Hot Posts

10/recent/ticker-posts

ಇವು ದುಡ್ಡಲ್ಲೇ ಕಟ್ಟಿದ ದೇಗುಲಗಳು




ಭಾರತ ಬಡ ರಾಷ್ಟ್ರ ಅಂತ ಅಂದುಕೊಳ್ಳೋರಿಗೆ, ಇವತ್ತಿನ ಸ್ಟೋರಿ ನೋಡಿದ್ರೆ ಅಸಲಿ ವಿಷ್ಯ ಗೊತ್ತಾಗುತ್ತೆ.. ಯಾಕಂದ್ರೆ, ಭಾರತದ ದೇವರಲ್ಲಿ ಇರೋ ದುಡ್ಡು ಬೇರೆ ಯಾವ ದೇಶದಲ್ಲೂ ಇಲ್ಲಾ.. ಅದಿಕ್ಕೇ ನೋಡಿ.. ದೇಗುಲವನ್ನೇ ದುಡ್ಡಿನಿಂದ ಅಲಂಕಾರ ಮಾಡ್ತಾರೆ ಭಕ್ತರು.. ಒಂದಲ್ಲ ಎರಡಲ್ಲ.. ಸಾವಿರ ರೂಪಾಯಿಗಳಿಂದ್ಲೇ ಗೋಡೆಗಳಿಗೆ ಶೃಂಗಾರ.. ಕೋಟಿ ಕೋಟಿ ರೂಪಾಯಿಗಳಿಂದ ಮಹಾಲಕ್ಷ್ಮಿಗೆ  ಅಲಂಕಾರ..

ಯಸ್.. ಭಾರತ ಬಡರಾಷ್ಟ್ರ.. ಭಾರತದಲ್ಲಿರೋರೆಲ್ಲಾ ಬಡವರು ಅನ್ನೋರು, ಖಂಡಿತ್ವಾಗ್ಲೂ ಇವತ್ತಿನ ಸ್ಟೋರಿಯನ್ನ ಕಂಪ್ಲೀಟಾಗಿ ಓದ್ಲೇಬೇಕು.. ಯಾಕಂದ್ರೆ ಭಾರತಕ್ಕೆ ಬಡ ರಾಷ್ಟ್ರ ಅನ್ನೋ ಹಣೆ ಪಟ್ಟಿ, ಬರೀ ಹೆಸರಲ್ಲಿ ಮಾತ್ರ ಇದೆ.. ಆದ್ರೆ ಭಾರತ ನಿಜ್ವಾಗ್ಲೂ ಬಡರಾಷ್ಟ್ರ ಅಲ್ವೇ ಅಲ್ಲ.. ಕೋಟಿ ಕೋಟಿ ದುಡ್ಡನ್ನು ದೇವರಿಗೆ ದಾನ ಕೊಡೋಷ್ಟು ಶ್ರೀಮಂತರಿರೋ, ಸಿರಿವಂತ ರಾಷ್ಟ್ರ ಕಣ್ರಿ ನಮ್ಮ ಭಾರತ ದೇಶ....

ಹೌದು.. ಒಂದಲ್ಲ ಎರಡಲ್ಲ.. ಕೋಟಿ ಕೋಟಿ ಕರೆನ್ಸಿಯಲ್ಲಿ ದೇವರಿಗೆ ಅಲಂಕಾರ ಮಾಡೋ ಜನ್ರು ಇರೋದು ನಮ್ಮ ಭಾರತದಲ್ಲೇ.. ಅದ್ರಲ್ಲೂ ದಕ್ಷಿಣ ಭಾರತದಲ್ಲೇ ಜಾಸ್ತಿ.. ಬೆಳಗಾಗೆದ್ದು, ದುಡ್ಡು ಕೊಡಮ್ಮ ತಾಯಿ ಬೇಡ್ಕೊಳ್ಳೋ ಭಕ್ತರು, ಅದೇ ದೇವರಿಗೆ ದುಡ್ಡಲ್ಲೇ ಅಲಂಕಾರ ಮಾಡಿರೋ ಒರಿಜಿನಲ್ ಕಥೆ ಇದೆ.. ಬೆಲೆದುಡ್ಡಿನ ಅಧಿದೇವತೆ ಅಂದ್ರೇನೇ ಲಕ್ಷ್ಮಿ ಕಣ್ರಿ.. ಆದ್ರೆ ಅದೇ ಲಕ್ಷ್ಮಿಗೆ ದುಡ್ಡು ನೀಡೋಷ್ಟು ಸಿರಿವಂತ ಭಕ್ತರು ನಮ್ಮ ನೆಲದಲ್ಲಿದ್ದಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಒಂದು ಸಾಕ್ಷಿ..





