ಸ್ಕೂಲ್ನಲ್ಲಿ ಓದ್ಬೇಕಾದ್ರೆ
ನಮ್ಮ ಮೇಷ್ಟ್ರು ಹೇಳ್ತಿದ್ರು. ಕ್ಲಾಸ್ ಒಳಗೆ ಕಾಲಿಟ್ರೆ ಸಾಕು.. ಹೇ.. ಗಲಾಟೆ ನಿಲ್ಸಿ..
ಪಿನ್ ಡ್ರಾಪ್ ಸೈಲೆಂಟ್ ಇರಬೇಕು. ಅಂತ ಜೋರಾಗಿ ಹೇಳ್ತಿದ್ರು. ಆದ್ರೆ, ಆದ್ರೆ ಇಲ್ಲೊಬ್ರು ಮೇಷ್ಟ್ರು ಇದ್ದಾರೆ. ಈಗ್ ತಾನೆ ಹೊಸದಾಗಿ ಅಪಾಯಿಂಟ್ ಆಗಿದ್ದಾರೆ.
ಆದ್ರೆ ಫುಲ್ ಸ್ಟ್ರಿಕ್ಟು. ಇವ್ರು ಕ್ಲಾಸ್ ಒಳಗೆ ಎಂಟ್ರಿ
ಕೊಟ್ರೆ ಸಾಕು, ಸ್ಟೂಡೆಂಟ್ಸು ಕಮಕ್ ಕಿಮಕ್ ಅನ್ನಂಗಿಲ್ಲ. ನಾವ್ ಹೇಳೋದ್ಕಿಂತ ನೀವೇ ನೋಡಿ, ಅವರು ಹೇಗೆ ಕ್ಲಾಸ್ ತಗೊಳ್ತಾರೆ ಅಂತ..
LOOK
ಫ್ಲೋ...
ವಾಯ್ಸ್: ಮೇಷ್ಟ್ರು ಅಂದ್ರೆ,
ಸಾಕು, ಈಗಲೂ ಕೂಡ ಕೈ ಊದಿಕೊಳ್ಳುತ್ತೆ. ಎದೆಯಲ್ಲಿ ನಡುಕ ಸೃಷ್ಟಿಯಾಗುತ್ತೆ.. ಏಟು ತಿನ್ನದೇ ಪಾಸಾಗಿರೋ
ಒಬ್ಬ ಸ್ಟೂಡೆಂಟ್ ಕೂಡ ಈ ಜಗತ್ತಿನಲ್ಲಿ ಇಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ.. ಆದ್ರೆ ಇತ್ತೀಚೆಗೆ ಇಂಡಿಯಾದಲ್ಲಿ ಒಬ್ಬರು ಹೊಸ ಮೇಷ್ಟ್ರು ಅಪಾಯಿಂಟ್ ಆಗಿದ್ದಾರೆ.
ಅಬ್ಬಾ... ಅಂಥಾ ಮೇಷ್ಟ್ರನ್ನ ನಾವ್ ಯಾವತ್ತು ನೋಡಿಲ್ಲ
ಸ್ವಾಮಿ. ಸಖತ್ ಖಡಕ್ ಮೇಷ್ಟ್ರು.. ಅವ್ರು ಬರ್ತಾ
ಇದ್ದಂಗೆ, ಸ್ಟೂಡೆಂಟ್ಸೆಲ್ಲಾ ಎದ್ ನಿಂತ್ಕೊಂಡು ಸೆಲ್ಯೂಟ್ ಹೊಡೀಬೇಕು.
ಆ ಮೇಲೆ ಒಬ್ಬೊಬ್ರಾಗೇ ಎದ್ದು ನಿಂತ್ಕೊಂಡು ವರದಿ ಒಪ್ಪಿಸ್ಬೇಕು.. ಇವರು ಕ್ಲಾಸ್ ತಗೊಂಡ್ರು ಅಂದ್ರೆ, ಯಾರೂ ಕೆಮ್ಮಂಗೇ ಇಲ್ಲ..
ಕೆಮ್ ಬಂದ್ರೂ, ಭಯದಲ್ಲಿ ಕೆಮ್ಮೋದೂ ಮರೆತೋಗುತ್ತೆ.. ಅಂದ್ಹಾಗೆ ಆ ಮೇಷ್ಟ್ರು ಯಾರು ಅಂದ್ರಾ..? ಅರೆ ಭಾಯ್.. ಯಹಾ ದೇಖ್.. ಇವ್ರೇ..
ನಮ್ಮ ದಿಲ್ಲಿ ಮೇಷ್ಟ್ರು..!
