ಕೇಂದ್ರ ಸಚಿವೆ ಸ್ಮೃತಿ
ಇರಾನಿ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವ್ರ ಡಿಗ್ರಿ ಬಗ್ಗೆ ಈಗ ಸಾಕಷ್ಟು ಗೊಂದಲಗಳು
ಮೂಡಿವೆ. ಇದಕ್ಕೆ ಕಾರಣ ಅವ್ರು ಚುನಾವಣೆ ಟೈಮಲ್ಲಿ ಸಲ್ಲಿಸಿರೋ ಅಫಿಡೆವಿಟ್..
ಎಲೆಕ್ಷನ್ ಟೈಮಲ್ಲಿ ಸ್ಮೃತಿ ಇರಾನಿ ಸಲ್ಲಿಸಿದ ಆ ಅಫಿಡೆವಿಟ್ನಲ್ಲಿ ಏನಿದೆ? ಅಸಲಿಗೆ ಸ್ಮೃತಿ ಇರಾನಿ ಪಡೆದಿದ್ದು ಯಾವ ಡಿಗ್ರಿ?
ಇಲ್ಲಿದೆ ನೋಡಿ ವಿವಾದಿತ ನಾಯಕರ ಪದವಿ ಕಹಾನಿ.
ಸ್ಮೃತಿ
ಇರಾನಿ..
ಕೇಂದ್ರದ ಮಾನವ ಸಂಪನ್ಮೂಲ ಸಚಿವೆ.. ಮೋದಿಗೆ ಆಪ್ತರು ಅಂತ
ಗುರ್ತಿಸಿಕೊಂಡಿರೋ ಸ್ಮೃತಿ ಇರಾನಿ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.. ಯಾವ ಮಟ್ಟಕ್ಕೆ ಅಂದ್ರೆ ಅವರನ್ನ ರಾಜಕೀಯದಿಂದ ಕೆಳಗಿಳಿಸೋ ಮಟ್ಟಕ್ಕೆ ವಿವಾದದಲ್ಲಿ ಸಿಲುಕಿಸಿದ್ದಾರೆ..
ಇದಕ್ಕೆ ಕಾರಣ ಅವರ ಡಿಗ್ರಿ..!
ಯಸ್.. ಓದಿದ್ದೇನು?
ಅವ್ರು ಯಾವ ವಿಷಯದಲ್ಲಿ ಡಿಗ್ರಿ ಮಾಡಿದ್ದಾರೆ? ಅಸಲಿಗೆ
ಅವ್ರು ಡಿಗ್ರಿ ಮಾಡಿದ್ದು ನಿಜಾನಾ ಹೀಗೆ ನಾನಾ ಪ್ರಶ್ನೆಗಳು ಈಗ ಚರ್ಚೆಗೆ ಗ್ರಾಸವಾಗಿದೆ.
ಸ್ಮೃತಿ
ಇರಾನಿ ಡಿಗ್ರಿ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಇದುವರೆಗೂ ಸುಮ್ಮನಿದ್ದ ಪ್ರತಿಪಕ್ಷಗಳು
ಈಗ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದತ್ತ ವಾಗ್ಬಾಣಗಳನ್ನ ಬಿಡ್ತಾ ಇವೆ.
ಸ್ಮೃತಿ ಇರಾನಿಯನ್ನ ಮುಂದಿಟ್ಕೊಂಡು, ಬಿಜೆಪಿಯನ್ನ ಟಾರ್ಗೆಟ್
ಮಾಡಿರೋ ಪ್ರತಿಪಕ್ಷಗಳು ಸ್ಮೃತಿ ಇರಾನಿಯವ್ರ ತಲೆದಂಡಕ್ಕೆ ಆಗ್ರಹಿಸ್ತಿವೆ.