ನೋಡ್ರಿ.. ಎಲ್ ನೋಡಿದ್ರೂ ಬರೀ ದುಡ್ಡೆ.. ದುಡ್ಡಿನ ಅಧಿದೇವತೆಯನ್ನು ದುಡ್ಡಿನಿಂದ್ಲೇ ಅಲಂಕಾರ ಮಾಡಿದ್ದಾರೆ ಭಕ್ತರು.. ಇದು ಉತ್ತರ ಭಾರತದಲ್ಲಿರೋ ಮಹಾಲಕ್ಷ್ಮಿ ದೇವಸ್ಥಾನ... ದುಡ್ಡಿನ ದೇವತೆಯಾಗಿರೋ ಲಕ್ಷ್ಮಿಗೆ ನಾನಾ ಅವತಾರಗಳಿವೆ.. ಉತ್ತರ ಭಾರತದಲ್ಲಿ ಈ ಮಹಾತಾಯಿಯನ್ನು 9 ಅವತಾರಗಳಲ್ಲಿ ಪೂಜಿಸಲಾಗುತ್ತೆ.. ನವರಾತ್ರಿ ಸಂದರ್ಭದಲ್ಲಿ ದುಡ್ಡಿನ ದೇವತೆಯನ್ನು ಇದೇ ರೀತಿ ದುಡ್ಡಿನಿಂದ್ಲೇ ಅಲಂಕರಿಸಲಾಗುತ್ತೆ..

ಬರೀ ದೇವಿಯನ್ನು ಮಾತ್ರ ಅಲ್ಲಾ ಕಣ್ರಿ.. ದೇವಿ ಇರೋ ಈ ಇಡೀ ದೇವಸ್ಥಾನವನ್ನೇ ದುಡ್ಡಿನಿಂದ ಮುಚ್ಚಿ ಬಿಡ್ತಾರೆ.. ಬಣ್ಣ ಬಣ್ಣದ ಕಲರ್ ಪೇಪರ್​ಗಳಿಂದ ಗೋಡೆಯನ್ನು ಸಿಂಗಾ ಮಾಡೋ ಹಾಗೇ, ಕೋಟಿ ಕೋಟಿ ರೂಪಾಯಿಗಳನ್ನು, ಸಾವಿರ ರೂಪಾಯಿ ನೋಟುಗಳಿಂದ್ಲೇ ಸಿಂಗಾರ ಮಾಡಲಾಗುತ್ತೆ. ನೀವು ಈ ದೇವಸ್ಥಾನಕ್ಕೆ ಬಂದರೆ ಸಾಕು ಕಣ್ರಿ,... ನೆಲಾನೇ ಕಾಣ್ಸೋದಿಲ್ಲ.. ಕಣ್ಣು ಹಾಯಿಸಿದ ಕಡೆ ಎಲ್ಲಾ ಬರೀ ದುಡ್ಡು ದುಡ್ಡು ದುಡ್ಡು..

ಬಡ ರಾಷ್ಟ್ರ ಅಂತ ಕರೆಸಿಕೊಳ್ಳೋ ಭಾರತದಲ್ಲಿ, ಇದೊಂಥರ ಅಚ್ಚರಿನೇ ಕಣ್ರಿ.. ಇಲ್ಲಿಗೆ ಬರೋ ಭಕ್ತರು ಈ ಮಹಾಮಾತೆಗೆ ತಮ್ಮ ದುಡ್ಡಿನಿಂದ ಸಿಂಗರಿಸಿ ಹೋಗ್ತಾರೆ ಕಣ್ರಿ.. ಬಂದೋರೆಲ್ಲಾ ಸಾವಿರಾರು ರೂಪಾಯಿಗಳನ್ನು ದೇವಿಗೆ ನೀಡಿ ಹೋಗ್ತಾರೆ. ಅದ್ರ ಜೊತೆಗೆ ಸುತ್ತಮುತ್ತಲಿನ ವ್ಯಾಪಾರಿಗಳು, ಈ ಮಾತೆಯನ್ನ ಅಲಂಕಾರಿಸೋದಕ್ಕೆ ಅಂತಲೇ, ಲಕ್ಷಾಂತರ ರೂಪಾಯಿಗಳನ್ನ ನೀಡ್ತಾರೆ..