(ಮೋದಿ ಬರುವ ವಿಶ್ಯೂಲ್
ಫ್ಲೋ.. ಜೊತೆಗೆ ಬ್ಯಾಗ್ರೌಂಡ್ನಲ್ಲಿ, ಬಾ ಬಾರೋ
ಬಾರೋ ರಣಧೀರ ಸಾಂಗ್ ಫ್ಲೋ ಬಿಡಿ)
ವಾಯ್ಸ್: ನೋಡಿದ್ರಲ್ಲಾ..?
ಈ ಸ್ಟೂಡೆಂಟ್ಸು ಎಷ್ಟು ಅಲರ್ಟ್ ಆಗಿದ್ದಾರೆ ಅಂತ.. ಮೇಷ್ಟ್ರು
ಖಡಕ್ಕಾಗಿರೋದ್ರಿಂದಾನೇ, ಸ್ಟೂಡೇಂಟ್ಸು ಕೂಡ ಇಷ್ಟೋಂದು ಶಿಸ್ತು ರೂಪಿಸಿಕೊಂಡಿರೋದು..
ಫ್ಲೋ....
ವಾಯ್ಸ್:
ಹೌದು.. ಇಷ್ಟು ದಿನ ಹೇಳೋರ್ ಕೇಳೋರ್ ಯಾರೂ ಇಲ್ಲ ಅಂತ,
ಮುದ್ದೇ ನುಂಗೋ ಬದಲು, ಅಭಿವೃದ್ಧಿ ಕಾಮಗಾರಿಗಳನ್ನೇ ನುಂಗಿ
ಬಿಟ್ರು ನಮ್ಮೋರು.. ಆದ್ರೆ ಇನ್ಮುಂದೆ ಹಂಗಾಗಲ್ಲ ಬಿಡಿ.. ಯಾಕಂದ್ರೆ, ಖಡಕ್ ಮೇಷ್ಟ್ರು ಕಾಲಿಟ್ಟಿದ್ದಾಗಿದೆ. ಈ ಮೋದಿ ಮೇಷ್ಟ್ರ ಹೆಜ್ಜೆ ಸದ್ದಿಗೆ ನಮ್ಮ ಸ್ಟೂಡೆಂಟ್ಗಳು ಪಿನ್ ಡ್ರಾಪ್ ಸೈಲೆಂಟ್ ಆಗಿಬಿಡ್ತಾರೆ..
ಫ್ಲೋ....
ವಾಯ್ಸ್: ಹಿಂದೆ ನಿಂತ್ಕೊಂಡು
ಕೆಲವು ಸ್ಟೂಡೆಂಟ್ಸು ಪಟ್ ಪಟಾ ಅಂತ ವರದಿ ಒಪ್ಪಿಸ್ತಾ ಇದ್ರೆ, ಮುಂದೆ ಕೂತ್ಕೊಂಡಿದ್ದ
ನಮ್ಮ ಯಡ್ಯೂರಪ್ಪನವರು, ಡಿವಿ ಸದಾನಂದ ಗೌಡರು ಸೈಲೆಂಟಾಗಿ ಕೂತ್ಕೊಂಡು,
ನಮ್ಮನ್ನ ಯಾವ್ ಪ್ರೆಶ್ನೆ ಕೇಳ್ತಾರೋ ಮೋದಿ ಮೇಷ್ಟ್ರು ಅಂ ಒಳಗೊಳಗೇ ಲೆಕ್ಕಾಚಾರ
ಹಾಕೊಳ್ತಿದ್ರು..
ಫ್ಲೋ...
ವಾಯ್ಸ್: ಸರತಿ ಸಾಲಿನ
ಪ್ರಕಾರ ಮೋದಿ ಮೇಷ್ಟ್ರು ಹಿಂದಿನಿಂದ ಕೇಳ್ಕೊಂಡು ಬರ್ತಾರೆ.. ನಮ್ ಸರದಿ
ಬರೋಷ್ಟ್ರಲ್ಲಿ, ಊಟಕ್ಕೆ ಬೆಲ್ ಹೊಡೀತಾರೆ.. ತಾವು
ಬಚಾವ್ ಅಗಬಹುದು ಅಂತ ನಮ್ಮ ಸ್ಮೈಲ್ ಗೌಡರು ಲೆಕ್ಕಾಚಾರ ಹಾಕ್ತಿದ್ರು.. ಅಷ್ಟರಲ್ಲೇ, ಮೋದಿ ಮೇಷ್ಟ್ರು ಗೌಡರ ಹೆಸರು ಕೂಗಿ ಬಿಡೋದಾ..?
ಫ್ಲೋ....
ವಾಯ್ಸ್: ಮೇಷ್ಟ್ರ ವಾಯ್ಸ್
ಕೇಳಿ ಗೌಡ್ರು ಶಾಕ್ ಆದ್ರು.. ಆದ್ರೆ ಭಯ ಏನೂ ಪಡ್ಲಿಲ್ಲ ಬಿಡಿ..