ಸ್ಮೃತಿ
ಇರಾನಿಯವರ ಡಿಗ್ರಿ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು ಹೇಗೆ ಗೊತ್ತಾ? ಅವರ ಡಿಗ್ರಿ
ಬಗ್ಗೆ ಇಷ್ಟೋಂದು ವಿವಾದಗಳು ಹುಟ್ಟಿದ್ದು ಹೇಗೆ ಅಂತ ಹೇಳೋದಕ್ಕೂ ಮುನ್ನ, ಸ್ಮೃತಿ ಇರಾನಿಯವ್ರ ರಾಜಕೀಯ ಪ್ರವೇಶದ ಬಗ್ಗೆ ಹೇಳ್ಲೇಬೇಕು.. ಯಾಕಂದ್ರೆ, ಈಗ ಕೇಂದ್ರ ಸಚಿವೆಯಾಗಿರೋ ಸ್ಮೃತಿ ಇರಾನಿ ಬಣ್ಣದ
ಲೋಕದಲ್ಲಿ ಸೈ ಅನಿಸಿಕೊಂಡು ಬಂದ ರೂಪವತಿ..
ಸ್ಮೃತಿ
ಇರಾನಿ ಹುಟ್ಟಿದ್ದು
1976 ರಲ್ಲಿ.. ದೆಹಲಿ ಸ್ಮೃತಿ ಇರಾನಿಯ ಹುಟ್ಟೂರು..
ಚಿಕ್ಕ ವಯಸ್ಸಿನಿಂದಲೂ ರೂಪವತಿಯಾದ ಸ್ಮೃತಿ ಇರಾನಿ 1998 ರಲ್ಲಿ ಮಿಸ್ ಇಂಡಿಯಾವನ್ನ ಮುಡಿಗೇರಿಸಿಕೊಂಡ್ರು.. ಆಗ್ಲೇ ನೋಡಿ..
ಕಿರುತೆರೆಯ ಹೆಬ್ಬಾಗಿಲು ಈಕೆಗಾಗಿ ತೆರೆದುಕೊಂಡಿದ್ದು..!
ಸಾಕಷ್ಟು
ಸೀರಿಯಲ್ಗಳಲ್ಲಿ ನಟಿಸಿ ಸೈ ಅನಿಸಿಕೊಂಡ ಸ್ಮೃತಿ ಇರಾನಿ.. ಕೆಲವೇ ದಿನಗಳಲ್ಲಿ
ಜನರ ಮನಸ್ಸಿಗೆ ಹತ್ತಿರವಾದ್ರು.. ಇದು ಸ್ಮೃತಿ ಇರಾನಿಗೆ ರಾಜಕೀಯ ಪ್ರವೇಶಕ್ಕೆ
ಅನುಕೂಲ ಮಾಡಿಕೊಟ್ತು..
2003
ರಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರವೇಶ ಮಾಡಿದ್ರು ಸ್ಮೃತಿ ಇರಾನಿ..
ಇದಾದ ನಂತರ ಒಂದೇ ವರ್ಷದಲ್ಲಿ ಅಂದ್ರೆ, 2004 ರಲ್ಲಿ ಲೋಕಸಭಾ
ಚುನಾವಣೆಗೆ ಎಂಟ್ರಿ ಕೊಟ್ರು..
ಇಲ್ಲೇ
ನೋಡಿ ಆಗಿದ್ದು ಮೊದಲನೇ ಯಡವಟ್ಟು.. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡೆವಿಟ್ನಲ್ಲಿ, ನಾನು ದೆಹಲಿ ವಿವಿಯಿಂದ ಬಿಎ ಪದವಿ ಪಡೆದಿದ್ದೀನಿ ಅಂತ
ಸ್ಪಷ್ಟನೆ ನೀಡಿದ್ರು..
ಆದ್ರೆ 2004 ರ ಚುನಾವಣೆಯಲ್ಲಿ
ಸ್ಮೃತಿ ಇರಾನಿ ಗೆಲ್ಲೋದಕ್ಕೆ ಆಗ್ಲಿಲ್ಲ.. ಸ್ಮೃತಿ ಇರಅನಿಯನ್ನ ಹಿಂದಿಕ್ಕಿ
ಭರ್ಜರಿ ಜಯ ಗಳಿಸಿದ್ರು ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್..
