Hot Posts

10/recent/ticker-posts

ಹಿಟ್ಲರ್‌ನ ಮುತ್ತಿನ ಉಂಗುರ 1 ಲಕ್ಷ ಡಾಲರ್‌ಗೆ ಹರಾಜು.











ಅಮೇರಿಕ
: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ಹಿಟ್ಲರ್‌‌‌‌‌ ಹಾಕಿಕೊಳ್ಳುತ್ತಿದ್ದ ಮಾಣಿಕ್ಯದಿಂದ ಕೂಡಿದ ಉಂಗುರವು 1 ಲಕ್ಷ
ಡಾಲರ್ಗೆ ಹರಾಜು ಹಾಕಲಾಗುತ್ತಿದೆ.
ಅಂದ್ರೆ ಹಿಟ್ಲರ್ ಉಂಗುರದ
ಭಾರತೀಯ ಮೌಲ್ಯ ಬರೋಬ್ಬರಿ 65,24,000 ರೂಪಾಯಿಗಳು
ಮಾತ್ರ..!







ಅಡಾಲ್ಫ್
ಹಿಟ್ಲರ್ ಮಾಣಿಕ್ಯದ ಉಂಗುರವನ್ನು
ಹರಾಜಿನಲ್ಲಿ ಕೊಳ್ಳಲು ಅಮೇರಿಕಾದ ದೊಡ್ಡ
ದೊಡ್ಡ ವ್ಯಕ್ತಿಗಳು ಕ್ಯೂನಲ್ಲಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ
ವಾರ ಹಿಟ್ಲರ್ಅವರ ಮಾಣಿಕ್ಯದ ಉಂಗುರ
ಹರಜಾಗಲಿದ್ದು ಇನ್ನು ಹೆಚ್ಚಿನ ಬೆಲೆಗೆ
ಹರಾಜಾಗುವ ಸಾಧ್ಯತೆಗಳು ಇವೆ ಎಂದು ಮೂಲಗಳು
ಹೇಳಿವೆ.





ಉಂಗುರದ ವಿಶೇಷತೆ ಏನು









ಹಿಟ್ಲರ್ಉಂಗುರವು ಬೆಳ್ಳಿಯಿಂದ ತಯಾರಿಸಲಾಗಿದ್ದು,
ಅದಕ್ಕೆ ಚಿನ್ನದ ಲೇಪನ ಮಾಡಲಾಗಿದೆ
ಮತ್ತು 75 ವರ್ಷಗಳ ಹಳೆಯದಾಗಿದೆ ಎಂದು
ತಿಳಿದುಬಂದಿದೆ. ಹಿಟ್ಲರ್ಉಂಗುರದಲ್ಲಿ
ಸ್ವಸ್ತಿಕ್ಚಿಹ್ನೆಯಿದ್ದು, ಮಧ್ಯದಲ್ಲಿ ದೊಡ್ಡದಾದ ಮಾಣಿಕ್ಯ ಇದೆ.





 1920 ರಲ್ಲಿ ಅಕ್ಕ ಸಾಲಿಗ
ಕರ್ಲ ಬರ್ತೋಲ್ಡ್ಹಿಟ್ಲರ್‌‌ ನಾಜಿ ಪಕ್ಷವನ್ನು
ಸೇರಿದಾಗ ಉಂಗುರವನ್ನು ಉಡುಗೊರೆಯಾಗಿ
ನೀಡಿದ್ದನೆಂದು ಹೇಳಲಾಗುತ್ತದೆ. ಉಂಗುರವನ್ನು ನಿರ್ಮಿಸಿದಾಗ
ಅಕ್ಕಪಕ್ಕದಲ್ಲಿ ಒಟ್ಟು ಎರಡು ಕತ್ತಿಗಳು
ಮತ್ತು 16 ಮಾಣಿಕ್ಯದಿಂದ ರೂಪಿಸಲಾಗಿರುವ ಸ್ವಸ್ತಿಕ್ ಚಿಹ್ನೆಯನ್ನು ಹೊಂದಿತ್ತು. ಅದರೆ ಇದೀಗ ಅಕ್ಕಪಕ್ಕದಲ್ಲಿನ
ಕತ್ತಿಯಾಕಾರದ ಚಿಹ್ನೆಯಲ್ಲಿ ಒಂದು ಕಾಣಿಯಾಗಿದ್ದು ಸದ್ಯಕ್ಕೆ
ಒಂದೇ ಒಂದು ಭಾಗದಲ್ಲಿ ಕತ್ತಿಯ
ಆಕಾರದ ಚಿಹ್ನೆ ಇದೆ ಎಂದು
ಹೇಳಲಾಗುತ್ತಿದೆ 








ಮೇರಿಲ್ಯಾಂಡ್ ಅಲೆಗ್ಸಾಂಡರ್ಐತಿಹಾಸಿಕ
ಹರಾಜು ಸಂಸ್ಥೆಯು ಹಿಟ್ಲರ್ಉಂಗುರವನ್ನು ಹರಾಜು ಮಾಡಲು ನಿರ್ಧರಿಸಿದ್ದು
ಸಂಬಂಧ ಎಲ್ಲಾ
ದಾಖಲೆ ಮತ್ತು ಉಂಗುರವನ್ನು ಸ್ಪಷ್ಟವಾಗಿ
ಪರೀಕ್ಷಿಸಿದ್ದಾರೆ. ಮುಂದಿನ ವಾರ ಉಂಗುರ
ಹರಾಜಾಗಲಿದ್ದು ಯಾರ ಪಾಲಿಗೆ
ಉಂಗುರ ದಕ್ಕಲಿದೆ ಎಂಬುದು ಕುತೂಹಲಕಾರಿಯಾದೆ.


Отправить комментарий

0 Комментарии