Hot Posts

10/recent/ticker-posts

ಭಾರತದಲ್ಲಿದ್ದಾರೆ ಐವರು ಶತಕೋಟ್ಯಾಧೀಶರು..!













ನಮ್ಮ ದೇಶದಲ್ಲಿ ಬಡವರೂ
ಇದ್ದಾರೆ
..
ಶ್ರೀಮಂತರೂ ಇದ್ದಾರೆ... ಆದ್ರೆ ದೇಶದ ಸಂಪತ್ತಿನ ಅರ್ಧದಷ್ಟು
ಪಾಲು ಕೇವರ ಐದು ಮಂದಿ ಬಳಿಯಿದೆ ಅಂದ್ರೆ ಆಶ್ಚರ್ಯ ಆಗುತ್ತಲ್ವಾ
... ಯೆಸ್
ಆ ಆಗರ್ಭ ಶ್ರೀಮಂತರು ಯಾಱರು
.. ಅವರ ಬಳಿ ಇರೋ ಆಸ್ತಿಗಳು ಎಷ್ಟೆಷ್ಟು..
ಅಂತಾ ತಿಳಿಬೇಕಂದ್ರೆ ಈ ವರದಿ ನೋಡಿ.

 


ನಮ್ಮ ದೇಶ ಅಪಾರ
ನೈಸರ್ಗಿಕ ಸಂಪತ್ತನ್ನು ಹೊಂದಿರುವ ರಾಷ್ಟ್ರ ನಿಜ
. ಆದ್ರೆ ಸಂಪತ್ತಿದ್ದಷ್ಟು
ಶ್ರೀಮಂತ ರಾಷ್ಟ್ರವಲ್ಲ
. ಇಲ್ಲಿ ಬಡವರ, ಮಧ್ಯಮ
ವರ್ಗದವರ ಸಂಖ್ಯೆಯೇ ಹೆಚ್ಚು
. ಎಲ್ಲಿ ನೋಡಿದ್ರೂ ಬಡವರು.. ಭಿಕ್ಷಕುಕರು, ನಿರ್ಗತಿಕರು ಕಾಣಸಿಗೋದು ಈ ರಾಷ್ಟ್ರದಲ್ಲಿ ಸಾಮಾನ್ಯ.





ವಾಯ್ಸ್ - ಹಾಗಂತ ಭಾರತ
ವಿಜ್ಞಾನ
.. ತಂತ್ರಜ್ಞಾನ.. ಕೈಗಾರಿಕೆ..
ಐಟಿ.. ಬಿಟಿ.. ಇಂಥ ಎಲ್ಲಾ ಕ್ಷೇತ್ರದಲ್ಲೂ
ಮುಂದಿದೆ
. ನಮ್ಮಲ್ಲಿ ಆಗರ್ಭ ಶ್ರೀಮಂತರೂ ಕೆಲವೇ ಕೆಲವರಿದ್ದಾರೆ.
ಜೊತೆಗೇ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದವರು ಮಾತ್ರ ಕೋಟ್ಯಂತರ ಜನರಿದ್ದಾರೆ.








ಭಾರತದಲ್ಲಿದ್ದಾರೆ ಐವರು
ಶತಕೋಟ್ಯಾಧೀಶರು
!
(ಫುಲ್ಫ್ರೇಮ್)


ಇವರ ಬಳಿ ಇದೆ ದೇಶದ ಅರ್ಧದಷ್ಟು
ಸಂಪತ್ತು
!
(ಫುಲ್ಫ್ರೇಮ್)