ಸೋತ
ಮಾತ್ರಕ್ಕೆ ಸ್ಮೃತಿ ಇರಾನಿ ಸುಮ್ಮನಾಗಲಿಲ್ಲ.. ರಾಜಕೀಯದಲ್ಲಿ ಗಟ್ಟಿಯಾಗಿ ಬೇರೂರಬೇಕು ಅಂತ
ಪ್ರಯತ್ನ ಪಡ್ತಾನೇ ಇದ್ರು.. 2014 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ದೇ
ಮಾಡಿ ಮತ್ತೆ ಸೋಲುಂಡ್ರು.. ಆದ್ರೆ ಸೋಲಿನ ಸುಳಿಯಲ್ಲಿದ್ದ ಸ್ಮೃತಿ ಇರಾನಿಯನ್ನ
ಕೇಂದ್ರದ ಸಚಿವೆಯಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ..
ಮೋದಿಗೆ
ಆಪ್ತರಾಗಿದ್ದ ಕಾರಣ,
ಸ್ಮೃತಿ ಇರಾನಿಯನ್ನ ರಾಜ್ಯಸಭೆಗೆ ಆಯ್ಕೆ ಡಿ ಸರ್ಕಾರದಲ್ಲಿ ಸ್ಥಾನ ಕಲ್ಪಿಸಿ ಕೊಡಲಾಯ್ತು..
ಈ ವೇಳೆ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ಹೊಸ ಅಫಿಡೆವಿಟ್ ಸಲ್ಲಿಸಿದ್ರು.. ಇದ್ರಲ್ಲಿ ನಾನು ದೆಹಲಿ ವಿಶ್ವ ವಿದ್ಯಾನಿಲಯದಿಂದ
ಬಿಕಾಂ ಪಾರ್ಟ್-1 ಓದಿರುವುದಾಗಿ ಉಲ್ಲೇಖಿಸಿದ್ರು..
ಇಲ್ಲೇ
ನೋಡಿ ಮತ್ತೊಂದು ಯಡವಟ್ಟು ಆಗಿದ್ದು.. 2004 ರಲ್ಲಿ ಸಲ್ಲಿಸಿದ ಅಫಿಡೆವಿಟ್ನಲ್ಲಿ ದೆಹಲಿ ವಿವಿಯಿಂದ ಬಿಎ ಪದವಿ ಪಡೆದಿದ್ದೀನಿ ಅಂತ ಹೇಳಿದ್ರು.. ಆದ್ರೆ 2014 ರಲ್ಲಿ ಸಲ್ಲಿಸಿದ ಅಫಿಡೆವಿಟ್ನಲ್ಲಿ ಬಿಕಾಂ ಪಾರ್ಟ್-1 ಓದಿರುವುದಾಗಿ ಉಲ್ಲೇಖಿಸಿದ್ರು..
ಹಾಗಿದ್ರೆ ಸ್ಮೃತಿ ಇರಾನಿ ನಿಜ್ವಾಗ್ಲೂ ಓದಿದ್ದೇನು? ಬಿಕಾಂ?
ಅಥವ ಬಿಎ ನಾ? ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಸ್ಮೃತಿ
ಇರಾನಿ
ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ, ಲೇಖಕ ಅಹ್ಮೀರ್ ಖಾನ್ ಕೇಂದ್ರ ಚುನಾವಣಾ ಆಯೋಗಕ್ಕೆ
ದೂರು ನೀಡಿದ್ರು.. ಈ ದೂರನ್ನು ಪರಿಶೀಲಿಸಿದ ನ್ಯಾಯಾಲಯ, ಸ್ಮೃತಿ ಇರಾನಿ ಪದವಿ ಪ್ರಮಾಣದ ಪತ್ರವನ್ನು ಪರಿಶೀಲಿಸುವಂತೆ ಆದೇಶೀಸಿದೆ. ಆ ಮೂಲಕ, ಸ್ಮೃತಿ ಇರಾನಿಗೆ ಶಾಕ್ ನೀಡಿದೆ.