ಇದೊಂದೇ ಅಲ್ಲ ಕಣ್ರಿ.. ಇದಕ್ಕಿಂತ ಮೀರಿಸೋದ ದುಡ್ಡಿನ ದೇವಸ್ಥಾನಗಳು ನಮ್ಮ ಭಾರತದಲ್ಲಿವೆ. ಅದ್ರಲ್ಲೂ ನಮ್ಮ ಕರ್ನಾಟಕಕ್ಕೆ ಹೊಂದಿಕೊಂಡೇ ಇರೋ ಆಂಧ್ರ ಮತ್ತು ತೆಲಂಗಾಣದಲ್ಲೂ, ದುಡ್ಡಿನ ದೇವಿಯನ್ನ ದುಡ್ಡಿನಿಂದಲೇ ಅಲಂಕರಿಸಲಾಗುತ್ತೆ..








ಇಲ್ನೋಡಿ.. ಇದು ಆಂಧ್ರದಲ್ಲಿರೋ ದುರ್ಗಾ ಮಾತೆಯ ದೇವಸ್ಥಾನ ಕಣ್ರಿ.. ಇಲ್ಲೂ ಕೂಡ ಮಹಾಮಾತೆಯನ್ನು ದುಡ್ಡಿನಿಂದ ಅಲಂಕರಿಸಲಾಗಿದೆ. ಆಂಧ್ರ ಅಂದ್ರೆ ಕೇಳ್ಬೇಕಾ..? ಇಲ್ಲಿರೋದು ಕೋಟಿ ಕುಳಗಳು.. ಹಬ್ಬ ಹರಿದಿನ ಬಂದ್ರೆ ಸಾಕು.. ಬರೀ ದೇವಿಯ ಮೂರ್ತಿಯನ್ನು ಮಾತ್ರವಲ್ಲ.. ಗೋಡೆಗಳು ಸೇರಿದಂತೆ, ಇಡೀ ದೇವಸ್ಥಾನವನ್ನೇ, ದುಡ್ಡಿನಿಂದ ಅಲಂಕಾರ ಮಾಡಲಾಗುತ್ತೆ.. ಪ್ರತಿಯೊಂದು ಗೋಡೆಗಳು, ಮೇಲ್ಛಾವಣಿ ಎಲ್ಲಾನೂ ನೋಟುಗಳಿಂದ್ಲೇ ಡೆಕೋರೇಷನ್ ಮಾಡಲಾಗುತ್ತೆ. ಬರೀ ಸಾವಿರ ರೂಪಾಯಿಗಳನ್ನ ಲೆಕ್ಕಾ ಹಾಕಿದ್ರೇನೇ, 30 ಲಕ್ಷ ಆಗುತ್ತೆ ಕಣ್ರಿ..

ಸ್ಥಳೀಯ ವ್ಯಾಪಾರಿಗಳು ಮತ್ತು ಭಕ್ತರು ಕೊಟ್ಟಿರೋ ದುಡ್ಡನ್ನು, ಹೀಗೆ ಅಲಂಕಾರಕ್ಕಾಗಿ ಬಳಸಲಾಗುತ್ತೆ ಕಣ್ರಿ.. ದೇವಿಯನ್ನ ಈ ರೀತಿ ದುಡ್ಡಿನಿಂದ ಅಲಂಕಾರ ಮಾಡಿದ್ರೆ, ಆಕೆ ಮನಸ್ಸು ಕರಗುತ್ತಂತೆ ಕಣ್ರಿ.. ಹೀಗೆ ಅಲಂಕಾರ ಮಾಡಿದ ಭಕ್ತರ ಮನೆಯಲ್ಲಿ ಸದಾ ನೆಲೆಸಿರ್ತಾಳೆ ಅನ್ನೋದು ಭಕ್ತರ ನಂಬಿಕೆ.. ಅದಿಕ್ಕೆ ನೋಡಿ.. ಲಕ್ಷ್ಮಿಯನ್ನು ಕರೆನ್ಸಿ ನೋಟಗಳಿಂದ್ಲೇ ಸಿಂಗಾರಗೊಳಸಿಲಾಗಿದೆ.

ಬರೀ ಇಷ್ಟನ್ನೇ ನೋಡಿ ಶಾಕ್ ಆಗ್ಬೇಡಿ.. ಇದಕ್ಕಿಂತ ರೋಚಕವಾದ ದುಡ್ಡಿನ ದೇಗುಲಗಳು ನಮ್ಮ ನೆಲದಲ್ಲಿವೆ. ಅವುಗಳನ್ನೇನಾದ್ರೂ ನೀವು ನೋಡಿದ್ರೆ, ಒಂದ್ ಕ್ಷಣ ಅವಕ್ಕಾಗಿ ಬಿಡ್ತೀರ.. ಮುಂದೆ ಓದಿ
------------------------------
ಆಂಧ್ರದಲ್ಲಿರೋ ಬಹುತೇಕರು ದುಡ್ಡಿನ ಕುಳಗಳೇ.. ಆಂಧ್ರ ಮಣ್ಣಲ್ಲಿ ದುಡ್ಡಿನ ಗಿಡಾನೇ ಬೆಳೆಯುತ್ತೆ ಅನ್ಸುತ್ತೆ.. ಅದಿಕ್ಕೆ ಹೂವಿನ ಗಿಡದಿಂದ ಹೂ ತಂದು ದೇವ್ರಿಗೆ ಇಡೋ ಬದ್ಲು, ದುಡ್ಡಿನ ಗಿಡದಿಂದ ದುಡ್ಡನ್ನು ತಂದು, ದೇವ್ರನ್ನ ಅಲಂಕರಿಸ್ತಾರೆ.. ಆಂಧ್ರದಲ್ಲಿರೋ ಆ ದುಡ್ಡಿನ ದೇಗುಲಗಳ ಅಚ್ಚರಿಯ ಸ್ಟೋರಿ ಇಲ್ಲಿವೆ ಓದಿ.