ವಾಯ್ಸ್ - ಭಾರತದ ಒಟ್ಟು
ಸಂಪತ್ತಿನ ಶೇ
.47.5ರಷ್ಟು ಪ್ರಮಾಣವನ್ನು ಐವರು ಶತಕೋಟ್ಯಧೀಶರು ಹೊಂದಿದ್ದಾರೆ
ಅಂದ್ರೆ ಆಶ್ಚರ್ಯ ಆಗುತ್ತಲ್ವಾ
... ಹೌದು.. ಇಂಥದ್ದೊಂದು
ಸಂಗತಿಯನ್ನು ವೆಲ್ತ್
-ಎಕ್ಸ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ದೇಶದ ಈ ಐವರು ಭಾರೀ ಶ್ರೀಮಂತರು ದೇಶದ ಒಟ್ಟಾರೆ ಸಂಪತ್ತಿನಲ್ಲಿ ಬಹುತೇಕ ಅರ್ಧದಷ್ಟು
ಅಂದ್ರೆ ಶೇ
. 47.5 ಭಾಗಕ್ಕೆ ಮಾಲೀಕರು. ಈ ಐವರು
ಸಿರಿವಂತರು ವೈಯಕ್ತಿಕವಾಗಿ ಹೊಂದಿರುವ ಸಂಪತ್ತಿನ ಮೊತ್ತವೇ
8550 ಕೋಟಿ
ಡಾಲರ್‌ಗ ಳಷ್ಟು ಅಪಾರ ಪ್ರಮಾಣದ್ದಾಗಿದೆ ಅಂತಾ ಸಂಪತ್ತು ಸಂಶೋಧನಾ ಸಂಸ್ಥೆ
ವೆಲ್ತ್‌ ಎಕ್ಸ್‌  ವರದಿ ಪ್ರಕಟಿಸಿದೆ.







ಭಾರತದ ಟಾಪ್​ 5 ಕುಬೇರರು


------------------------


ಮುಖೇಶ್ ಅಂಬಾನಿ


ಕಂಪನಿ : ರಿಲಾಯನ್ಸ್
ಗ್ರೂಪ್​ ಒಡೆಯ


ನಿವ್ವಳ ಆಸ್ತಿ ಮೌಲ್ಯ: 1,49,337 ಕೋಟಿ
ರೂ
.





ವಾಯ್ಸ್ - ಭಾರತದ ಸಿರಿವಂತರ
ಪೈಕಿ
, ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಈಗಲೂ ದೇಶದ ನಂ.1 ಶ್ರೀಮಂತ. ಹೌದು ರಿಲಯನ್ಸ್ ಇಂಡಸ್ಟ್ರೀಸ್‌, ರಿಲಯನ್ಸ್‌ ಪೆಟ್ರೊಕೆಮಿಕಲ್ಸ್‌ ಸೇರಿದಂತೆ ಹತ್ತಾರು ಕಂಪನಿಗಳ ಮಾಲೀಕರಾಗಿರುವ ಮುಕೇಶ್‌
ಅಂಬಾನಿ ಅವರ ನಿವ್ವಳ ಆಸ್ತಿಯ ಮೌಲ್ಯವೇ
2440 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು
ಅಂದ್ರೆ
1,49,377 ಕೋಟಿ ರೂಪಾಯಿ. ಮುಕೇಶ್ ಅಂಬಾನಿ
ಒಡೆತನದ ಮುಂಬಯಿ ಇಂಡಿಯನ್ಸ್ ಐಪಿಎಲ್ ತಂಡದ ಮೌಲ್ಯವೇ
112 ದಶಲಕ್ಷ ಡಾಲರ್.




ಲಕ್ಷ್ಮೀ ಮಿತ್ತಲ್​


ಕಂಪನಿ : ಆರ್ಸೆಲರ್‌
ಮಿತ್ತಲ್‌ ಕಂಪೆನಿಯ ಮಾಲೀಕ


ವೈಯಕ್ತಿಯ ಆಸ್ತಿ : 1,05,298 ಕೋಟಿ
ರೂ
.





ಭಾರತದ ಐವರು
ಅತೀ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡವರು ಲಕ್ಷ್ಮೀ ಮಿತ್ತಲ್
. ಉಕ್ಕು ತಯಾರಿಕೆ ಲೋಕದ ದಿಗ್ಗಜ ಎನಿಸಿಕೊಂಡಿರುವ, ಆರ್ಸೆಲರ್‌
ಮಿತ್ತಲ್‌ ಕಂಪೆನಿಯ ಮಾಲೀಕ ಲಕ್ಷ್ಮಿ ಮಿತ್ತಲ್‌ ಲಕ್ಷ್ಮೀ ಪುತ್ರರೇ ಸರಿ
. ಇವರ ವೈಯಕ್ತಿಕ ಆಸ್ತಿ ಮೌಲ್ಯ 1720 ಕೋಟಿ ಡಾಲರ್‌ಗಳಷ್ಟು ಅಂದ್ರೆ
1,05,298 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿಗೆ ಲಕ್ಷ್ಮೀ ಮಿತ್ತಲ್ ಒಡೆಯರಾಗಿದ್ದಾರೆ.