ನ್ಯಾಯಾಲಯದ
ಈ ಆದೇಶ ಬಿಜೆಪಿ ವಲಯದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಪ್ರತಿಪಕ್ಷಗಳಿಗೆ ಇದೊಂದು ಅಸ್ತ್ರವಾಗಿ ಪರಿಣಮಿಸಿದ್ದು,.
ಸ್ಮೃತಿ ಇರಾನಿಯ ರಾಜಿನಾಮೆಗೆ ಆಗ್ರಹಿಸಿದೆ.
ಇದೇ
ಥರ ಚುನಾವಣಾ ಆಯೋಕ್ಕೆ ತಪ್ಪು ಮಾಹಿತಿ ಕೊಟ್ಟ ವ್ಯಕ್ತಿಯೊಬ್ಬ ಈಗ ಜೈಲಿಗೆ ಹೋಗಿದ್ದಾನೆ.. ನಕಲಿ ಪದವಿ
ಪ್ರಮಾಣಪತ್ರ ಕೊಟ್ಟು,
ಗೆದ್ದು ಕಾನೂನು ಮಂತ್ರಿಯಾಗಿದ್ದ ವ್ಯಕ್ತಿಯೇ ಈಗ ಕಂಬಿ ಎಣಿಸುವಂತಾಗಿದೆ.
ಅದು ಬೇರೆ ಯಾರೂ ಅಲ್ಲ.. ಭ್ರಷ್ಟರ ವಿರುದ್ಧ ಪೊರಕೆ ಹಿಡಿದು
ನಿಂತ ಕೇಜ್ರಿವಾಲ್ ಸರ್ಕಾರದ ಮಂತ್ರಿ, ಜೀತೇಂದ್ರ ಸಿಂಗ್ ತೋಮರ್..
ಜೀತೇಂದ್ರ
ಸಿಂಗ್ ತೋಮರ್..
ದೆಹಲಿಯಲ್ಲಿ ಬಿರುಗಾಳಿ ಎಬ್ಬಿಸಿ ಕಾಂಗ್ರೆಸ್ ಪಕ್ಷವನ್ನು
ಧೂಳೀಪಟ ಮಾಡಿದ ಆಮ್ ಆದ್ಮಿ ಪಕ್ಷದ ಮುಖಂಡರಲ್ಲಿ ಇವ್ರೂ ಒಬ್ಬರು.. ಅರವಿಂದ್
ಕೇಜ್ರಿವಾಲ್ ಜೊತೆ ಸೇರ್ಕೊಂಡು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬುನಾದಿ
ಹಾಕಿದ ಎಎಪಿ ನಾಯಕ..
2015
ರಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷ,
ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿತು.. ಚುನಾವಣೇ ಟೈಮಲ್ಲಿ
ನಾನು ಬಿಎಸ್ಸಿ ಪಾಸ್ ಮಾಡಿದ್ದೀನಿ.. ಜೊತೆಗೆ
ಎಲ್ಎಲ್ಬಿ ಕೂಡ ಮಾಡಿದ್ದೀನಿ ಅಂತ,
ತಮ್ಮ ಅಫಿಡೆವಿಟ್ ಸಲ್ಲಿಸಿದ್ರು ಎಎಪಿ ಮುಖಂಡ ಜೀತೇಂದ್ರಸಿಂಗ್
ತೋಮರ್..
ಸ್ವಚ್ಛ
ವ್ಯಕ್ತಿಗಳಿಗೆ ಮಾತ್ರ ನಮ್ಮ ಪಕ್ಷದಲ್ಲಿ ಸ್ಥಾನ.. ಅವರವರ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆ
ಅಂತ ಹೇಳಿದ್ದ ಅರವಿಂದ್ ಕೇಜ್ರಿವಾಲ್, ಅವರವರ ವಿದ್ಯಾರ್ಹತೆಗೆ ತಕ್ಕಂತೆ,
ಸರ್ಕಾರದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ರು. ಜೀತೇಂದ್ರ
ಸಿಂಗ್ ಎಲ್ಎಲ್ಬಿನಲ್ಲಿ
ಪದವಿ ಪಡೆದಿದ್ದಾರೆ ಅಂತ ಅವ್ರಿಗೆ ಕಾನೂನು ಸಚಿವರನ್ನಾಗಿ ನೇಮಕ ಮಾಡಲಾಯ್ತು..
