ಫಿಲಿಪೈನ್ಸ್
: ಸೂಪರ್ ಮ್ಯಾನ್ ಆಗಬೇಕು ಆಂತ
ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ
ದೇಹವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾನೆ. 19 ಸರ್ಜರಿಗೆ
ತನ್ನ ದೇಹವನ್ನು ಒಳಪಡಿಸಿದ್ದಾನೆ. ಅಷ್ಟೇ ಅಲ್ಲ, ಬರೋಬ್ಬರಿ
4.5 ಲಕ್ಷ ಖರ್ಚು ಮಾಡಿದ್ದಾನೆ. ಸೂಪರ್
ಮ್ಯಾನ್ನನ್ನು ಇಷ್ಟ ಪಡುತ್ತಿದ್ದ
ವ್ಯಕ್ತಿ ಇದೀಗ ಅವನೇ ಸ್ವತಃ
ಸೂಪರ್ ಮ್ಯಾನ್ ಆಗಿ ಪ್ಲಾಸ್ಟಿಕ್
ಸರ್ಜರಿ ಮಾಡಿಸಿಕೊಂಡಿದ್ದಾನೆ. ಅವನ ವಯಸ್ಸು ಎಷ್ಟು
ಗೊತ್ತಾ? ಬರೋಬ್ಬರಿ 35 ವರ್ಷ..!
ಫಿಲಿಪೈನ್ಸ್‌ನ ಕಲಾಂಬಾ ನಗರದನಿವಾಸಿಯಾಗಿರುವ ಹರ್ಬರ್ಟ್‌ಚವೇಜ್ ತನ್ನ ಮೂಗು,
ಚರ್ಮ, ಹೊಟ್ಟೆ, ಮತ್ತು ಎದೆಯ
ಭಾಗವನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಕಸಿ
ಮಾಡಿಸಿಕೊಂಡಿದ್ದಾನೆ. ಒಟ್ಟು 19 ರೀತಿಯ ಸರ್ಜರಿಗೆ ಒಳಗಾದ
ಇವನು ಇದೀಗ ಸಂಪೂರ್ಣವಾಗಿ ರಿಯಲ್
ಸೂಪರ್ ಮ್ಯಾನ್ ಆಗಿ ಪರಿವರ್ತನೆಗೊಂಡಿದ್ದಾನೆ.
ಚಿಕ್ಕ ವಯಸ್ಸಿನವನಿದ್ದಾಗಿಂದಲೂ ಹರ್ಬರ್ಟ್‌ಗೆ ಸೂಪರ್ ಮ್ಯಾನ್
ಅಂದ್ರೆ ತುಂಬಾ ಇಷ್ಟ. ಸೂಪರ್
ಮ್ಯಾನ್ಗೆ ಸಂಬಂಧಪಟ್ಟ 5,000 ವಸ್ತುಗಳನ್ನು
ಸಂಗ್ರಹಿಸಿದ್ದಾನೆ. ಈ ಸೂಪರ್ ಮ್ಯಾನ್
ಹುಚ್ಚು ಹೆಚ್ಚಾಗಿ ಇದೀಗ ತನ್ನ ಇಡೀ
ದೇಹವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ. ಮೂಗು
ಕಸಿ, ಎದೆ ಕಸಿ, ಹೊಟ್ಟೆಯ
ಕಸಿ, ತುಟಿಗಳ ಕಸಿ ಸೇರಿದಂತೆ
ತನ್ನ ವಿವಿಧ ಭಾಗವನ್ನು ಕಸಿ
ಮಾಡಿಸಿಕೊಂಡಿದ್ದಾನೆ. 35 ನೇ ವಯಸ್ಸಿನಲ್ಲಿ ಇದೆಲ್ಲಾ
ಬೇಕಿತ್ತಾ? ಈ ವಯಸ್ಸಿನಲ್ಲಿ ಸೂಪರ್
ಮ್ಯಾನ್ ಆಗಿ ಯಾವ ಹುಡುಗಿಯನ್ನು
ಮೆಚ್ಚಿಸಬೇಕಿತ್ತೋ ಏನೋ?


















Комментарии
Отправить комментарий