ಯಾಕಂದ್ರೆ, ನಮ್ಮ ಗೌಡರು ಹೋಮ್ ವರ್ಕ್ ಮಾಡೋದ್ರಲ್ಲಿ
ಫಸ್ಟು.. ಮೋದಿ ಮೇಷ್ಟ್ರು ಹೇಳಿದ ತಕ್ಷಣ, ಎದ್ದು
ನಿಂತು, ತಮಗೆ ಕೊಟ್ಟ ಹೋಮ್ ವರ್ಕ್ ಬಗ್ಗೆ ಡೀಟೇಲಾಗಿ ವರದಿ ಒಪ್ಪಿಸಿದ್ರು..
ಫ್ಲೋ.....
ವಾಯ್ಸ್: ನೆಕ್ಟ್ಸ್ ಸರದಿ, ಅನಂತ್ ಕುಮಾರ್ ಅವರದ್ದು.. ಗೌಡರ ನಂತರ, ಅನಂತ್ ಕುಮಾರ್ ಎದ್ದು ನಿಂತು, ಅವರಿಗೆ ಕೊಟ್ಟ ಹೋಮ್ ವರ್ಕ್ ಬಗ್ಗೆ ಸೈಕಲ್ ಗ್ಯಾಪ್ ಕೂಡ ಕೊಡದೇ, ವರದಿ ಒಪ್ಪಿಸಿದ್ರು..
ಫ್ಲೋ....
ವಾಯ್ಸ್: ಅಂದ್ಹಾಗೆ ಇವರೆಲ್ಲಾ
ಡಿ ಸೆಕ್ಷನ್ ಸ್ಟೂಡೆಂಟ್ಸು.. ಅಂದ್ರೆ ದಕ್ಷಿಣ ಭಾರತದ ಸ್ಟೂಡೆಂಟ್ಸು..
ಇವರಿಗೆ ಕ್ಲಾಸ್ ತಗೊಂಡ್ ಆದ್ಮೇಲೆ, ಮೋದಿ ಮೇಷ್ಟ್ರು ಉತ್ತರ
ಭಾರತದ ಸ್ಟೂಡೆಂಟ್ಸ್ ಇರೋ ಎನ್ ಸೆಕ್ಷನ್ಗೆ ಬಂದ್ರು.. ಅಲ್ಲೂ ಕೂಡ ಮೋದಿ
ಮೇಷ್ಟ್ರು ಬರೋವರೆಗೂ ಗಲಾಟೆ ಮಾಡ್ತಾ, ಅದು ಇದು ಮಾತಾಡ್ತಿದ್ದ ಸ್ಟೂಡೆಂಟ್ಗಳು,
ಮೇಷ್ಟ್ರು ಎಂಟ್ರಿ ಕೊಡ್ತಿದ್ದಂಗೆ ಸೈಲೆಂಟಾಗೋದ್ರು.. ಎದ್ದು ನಿಂತು ಗುಡ್ ಮಾರ್ನಿಂಗ್ ಮೇಷ್ಟ್ರೇ ಅಂತ ವಿಶ್ ಮಾಡಿದ್ರು..
ಫ್ಲೋ...
ವಾಯ್ಸ್: ಆಮೇಲೆ ಮೋದಿ
ಮೇಷ್ಟ್ರು ತಮ್ಮ ಸಿಲೆಬಸ್ ಬುಕ್ ತೆಗೆದು, ಯಾರ್ ಯಾರಿಗೆ ಏನೇನ್ ಹೋಮ್ ವರ್ಕ್
ಕೊಟ್ಟಿದ್ರೋ, ಅವರನ್ನ ಎಬ್ಬಿಸಿ, ಹೋಮ್ ವರ್ಕ್
ಬಗ್ಗೆ ಕೇಳ್ತಾ ಇದ್ರು..
ಫ್ಲೋ....
ವಾಯ್ಸ್: ಮೋದಿ ಮೇಷ್ಟ್ರ
ಹತ್ರ ಚೌಕಾಸಿ ಮಾಡುವಂಗಿಲ್ಲ.. ಕೊಟ್ಟಿರೋ ಹೋಮ್ ವರ್ಕ್ ಅನ್ನ,
ನೀಟಾಗಿ ಮಾಡ್ಕೊಂಡ್ ಬರಬೇಕು.. ಪೆನ್ನಲ್ಲಿ ಇಂಕ್ ಇರಲಿಲ್ಲ..
ಮನೇಲಿ ಕರೆಂಟ್ ಇರಲಿಲ್ಲ.. ಅದಿಕ್ಕೆ ನಾನು ಹೋಂ ವರ್ಕ್
ಮಾಡಿಲ್ಲ ಅಂತ ನೆಪ ಹೇಳೋಹಾಗಿಲ್ಲ.. ಹೋಮ್ ವರ್ಕ ಮಾಡಿಲ್ಲ ಅಂದ್ರೆ,
ಮುಲಾಜೇ ಇಲ್ದೇ, ಸ್ಕೂಲಿಂದ ಹೊರಗ್ ಹಾಕ್ ಬಿಡ್ತಾರೆ..