ಅಧಿಕಾರದ
ಗದ್ದುಗೆ ಏರಿದ ಜೀತೇಂದ್ರ ಸಿಂಗ್ ತೋಮರ್, ಕಾನೂನು ಸಚಿವರಾಗಿ ಆಡಳಿತ ಶುರು ಮಾಡಿದ್ರು..
ಅಷ್ಟ್ರಲ್ಲೇ ನೋಡಿ.. ಕಾನೂನು ಸಚಿವರಿಗೇ ಕಾನೂನಿನ ತೊಡಕು
ಶುರುವಾಗಿದ್ದು.. ಆಗ್ಲೇ ನೋಡಿ.. ಜೀತೇಂದ್ರ ಸಿಂಗ್
ಕುರ್ಚಿಯೇ ಬುಡಮೇಲು ಮಾಡುವಂಥ ಸುದ್ದಿ ಸ್ಫೋಟಗೊಂಡಿದ್ದು.. ಅಷ್ಟಕ್ಕೂ ಆ ಸ್ಫೋಟಕ ಸುದ್ದಿಯಾದ್ರು ಏನು ಗೊತ್ತಾ? ಕಾನೂನು ಸಚಿವ
ಜೀತೇಂದ್ರ ಸಿಂಗ್ ಪಡೆದಿದ್ದ ಬಿಎಸ್ಸಿ ಪದವಿ
ಮತ್ತು ಕಾನೂನು ಪದವಿ ಎಲ್ಲವೂ ನಕಲಿ ಅಂತ..
ಯಸ್.. ಅವಧ್
ವಿವಿಯಿಂದ ಬಿಎಸ್ಸಿ ಪದವಿ.. ಮತ್ತು ಚೌದರ್ಯ ಚರಣ್ ಸಿಂಗ್ ವಿವಿಯಿಂದ ಕಾನೂನು ಪದವಿ ಪಡೆದಿದ್ದಾಗಿ
ಜೀತೇಂದ್ರ ಸಿಂಗ್ ತೋಮರ್ ಚುನಾವಣಾ ಆಯೋಗಕ್ಕೆ ದಾಖಲೆಗಳನ್ನ ನೀಡಿದ್ರು..
ಆದ್ರೆ ನಮ್ಮಲ್ಲಿ ತೋಮರ್ಗೆ ಸಂಬಂಧಿಸಿದ ಯಾವ ದಾಖಲೆಗಳೂ
ಇಲ್ಲ.. ತೋಮರ್ ಈ ವಿವಿಗಳಲ್ಲಿ ಪದವಿ ಅಭ್ಯಾಸ
ಮಾಡೇ ಇಲ್ಲ.. ನಮ್ಮ ವಿವಿಯಿಂದ ತೋಮರ್ಗೆ ಯಾವುದೇ
ಪದವಿಯನ್ನ ಪ್ರದಾನ ಮಾಡಿಲ್ಲ ಅಂತ ಅವಧ್ ವಿವಿ ಮತ್ತು ಚೌದರ್ಯ ಚರಣ್
ಸಿಂಗ್ ವಿವಿ ಸ್ಪಷ್ಟನೆ ನೀಡಿವೆ. ಇದ್ರಿಂದಾಗಿ ಚುನಾವಣಾ
ಆಯೋಗಕ್ಕೆ ನೀಡಿದ ಎಲ್ಲಾ ಶೈಕ್ಷಣಿಕ ದಾಖಲೆಗಳು ಹಂಡ್ರೆಡ್ ಪರ್ಸೆಂಟ್ ನಕಲಿ
ಅನ್ನೋದು ಸಾಬೀತಾಗಿದೆ. ಈ ಕಾರಣಕ್ಕೆ ತೋಮರ್ರನ್ನ
ಬಂಧಿಸಿ ಜೈಲಿಗೆ ತಳ್ಳಲಾಗಿದೆ.