ದಿಲೀಪ್‌ ಶಾಂಘ್ವಿಕಂಪನಿ : ಸನ್ ಫಾರ್ಮಾ
ಕಂಪನಿ ಒಡೆಯ


ಆಸ್ತಿ ಮೌಲ್ಯ : 99,788 ಕೋಟಿ
ರೂ
.

 

ದೇಶದ ಐವರು
ಅತೀ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವವರು ದಿಲೀಪ್​ ಶಾಂಘ್ವಿ
. ಸನ್ ಫಾರ್ಮಾ ಒಡೆಯ ದಿಲೀಪ್ ಸಾಂಘ್ವಿ ಭಾರತದ ಇನ್ನೊಬ್ಬ ಅತೀ ಶ್ರೀಮಂತ ಉದ್ಯಮಿ.
ಸನ್‌ ಫಾರ್ಮಾ ಸಮೂಹ ಕಂಪೆನಿಗಳ ಒಡೆಯ ದಿಲೀಪ್​ ಅವರ  ಹೆಸರಿನಲ್ಲಿರೋ ಆಸ್ತಿ ಮೌಲ್ಯ  1630 ಕೋಟಿ ಡಾಲರ್‌.
ಅಂದ್ರೆ 99,788 ಕೋಟಿ ಕೋಟಿ ಮೌಲ್ಯದ ಸಂಪತ್ತಿಗೆ ಒಡೆಯ
ಈ ದಲೀಪ್ ಶಾಂಘ್ವಿ
.





ಫ್ಲೋ...






ಅಜೀಂ ಪ್ರೇಮ್​ ಜೀ


ಕಂಪನಿ : ವಿಪ್ರೋ ಸಂಸ್ಥಾಪಕ


ಆಸ್ತಿ ಮೌಲ್ಯ : 91,218 ಕೋಟಿ
ರೂ
.





 ಇನ್ನು,
ದೇಶದ ಐವರು ಅತೀ ಶ್ರೀಮಂತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವವರು ಬೆಂಗಳೂರಿನವರೇ
ಆದ ಅಜೀಂ ಪ್ರೇಮ್‌ಜಿ
. ಅಜೀಂ ಪ್ರೇಮ್​ ಜೀ ಹೆಸರಲ್ಲಿ ವಿಪ್ರೊ ಕಂಪೆನಿಯಲ್ಲಿನ
ಷೇರುಗಳೂ ಸೇರಿದಂತೆ ಒಟ್ಟು
1490 ಕೋಟಿ ಡಾಲರ್‌ ಆಸ್ತಿ ಇದೆ. ಅಂದ್ರೆ 91,218 ಕೋಟಿ ಮೌಲ್ಯದ ಸಂಪತ್ತಿಗೆ ಒಡೆಯ ಈ ಅಜೀಂ ಪ್ರೇಂ್​
ಜೀ
.



ಪಲ್ಲೋಂಜಿ ಷಪೂರ್ಜಿ ಮಿಸ್ತ್ರಿ




ಉದ್ಯಮ : ಟಾಟಾ ಸನ್ಸ್‌
ಕಂಪೆನಿಯಲ್ಲಿ ದೊಡ್ಡ ಪಾಲು ಷೇರು


ಒಟ್ಟು ಆಸ್ತಿ ಮೌಲ್ಯ : 77,750 ಕೋಟಿ
ರೂ
.