ಆಂಧ್ರ ಮತ್ತು ತೆಲಂಗಾಣ ಪ್ರದೇಶಗಳು ಅಂದ್ರೇನೇ ಹಾಗೆ ಕಣ್ರಿ.. ದೇವರನ್ನು ದುಡ್ಡಿನಿಂದ ಅಲಂಕರಿಸೋ ಭಕ್ತರು ಇಲ್ಲಿ ಎಥೇಚ್ಚವಾಗಿದ್ದಾರೆ. ದಸರಾ ಹಬ್ಬ ಬಂತು ಅಂದ್ರೆ, ಲಕ್ಷ್ಮಿ ದೇವಿಯನ್ನು ದುಡ್ಡಿನಿಂದ ಸಿಂಗರಿಸಿ ಪೂಜೆ ಮಾಡ್ತಾರೆ.. ಒಂಭತ್ತು ದಿನಗಳ ಕಾಲ ಇಲ್ಲಿ ಮಹಾಲಕ್ಷ್ಮಿಯನ್ನು ವಿವಿಧ ಬಗೆಯಾಗಿ ಬಣ್ಣ ಬಣ್ಣದ ನೋಟುಗಳಿಂದ ಸಿಂಗರಿಸಿ ಸಂತುಷ್ಟರಾಗ್ತಾರೆ ಭಕ್ತರು..


ಇಲ್ನೋಡಿ.. ಇದು ಆಂಧ್ರಾದ ಅಮಲಾಪುರಂನಲ್ಲಿರೋ ಕನ್ನಿಕಾ ಪರಮೇಶ್ವರಿ ದೇವಸ್ಥಾನ...ಇಲ್ಲೂ ಅಷ್ಟೇ ಕಣ್ರಿ.. ಐಶ್ವರ್ಯ ಲಕ್ಷ್ಮಿಯನ್ನು, ಐಶ್ವರ್ಯದಿಂದಲೇ ಅಭಿಷೇಕ ಮಾಡಿದ್ದಾರೆ.. ಈ ಕನ್ನಿಕಾ ಪರಮೇಶ್ವರಿಯನ್ನು ಬರೀ ದುಡ್ಡಿನಿಂದಲೇ ಸಿಂಗಾರಿಸಲಾಗಿದೆ. ಮೇಲೆ ನೋಡಿ.. ಹಬ್ಬ ಹರಿದಿನಗಳಲ್ಲಿ ಕಲರ್ ಪೇಪರ್​ಗಳನ್ನು ಕಟ್ ಮಾಡಿ ಡೆಕೋರೇಷನ್ ಮಾಡೋ ಹಾಗೇ, ಗರಿ ಗರಿ ನೋಟುಗಳಿಂದ ದೇವಸ್ಥಾನವನ್ನು ಡೆಕೋರೇಟ್ ಮಾಡಿದ್ದಾರೆ. ಅದೂ ಒಂದಲ್ಲ ಎರಡಲ್ಲಾ ಕಣ್ರಿ... ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ಗರಿ ಗರಿ ನೋಟುಗಳಿಂದ, ದುಡ್ಡಿನ ದೇವತೆಯನ್ನು  ಸಿಂಗರಿಸಲಾಗಿದೆ.







