ಬಾಲೀವುಡ್ ನಲ್ಲಿ ಈಗ ಅಮ್ಮ ಆಗೋಕೆ ಟ್ರೈ ಮಾಡ್ತಿದ್ದಾರೆ ರೀ.. ಛೆ.. ಛೆ.. ತಪ್ಪು ತಿಳ್ಕೊಬೇಡಿ.. ನಾನು ಹೇಳಿದ್ದು ಹಾಗಲ್ಲ.. ಐಶ್ವರ್ಯ ರೈ ಹೀರೋಯಿನ್ ಅದಾಗ್ಲೂ ನಂಬರ್ ಒನ್ ಆಗಿದ್ರು. ಈಗ ತಾಯಿಯಾಗಿದ್ರೂ ನಂಬರ್ ಒನ್ ತಾಯಿಯಗಿದ್ದರೆ.. ಇತ್ತೀಚೆಗಷ್ಟೇ ಬಾಲೀವುಡ್ ನಲ್ಲಿ ಆದರ್ಶ ತಾಯಿ ಯಾರು ಅಂತ ಸ್ಪರ್ದೇ ನಡೀತು. ಅದ್ರಲ್ಲಿ ಐಶ್ವ್ವರ್ಯ ರೈ ರವರು ಕರೀಶ್ಮಾ ಕಪೂರ್, ಹೇಮಾ ಮಾಲಿನಿ ಗಿಂತ ಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿ ಗೆದ್ದಿದ್ದಾರೆ. ಅದ್ರೆ ಇದರಿಂದ ಕೆಲವರಿಗೆ ಕೋಪ ಬಂದಿದೆ... “ನಾನು ಬಹಳಷ್ಟು ಹಿಂದೇನೇ ತಾಯಿ ಆಗಿದ್ದೀನಿ.. ಆರು ಹೆತ್ತೋಳ ಮುಂದೆ ಒಂದು ಹೆತ್ತೋಳು ಗ್ರೇಟ್ ಆಗೋದಳು..” ಅಂತ ಅಂದುಕೊಳ್ತಾ ಇದ್ದಾರೆ. ಹೀಗಾಗಿ ಐಶೂ ಗಿಂತ ಫೇಮಸ್ ಅಗಬೇಕು ಅಂತ ಶಿಲ್ಪಾ ಕೂಡ ತಾಯಿಯಾದ್ರು.. ಹಿಂಗೇ ಆಗ್ಬುಟ್ರೆ ಕತ್ರೀನಾ ಈ ಕಾಂಪಿಟೇಷನ್ ನಲ್ಲಿ ಗೆಲ್ಲೋದು ಯಾವಾಗ..??? ಹ ಹ ಹ


0 Комментарии