ದೇಶದ ಅತೀ ಶ್ರೀಮಂತರ
ಪಟ್ಟಿಯಲ್ಲಿರೋ ಐದನೆಯವರು ಪಲ್ಲೋಂಜಿ ಷಪೂರ್ಜಿ ಮಿಸ್ತ್ರಿ
. ಟಾಟಾ ಸನ್ಸ್‌
ಕಂಪೆನಿಯಲ್ಲಿ ದೊಡ್ಡ ಪಾಲು ಷೇರು ಹೊಂದಿದ್ದಾರೆ
. 
ಪಲ್ಲೋಂಜಿ ಮಿಸ್ತ್ರಿಯವರ ಆಸ್ತಿ ಮೌಲ್ಯ 1270 ಕೋಟಿ ಡಾಲರ್‌ ಅಂದ್ರೆ 77,750 ಕೋಟಿ ರೂಪಾಯಿಗಳಷ್ಟು.





ಫ್ಲೋ...





ವಾಯ್ಸ್ - ಇನ್ನುಳಿದಂತೆ
ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬಾಲಿವುಡ್‌ನ ಸಿರಿವಂತ ನಟ
, ನಿರ್ಮಾಪಕ,
ಕೋಲ್ಕತ್ತ ನೈಟ್‌ ರೈಡರ್ಸ್‌ ಐಪಿಎಲ್‌ ಕ್ರಿಕೆಟ್‌ ತಂಡದ ಮಾಲೀಕ ಶಾರುಕ್‌ ಖಾನ್‌
ವೈಯಕ್ತಿಕ ವಾಗಿ
60 ಕೋಟಿ ಡಾಲರ್‌ ಅಂದ್ರೆ 3673 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.





ವಾಯ್ಸ್ - ಇನ್ನು,
ಭಾರತದ ಕ್ರಿಕೆಟ್‌ ದಂತಕತೆ ಎನಿಸಿಕೊಂಡಿರುವ ಸಚಿನ್‌ ತೆಂಡೂಲ್ಕರ್‌ 16
ಕೋಟಿ ಡಾಲರ್‌ಗ ಳಷ್ಟು ಅಂದ್ರೆ 980 ಕೋಟಿಯಷ್ಟು ಸಂಪತ್ತು
ಹೊಂದಿದ್ದಾರೆ
.





ವಾಯ್ಸ್ - ಯಶಸ್ವೀ ಉದ್ಯಮಶೀಲತೆಯೇ
ಈ ನಾಯಕರ ಸಂಪತ್ತು ಸೃಷ್ಟಿಗೆ ಪ್ರಮುಖ ಕಾರಣ ಅನ್ನೋದು ನಿಜ
. ತೈಲ ಮತ್ತು
ಅನಿಲ
, ಉಕ್ಕು ಮತ್ತು ಔಷಧ ರಂಗಗಳಲ್ಲಿ ಈ ಸಿರಿವಂತರು ಹೆಚ್ಚಿನ ಯಶಸ್ಸು
ಸಾಧಿಸಿದ್ದಾರೆ
.





ವಾಯ್ಸ್ - ಈ ಐವರು ಶತಕೋಟ್ಯಧೀಶ
ಉದ್ಯಮಪತಿಗಳು ಪ್ರತಿಷ್ಠಾನಗಳ ಮೂಲಕ ಶಿಕ್ಷಣ
, ಆರೋಗ್ಯ, ಪರಿಸರ, ಸಾಮಾಜಿಕ ಕಲ್ಯಾಣ ಮತ್ತು ಸಮುದಾಯ ಶ್ರೇಯಾಭಿವೃದ್ಧಿ ಕಾರ್ಯಗಳಿಗೆ
ಉದಾರವಾಗಿ ದಾನ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ವೆಲ್ತ್
-ಎಕ್ಸ್
ವರದಿ ತಿಳಿಸಿದೆ
.


ವಾಯ್ಸ್ - ಒಟ್ಟಾರೆಯಾಗಿ
ದೇಶದ ಸಂಪತ್ತಿನಲ್ಲಿ ಅರ್ಧದಷ್ಟು ಪಾಲು ಹೊಂದಿರುವ ಈ ಕುಬೇರರು ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಹೆಸರು
ಪಡೆದಿದ್ದಾರೆ
.



 









Отправить комментарий

0 Комментарии