ಇಲ್ನೋಡ್ರೀ.. ರಾಶಿ ರಾಶಿಯಾಗಿ ಜೋಡಿಸಲಾಗಿರೋ ಗರಿ ಗರಿ ನೋಟುಗಳನ್ನ ನೋಡಿ.. ರಿಸರ್ವ್​ ಬ್ಯಾಂಕ್​ನಲ್ಲೂ ಇಷ್ಟೋಂದು ದುಡ್ಡನ್ನ ಹೀಗೆ ಜೋಡಿಸ್ತಾರೋ ಇಲ್ಲೋ ಗೊತ್ತಿಲ್ಲ.. ಆದ್ರೆ ಆಂಧ್ರಾದಲ್ಲಿ ದೇವರಿಗಾಗಿ ಭಕ್ತರು ಜೋಡಿಸಿರೋ ದುಡ್ಡಿದು..ಇದು ಮೆಹಬೂಬ್ ನಗರದಲ್ಲಿರೋ ಕನ್ನಿಕಾ ಪರಮೇಶ್ವರಿ ದೇವಸ್ಥಾನ.. ಇಲ್ಲೂ ಕೂಡ ಈ ಮಹಾಮಾತೆಯನ್ನು ದುಡ್ಡಿನಿಂದ ಸಿಂಗರಿಸಲಾಗಿದೆ.. ಒಂದು ಇಂಚು ಕೂಡ ಜಾಗ ಇಲ್ಲದಂಗೆ, ಹಣದಿಂದ ಮುಚ್ಚಿದ್ದಾರೆ ಕಣ್ರಿ ಈ ದೇವಿಯನ್ನ..

ಒಂದು ಕೋಟಿ ಅಲ್ಲ.. ಎರಡು ಕೋಟಿನೂ ಅಲ್ಲ.. ಮೂರರಿಂದ ನಾಲ್ಕು ಕೋಟಿಯಷ್ಟು ಹಣವನ್ನು, ಇಲ್ಲಿ ಸಾಲಾಗಿ ಜೋಡಿಸಲಾಗಿದೆ ಕಣ್ರಿ... ಇದ್ರ ಜೊತೆಗೆ ಇಲ್ಲಿಗೆ ಬರೋ ಭಕ್ತರು ಕೂಡ ತಮ್ಮಲ್ಲಿರೋ ನೋಟುಗಳನ್ನು ಈ ದೇವಿಗೆ ಸಮರ್ಪಿಸಿ ಹೋಗ್ತಾರೆ.. ಆ ನೋಟುಗಳೂ ಕೂಡ, ಈ ದೇಗುಲದ ಗೋಡೆ ಗೋಡೆಗಳಲ್ಲಿ ಸಿಂಗಾರಗೊಂಡು, ದೇವಿಯ ಐಶ್ವರ್ಯವನ್ನು ಹೆಚ್ಚಿಸುತ್ತೆ.. ಜೊತೆಗೆ, ದೇಗುಲದ ಅಂದವನ್ನೂ ಹೆಚ್ಚಿಸುತ್ತೆ.. ಇಷ್ಟೇ ಅಲ್ಲ, ಲಕ್ಷ್ಮಿಯನ್ನು ಆರಾಧಿಸೋ ಭಕ್ತರು ದುಡ್ಡಿನ ಅಧಿದೇವತೆಯನ್ನು ನವರಾತ್ರಿಗಳಲ್ಲಿ ಹೀಗೆ ದುಡ್ಡಿನಿಂದ ಅಲಂಕರಿಸಿ ದೇವಿಯ ಕೃಪೆಗೆ ಪಾತ್ರರಾಗ್ತಾರೆ.. ಆದ್ರೆ ವಿಘ್ನ ವಿನಾಶಕನನ್ನು ದುಡ್ಡಿನಿಂದ ಅಲಂಕಾರ ಮಾಡಲಾಗುತ್ತೆ..









ಇಲ್ನೋಡಿ.. ಗಣೇಶನನ್ನ ಹೇಗೆ ದುಡ್ಡಿನಿಂದ ಅಲಂಕಾರ ಮಾಡಿದ್ದಾರೆ ಅಂತ... ನೂರರಿಂದ ಹಿಡ್ದು, ಸಾವಿರ ರೂಪಾಯಿ ನೋಟುಗಳಿಂದ ಈ ಗಣೇಶನನ್ನ ಸಿಂಗರಿಸಲಾಗಿದೆ.

