕರ್ಗಳು
282 ದಶಲಕ್ಷ ರೂಪಾಯಿಗಳು
ಒಂದೇ ಜೊತೆಯ ಸ್ಪೀಕರ್ಗಳು ಲಭ್ಯವಿದೆ
18 ಜಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ
99 ಬೆಳ್ಳಿ ನಿರ್ಮಿತ ಸ್ಪೀಕರ್ಗಳನ್ನು ತಯಾರಿಸಲಾಗಿತ್ತು
ಅವುಗಳೆಲ್ಲವೂ ಸೋಲ್ಡ್ ಔಟ್ ಆಗಿವೆ.
ಗ್ರಾಫಿಕ್ ವಾಯ್ಸ್: ಇವು ಜಗತ್ತಿನ ಅತಿ ದುಬಾರಿ ಸ್ಪೀಕರ್ಗಳು.. ಇದ್ರ ಬೆಲೆ 282 ದಶಲಕ್ಷ ರೂಪಾಯಿಗಳು.. ಇಡೀ ಜಗತ್ತಿನಲ್ಲಿ ಇದು ಒಂದೇ ಜೊತೆಯ ಸ್ಪೀಕರ್ಗಳು ಲಭ್ಯವಿದೆ. ಇದನ್ನು 18 ಜಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದ್ರ ಜೊತೆಗೆ 99 ಬೆಳ್ಳಿ ನಿರ್ಮಿತ ಸ್ಪೀಕರ್ಗಳನ್ನು ತಯಾರಿಸಲಾಗಿತ್ತು. ಆದ್ರೆ ಅವುಗಳೆಲ್ಲವೂ ಸೋಲ್ಡ್ ಔಟ್ ಆಗಿವೆ.
ಮ್ಯಾಕ್ಬುಕ್ ಏರ್ ಸುಪ್ರೀಂ ಪ್ಲಾಟಿನಮ್ ಎಡಿಷನ್
==============================================-
ಮ್ಯಾಕ್ಬುಕ್ ಏರ್ ಸುಪ್ರೀಂ ಪ್ಲಾಟಿನಮ್ ಎಡಿಷನ್
ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ
ಐದು ಪ್ರಾಡಕ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ
7 ಕೆಜಿ ಭಾರ, ವಜ್ರಗಳ ಮತ್ತು ಮಣಿಗಳ ಬಳಕೆ
ಇದ್ರ ಬೆಲೆ 3 ಕೋಟಿಗೂ ಅಧಿಕವಾಗಿದೆ.
ಇನ್ನು ಈ ದುಬಾರಿ ಮ್ಯಾಕ್ಬುಕ್ ಅನ್ನ ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ. ಒಟ್ಟು ಐದು ಪ್ರಾಡಕ್ಟ್ಗಳನ್ನು ನಿರ್ಮಾಣ ಮಾಡಿದ್ದು,ಸುಮಾರು 7 ಕೆಜಿಯಷ್ಟು ಭಾರವಿದೆ. ವಜ್ರಗಳು, ಮತ್ತು ವಿವಿಧ ರೀತಿಯ ಮಣಿಗಳನ್ನು ಇದ್ರಲ್ಲಿ ಬಳಸಲಾಗಿದ್ದು, ಇದ್ರ ಬೆಲೆ ಮೂರು ಕೋಟಿಗೂ ಅಧಿಕವಾಗಿದೆ.
ಡೈಮಂಡ್ ಬ್ಲಾಕ್ ಬೆರಿ ಮೊಬೈಲ್
=============================-
ಬೆಲೆ 1 ಕೋಟಿ 50 ಲಕ್ಷ ರೂಪಾಯಿ
4,459 ಡೈಮಂಡ್ಗಳನ್ನ ಬಳಸಲಾಗಿದೆ
24 ಕ್ಯಾರೆಟ್ ಚಿನ್ನದಲ್ಲಿ ನಿರ್ಮಿಸಲಾಗಿದೆ
350 ಗಂಟೆಗಳಲ್ಲಿ ನಿರ್ಮಾಣ
ಇದು ಡೈಮಂಡ್ ಬ್ಲಾಕ್ ಬೆರಿ ಮೊಬೈಲ್.. ಇದ್ರ ಒಟ್ಟು ಬೆಲೆ 1 ಕೋಟಿ 50 ಲಕ್ಷ ರೂಪಾಯಿ. ಇದ್ರಲ್ಲಿ 4,459 ಡೈಮಂಡ್ಗಳನ್ನ ಬಳಸಲಾಗಿದೆ. 24 ಕ್ಯಾರೆಟ್ ಚಿನ್ನದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಇದನ್ನು ನಿರ್ಮಾಣ ಮಾಡೋಕೆ ತಜ್ಞರು 350 ಗಂಟೆಗಳನ್ನು ತೆಗೆದುಕೊಂಡಿದ್ದಾರೆ
ಇಷ್ಟೇ ಅಲ್ಲ, ಇನ್ನೂ ಅತ್ಯಾಧುನಿಕ ಮತ್ತು ದುಬಾರಿ ಬೆಲೆಯ ಗೆಜೆಟ್ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ಗಳು ಅದರ ಒಡೆಯರಾಗ್ತಿದ್ದಾರೆ. ಆ ಮೂಲಕ ತಮ್ಮ ಸ್ಟೇಟಸ್ಸನ್ನ ಹೆಚ್ಚಿಸಿಕೊಳ್ತಿದ್ದಾರೆ.
=============================================-
ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ದುಬಾರಿ ಗೆಜೆಟ್ಗಳು
ಐಫೋನ್ 5 ಬ್ಲಾಕ್ ಡೈಮಂಡ್ - 901 ದಶಲಕ್ಷ ರೂ
ಐಪ್ಯಾಡ್ 2 ಗೋಲ್ಡ್ ಎಡಿಷನ್- 468 ದಶಲಕ್ಷ ರೂ
ದುಬಾರಿ ಲೌಡ್ ಸ್ಪೀಕರ್ಸ್- 282 ದಶಲಕ್ಷ ರೂ
ಆಪಲ್ ಮ್ಯಾಕ್ಬುಕ್ - 3 ಕೋಟಿಗೂ ಅಧಿಕ
ಡೈಮಂಡ್ ಬ್ಲಾಕ್ ಬೆರಿ ಮೊಬೈಲ್ - 1 ಕೋಟಿ 50 ಲಕ್ಷ
ಡೈಮಂಡ್ ಮತ್ತು 24 ಕ್ಯಾರೆಟ್ ಚಿನ್ನದಿಂದ ನಿರ್ಮಿಸಲಾಗಿದೆ
0 Комментарии