ಫ್ಲೋ...
ವಾಯ್ಸ್: ವಿಶೇಷ ಅಂದ್ರೆ, ಈ ಮೇಷ್ಟ್ರು ಲಾಟಿ ಹಿಡ್ಕೊಳ್ಳಲ್ಲ.. ಸ್ಟೂಡೆಂಟ್ಸ್ಗೆ
ಬಯ್ಯೋದು ಇಲ್ಲ.. ಕಣ್ಣೋಟದಲ್ಲೇ
ಕೊಲ್ಲೋ ಮೇಷ್ಟ್ರು ಇವ್ರು.. ಮೋದಿ ಮೇಷ್ಟ್ರ ಕ್ಲಾಸ್ ರೂಂಗೆ ಕಾಲಿಟ್ರೆ
ಸಾಕು.. ಎಲ್ರೂ ಸೈಲೆಂಟಾಗ್ಬೇಕು.. ವೈಲೆಂಟಾದ್ರೆ,
ಕಿಕ್ಕೌಟ್ ಗ್ಯಾರಂಟಿ...
ಫ್ಲೋ....
ವಾಯ್ಸ್: ಮನೆ ಯಜಮಾನ ಶಿಸ್ತಿಂದ
ಇದ್ರೆ, ಮನೆ ಶಿಸ್ತಾಗಿರುತ್ತೆ.. ಮೇಷ್ಟ್ರು ಖಡಕ್ಕಾಗಿದ್ರೆ,
ಸ್ಟೂಡೆಂಟ್ಸ್ ಕೂಡ ಶಿಸ್ತನ್ನ ರೂಪಿಸಿಕೊಳ್ತಾರೆ.. ಮೋದಿ
ಮೇಷ್ಟ್ರು ದೇಶದ ಭವಿಷ್ಯವನ್ನು ಶಿಸ್ತುಬದ್ಧವಾಗಿ ಹೇಗೆ ಬದಲಾವಣೆ ಮಾಡ್ತಾರೆ ಅನ್ನೋದಕ್ಕೆ,
ಈ ಸಣ್ಣದೊಂದು ಎಗ್ಸಾಂಪಲ್ ಸಾಕಲ್ವಾ..?
ಫ್ಲೋ.....
--------------------------
ದಿಲ್ಲಿ ಮೇಷ್ಟ್ರು..!
ದೇಶಕ್ಕೆ ಸಿಕ್ರು ಖಡಕ್
‘ದಿಲ್ಲಿ ಮೇಷ್ಟ್ರು..!’
ಕೆಲಸದಲ್ಲಿ ಖಡಕ್.. ಮಾಡಂಗಿಲ್ಲ
ಗಿಮಿಕ್..!
ಹೋಮ್ ವರ್ಕ್ ಮಾಡಿಲ್ಲ
ಅಂದ್ರೆ ಕಿಕ್ಕೌಟ್
ಕ್ಲಾಸ್ ಒಳಗೆ ಕಾಲಿಟ್ರೆ, ಸ್ಟೂಡೆಂಟ್ಸ್
ಸೈಲೆಂಟ್
ಮೋದಿ ಮೇಷ್ಟ್ರು ಅಭಿವೃದ್ಧಿ
ಬಗ್ಗೆ ಪ್ರಶ್ನೆ ಕೇಳ್ತಾರೆ
ಸಂಸದರು ವಿದ್ಯಾರ್ಥಿಗಳಂತೆ ವರದಿ ಒಪ್ಪಿಸ್ತಾರೆ
ಎದ್ದು ನಿಂತು ವರದು ಒಪ್ಪಿಸಿದ್ರು
ಅನಂತಕುಮಾರ್
ಮೋದಿ ಮೇಷ್ಟ್ರ ಪ್ರಶ್ನೆಗೆ
ಉತ್ತರಿಸಿದ್ರು ಡಿವಿಎಸ್..!
ದೇಶದ ಎಲ್ಲಾ ಸಂಸದರಿಗೂ
ಮೋದಿ ಖಡಕ್ ಕ್ಲಾಸ್..!
ಮೋದಿ ನೋಡೋಕೆ ಕ್ಲಾಸ್.. ಲುಕ್ಕಲ್ಲಿ
ಮಾಸ್..!
ಲಾಟಿ ಹಿಡ್ಕೊಳ್ಳಲ್ಲ.. ಬೈಯ್ಯೋದಿಲ್ಲ..
ಕಣ್ಣಲ್ಲೇ ವಾರ್ನಿಂಗ್..!
0 Комментарии