ಅಂದ್ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಗುಂಟೂರಿನಲ್ಲಿ ಕಣ್ರಿ.. ನವರಾತ್ರಿಗಳಲ್ಲಿ ಲಕ್ಷ್ಮಿಯನ್ನು ದುಡ್ದಡಿನಿಂದ ಸಿಂಗರಿಸೋ ಭಕ್ತರು, ಗಣೇಶನನ್ನು ಗಣೇಶ ಚೌತಿಯ ಟೈಮಲ್ಲಿ ದುಡ್ಡಿನಿಂದ ಅಲಂಕಾರ ಮಾಡ್ತಾರೆ. ಮೇಲ್ ನೋಡ್ರಿ.. ಗಣೇಶನನ್ನ ಇರಿಸಲಾಗಿರೋ ಚಪ್ಪರ ಕೂಡ ದುಡ್ಡಿಂದೆ ಕಣ್ರಿ.. ಅಷ್ಟೇ ಅಲ್ಲ, ಅಕ್ಕ ಪಕ್ಕ ಅಲಂಕಾರಕ್ಕೆ ಅಂತ ಜೋಡಿಸಿರೋದು ಕೂಡ, ಗರಿ ಗರಿ ನೋಟುಗಳನ್ನೇ..ಗಣೇಶನ ಕಿರೀಟ ಕೂಟ, ಗರಿ ಗರಿ ನೋಟಿನಿಂದ ಅಲಂಕರಿಸಲಾಗಿದೆ. ಚಕ್ರದಂತೆ ಕಾಣೋ ಅಲಂಕಾರಿಕ ಜಾಗವನ್ನೂ ನೋಟುಗಳಿಂದ್ಲೇ ಜೋಡಿಸಲಾಗಿದೆ.

ಇನ್ನು ಇದೇ ಥರ ಗಣೇಶನನ್ನು ದುಡ್ಡಿನಿಂದ ಅಲಂಕಾರ ಮಾಡಿರೋ ಮತ್ತೊಂದು ದೇಗುಲ ಇದೇ ಭಾಗದ ಅದಿಲಾಬಾದ್​ನಲ್ಲಿದೆ.. ಇಲ್ನೋಡಿ.. ಗಣೇಶನ ಹಣೆಯನ್ನ, 20 ರೂಪಾಯಿ, 500 ರೂಪಾಯಿ ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳಿಂದ ಸಿಂಗರಿಸಲಾಗಿದೆ.

ಬರೀ ನೋಟುಗಳು ಮಾತ್ರ ಅಲ್ಲ.. ನಾಣ್ಯಗಳಿಂದಲೂ ಗಣೇಶನನ್ನು ಅಲಂಕರಿಸ್ತಾರೆ ಇಲ್ಲಿನ ಭಕ್ತರು..ರಾಶಿ ರಾಶಿ ಅಸಲಿ ನೋಟುಗಳಿಂದ ಅಲಂಕೃತನಾಗಿರೋ ಗಣೇಶನನ್ನ ನೋಡೋಕೆ ಒಂಥರ ಆನಂದ ಕಣ್ರಿ.. ಅದಿಕ್ಕೇನೇ.. ಈ ಗಣೇಶನನ್ನ ನೋಡೋಕೆ, ದೂರದೂರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ.. ಕ್ಯೂನಲ್ಲಿ ನಿತು ಗಣೇಶನ ದರ್ಶನ ಪಡೀತಾರೆ.

ಇಷ್ಟೇ ಅಲ್ಲ.. ವಿಘ್ನ ನಿವಾರಕ ವಿನಾಯಕನನ್ನು ದುಡ್ಡಿನಿಂದ ಸಿಂಗರಿಸೋ ಭಕ್ತರು ತಮಿಳುನಾಡಿನಲ್ಲೂ ಇದ್ದಾರೆ ಕಣ್ರಿ.. ಇಲ್ಲಿನ ಕುಂಭ ಕೋಣಂನಲ್ಲಿರೋ ವಿನಾಯಕನಿಗೆ ದುಡ್ಡಿನಿಂದ ಅಲಂಕಾರ ಮಾಡ್ತಾರೆ ಭಕ್ತರು.. ಬರೀ ಭಾರತದ ರೂಪಾಯಿಗಳು ಮಾತ್ರವಲ್ಲ.. ಅಮರಿಕನ್ ಡಾಲರ್ಗಳಿಂದಲೂ ಕುಂಭಕೋಣಂನ ಗಣೇಶ ಅಲಂಕಾರಗೊಳ್ತಾನೆ..

ನಿಮಗೆ ಗೊತ್ತಿಲ್ಲದ ಅದೆಷ್ಟೋ ದುಡ್ಡಿನ ದೇಗುಲಗಳು ನಿಮ್ಮ ನಡುವೇನೇ ಇವೆ.. ಆ ದೇಗುಲಗಳನ್ನು ನಿಮಗೆ ದರ್ಶನ ಮಾಡಿಸ್ತೀವಿ.. ಮುಂದೆ ಓದಿ..
------------------
ದೇಹಿ ಅಂತ ಬೇಡಿದ ಭಕ್ತರಿಗೆ, ಆ ಧನ ಲಕ್ಷ್ಮಿ ಒಲೀತಾಳೆ.. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡಿಯಿರೋ ಅನ್ನೋ ಹಾಗೇ, ದೇವರು ಕೊಟ್ಟ ದುಡ್ಡನ್ನು ದೇವ್ರಿಗೆ ಸಮರ್ಪಿಸಿ ಧನ್ಯರಾಗ್ತಾರೆ ಭಕ್ತರು.. ಹೀಗೆ ಮಾಡಿದ್ರೆ ನಿಜಕ್ಕೂ ದೇವಿಯ ಕೃಪೆಗೆ ಪಾತ್ರರಾಗಬಹುದಾ..? ಇಲ್ಲಿದೆ ನೋಡಿ ಒಂದು ರೋಚಕ ಕಥೆ..