ಜೂನ್ 9 ರಂದು ತೋಮರ್ರನ್ನ ಬಂಧಿಸಿದ ನಂತರ, ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗಿತ್ತು..
ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ಕಾನೂನು ಬಂಧನ
ವಿಧಿಸಿದೆ..
ಇನ್ನು
ನಕಲಿ ಪದವಿ ಪ್ರಮಾಣಪತ್ರದ ಮಾಹಿತಿ ನೀಡಿದ್ದಕ್ಕಾಗಿ ತೋಮರ್ ರನ್ನ ಕಾನೂನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಸಿಎಂ ಆಗಿರುವ ಅರವಿಂದ್ ಕೇಜ್ರಿವಾಲ್,
ತೋಮರ್ ನೀಡಿದ ರಾಜಿನಾಮೆಯನ್ನ ಅಂಗೀಕಲರಿಸಿದ್ದಾರೆ.
ಈ ಪ್ರಕರಣ ತೋಮರ್ ರಾಜಕೀಯ ಜೀವನವನ್ನೇ ಬುಡಮೇಲು ಮಾಡಿದೆ.
ನಕಲಿ
ಪ್ರಮಾಣಪತ್ರ ವಿವಾದ ತೋಮರ್
ರಾಜಕೀಯ ಭವಿಷ್ಯವನ್ನೇ ನುಂಗಿ ಹಾಕಿದೆ. ಇಂಥದ್ದೇ ವಿವಾದ
ಈಗ ಬಿಜೆಪಿಗೆ ಸುತ್ತಿಕೊಂಡಿದೆ. ಬರೀ ಸ್ಮೃತಿ ಇರಾನಿ ಮಾತ್ರವಲ್ಲ..
ಸ್ಮೃತಿ ಇರಾನಿ ಜೊತೆ ಮತ್ತೊಬ್ಬರ ರಾಜಕೀಯ ಮುಖಂಡನೂ ಪದವಿ ಗೊಂದಲದ ವಿವಾದದಲ್ಲಿದ್ದಾರೆ.
ಅಷ್ಟಕ್ಕೂ ಪದವಿ ವಿವಾದಕ್ಕೆ ಸಿಲುಕಿದ ಆ ಬಿಜೆಪಿ ಮುಖಂಡ ಯಾರು ಗೊತ್ತಾ?
ಮಹಾರಾಷ್ಟ್ರದ ಶಿಕ್ಷಣ ಮಂತ್ರಿ ವಿನೋತ್ ತಾವ್ಡೆ..
ಮಹಾರಾಷ್ಟ್ರದಲ್ಲಿ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದ
ಈ ಸರ್ಕಾರದಲ್ಲಿ ವಿನೋದ್ ತಾವ್ಡೆ ಶಿಕ್ಷಣ ಮಂತ್ರಿಯಾಗಿದ್ದಾರೆ. ಆದ್ರೆ
ಈ ಶಿಕ್ಷಣ ಮಂತ್ರಿಯ ಶೈಕ್ಷಣಿಕ ದಾಖಲೆಗಳೇ ಈಗ ವಿವಾದದ ಕೇಂದ್ರ ಬಿಂದುವಾಗಿವೆ..
ವಿನೋತ್
ತಾವ್ಡೆ 1980 ರಲ್ಲಿ ಪುಣೆಯ ಧ್ಯಾನೇಶ್ವರ ವಿವಿಯಿಂದ ಪದವಿ ಪಡೆದಿದ್ದಾರೆ. ಆದ್ರೆ
ಧ್ಯಾನೇಶ್ವರ ವಿವಿ ಒಂದು ನಿಷೇಧಿತ ವಿವಿಯಾಗಿದ್ದು, ವಿನೋದ್ ತಾವ್ಡೆ ಪ್ರಮಾಣಪತ್ರಗಳು
ನಕಲಿ ಅಂತ ಹೇಳಲಾಗ್ತಿದೆ..
