Hot Posts

10/recent/ticker-posts

ಹಾಡುಗಳ “ಬೆಂಕಿ ಬಿರುಗಾಳಿ”

ಕನ್ನಡದಲ್ಲಿ ಹಿಂದೆ ಬಿರುಗಾಳಿ ಅನ್ನೋ ಚಿತ್ರ ತೆರೆಗೆ ಬಂದಿತ್ತು.. ಅದು ಥಿಯೇಟರ ನಲ್ಲಿ ಬಿರುಗಾಳಿ ಎಬ್ಬಿಸುತ್ತೆ ಅಂತ ಜನರೆಲ್ಲಾ ಅಂದುಕೊಂಡಿದ್ರು. ಆದ್ರೆ ಬಿರುಗಾಳಿ ಸದ್ದೇ ಇಲ್ಲದೇ ಠುಸ್ ಆಯ್ತು.. ಆದ್ರೆ ಈಗ ಕನ್ನಡದಲ್ಲಿ “ಬೆಂಕಿ ಬಿರುಗಾಳಿ” ಬರ್ತಾ ಇದೆ. ಇದೇನಿದು ಬೆಂಕಿ ಬಿರುಗಾಳಿ ಅಂತ ಶಾಕ್ ಆಗಬೇಡಿ.. ಬೆಂಕಿ ಬಿರುಗಾಳಿ ಸಿನೆಮಾ ಬರ‍್ತಾ ಇದೆ. 'ಬೆಂಕಿ ಬಿರುಗಾಳಿ'ಯ ಸಾರಥಿ ಬಸಿತ್.. ಬಸೀದ್ ನಿರ್ದೇಶನದಲ್ಲಿ ಮೂಡಿ ಬರ‍್ತಾ ಇರೋ ಚಿತ್ರಕ್ಕೆ ಮೋಹಿನಿ, ಡೆಡ್ಲಿ ಸೋಮ ಖ್ಯಾತಿಯ ನಾಯಕ ನಟ  ಆದಿತ್ಯ ನಾಯಕನಾಗಿ ಅಭಿನಯಿಸಿದ್ದಾರೆ , ಚಿತ್ರದ ಆಡಿಯೋ ರಿಲೀಸ್ ವಾರ ನಡೀತು.. ನಿರ್ದೇಶಕ ಮತ್ತು ನಿರ್ಮಾಪಕ  ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಧ್ವನಿಸುರುಳಿಯನ್ನು  ಬಿಡುಗಡೆ ಮಾಡಿದ್ರು.. ಸಮಾರಂಭಕ್ಕೆ ಸೆಕ್ಸೀ ಕ್ವೀನ್ ನಮಿತಾ ಕೂಡಾ ಬಂದಿದ್ರು. ಜೊತೆಗೆ ಇತರೆ ನಾಯಕಿಯರಾದ ಕಾದಲ್ ಸಂಧ್ಯಾ, ರಿಶಿಕಾ ಸಿಂಗ್ ಮತ್ತಿತರರು ಆಡಿಯೋ ರಿಲೀಸ್ ನಲ್ಲಿ ಭಾಗಿಯಾಗಿದ್ರು. ಅಷ್ಟೇ ಅಲ್ಲಾ ಇದೇ ಖುಷಿಯಲ್ಲಿ ಅವರೆಲ್ಲಾ ಕುಣಿದು ಕುಪ್ಪಳಿಸಿದ್ರು.. ಸಿಕ್ಕಾಪಟ್ಟೆ ಫೈಟಿಂಗ್ ಮಾಡಿದ್ರು..

ಚಿತ್ರಕ್ಕೆ ಎಂ.ಎಂ. ಶ್ರೀಲೇಖಾ ಅವರ ಸುಮಧುರ ಸಂಗೀತವಿದ್ದು ಇಂಪಾಗಿವೆ ಅಂತಿದೆ ಚಿತ್ರತಂಡ.. ಇವರ ಮ್ಯೂಸಿಕ್ ಮ್ಯಾಜಿಕ್ ಜನರನ್ನ ಮೋಡಿ ಮಾಡುತ್ತಾ ಅಂತ ಮುಂದೆ ಗೊತ್ತಾಗುತ್ತೆ.

Отправить комментарий

0 Комментарии