ಭಕ್ತಿಯ ಪರಾಕಾಷ್ಟೆ ತಲುಪಿದ ಭಕ್ತರು, ದೇವರಿಗಾಗಿ ಏನು ಬೇಕಾದ್ರೂ ಮಾಡ್ತಾರೆ. ಇವ್ರ ನಿಷ್ಕಲ್ಮಶ ಬಕ್ತಿ ಆ ದೇವಿಗೆ ಇಷ್ಟವಾಯ್ತು ಅಂದ್ರೆ, ಅಂಥವರ ಮನೆಯಲ್ಲಿ ಈ ಮಹಾಲಕ್ಷ್ಮಿ ನೆಲೆಸ್ತಾಳೆ ಅನ್ನೋ ನಂಬಿಕೆ ಇದೆ. ಹೀಗೆ ದೇವರನ್ನು ಅಲಂಕರಿಸಿ ಪೂಜಿಸಿದವರಿಗೆ ಒಳ್ಳೇದ್ ಕೂಡ ಆಗಿದ್ಯಂತೆ.. ಅದಕ್ಕಾಗಿನೇ.. ಭಕ್ತರು ಹೀಗೆ ದುಡ್ಡಿನ ಅಧಿದೇವತೆಯನ್ನು ದುಡ್ಡಿನಿಂದಲೇ ಸಿಂಗರಿಸ್ತಿರೋದು..

ಆಂಧ್ರದ ಬಹುತೇಕ ಪ್ರದೇಶಗಳಲ್ಲಿ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಈ ರೀತಿ ದುಡ್ಡಿನಿಂದ ದೇವರನ್ನು ಅಲಂಕರಿಸೋ ಪದ್ಧತಿ ಇದೆ. ಉತ್ತರ ಭಾರತದ ಕೆಲ ಪ್ರದೇಶಗಳಲ್ಲೂ, ಇಂಥ ಸಂಪ್ರದಾಯವಿದೆ.







ಇನ್ನು ಇದು ಆಂಧ್ರದಲ್ಲಿರೋ ಮತ್ತೊಂದು ದೇವಸ್ಥಾನ.. ವಾಸವೀ ದೇವಿಯ ಅವತಾರದಲ್ಲಿ ನೆಲೆಸಿದ್ದಾಳೆ ಸಾಕ್ಷಾತ್​ ದುರ್ಗಾ ಮಾತೆ.. ನವರಾತ್ರಿ ಸಂದರ್ಭದಲ್ಲಿ, ಈ ದುರ್ಗಾ ಮಾತೆಯನ್ನು ಹೀಗೆ ನೋಟುಗಳಿಂದ ಅಲಂಕರಿಸಲಾಗುತ್ತೆ ಕಣ್ರಿ.. ನೋಟುಗಳನ್ನೇ ಸೀರೆಯಂತೆ ಸಿಂಗರಿಸಿ, ದೇವಿಗೆ ಅಲಂಕಾರ ಮಾಡಲಾಗಿದೆ..  ಹಿಂದೆ ಇರೋ ಚಕ್ರವೂ ನೋಟುಗಳಿಂದಲೇ ಡೆಕೋರೇಟ್ ಮಾಡಲಾಗಿದೆ. ಈ ದೇವಿ ನೆಲೆಸಿರೋ ದೇವಸ್ಥಾನದ ಪ್ರತಿಯೊಂದು ಭಾಗದಲ್ಲೂ ಇರೋದು ನೋಟುಗಳೇ ಕಣ್ರಿ.. ಕೋಟಿ ಕೋಟಿ ನೋಟುಗಳ ನಡುವೆ ರಾರಾಜಿಸುವಂತೆ ನೆಲೆಸಿದ್ದಾಳೆ ಈ ಮಹಾ ಮಾತೆ.. ದುಡ್ಡಿ ನಡುವೆ ಸಿಂಗಾರಗೊಂಡ ದುರ್ಗಾ ಮಾತೆಯನ್ನು ನೋಡೋದಕ್ಕೆ, ಇಲ್ಲಿಗೆ ಸಾವಿರಾರು ಪ್ರಮಾಣದಲ್ಲಿ ಭಕ್ತರು ಆಗಮಿಸ್ತಾರೆ. ದೇವಿಯ ರ್ದಶನ ಪಡೆದು ಪುನೀತರಾಗ್ತಿದ್ದಾರೆ.