ಆದ್ರೆ
ಈ ಬಗ್ಗೆ ವಿನೋದ್ ತಾವ್ಡೆ ಹೇಳೋದೇ ಬೇರೆ.. ನಾನು 1980 ರಲ್ಲಿ
ಪುಣೆಯಲ್ಲಿರೋ ಧ್ಯಾನೇಶ್ವರ ವಿವಿಯಲ್ಲಿ ಪದವಿ ಪಡೆದಿದ್ದೇನೆ.. ಕೇಂದ್ರ
ಸರ್ಕಾರ ಈ ವಿವಿಯನ್ನ ನಿಷೇಧಿಸಿದ್ದು 2002 ರಲ್ಲಿ.. ನಿಷೇಧಕ್ಕಿಂತಲೂ ಮೊದಲೇ ನಾನು ಪದವಿ ಪಡೆದಿದ್ದು, ನನ್ನ ಪದವಿ
ಪ್ರಮಾಣಪತ್ರಗಳು ಅಸಲಿ ಅಂತ ತಾವ್ಡೆ ಹೇಳ್ತಿದ್ದಾರೆ..
ಒಟ್ನಲ್ಲಿ
ಬಿಜೆಪಿಯ ವಿನೋದ್ ತಾವ್ಡೆ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಈಗ ಪ್ರಮಾಣಪತ್ರದ
ವಿವಾದಲ್ಲಿ ಸಿಲುಕಿದ್ದಾರೆ.
ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರೋ ವಿಪಕ್ಷಗಳು ಇವರ ರಾಜಿನಾಮೆಗೆ ಪಟ್ಟು ಹಿಡಿದಿವೆ.
ಅದ್ರಲ್ಲೂ ಆಮ್ ಆದ್ಮಿ ಪಕ್ಷ ಮೋದಿಗೆ ಆಪ್ತರಾಗಿರೋ ಸ್ಮೃತಿ ಇರಾನಿಯವ್ರನ್ನೇ ಟಾರ್ಗೆಟ್
ಮಾಡಿದೆ. ನಕಲಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ನಾವು ಜೀತೇಂದ್ರ ಸಿಂಗ್
ತೋಮರ್ರಿಂದ ರಾಜಿನಾಮೆ ಪಡೆದಿದ್ದೇವೆ.. ನೀವು
ಸ್ಮೃತಿ ಇರಾನಿಯವರ ರಾಜಿನಾಮೆ ಪಡೆದು, ಸ್ವಚ್ಛ ಸರ್ಕಾರದ ಘನತೆಯನ್ನ ಉಳಿಸಿಕೊಳ್ಳಿ
ಅಂತ ಕಿಡಿ ಕಾರಿವೆ.
ಒಟ್ನಲ್ಲಿ
ಸ್ಮೃತಿ ಇರಾನಿಯ ಡಿಗ್ರಿ ವಿವಾದವನ್ನ ವಿಪಕ್ಷಗಳು ಅಸ್ತ್ರ ಮಾಡಿಕೊಂಡಿವೆ. ಆದ್ರೆ ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲವಾದ್ರೂ, ಸ್ಮೃತಿ ಇರಾನಿ ಡಿಗ್ರಿ ಬಗ್ಗೆ ಎದ್ದಿರುವ
ವಿವಾದವನ್ನು ಪರಿಶೀಲಿಸುವಂತೆ ನ್ಯಾಯಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ವೇಳೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದು ಸಾಬೀತಾದ್ರೆ, ಸ್ಮೃತಿ ಇರಾನಿಗೆ ಸಂಕಷ್ಟ ತಪ್ಪಿದ್ದಲ್ಲ.. ಮೋದಿ ಸರ್ಕಾರಕ್ಕೂ
ಇದು ಕಂಟಕವಾಗೋ ಸಾಧ್ಯತೆ ಇದೆ..
0 Комментарии