ಇನ್ನು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರೋ ದುರ್ಗಾಮಾತೆಗೂ ಹಣದ ಅಲಂಕಾರ ಮಾಡ್ತಾರೆ.. ಇಲ್ಲಿ ನೆಲೆಸಿರೋ ದೇವಿಯನ್ನ  ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿನ ನೋಟುಗಳಿಂದ ಅಲಂಕಾರ ಮಾಡಿದ್ದಾರೆ. ಅದೇ ನೋಟುಗಳಿಂದಲೇ, ಮಹಾಮಾತೆಗೆ ಮಂಟಪ ಕಟ್ಟಿ, ಅದರೊಳಗೆ ಆಕೆಯನ್ನ ಪ್ರತಿಷ್ಟಾಪಿಸಿದ್ದಾರೆ..

ಇನ್ನು ವಾರಂಗಲ್​​ನಲ್ಲೂ ದುರ್ಗಾದೇವಿಯನ್ನು ಹೀಗೇ ಅಲಂಕಾರ ಮಾಡ್ತಾರೆ ಕಣ್ರಿ. ನೂರರಿಂದ 1 ಸಾವಿರ ರೂಪಾಯಿಗಳ ನೋಟುಗಳನ್ನು ಹಾರ ಮಾಡಿ ದೇವಿಗೆ ಅರ್ಪಿಸಲಾಗುತ್ತೆ.. ದೇವಿಯ ಮಂಟಪದಿಂದ ಹಿಡಿದು, ಅಲ್ಲಿ ಸಿಂಗರಿಸಲಾಗಿರೋ ಎಲ್ಲಾ ಜಾಗಗಳೂ, ದುಡ್ಡಿನಿಂದಲೇ ಮುಚ್ಚಿಕೊಂಡಿದೆ..

ಇವೆಲ್ಲಾ ನೋಡಿದ್ರೆ, ನಿಜಕ್ಕೂ ಅಚ್ಚರಿಯಾಗುತ್ತೆ ಕಣ್ರಿ.. ಹೀಗೆ ದೇವರ ಹೆಸರಲ್ಲಿ ದೇಗುಲವನ್ನು ದುಡ್ಡಿನಿಂದ ಸಿಂಗರಿಸೋದು ಒಂದು ರೀತಿಯ ಅಚ್ಚರಿಯಾದ್ರೆ, ಮತ್ತೊಂದು ಮಹದಚ್ಚರಿ ಏನ್ ಗೊತ್ತಾ..? ಈ ಯಾವ ದೇಗುಲದಲ್ಲೂ, ಕಳ್ಳರ ಕರಿ ನೆರಳು ಬಿದ್ದಿಲ್ಲ..

ಭಕ್ತರು ತನಗರ್ಪಿಸಿದ ಸಂಪತ್ತನ್ನ, ಈ ದೇವಿಯೇ ಕಾಪಾಡಿಕೊಳ್ತಿದ್ದಾಳೆ. ಅದ್ರ ಜೊತೆಗೆ, ತಮ್ಮಲ್ಲಿರೋ ಸಂಪತ್ತನ್ನು ಹೀಗೆ ದಾನವಾಗಿ ಕೊಡೋ ಮನಸ್ಥಿತಿ ಇರೋ ಉದಾರ ವ್ಯಕ್ತಿಗಳನ್ನು, ಮನಸಾರೆ ಆಶೀರ್ವದಿಸ್ತಿದ್ದಾಳೆ..

ದುಡ್ಡಿನ ದೇಗುಲ ನಿರ್ಮಿಸಿ, ಅದರಲ್ಲಿ ದುಡ್ಡಿನ ಅಧಿದೇವತೆಯನ್ನು ಪ್ರತಿಷ್ಟಾಪಿಸಿದ್ರೆ, ಒಳ್ಳೇದಾಗುತ್ತೆ ಅನ್ನೋ ನಂಬಿಕೆ ಇದೆ. ಇದ್ರಿಂದ ಒಳಿತನ್ನ ಕಂಡವರೂ ಇದ್ದಾರೆ. ಅದಕ್ಕೇನೇ ವಿಶೇಷ ಸಂದರ್ಭಗಳಲ್ಲಿ, ಹೀಗೆ ದೇವರನ್ನು ದುಡ್ಡಿನಿಂದ ಅಲಂಕರಿಸಿ ಕಣ್ತುಂಬಿಕೊಳ್ತಾರೆ ಭಕ್ತರು..

Отправить комментарий

0 Комментарии